
ಬಂಟ್ವಾಳ: ಸಾಹಿತ್ಯ, ಸಂಸ್ಕತಿ, ಸಂಘಟನೆ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಆಳ್ವರ ಬರೆದದ್ದು ಕಡಿಮೆ ಓದಿದ್ದು ಹೆಚ್ಚು. ಅವರು ಭಾವನಾತ್ಮಕ ಜೀವಿ, ಕವಿ ಹೃದಯಿ. ಅವರ ಬಗ್ಹೆ ಬರೆದಿರುವ ಪುಸ್ತಕ ದ ತೋರಣ ಹಾಗೂ ಹೂರಣ ಅದ್ಭುತವಾಗಿದೆ ಎಂದು ಎಂದು ಜಾನಪದ ವಿದ್ವಾಂಸ, ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ್ ರೈ ಹೇಳಿದರು.
ಏರ್ಯ ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ ಪ್ರಯುಕ್ತ ಬಂಟ್ವಾಳದ ಅಮ್ಟಾಡಿಯ ಏರ್ಯಬೀಡಿನಲ್ಲಿ ಡಾ.ನಾ. ದಾಮೋದರ ಶೆಟ್ಟಿ ಸಂಪಾದಿತ ಏರ್ಯ ಸಾಹಿತ್ಯ ಮರುಚಿಂತನ ಕೃತಿ ಅನಾವರಣಗೊಳಿಸಿ ಅವರು ಮಾತನಾಡಿದರು.

ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರ ಪತ್ನಿ. ಆನಂದಿ ಎಲ್.ಆಳ್ವ ಕಾರ್ಯಕ್ರಮ ಉದ್ಘಾಟಿಸಿದರು.ನಾಡೋಜ ಪ್ರೊ.ಹಂಪ ನಾಗರಾಜಯ್ಯ ಅಧ್ಯಕ್ಷತೆ ವಹಿಸಿದ್ದರು.



ಹಿರಿಯ ಸಾಹಿತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ಹಾಗೂ ಡಾ. ನಾ. ದಾಮೋದರ ಶೆಟ್ಟಿಯವರಿಗೆ ಏರ್ಯ ಡಾ. ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಏರ್ಯಬಾಲಕೃಷ್ಣ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಮರ್ ಟೀಕೆ ಸ್ವಾಗತಿಸಿದರು, ಆರ್. ನರಸಿಂಹ ಮೂರ್ತಿ ವಂದಿಸಿದರು.ಮೈಮ್ ರಾಮ್ ದಾಸ್ ಮತ್ತು ತಂಡದವರು ಗಾಯನ ಪ್ರಸ್ತುತ ಪಡಿಸಿದರು.ಮಹಾಬಲೇಶ್ಬರ ಹೆಬ್ಬಾರ್ ಮತ್ತು ಕೇಶವ ಎಚ್.ಕಾರ್ಯಕ್ರಮ ನಿರೂಪಿಸಿದರು
Advertisement







