
ಬಂಟ್ವಾಳ: ಪುದು ಗ್ರಾಮ ಪಂಚಾಯಿತಿನ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆದಿದ್ದು ಅಭ್ಯರ್ಥಿ ಮಹಮ್ಮದ್ ಇಕ್ಬಾಲ್ ಪಾಡಿ ಗೆಲುವು ಸಾಧಿಸಿದ್ದಾರೆ. ಒಟ್ಟು 572 ಮತ ಚಲಾವಣೆಯಾಗಿದ್ದು ಅಬ್ದುಲ್ ಲತೀಫ್ 39,
ಮುಹಮ್ಮದ್ ಅಶ್ರಫ್ ಮಾರಿಪಳ್ಳ 140, ಮೊಹಮ್ಮದ್ ಇಕ್ಬಾಲ್ ಪಾಡಿ 385 ಮತಗಳನ್ನು ಪಡೆದಿದ್ದಾರೆ. 8 ಮತಗಳು ತಿರಸ್ಕೃತಗೊಂಡಿದೆ.


ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ ನೇತೃತ್ವದಲ್ಲಿ
ಚುನಾವಣೆ ಅಧಿಕಾರಿತಾ.ಪಂ. ಇಒ ರಾಜಣ್ಣ,
ಸಹಾಯಕ ಚುನಾವಣಾಧಿಕಾರಿ ಪಂಚಾಯತಿ ಪಿಡಿಓ ಹರೀಶ್ ಕೆ.ಎ , ಎಣಿಕೆ ಮೇಲ್ವಿಚಾರಕ, ಉಪತಹಶೀಲ್ದಾರ್ ನವೀನ್ ಬೆಂಜನಪದವು, ಎಣಿಕೆ ಸಹಾಯಕರಾದ ಕಂದಾಯ ನಿರೀಕ್ಷಕರು ಸೀತಾರಾಮ ಕಮ್ಮಾಜೆ, ಜೆ.ಜನಾರ್ದನ, ಶ್ರೀ ಕಲಾ, ಹಾಗೂ ಸುಂದರ, ಕಿರಣ್, ಚಂದು ಮತ ಎಣಿಕೆ ಪ್ರಕ್ರಿಯೆ ನಡೆಸಿಕೊಟ್ಟರು
