Author: admin
ಬಂಟ್ವಾಳ: ಇಲ್ಲಿನ ಕಳ್ಳಿಗೆ ಗ್ರಾಮದ ನೆತ್ತರಕೆರೆ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಭಾನುವಾರ ನಡೆದಿದ್ದು ೪ನೇ ತರಗತಿಯ ವಿದ್ಯಾರ್ಥಿನಿ ಹಿಮಾನಿ ಪ್ರಸ್ತುತ ಪಡಿಸಿದ ಕೂಪಿಕಾ ಸಮಾತೋಲನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸೋಡಾ ಬಾಟಲಿಗಳ ಮೇಲೆ ಮೂರು ಅಂತಸ್ತಿನಲ್ಲಿ ಮರದ ಕುರ್ಚಿಯನ್ನಿಟ್ಟು ಅದರ ಮೇಲೆ ಬಾಲಕಿ ಯೋಗಾಸನಗೈಯ್ಯುವ ಸಾಹಸ ಪ್ರದರ್ಶನ ವಿಶೇಷ ಗಮನ ಸೆಳೆಯಿತು. ವಿದ್ಯಾರ್ಥಿಗಳು ಮೈ ನವಿರೇಳಿಸುವ ಬೆಂಕಿ ಸಾಹಸ ಸಹಿತ ವಿವಿಧ ಶಾರೀರಿಕ ಪ್ರದರ್ಶನಗಳನ್ನು ಈ ಸಂದರ್ಭ ನಡೆಸಿಕೊಟ್ಟರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ದಾಮೋದರ ನೆತ್ತರಕೆರೆ, ಶಾಲಾ ಮುಖ್ಯೋಪಾಧ್ಯಾಯಿನಿ ಸಿಲ್ವಿಯಾ ಬ್ರೇಗ್ಸ್, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಶಿಕ್ಷಕ ವೃಂದದವರು ಈ ಸಂದರ್ಭ ಉಪಸ್ಥಿತರಿದ್ದರು.
ಬಂಟ್ವಾಳ: ಭಾಷೆ ಹುಟ್ಟುವ ಮೊದಲೇ ಚಿತ್ರಕಲೆ ಹುಟ್ಟಿದೆ. ನಾಗರೀಕತೆಯ ಪ್ರಾರಂಭದ ಹಂತದಲ್ಲಿ, ಶಿಲಾಯುಗದ ಕಾಲದಲ್ಲಿ ಚಿತ್ರಕಲೆಯ ಮೂಲಕ ಅಭಿಪ್ರಾಯವನ್ನು ಅಭಿವ್ಯಕ್ತಿಗೊಳಿಸುತ್ತಿದ್ದರು ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ ಹೇಳಿದರು. ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಏರ್ಯ ಆಳ್ವ ಫೌಂಡೇಶನ್ ಮೊಡಂಕಾಪು ಇದರ ಸಹಯೋಗದೊಂದಿಗೆ ಏರ್ಯ ಲಕ್ಷ್ಮೀ ನಾರಾಯಣ ಆಳ್ವರ ಶತಮಾನೋತ್ಸವ ದ ಪ್ರಯುಕ್ತ ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ನಡೆದ 3ನೇ ವರ್ಷದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ವರ್ಣಾಂಜಲಿಯನ್ನು ಉದ್ಘಾಟಿಸಿ ಮಾತನಾಡಿದರು. ಪರಿಸರ ಸಂರಕ್ಷಣೆ ನಮ್ಮೆಲರ ಜವಾಬ್ದಾರಿಯಾಗಬೇಕು ಎಂದ ಅವರು ಏರ್ಯ ಲಕ್ಷ್ಮೀ ನಾರಾಯಣ ಆಳ್ವರು ಸರಸ್ವತಿಯ ಆರಾಧಕರು, ನಡೆದಾಡುವ ಜ್ಞಾನ ಭಂಡಾರವಾಗಿದ್ದರು ಎಂದರು. ನಿವೃತ್ತ ಚಿತ್ರಕಲಾ ಶಿಕ್ಷಕ ಎಚ್.ಎನ್.ಹೆಬ್ಬಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸೇವಾಂಜಲಿ ಪ್ರತಿಷ್ಠಾನದ ಮೂಲಕ ಚಿತ್ರಕಲೆ, ಸಂಗೀತ, ಭರತನಾಟ್ಯ, ಭಜನೆ ಮೊದಲಾದ ತರಬೇತಿ ನಡೆಯುತ್ತಿದ್ದು ಈ ಭಾಗದ ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು. ವೇದಿಕೆಯಲ್ಲಿ ಸೇವಾಂಜಲಿಯ…
ಬಂಟ್ವಾಳ: ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದಾಗ ರೋಗಗಳು ನಿಯಂತ್ರಣವಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾಗಬೇಕಾದರೆ ಪೌಷ್ಠಿಕಾಂಶದ ಆಹಾರ ಸೇವನೆ ಅಗತ್ಯ. ಕ್ಷಯ ರೋಗ ಕೆಮ್ಮು, ಕಫ ಮಾತ್ರವಲ್ಲದೆ ದೇಹದ ಯಾವ ಭಾಗಕ್ಕೂ ಬಾಧಿಸುವ ಸಾಧ್ಯತೆ ಇದೆ. ಪ್ರಸ್ತುತ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ, ಆದರೆ ಕ್ಷಯ ರೋಗ ಸಂಪೂರ್ಣ ನಿರ್ಮೂಲನವಾಗಿಲ್ಲ ಎಂದು ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಭಂಡಾರಿ ಹೇಳಿದರು. ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಕ್ಷಯರೋಗಿಗಳಿಗೆ ಆಹಾರ ದವಸ ಧಾನ್ಯ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ ಕ್ಷಯ ರೋಗ ಪೀಡಿತರನ್ನು ಗುರುತಿಸಿ ಅವರ ರೋಗ ಗುಣಮುಖವಾಗಲು ಉಚಿತವಾಗಿ ಪೌಷ್ಟಿಕಾಹಾರ ನೀಡುವ ಸೇವಾಂಜಲಿಯ ಕಾರ್ಯ ದೇವರು ಮೆಚ್ಚುವ ಕೆಲಸ ಎಂದರು. ಕ್ಷಯ ರೋಗೀಗಳು ದೃತಿಗೆಡದೆ ರೋಗಗುಣಮುಖವಾಗುವ ನಿಟ್ಟಿನಲ್ಲಿ ಸಕಾಲದಲ್ಲಿ ಔಷಧಿಯೊಂದಿಗೆ ಪೌಷ್ಟಿಕಾಹಾರ ಸೇವಿಸುವಂತೆ ತಿಳಿಸಿದರು. ಸೇವಾಂಜಲಿ…
ಬಂಟ್ವಾಳ: ಇತ್ತೀಚೆಗೆ ನಿಧನರಾದ ಬಂಟ್ವಾಳ ತಾ.ಪಂ. ಮಾಜಿ ಸದಸ್ಯ, ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಂದಾಳು ಸೋಮಪ್ಪ ಕೋಟ್ಯಾನ್ ಅವರ ಸಂತಾಪ ಸಭೆ ತುಂಬೆಯ ಶ್ರೀ ಶಾರದಾ ಸಭಾಭವನದಲ್ಲಿ ನಡೆಯಿತು. ಸೋಮಪ್ಪ ಕೋಟ್ಯಾನ್ ಅವರ ಪುತ್ರರಾದ ಸಂತೋಷ್ ಕುಮಾರ್ ಹಾಗೂ ಸಂಪತ್ ಕುಮಾರ್ ಅವರು ದೀಪಪ್ರಜ್ವಲಿಸಿದರು. ಬಳಿಕ ಗಣ್ಯರು ಸೋಮಪ್ಪ ಕೋಟ್ಯಾನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ನುಡಿನಮನ ಸಲ್ಲಿಸಿ ಸೋಮಪ್ಪ ಕೋಟ್ಯಾನ್ ಅವರು ಈ ಊರಿನ ಅಭಿವೃದ್ಧಿಯ ಬಗ್ಗೆ ಚಿಂತಿಸಿದವರು. ಊರಿನ ಅಭಿವೃದ್ಧಿಗಾಗಿ ಅನುದಾನಕ್ಕೆ ಜನಪ್ರತಿನಿಧಿಗಳಲ್ಲಿ ಬೇಡಿಕೆಯನ್ನು ಇಡುತ್ತಿದ್ದರು. ಅವರ ಉತ್ತಮ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು. ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ ಸೋಮಪ್ಪ ಕೋಟ್ಯಾನ್ ಕಲಾವಿದರಾಗಿ ನಾಟಕದಲ್ಲಿ ಅಭಿನಯಿಸಿದ್ದರು. ಅವರ ಸಾವು ಸಮಾಜಕ್ಕೆ ತುಂಬಲಾರದ ನಷ್ಟ ಎಂದರು. ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ನುಡಿನಮನ ಸಲ್ಲಿಸಿ ಸೋಮಪ್ಪ ಕೋಟ್ಯಾನ್ ವ್ಯಕ್ತಿಗತವಾಗಿ ಆತ್ಮೀಯರಾಗಿದ್ದರು. ಊರಿನ ಎಲ್ಲಾ…
ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಏರ್ಯ ಆಳ್ವ ಫೌಂಡೇಷನ್ ಮೊಡಂಕಾಪು ಇದರ ಸಹಯೋಗದೊಂದಿಗೆ ಏರ್ಯ ಲಕ್ಷ್ಮೀ ನಾರಾಯಣ ಆಳ್ವರ ಶತಮಾನೋತ್ಸವದ ಪ್ರಯುಕ್ತ ೩ನೇ ವರ್ಷದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ವರ್ಣಾಂಜಲಿ ಡಿ.7ರಂದು ಭಾನುವಾರ ಬೆಳಿಗ್ಗೆ 9.30ರಿಂದ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ ಉದ್ಘಾಟಿಸುವರು, ನಿವೃತ್ತ ಚಿತ್ರಕಲಾ ಶಿಕ್ಷಕ ಎಚ್.ಎನ್. ಹೆಬ್ಬಾರ್ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2.30ಕ್ಕೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದ್ದು ಚಿತ್ರ ಕಲಾವಿದ ದಿನೆಶ್ ಹೊಳ್ಳ ಉಪಸ್ಥಿತರಿರುವರು. 4ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸಲು ಐಚ್ಛಿಕ ವಿಷಯ ನೀಡಲಾಗಿದ್ದು 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಹಳ್ಳಿ ವ್ಯಾಪಾರ, 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ವಿಷಯ ನೀಡಲಾಗಿದೆ. ಭಾಗವಹಿಸುವ ವಿದ್ಯಾರ್ಥಿಗಳು ಅಂದು ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಶಾಲಾ ಗುರುತಿನ ಚೀಟಿಯೊಂದಿಗೆ ಹಾಜರಿರಬೇಕು, ಡ್ರಾಯಿಂಗ್ ಪೇಪರ್ ಹೊರತುಪಡಿಸಿ ಇತರ ಪರಿಕರಗಳನ್ನು ವಿದ್ಯಾರ್ಥಿಗಳೇ…
ಬಂಟ್ವಾಳ: ಇಲ್ಲಿನ ಕಾಂಜಿರಕೋಡಿ ಜ್ಞಾನ ದೀಪ ಜ್ಞಾವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ಭಾನುವಾರ ನಡೆಯಿತು. ಸರಕಾರಿ ಶಾಲೆಯ ನಿವೃತ್ತ ಶಿಕ್ಷಕಿ ಪ್ರೆಸಿಲ್ಲಾ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ಮನೋಹರ್ ನೇರಂಬೋಳು, ವಲಯದ ಮೇಲ್ವಿಚಾರಕ ರಾಜೇಶ್ ಉಪಸ್ಥಿತರಿದ್ದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಬಳಿಕ ಕೇಂದ್ರದ ಸದಸ್ಯರಿಂದ, ಪಾರ್‍ದಾನ, ಕುಣಿತ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಬಂಟ್ವಾಳ: ವಿದುಷಿ ವಿದ್ಯಾ ಮನೋಜ್ ನಿರ್ದೇಶನದ, ಕಲ್ಲಡ್ಕದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್, ಭರತನಾಟ್ಯ ಸಂಸ್ಥೆಯ 25ನೇ ವರ್ಷದ ಅಂಗವಾಗಿ ರಜತ ಕಲಾಯಾನ ಸರಣಿ ಕಾರ್ಯಕ್ರಮದ ಪ್ರಯುಕ್ತ ನ. 28, 29, 30ರಂದು ಭಾವಾಭಿವ್ಯಕ್ತಿ ಕಾರ್ಯಕ್ರಮ ಕಲ್ಲಡ್ಕದ ಕಲಾನಿಕೇತನದಲ್ಲಿ ಆರಂಭಗೊಂಡಿದ್ದು ಶುಕ್ರವಾರ ಸಂಜೆ ನಡೆದ ಖ್ಯಾತ ನೃತ್ಯ ಗುರುಗಳಾದ ವಿದುಷಿ ಶೀಲ ಚಂದ್ರಶೇಖರ್ ಹಾಗೂ ದೀಪ್ತಿ ರಾಧಕೃಷ್ಣ ಅವರ ಭರತನಾಟ್ಯ ಕಾರ್ಯಕ್ರಮ ಸಂಸ್ಥೆಯ ವಿದ್ಯಾರ್ಥಿಗಳನ್ನು ಹಾಗೂ ನೆರೆದ ಪ್ರೇಕ್ಷಕ ವರ್ಗವನ್ನು ಮಂತ್ರ ಮುಗ್ದಗೊಳಿಸಿತು. ಭಾನುಮತಿ ನೃತ್ಯ ಕಲಾಮಂದಿರಂ ಇದರ ನಿರ್ದೇಶಕಿ ಮತ್ತು ಜೈನ್ (ಡಿಮ್ಡ್ ಟು ಬಿ) ಯೂನಿವರ್ಸಿಟಿ ಬೆಂಗಳೂರು ಇದರ ಅತಿಥಿ ಉಪನ್ಯಾಸಕರಾಗಿರುವ ಗುರು ವಿದುಷಿ ಶೀಲಾ ಚಂದ್ರಶೇಖರ್ ಹಾಗೂ ಭಾನುಮತಿ ನೃತ್ಯ ಕಲಾಮಂದಿರಂ ಶಿಷ್ಯೆ ಹಾಗೂ ಜೈನ್ (ಡಿಮ್ಡ್ ಟು ಬಿ) ಯೂನಿವರ್ಸಿಟಿ ಬೆಂಗಳೂರು ಇಲ್ಲಿನ ಸಂಶೋಧಕಿ ಮತ್ತು ಉಪನ್ಯಾಸಕರಾಗಿರುವ ದೀಪ್ತಿ ರಾಧಾಕೃಷ್ಣ ಇವರಿಂದ ಭರತನಾಟ್ಯ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದ್ದು ಮೊದಲ ದಿನ ಇಬ್ಬರ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಖ್ಯಾತ ನೃತ್ಯ…
ಬಂಟ್ವಾಳ: ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಇದರ ಆಶ್ರಯದಲ್ಲಿ ನ.27 ಮತ್ತು 28 ರಂದು ಶಿವಮೊಗ್ಗದಲ್ಲಿ ನಡೆದ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಕಲ್ಲಡ್ಕ ಶ್ರೀ ರಾಮ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯೂಸಿ ವಿದ್ಯಾರ್ಥಿ ಬೆನಝೀರ್ ಲಿಂಗ್ ದೋದ್ ಬಾಕ್ಸಿಂಗ್ ನಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಗೆದ್ದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಈತ ರಾಜೇಶ್ ಬ್ರಹ್ಮರಕೂಟ್ಲು ಅವರಿಂದ ಮಾರ್ಷಲ್ ಆರ್ಟ್ ತರಬೇತಿ ಪಡೆಯುತ್ತಿದ್ದಾನೆ. ರಾಜೇಶ್ ಬ್ರಹ್ಮರಕೂಟ್ಲು ಅವರು ನೆತ್ತರಕೆರೆ ಸರಕಾರಿ ಶಾಲೆಯಲ್ಲಿ ಕರಾಟೆ, ಜೂಡೋ, ಕಲರಿ, ಸಿಲಂಬಂ, ಬಾಕ್ಸಿಂಗ್, ಸ್ಕೇಟಿಂಗ್ ಮೊದಲಾದ ಮಾರ್ಷಲ್ ಆರ್ಟ್ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಬೆನಝೀರ್ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಜೂಡೋ ಸ್ಪರ್ಧೆಯಲ್ಲೂ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾನೆ
ಬಂಟ್ವಾಳ: ಸಮುದಾಯದ ಆರೋಗ್ಯಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಮಾಡಿದೆ. ನಮ್ಮ ಆಹಾರ ಪದ್ದತಿ, ಜೀವನ ಶೈಲಿಯಿಂದಾಗಿ ಕಾನ್ಸರ್‌ನಂತಹ ಮಾರಕ ರೋಗಳು ಬಾಧಿಸುತ್ತವೆ, ದುಶ್ಚಟಗಳಿಂದ ಆರೋಗ್ಯ ಸಮಸ್ಯೆ ಕಾಣುತ್ತವೆ. ಉತ್ತಮವಾದ ಜೀವನ ಶೈಲಿಯನ್ನು ರೂಢಿಸಿಕೊಂಡಾಗ ಆರೋಗ್ಯದಿಂದ ಇರಲು ಸಾಧ್ಯವಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ದಿನೇಶ್ ಡಿ. ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಇದರ ವಗ್ಗ ವಲಯದ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು, ಜ| ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದೊಂದಿಗೆ ವಾಮದಪದವು ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಜಯರಾಮ್ ಅಧ್ಯಕ್ಷತೆ ವಹಿಸಿ ಮಾತನಾಡಿ ನಾವು ಎಲ್ಲವನ್ನೂ ಪ್ರಕೃತಿಯಿಂದ ಪಡೆದುಕೊಳ್ಳುತ್ತೇವೆ, ಆತ್ಮಶಕ್ತಿ ಮತ್ತು ಚೈತನ್ಯ ದೇವರ ಸ್ವರೂಪವಾಗಿರುತ್ತದೆ. ನಮ್ಮ ಆಹಾರ ವಿಹಾರ ಉತ್ತಮವಾಗಿದ್ದಾಗ ಆರೋಗ್ಯವೂ…
ಬಂಟ್ವಾಳ: ಇಲ್ಲಿನ ತಾಲೂಕು ಪಂಚಾಯತಿ ಮಾಜಿ ಸದಸ್ಯ, ತುಂಬೆ ನಿವಾಸಿ ಸೋಮಪ್ಪ ಕೋಟ್ಯಾನ್ ತುಂಬೆ ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಒರ್ವ ಪುತ್ರಿಯನ್ನು ಅಗಲಿದ್ದಾರೆ. ತುಂಬೆ ಗ್ರಾಮ ಪಂಚಾಯತಿ ಸದಸ್ಯರಾಗಿ, ಬಂಟ್ವಾಳ ತಾಲೂಕು ಪಂಚಾಯತಿ ಸದಸ್ಯರಾಗಿ, ಭಾರತೀಯ ಜನತಾ ಪಾರ್ಟಿಯ ಮಂಗಳೂರು ಮಂಡಲದ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದರು. ತುಂಬೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಸ್ಥಾಪಕ ಕೋಶಾಧಿಕಾರಿಯಾಗಿ ಆಯ್ಕೆಗೊಂಡು ನಿರಂತರ ೨೫ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ








