Author: admin
ಬಂಟ್ವಾಳ: ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯು ನರಿಕೊಂಬುವಿನ ಬಿರ್ವೆರ್ ಸೇವಾ ಟ್ರಸ್ಟ್‌ನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಅಧ್ಯಕ್ಷತೆಯಲ್ಲಿ ನಡೆಯಿತು. ಅವರು ಮಾತನಾಡಿ ಸಂಘವು ಪ್ರಗತಿಯ ಹಾದಿಯಲ್ಲಿದ್ದು ಲಾಭದೊಂದಿಗೆ ಮುನ್ನಡೆಯುತ್ತಿದೆ. ಸಂಘದ ಸದಸ್ಯರ ಒಪ್ಪಿಗೆಯ ಮೇರೆಗೆ ಲಾಭಾಂಶವನ್ನು ಸಂಘಕ್ಕೆ ನಿವೇಶನ ಖರೀದಿಸಿ, ಸ್ವಂತ ಕಟ್ಟಡ ಕಟ್ಟುವ ಉದ್ದೇಶದಿಂದ ಕಟ್ಟಡ ನಿಧಿಗೆ ವರ್ಗಾಯಿಸುವುದಾಗಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್, ಉಪಾಧ್ಯಕ್ಷೆ ಮೋಹಿನಿ ವಾಮನ ಕುಲಾಲ್, ನರಿಕೊಂಬು ಬಿರುವೆರ್ ಸೇವಾ ಟ್ರಸ್ಟ್ ಅಧ್ಯಕ್ಷ ಸೀತರಾಮ ಪೂಜಾರಿ, ಭೂಸೇನೆಯ ನಿವೃತ್ತ ಸುಬೇಧಾರ್ ಮೋನಪ್ಪ ಪೂಜಾರಿ ಭಾಗವಹಿಸಿ ಶುಭ ಹಾರೈಸಿದರು. ಸಂಘದ ಉಪಾಧ್ಯಕ್ಷ ಮಾಧವ ಕೆ. ಕರ್ಬೆಟ್ಟು, ನಿರ್ದೇಶಕರಾದ ಅಶೋಕ್ ಆರ್. ರಾಜೇಶ್ ಆರ್. ಮೋನಪ್ಪ ಪೂಜಾರಿ, ನಾರಾಯಣ ಪೂಜಾರಿ ಕೇದಿಗೆ, ಗಣೇಶ್ ಪೆಲ್ತಿಮಾರ್, ಶ್ರೀಶ ಆರ್., ವಿಜಯ ತುಕರಾಂ, ಜಯಂತಿ ಈಶ್ವರ ಪೂಜಾರಿ, ಕೃಷ್ಣಪ್ಪ…
ಬಂಟ್ವಾಳ: ಇಲ್ಲಿನ ಸಮಾಜ ಸೇವಾ ಸಹಕಾರಿ ಸಂಘದ 17ನೇ ಶಾಖೆಯು ಕಡಬ ತಾಲೂಕಿನ ಆಲಂಕಾರುವಿನಲ್ಲಿರುವ ಮಾತೃ ಕೃಪಾ ಕಟ್ಟಡದಲ್ಲಿ ಅ.5ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪ ಪ್ರಜ್ವಲಿಸಿ ಆಶೀರ್ವಚನ ನೀಡುವರು, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ನೂತನ ಶಾಖೆಯನ್ನು ಉದ್ಘಾಟಿಸುವರು, ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಅಧ್ಯಕ್ಷತೆ ವಹಿಸುವರು. ಭದ್ರತಾ ಕೊಠಡಿಯನ್ನು ಸಂಸದ ಕ್ಯಾ| ಬ್ರಿಜೇಶ್ ಚೌಟ ಉದ್ಘಾಟಿಸುವರು, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸೇಫ್ ಲಾಕರ್ ಉದ್ಘಾಟಿಸುವರು. ಕುಲಾಲ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಕಂಪ್ಯೂಟರ್ ಉದ್ಘಾಟಿಸುವರು. ಸಹಕಾರ ಸಂಘಗಳ ಉಪನಿಬಂಧಕ ಎಚ್. ಎನ್. ರಮೇಶ್ ಠೇವಣಿ ಪತ್ರ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ದಿವಾಕರ ಮೂಲ್ಯ, ಆಲಂಕಾರು ಗ್ರಾ.ಪಂ. ಅಧ್ಯಕ್ಷೆ ಸುಶೀಲ, ಅಲಂಕಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಭಟ್ ಯು.…
ಬಂಟ್ವಾಳ: ಇಲ್ಲಿನ ಗಿರಿಗುಡ್ಡೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಬುಧವಾರ ಎನ್‌ಎಸ್‌ಎಸ್ ಘಟಕದ ವತಿಯಿಂದ ೧೦ನೇ ಆಯುರ್ವೇದ ದಿನಾಚರಣೆ ಮತ್ತು ಎನ್‌ಎಸ್‌ಎಸ್ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾಸಂಸ್ಥೆಯ ಪ್ರಾಂಶುಪಾಲ ನರಸಿಂಹ ಭಟ್ ಎಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬದಲಾಗುತ್ತಿರುವ ಕಾಲಘಟ್ಟದ್ದಲ್ಲಿ ನಾವು ಬಳಸುತ್ತಿರುವ ಆಹಾರ ನಮ್ಮ ಆರೋಗ್ಯಕ್ಕೆ ಮುಳುವಾಗುತ್ತಿದ್ದು ಪ್ರಕೃತಿ ಜನ್ಯ ಆಹಾರಗಳ ಸೇವೆಯಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆಯುರ್ವೇದ ನಮ್ಮ ಪಾರಂಪರಿಕ ಔಷಧಿ ಪದ್ದತಿಯಾಗಿದ್ದು ಇದರ ಮಹತ್ವವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಜೆಸಿಐ ವಲಯ ತರಬೇತುದಾರ ಸಂದೀಪ್ ಸಾಲ್ಯಾನ್ ಭಾಗವಹಿಸಿ ಎನ್‌ಎಸ್‌ಎಸ್ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಮಾಹಿತಿಯನ್ನು ನೀಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಭಾಸ್ಕರ್ ಎಲ್. ಪ್ರಾಸ್ತಾವಿಕವಾಗಿ ಮಾತನಾಡಿ ಎನ್‌ಎಸ್‌ಎಸ್ ಮತ್ತು ಆಯುರ್ವೇದ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ವೇದಿಕೆಯಲ್ಲಿ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಭಗವಾನ್ ಪ್ರಸಾದ್, ಸಿವಿಲ್ ವಿಭಾಗ ಮುಖ್ಯಸ್ಥ ಮೋಹನ್ ರಾಜ್ ಜಿ.ಎಸ್, ಎಲೆಕ್ಟ್ರಾನಿಕ್ಸ್ ವಿಭಾಗ ಮುಖ್ಯಸ್ಥ ಉದಯ್ ಕುಮಾರ್, ಕಚೇರಿ ಅಧೀಕ್ಷಕ ಸುಧಾಕರ್…
ಬಂಟ್ವಾಳ: ಇಲ್ಲಿನ ಬಂಟ್ವಾಳ ತಾಲೂಕು ಹಿಂದಿ ಭಾಷ ಶಿಕ್ಷಕ ಸಂಘದ ಆಶ್ರಯದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಸಹಯೋಗದೊಂದಿಗೆ ಹಿಂದಿ ಭಾಷ ಶಿಕ್ಷಕ ಸಮಾವೇಶ ಬಿ.ಸಿ.ರೋಡಿನ ಬಿ.ಎ. ಸೋಮಯಾಜಿ ರೋಟರಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಉದ್ಘಾಟಿಸಿದರು. ಅವರು ಮಾತನಾಡಿ ಹಿಂದಿ ಭಾಷೆ ಕಲಿತರ ದೇಶದ ಎಲ್ಲಾ ಕಡೆಗೂ ಸಂಚರಿಸಬಹುದಾಗಿದೆ. ಲೋಕಸಭೆ ರಾಜ್ಯಸಭೆಯಲ್ಲಿ ಚರ್ಚೆಗಳು ಹಿಂದಿ ಭಾಷೆಯಲ್ಲಿಯೆ ನಡೆಯುತ್ತದೆ. ಹಿಂದಿ ಭಾಷ ಸಂಘದ ವತಿಯಿಂದ ರಚಿತವಾದ ಹಿಂದಿ ಅಭ್ಯಾಸ ಪುಸ್ತಕದಿಂದ ಎಸ್ ಎಲ್ ಎ ಸಿ ಯಲ್ಲಿ ಅತ್ಯಧಿಕ ಅಂಕಗಳು ಬಂದಿದೆ.ಇದರಿಂದ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸುವ ಕಾರ್ಯ ಆಗಿದೆ ಎಂದರು. ಪಾಣೆಮಂಗಳೂರಿನ ಎಸ್ ಎಲ್ ಎಂ. ಪಿ. ಶಾಲೆಯ ಹಿಂದಿ ಶಿಕ್ಷಕ ಪಂಚಾಕ್ಷರಿ ಯವರಿಗೆ ಹಿಂದಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.. ಬಂಟ್ವಾಳ ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜೋಯಲ್ ಲೋಬೋ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಹಿಂದಿ ಶಿಕ್ಷಕರಿಗೆ ತೊಂದರೆಯಾಗುವುದಿಲ್ಲ, ಹಿಂದಿ ಶಿಕ್ಷಕರು ಆತಂಕ…
ಬಂಟ್ವಾಳ: ಅಂಕ ಪ್ರಗತಿಯ ಧ್ಯೋತಕವಲ್ಲ. ಸಾಧನೆ ಮಾಡುವವನಿಗೆ ಸುಖ ಸಿಗುವುದಿಲ್ಲ, ಸುಖ ಬಯಸುವವನಿಗೆ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಯೇ ಗುರಿಯಾಗಿರಬೇಕು ಎಂದು ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ ಹೇಳಿದರು. ಸಜೀಪಮೂಡ ಗ್ರಾಮದ ಸುಭಾಷ್ ನಗರದಲ್ಲಿರುವ ಶ್ರೀ ಗುರು ಕಲ್ಯಾಣ ಮಂಟಪದಲ್ಲಿ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಬದುಕಿಗೆ ಬೆಳಕು ತೋರಿದವರು. ಸಮಾಜದ ಸ್ಪರ್ಶ, ಅಸ್ಪರ್ಶ್ಯತೆಯನ್ನು ನೀಗಿದವರು.ಅವರಿಗೆ ಕೈ ಮುಗಿದಲ್ಲಿ ನಮ್ಮೊಳಗಿನ ಪ್ರತಿಭೆ ಹೊರ ಬರಲು ಸಾಧ್ಯವಿದೆ ಎಂದು ತಿಳಿಸಿದರು. ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ, ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ. ಹಳ್ಳಿಯ ಜನರಿಗೆ ಆರ್ಥಿಕ ಚೈತನ್ಯ ನೀಡಿದೆ ಎಂದು ತಿಳಿಸಿದರು. ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಮಂಚಿ ಕೊಳ್ನಾಡು ಸರಕಾರಿ ಶಾಲೆಯ ಶಿಕ್ಷಕಿ ವಿಜಯ ಲಕ್ಷ್ಮೀ ಕಟೀಲು ಮಾತನಾಡಿ ಶಿಕ್ಷಣ ಇದ್ದಲ್ಲಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು. ಇಂದು ವಿದ್ಯಾರ್ಥಿ ವೇತನ ಪಡೆದಂತೆ ಮುಂದೆ…
ಬಂಟ್ವಾಳ:ವಿಶ್ವಕರ್ಮ ಸಮಾಜ ಸೇವಾ ಸಂಘ ಬಂಟ್ವಾಳ ಇದರ ಆಶ್ರಯದಲ್ಲಿ ಬಂಟ್ವಾಳದ ಅಜೆಕಲದಲ್ಲಿರುವ ವಿಶ್ವಕರ್ಮ ಸಭಾಭವನದಲ್ಲಿ 32 ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ ಸಮುದಾಯದ ಸಾಧಕರನ್ನು ಗುರುತಿಸುವ ಕಾರ್ಯ ಅಭಿನಂದನೀಯ. ಸಮಾಜಮುಖಿ ಕಾರ್ಯದಲ್ಲಿ ವಿಶ್ವಕರ್ಮ ಸಂಘ ಸದಾ ತೊಡಗಿಸಿಕೊಳ್ಳಲಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು. ಮಾಜಿ ಸಚಿವ ಬಿ.ರಮನಾಥ ರೈ ಮುಖ್ಯ ಅತಿಥಿಯಾಗಿ ಮಾತನಾಡಿ ವಿಶ್ವಕರ್ಮ ಸಮಾಜ ಜಗತ್ತಿನ ಶ್ರೇಷ್ಠ ಸಮಾಜ . ಸಂಖ್ಯಾಬಲದಲ್ಲಿ ಕಡಿಮೆ ಇದ್ದರೂ ಕೂಡ ಕಾರ್ಯವೈಖರಿಯಲ್ಲಿ ಪ್ರಗತಿಪರ ದೃಷ್ಟಿಕೋನ ಇಟ್ಟುಕೊಂಡು ಹೆಚ್ಚಿನ ಕೆಲಸ ಮಾಡಿಕೊಂಡು ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಎಸ್ ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಅಪರೇಟಿವ್ ಸೊಸೈಟಿ ಲಿ. ನ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಮಾತನಾಡಿ ಸಮಾಜಕ್ಕಾಗಿ ಬದುಕಿದವರನ್ನು ಜಗತ್ತು ಎಂದೂ ಮರೆಯುವುದಿಲ್ಲ. ವೈ…
ಬಂಟ್ವಾಳ: ಜೆಸಿಐ ಬಂಟ್ವಾಳದ ಜೆಸಿ ಸ್ಪಾಹದ ಸಮಾರೋಪ ಸಮಾರಂಭ ಭಾನುವಾರ ಸಂಜೆ ಬಿ.ಸಿ.ರೋಡಿನ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ತಾಲೂಕು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಮಾತನಾಡಿ ಯುವಕರಿಗೆ ತರಬೇತಿ ನೀಡುವ ಸಂಸ್ಥೆಯಾಗಿರುವ ಜೆಸಿಐ ಬಂಟ್ವಾಳ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವುದು ಅಭಿನಂದನೀಯ. ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ಸೇವೆ ಮಾಡುವ ಯುವಕರನ್ನು ಗುರುತಿಸಿ ಗೌರವಿಸಿರುವುದು ಶ್ಲಾಘನೀಯ ಎಂದರು. ಜೆಸಿಐ ಬಂಟ್ವಾಳದ ಅಧ್ಯಕ್ಷ ಗಣೇಶ್ ಕೆ. ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜೇಸಿ ಸಪ್ತಾಹದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳ ವಿವರ ನೀಡಿದರು. ವಿವಿಧ ಕ್ಷೇತ್ರಗಳ ಸಮಾಜ ಸೇವಕರಾದ ವಸಂತ ಮುದಿಮಾರು, ಚಿನ್ನಕಲ್ಲಡ್ಕ, ದೇವದಾಸ್ ನೀರೊಲ್ಬೆ, ಮಹೇಶ್ ಕುಲಾಲ್ ಕಡೇಶಿವಾಲಯ ಅವರಿಗೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಿಕಟಪೂರ್ವಾಧ್ಯಕ್ಷೆ ರಶ್ಮಿ ಶೆಟ್ಟಿ, ಕಾರ್ಯದರ್ಶಿ ಕಿಶೋರ್ ಕುಮಾರ್ ಆಚಾರ್ಯ, ಕಾರ್ಯಕ್ರಮ ನಿರ್ದೇಶಕ ಸದಾನಂದ ಡಿ. ಬಂಗೇರ, ಲೇಡಿ ಜೆಸಿ ಅಧ್ಯಕ್ಷೆ ಬಬಿತಾ ಗಣೇಶ್ ಉಪಸ್ಥಿತರಿದ್ದರು.
ಬಂಟ್ವಾಳ: ಸಿದ್ಧಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2024-25 ಸಾಲಿನಲ್ಲಿ ರೂ.545 ಕೋಟಿ ವ್ಯವಹಾರ ನಡೆಸಿ ರೂ.1.93 ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದರು. ಸಿದ್ಧಕಟ್ಟೆಯಲ್ಲಿ ಸಂಘದ ಪ್ರಧಾನ ಕಚೇರಿಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ಶನಿವಾರ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾಹಿತಿ ನೀಡಿದರು. 2024-25 ನೇ ವರ್ಷದಲ್ಲಿ ವಿವಿಧ ಉದ್ದೇಶಗಳಿಗೆ ಒಟ್ಟು ರೂ.122.33 ಕೋಟಿ ಸಾಲ ವಿತರಿಸಲಾಗಿದ್ದು ಹೊರ ಬಾಕಿ ಸಾಲವು ರೂ.112.32 ಕೋಟಿ ಆಗಿದ್ದು, ವಿತರಿಸಿದ ಸಾಲದಲ್ಲಿ ಶೇ 97ರಷ್ಟು ವಸೂಲಾತಿಯಾಗಿರುತ್ತದೆ. 2024-25 ನೇ ಸಾಲಿನ ವರ್ಷಾಂತ್ಯಕ್ಕೆ ರೂ. 62.19 ಕೋಟಿ ಠೇವಣಿ ಹೊಂದಿದ್ದು, ಸಂಘವು ಕಳೆದ ಹಲವಾರು ವರ್ಷಗಳಿಂದ ಆಡಿಟ್ ವರದಿಯಲ್ಲಿ ಎ ಗ್ರೇಡ್ ನ್ನು ನಿರಂತರವಾಗಿ ಕಾಯ್ದುಕೊಂಡು ಬರಲಾಗಿ ಎಂದರು. ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಲ್ಲಿ ಜಿಲ್ಲಾ ಮಟ್ಟದಲ್ಲಿಯೇ ಗರಿಷ್ಠ ಸಾಧನೆ ಮಾಡಲಾಗಿದೆ ಎಂದು ಹೇಳಿದ ಪ್ರಭು, ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರುವ ಬೆರಳೆಣಿಕೆಯ ಸಹಕಾರಿ ಸಂಘಗಳಲ್ಲಿ ನಮ್ಮ…
ಉಡುಪಿ : ಉಡುಪಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಓಪನ್ ಚಾಂಪಿಯನ್ ಕಟ ಮತ್ತು ಕಮಿಟೆ ವಿಭಾಗದಲ್ಲಿ ತನಿಷ್ಕ ಪವನ್ ಕುಮಾರ್2 ಚಿನ್ನದ ಪದಕಗಳನ್ನು ಪಡೆದು ವಿಜಯ ಶಾಲಿಯಾಗಿದ್ದಾರೆ . ಉಡುಪಿ ಅಜ್ಜರಕಾಡು ಸೈಂಟ್ ಸಿಸಿಲಿಯ ಪ್ರೌಢಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ. ಈಕೆ ಭಾರತೀಯ ರೈಲ್ವೆ ಇಲಾಖೆಯ ಪೊಲೀಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಂಟ್ವಾಳ ತಾಲೂಕಿನ ಕೂರಿಯಾಳದ ಪವನ್ ಕುಮಾರ್ ಮತ್ತು ಅಕ್ಷತಾ ಪವನ್ ಕುಮಾರ್ ದಂಪತಿಯ ಸುಪುತ್ರಿ ಹಾಗೂ ಜಗದೀಶ್ ಭಂಡಾರಿ ಕುರಿಯಾಳ ಮತ್ತು ಮೋಹಿನಿ ಜಗದೀಶ್ ಭಂಡಾರಿ ಅವರ ಮೊಮ್ಮಗಳು. ಇನ್ಸ್ಟಿಟ್ಯೂಟ್ ಆಫ್ ಬುಡಕೊನ್ ಕರಾಟೆ ಮಾರ್ಷಯಲ್ ಆರ್ಟ್ ನ ಕೋಚ್ ಸಂತೋಷ್ ಕುಮಾರ್ ಶೆಟ್ಟಿ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.
ಬಂಟ್ವಾಳ: ಸಂಘದ ಸದಸ್ಯರು ತಮ್ಮ ಕ್ಯಾಟರಿಂಗ್ ವೃತ್ತಿಯ ಬಗ್ಗೆ ಕೀಳರಿಮೆ ಬಿಟ್ಟು ಗೌರವದ ಭಾವನೆ ಬೆಳೆಸಿಕೊಳ್ಳಬೇಕು ಎಂದು ದ.ಕ. ಕ್ಯಾಟರಿಂಗ್ ಮಾಲಕರ ಸಂಘದ ಪ್ರಥಮ ಅಧ್ಯಕ್ಷ , ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಹೇಳಿದರು. ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ಅಧ್ಯಕ್ಷ ನಾರಾಯಣ ಸುವರ್ಣ ಅಧ್ಯಕ್ಷತೆಯಲ್ಲಿ ನಡೆದ ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲಕರ ಸಂಘ ಬಂಟ್ವಾಳ ವಲಯದ ನೂತನ ಸಾಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಇಂದು ಕ್ಯಾಟರಿಂಗ್ ವೃತ್ತಿನಿರತರ ಮಕ್ಕಳು ಉನ್ನತ ಶಿಕ್ಷಣ ಪಡೆದು ಉತ್ತಮ ಸ್ಥಾನದಲ್ಲಿದ್ದಾರೆ, ನಮ್ಮೊಳಗೆ ಯಾವುದೇ ಸ್ಪರ್ಧೆ ಬೇಡ. ನಾವೇ ಕಚ್ಚಾಟ ಮಾಡಿದ್ದಲ್ಲಿ ಮೂರನೇ ವ್ಯಕ್ತಿ ಲಾಭ ಪಡೆಯುತ್ತಾನೆ. ಗ್ರಾಕರಿಗೆ ಉತ್ತಮ ಆಹಾರ ಕೊಡಬೇಕು, ಸಮಯಕ್ಕೆ ಸರಿಯಾಗಿ ಮುಟ್ಟಿಸಬೇಕು. ಆದರೆ ದರ ಪೈಪೋಟಿ ಮಾಡಿ ಉದ್ಯಮದಲ್ಲಿ ನಷ್ಟ ಅನುಭವಿಸುವುದು ಬೇಡ ಎಂದು ಸದಸ್ಯರಿಗೆ ಸಲಹೆ ನೀಡಿದ ಅವರು ಸಂಪಾದನೆಯ ಒಂದಂಶವನ್ನು ಸಮಾಜಕ್ಕೆ ನೀಡೋಣ ಎಂದು ತಿಳಿಸಿದರು. ದ.ಕ. ಜಿಲ್ಲಾ…








