
ಬಂಟ್ವಾಳ: ಇಲ್ಲಿನ ಫರ್ಲಾ ವೆಲಂಕಣಿ ಮಾತೆಯ ದೇವಾಲಯದಲ್ಲಿ ಭಾರತೀಯ ಕಥೊಲಿಕ್ ಯುವ ಸಂಚಲನ ಫರ್ಲಾ ಘಟಕದ ಆಶ್ರಯದಲ್ಲಿ ಯುವ ಸಂಭ್ರಮ- ೨೦೨೫ ಹಾಗೂ ಭರತ ನಾಟ್ಯದಲ್ಲಿ ವಿಶ್ವ ದಾಖಲೆ ಮಾಡಿದ ರಿಮೊನಾ ಇವೆಟ್ ಪಿರೇರಾ ಇವರ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದೇವಾಲಯದ ಧರ್ಮಗುರು ವಂದನೀಯ ಗುರು ಮಾರ್ಕ್ ಅರುಣ್ ಡಿಸೋಜ ಆಶೀರ್ವಚನ ನೀಡಿ ಯುವಕರು ದೇಶದ ಶಕ್ತಿ, ಅವರೆಲ್ಲಾ ಏಕತೆ ಮತ್ತು ಛಲದಿಂದ ಒಗ್ಗೂಡಿದರೆ ಮಾತ್ರ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ ಎಂದರು. ಬಳಿಕ ವಿಶ್ವದಾಖಲೆಯ ಸಾಧಕಿ ರಿಮೊನಾ ಇವೆಟ್ ಪಿರೇರಾ ಇವರನ್ನು ಸನ್ಮಾನಿಸಲಾಯಿತು.


ವೇದಿಕೆಯಲ್ಲಿ ವಂದನೀಯ ಗುರು ಗಿಲ್ಬರ್ಟ್ ಮಸ್ಕರೇನಸ್, ವಂದನೀಯ ಗುರು ವಿಲ್ಫ್ರೆಡ್ ರೊಡ್ರಿಗಸ್ , ಧರ್ಮಪ್ರಾಂತ್ಯದ ಜೊತೆ ಕಾರ್ಯದರ್ಶಿ ಪ್ಲೋಯ್ಡ್ ವಿನ್ಸೆಂಟ್ ಪಿಂಟೊ, ಸಂಪನ್ಮೂಲ ವ್ಯಕ್ತಿ ಡಾ. ಸ್ಟೀವನ್ ಡಿಸೋಜ, ದೀಪ್ತಿ ಡಿಸೋಜ, ಘಟಕ ಅಧ್ಯಕ್ಷೆ ರೀಮಾ ಮಿನೇಜಸ್, ಚರ್ಚ್ ಪಾಲನಾ ಪರಿಷತ್ ಸದಸ್ಯರು, ಐಸಿಯಂ ಮತ್ತು ವೈಸಿಎಸ್ ಪದಾಧಿಕಾರಿಗಳು ಮತ್ತು ಸಚೇತಕರು ಉಪಸ್ಥಿತರಿದ್ದರು.
ನಾಯಕತ್ವದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.
ವಂದನೀಯ ಗುರು ರೋಬರ್ಟ್ ಡಿಸೋಜ ಹಾಗೂ ವಂದನೀಯ ಗುರು ಪಿಯುಸ್ ಡಿಸೋಜ ಮಾರ್ಗದರ್ಶನ ಮಾಡಿದರು.
ಲೆಸ್ವಿನ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು. ರೀಮಾ ಮಿನೇಜಸ್ ಸ್ವಾಗತಿಸಿ, ಕೆಲ್ವಿನ್ ಲಸ್ರಾದೊ ವಂದಿಸಿದರು.
Advertisement







