Author: admin
ಬಂಟ್ವಾಳ : ಸರ್ಕಾರಿ ಶಾಲೆ ಬೆಳವಣಿಗೆಯಲ್ಲಿ ಪೋಷಕರ ಹಾಗೂ ಸಮುದಾಯದ ಪಾತ್ರ ಬಹಳ ಮುಖ್ಯ ಎಂದು ಜೆಸಿಐ ತರಬೇತುದಾರ ಸಂದೀಪ್ ಸಾಲ್ಯಾನ್ ಹೇಳಿದರು. ಅವರು ಶುಕ್ರವಾರ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಅದ್ದೂರಿಯಾಗಿ ನಡೆದ ಪೋಷಕರ ಹಾಗೂ ಶಿಕ್ಷಕರ ಮಹಾಸಭೆ -2025 ರಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರ ಹಾಗೂ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ಮಕ್ಕಳು ಶಿಕ್ಷಕರ ಜೊತೆ ದಿನದಲ್ಲಿ ಕೇವಲ ಏಳು ಗಂಟೆ ಮಾತ್ರ ಇದ್ದು ಹೆಚ್ಚಿನ ಸಮಯ ಪೋಷಕರ ಜೊತೆ ಇರುವುದರಿಂದ ಮಕ್ಕಳನ್ನು ಉತ್ತಮ ಪ್ರಜೆಯಾಗಿ ರೂಪಿಸುವಲ್ಲಿ ಪೋಷಕರ ಪಾಲು ಬಹುದೊಡ್ಡದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಅಂಚನ್ ವಹಿಸಿದ್ದರು.ಈ ಸಂದರ್ಭದಲ್ಲಿ ಮಕ್ಕಳಿಗೆ ಮಕ್ಕಳ ದಿನಾಚರಣೆ ಪ್ರಯುಕ್ತ ಮಾಡಿದ ವಿವಿಧ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಶಾಲಾ ಸಮಿತಿಯ ಉಪಾಧ್ಯಕ್ಷೆ ಲಕ್ಷ್ಮಿ ಪ್ರಕಾಶ್, ತಾಯಂದಿರ ಸಮಿತಿಯ ಉಪಾಧ್ಯಕ್ಷ ರೇಖಾ,ಮಾಧ್ಯಮ ಮಿತ್ರ ಚಿನ್ನಾ ಕಲ್ಲಡ್ಕ…
ಬಂಟ್ವಾಳ: ಸಮಾನ ಮನಸ್ಕರು ಸೇರಿ ಸಮಾಜದ ಅಶಕ್ತರಿಗೆ ನೆರವಾಗುವ ಉದ್ದೇಶದಿಂದ ಕರುನಾಡು ಚಾರಿಟೇಬಲ್ ಟ್ರಸ್ಟ್ (ರಿ.) ಕರ್ನಾಟಕ ಎಂಬ ನೂತನ ಸಂಸ್ಥೆಯನ್ನು ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಉದ್ಘಾಟಿಸಲಾಗಿದ್ದು ನೂತನ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾಗಿ ವಿಶ್ವನಾಥ್ ಪಿ ಅರಳ ಇವರನ್ನು ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಭವ್ಯಶ್ರೀ ಅಂಚನ್ ಕುಪ್ಪೆಪದವು, ಕಾರ್ಯದರ್ಶಿಯಾಗಿ ಕುಶನಾಂದ ಹಾಗೂ ಕೋಶಾಧಿಕಾರಿಯಾಗಿ ವಸಂತ ಮುದಿಮರ, ಟ್ರಸ್ಟ್ ನ ಗೌರವ ಅಧ್ಯಕ್ಷರಾಗಿ ಚಂದು ಕೋಟ್ಯಾನ್ ಕುಪ್ಪೆಪದವು ಇವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭ ಟ್ರಸ್ಟ್ ನ ಎಲ್ಲಾ ಸೇವಾ ಮಾಣಿಕ್ಯರು ಈ ಹಾಜರಿದ್ದರು.
ಬಂಟ್ವಾಳ: ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ವತಿಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ 4ನೇ ಮಿನಿ ಕ್ರೀಡಾಕೂಟದಲ್ಲಿ ಕೊಡ್ಮಾಣ್ ಸರಕಾರಿ ಶಾಲೆಯ ವಿದ್ಯಾರ್ಥಿ ನಿ ಅನುಶ್ರೀ ಜೂಡೋ (44 ಕೆಜಿ ವಿಭಾಗ) ಪಂದ್ಯಾಟದಲ್ಲಿ ತೃತೀಯ ಸ್ಥಾನಿಯಾಗಿ ಕಂಚಿನ ಪದಕ ಗೆದ್ದಕೊಂಡಿದ್ದಾರೆ. ನ.2 ರಿಂದ ನ.9 ರವರೆಗೆ 4ನೇ ಮಿನಿ ಕ್ರೀಡಾಕೂಟ ನಡೆಯಲಿದ್ದು ಬಂಟ್ಚಾಳ ತಾಲೂಕಿನ ಗ್ರಾಮೀಣ ಭಾಗದ ಪ್ರತಿಭೆಯ ಈ ಸಾಧನೆ ಹೆಮ್ಮೆ ತಂದಿದೆ. ನೆತ್ತರಕೆರೆ ಸರಕಾರಿ ಶಾಲೆಯಲ್ಲಿ ಮಾರ್ಷಲ್ ಆರ್ಟ್ ತರಬೇತುದಾರರಾದ ಅಸ್ಮಿತಾ ರೈ ಹಾಗೂ ಹಂಸಿಕಾ ಅವರಿಂದ ಅನುಶ್ರೀ ತರಬೇತಿ ಪಡೆದಿದ್ದಾರೆ. ನೆತ್ತರಕೆರೆ ಶಾಲೆಯಲ್ಲಿ ಸ್ಥಳೀಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾರ್ಷಲ್ ಆರ್ಟ್ ಗಳಾದ ಕರಾಟೆ, ಜೂಡೋ, ಕಳಾರಿ ಪೈಟ್ ಮತ್ತಿತರ ಯುದ್ದ ಕೌಶಲ್ಯ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ವಿದ್ಯಾರ್ಥಿನಿಯ ಈ ಸಾಧನೆಗೆ ನೆತ್ತರಕೆರೆ ಶಾಲೆಯ ದಾಮೋದರ್ ನೆತ್ತರಕೆರೆ ಹಾಗೂ ಸಂತೋಷ್ ನೆತ್ತರಕೆರೆ ಹಾಗೂ ಕೊಡ್ಮಾಣ್…
ಬಂಟ್ವಾಳ: ಕುಡ್ಲ ಕುಲಾಲೆರ್ ಚಾರಿಟೇಬಲ್ ಸೇವಾ ಟ್ರಸ್ಟ್ ಮಂಗಳೂರು ನೂತನ ಸಂಸ್ಥೆ ಅಸ್ತಿತ್ವಕ್ಕೆ ಬಂದಿದ್ದು, ಬಂಟ್ವಾಳ ನಗರಯೋಜನಾ ಪಾಧ್ರಿಕಾರದ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಬಂಟ್ವಾಳ ಅವರು ಸ್ಥಾಪಕಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮೆಸ್ಕಾಂನ ನಿವೃತ್ತ ಎಂ.ಡಿ.ಮಂಜಪ್ಪ ಬಿಜೈ, ಮನಪಾ ಮಾಜಿ ಉಪಮೇಯರ್ ರಾಜೇಂದ್ರ ಕುಮಾರ್, ಪ್ರದಾನ ಕಾರ್ಯದರ್ಶಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯ ಟಿ.ಸೇಸಪ್ಪ ಮೂಲ್ಯ, ಕೋಶಾಧಿಕಾರಿಯಾಗಿ ನಿವೃತ್ತ ಆದಾಯ ತೆರಿಗೆ ಅಧಿಕಾರಿ ವಿಶ್ವನಾಥ ಕುದಾಯಿಆಯ್ಕೆಗೊಂಡಿದ್ದಾರೆ. ಉಳಿದಂತೆ ಟ್ರಸ್ಟಿಗಳಾಗಿ ಪೃಥ್ವಿರಾಜ್ ಆರ್.ಕೆ. ಎಡಪದವು, ಸೋಮಯ್ಯ ಹನೈನಡೆ ಬೆಳ್ತಂಗಡಿ, ಸುಂದರ ಬಂಗೇರ ಆದ್ಯಪಾಡಿ, ಗಿರೀಶ್ ಎಂ.ಪಿ ಕುತ್ತಾರ್ ಮಂಗಳೂರು, ಚಂದ್ರಹಾಸ ಪಲ್ಲಿಪಾಡಿ, ಭಾಸ್ಕರ ಎಂ. ಪೆರುವಾಯಿ ಪುತ್ತೂರು, ದೇವಪ್ಪ ಕುಲಾಲ್ ಪಂಜಿಕಲ್ಲು, ರಮೇಶ್ ಬಾಳೆಹಿತ್ತು ಬೆಂಗಳೂರು, ಉಮೇಶ್ ಕೆ. ಬೆಂಗಳೂರು, ದಯಾನಂದ ಬಂಟ್ವಾಳ್, ಬಾಸ್ಕರ್ ಅಜೆಕಳ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಟ್ರಸ್ಟ್‌ನ ಮೊದಲ ಸಭೆ ಮಂಗಳೂರಿನ ಹೊಟೇಲ್ ವುಡ್ ಲ್ಯಾಂಡ್‌ನಲ್ಲಿ ನಡೆದಿದ್ದು, ಕುಲಾಲ ಯುವಕ- ಯುವತಿಯರಿಗೆ ಮುಂದಿನ ಭವಿಷ್ಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ…
ಬಂಟ್ವಾಳ: ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನವೆಂಬರ್ ೯ ರಂದು ಬೆಳಗ್ಗೆ ಗಂಟೆ ೯ ರಿಂದ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಗುರುವಂದನಾ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ನಡೆಯಲಿದೆ ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಬಂಟ್ವಾಳ ತಾಲೂಕಿನ ಬಿಲ್ಲವ ಸಮುದಾಯದ ಸರಕಾರಿ ಹಾಗೂ ಸರಕಾರೇತರ ಪ್ರಾಥಮಿಕ, ಪ್ರೌಢಶಾಲಾ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು, ಸ್ನಾತಕೋತ್ತರ, ತಾಂತ್ರಿಕ, ವೈದ್ಯಕೀಯ ವಿಭಾಗದ ಒಟ್ಟು ೨೨೫ ಬೋಧಕ-ಬೋಧಕಿಯರಿಗೆ ಬಿಲ್ಲವ ಗುರುವಂದನಾ ಗೌರವಾಭಿನಂದನೆ ಹಾಗೂ ಜಿಲ್ಲಾ, ರಾಜ್ಯ ರಾಷ್ಟ್ರ ಮಟ್ಟದ ಸಾಧಕ ಗುರುಗಳಿಗೆ ಬಿಲ್ಲವ ಗುರುವಂದನಾ ಪುರಸ್ಕಾರ ಪ್ರದಾನ ಮಾಡಲಾಗುವುದು. ಬಂಟ್ವಾಳ ತಾಲೂಕಿನ ಸ್ನಾತಕೋತ್ತರ, ತಾಂತ್ರಿಕ, ವೈದ್ಯಕೀಯದ ಅರ್ಹ ೧೦೦ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸುಮಾರು ೫ ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮಾತನಾಡಿ ಮಂಗಳೂರಿನ ಡಯಟ್ ಸೆಂಟರ್‌ನ…
ಬಂಟ್ವಾಳ: ನಮ್ಮ ಆಹಾರ ಪದ್ದತಿ, ಜೀವನಶೈಲಿ ಹಾಗೂ ಪರಿಸರ ಮಾಲಿನ್ಯದಿಂದ ರೋಗಗಳು ಹೆಚ್ಚಾಗುತ್ತಿದೆ . ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ನಮ್ಮ ಆದ್ಯತೆಯಾಗಬೇಕು ಎಂದು ಬಂಟ್ವಾಳ ತಹಶೀಲ್ದಾರ್ ಜಿ.ಮಂಜುನಾಥ್ ಹೇಳಿದರು. ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಬುಧವಾರ ಸೇವಾಂಜಲಿ ಸಭಾಗ್ರಹದಲ್ಲಿ ಕ್ಷಯ ರೋಗಿಗಳಿಗೆ ಅಹಾರ ದವಸಧಾನ್ಯದ ಕಿಟ್ ವಿತರಿಸಿ ಮಾತನಾಡಿದರು. ಕ್ಷಯ ಗುಣಮುಖವಾಗುವ ಕಾಯಿಲೆಯಾಗಿದ್ದು ಸಮಯಕ್ಕೆ ಸರಿಯಾದ ಔಷಧೋಪಚಾರ ಮಾಡಬೇಕು ಎಂದ ಅವರು ಸೇವಾಂಜಲಿಯ ಸೇವಾ ಕಾರ್ಯವನ್ನು ಶ್ಲಾಘಿಸಿದರು. ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯ ಡಾ. ಚೇತನ್ ಮಾತನಾಡಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದ ವ್ಯಕ್ತಿಗಳು ಸುಲಭವಾಗಿ ಕ್ಷಯ ರೋಗಕ್ಕೆ ತುತ್ತಾಗುತ್ತಾರೆ. ಎರಡು ವಾರಕ್ಕಿಂತ ಹೆಚ್ಚು ಸಮಯ ಕೆಮ್ಮು ಇದ್ದು ದೇಹದ ತೂಕ ಕಡಿಮೆಯದಾಗ ವೈದ್ಯರಿಂದ ತಕ್ಷಣ ಚಿಕಿತ್ಸೆ ಪಡೆಯಬೇಕು ಎಂದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಆನಂದ ಆಳ್ವ ಟ್ರಸ್ಟಿ ಸುರೇಶ್…
ಬಂಟ್ವಾಳ: ಸಮಾನ ಮನಸ್ಕರು ಸೇರಿ ಸಮಾಜದ ಅಶಕ್ತರಿಗೆ ನೆರವಾಗುವ ದೃಷ್ಟಿಯನ್ನು ಇಟ್ಟುಕೊಂಡು ಕರುನಾಡು ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದು ಕಾರಿಂಜದ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಟ್ರಸ್ಟ್ ನ ಉದ್ಘಾಟನೆ ಮತ್ತು ಲಾಂಛನವನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಬಿ. ಅರ್ಜುನ್ ಭಂಡಾರ್ಕರ್ ಉಪಸ್ಥಿಯಲ್ಲಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ (ರಿ.)ಮಡವು ಇದರ ಅಧ್ಯಕ್ಷ ತ ಸಚಿನ್ ಸುವರ್ಣ, ಕಾರಿಂಜೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೀರೇಂದ್ರ ಅಮೀನ್, , ಕಾವಳಮೂಡುರು ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ಶೆಟ್ಟಿ ಕಾರಿಂಜ ಹಾಗೂ ಟ್ರಸ್ಟ್ ನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಕಾರಿಂಜೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಬಂಟ್ವಾಳ: ಬಿಲ್ಲವ ಸೇವಾ ಸಮಿತಿ ಬೊಳ್ಳಾಯಿ ಇದರ ವತಯಿಂದ ತನ್ನ ಎರಡು ಕಿಡ್ನಿ ವೈಪಲ್ಯದಿಂದ ಬಳಲುತ್ತಿರುವ ಗಣೇಶ್ ಪೂಜಾರಿ ಪಟ್ಟುಗುಡ್ಡೆ ಇವರಿಗೆ ಆಹಾರ ಕಿಟ್ಟ್ ಮತ್ತು 10 ಸಾವಿರ ರೂಪಾಯಿಯ ಆರ್ಥಿಕ ನೆರವಿನ ಚೆಕ್ಕನ್ನು ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಕೋಮಾಲಿ ಪಡೀಲ್ ಅವರ ನೇತ್ರತ್ವದಲ್ಲಿ ನೀಡಲಾಯಿತು. ಗೌರವ ಸಲಹೆಗಾರರಾದ ಮೋಹನ್ ದಾಸ್ ಪೂಜಾರಿ ಬೊಳ್ಳಾಯಿ ಕಾರ್ಯದರ್ಶಿ ನಾಗೇಶ್ ಪೂಜಾರಿ. ಉಪಾಧ್ಯಕ್ಷ ಮಹೇಶ್ ಪಟ್ಟುಗುಡ್ಡೆ, ಪ್ರಮುಖರಾದ ನಾರಾಯಣ ಪೂಜಾರಿ ಪಟ್ಟುಗುಡ್ಡೆ, ಶೀನಪೂಜಾರಿ, ಪದ್ಮಪ್ಪ ಪೂಜಾರಿ, ರಾಮಚಂದ್ರ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.
ಬಂಟ್ವಾಳ : ಮೂಡನಡುಗೋಡು ಕಾರ್ಯಕ್ಷೇತ್ರದ ನವ ದೀಪ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮ ಭಾನುವಾರ ನಡೆಯಿತು. ಒಕ್ಕೂಟದ ಅಧ್ಯಕ್ಷ ಭಾಸ್ಕರ್ ಕುಲಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಿಠಲ ಪೂಜಾರಿ, ಪ್ರಮುಖರಾದ ಧರ್ಣಪ್ಪ, ವಲಯದ ಮೇಲ್ವಿಚಾರಕ ರಾಜೇಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ, ಸೇವಾ ಪ್ರತಿನಿಧಿ ಪ್ರಪ್ಪುಲ್ಲ ಹಾಗೂ ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು. ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಹಾಗೂ ಕೇಂದ್ರದ ಸದಸ್ಯರು ಪೌಷ್ಟಿಕ ಆಹಾರವನ್ನು ಸಿದ್ಧಪಡಿಸಿದ್ದರು.
ಬಂಟ್ವಾಳ: ಇಲ್ಲಿನ ಬಿ. ಮೂಡ ಗ್ರಾಮದ ಅಜ್ಜಿಬೆಟ್ಟು ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಶಿಬಿರ ಕಾರ್ಯಕ್ರಮ ನಡೆಯಿತು. ವಕೀಲೆ ಆಶಾಮಣಿ ಡಿ. ರೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪೌಷ್ಠಿಕ ಆಹಾರ ಸೇವನೆ ನಮ್ಮ ದೇಹದ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾಗಿದೆ. ಹಿಂದಿನ ಕಾಲದಲ್ಲಿ ಬಡತನವಿದ್ದರೂ ಮನೆ ಪರಿಸರದಲ್ಲೇ ಸಿಗುತ್ತಿದ್ದ ಸೊಪ್ಪು ತರಕಾರಿಗಳನ್ನು ಬಳಸಿ ಪೌಷ್ಟಿಕ ಆಹಾರಗಳನ್ನು ಸೇವೆನೆ ಮಾಡುತ್ತಿದ್ದುದರಿಂದ ನಮ್ಮ ಹಿರಿಯರು ಉತ್ತಮ ಆರೋಗ್ಯವನ್ನು ಹೊಂದಿದ್ದರು ಎಂದು ತಿಳಿಸಿದರು. ಜೆಸಿಐ ವಲಯ ತರಬೇತುದಾರ ಸಂದೀಪ್ ಸಾಲ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜ್ಞಾನ ವಿಕಾಸ ಕೇಂದ್ರದ ಸಮನ್ವಯಧಿಕಾರಿ ಸವಿತಾ ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ಗಿರೀಶ್, ಒಕ್ಕೂಟದ ಅಧ್ಯಕ್ಷೆ ಸಂಧ್ಯಾ ಹೆಗ್ಡೆ, ಸೇವಾ ಪ್ರತಿನಿಧಿ ವನಜಾಕ್ಷಿ ಹಾಗೂ ಜ್ಞಾನವಿಕಾಸದ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು. ಸದಸ್ಯರು ತಾವು ಮನೆಯಲ್ಲಿ ತಯಾರಿಸಿ ತಂದ ವಿವಿಧ ಬಗೆಯ ಪೌಷ್ಠಿಕ ಆಹಾರದ ಸಹಭೋಜನ ನಡೆಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು.








