
ಬಂಟ್ವಾಳ: ನರಿಕೊಂಬು ಗ್ರಾಮದ ಅರುಂಧತಿ ಸಂಜೀವಿನಿ ಒಕ್ಕೂಟದ ಮಹಾಸಭೆಯು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮದಲ್ಲಿ ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹರೀಶ್ ಎಚ್, ಎಸ್ ಡಿಎ ಗೋಪಾಲ್ ಬಿಸ್ಪೆ, ಒಕ್ಕೂಟದ ಅಧ್ಯಕ್ಷೆ ವಿದ್ಯಾ ಪುಷ್ಪರಾಜ್, ಕೋಶಾಧಿಕಾರಿ ಗೀತಾ ಉಪಸ್ಥಿತರಿದ್ದರು.


ಕೃಷಿ ಇಲಾಖೆಯ ಹನುಮಂತ ಸದಸ್ಯರಿಗೆ ಅಣಬೆ ಹಾಗೂ ಮಲ್ಲಿಗೆ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಪುಷ್ಪಲತಾ ಪರಿವರ್ತನಾ ಕಾರ್ಯಕ್ರಮದಡಿ ಮಾದಕ ವ್ಯಸನ ಮುಕ್ತ ಕರ್ನಾಟಕ ಬಗ್ಗೆ ಮಾಹಿತಿ ನೀಡಿ ಪ್ರತಿಜ್ಞೆ ವಿಧಿ ಬೋಧಿಸಿದರು. ಎಸ್ ಡಬ್ಲ್ಯು ಎಂ ವಾಹನ ಚಾಲಕಿ ಮತ್ತು ನಿರ್ವಾಹಕಿಯನ್ನು ಅಭಿನಂದಿಸಲಾಯಿತು.
ಎಲ್ ಸಿ ಆರ್ ಪಿ ರಶ್ಮಿ ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಗಾಯತ್ರಿ 2024-25 ನೇ ಸಾಲಿನ ವರದಿಯನ್ನು ಮಂಡಿಸಿದರು. ರೂಪ ಲೆಕ್ಕಪತ್ರ ಮಂಡಿಸಿದರು.ವೀಣಾ ವಂದಿಸಿದರು.ಪಶು ಸಖಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.
ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು, ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.
Advertisement







