
ಬಂಟ್ವಾಳ: ಧರ್ಮಸ್ಥಳ ಧರ್ಮ ರಕ್ಷಣಾ ವೇದಿಕೆ ಬಂಟ್ವಾಳ ಇದರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನವನ್ನು ಖಂಡಿಸಿ ಜನಾಗ್ರಹ ಸಭೆ ಬಿ.ಸಿ.ರೋಡಿನಲ್ಲಿ ಬುಧವಾರ ನಡೆಯಿತು.
ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದ ಮುಂಭಾಗ ನಡೆದ ಸಭೆಯಲ್ಲಿ ಯಕ್ಷಗಾನ ಅರ್ಥಧಾರಿ ಉಜಿರೆ ಅಶೋಕ್ ಭಟ್ ಮಾತನಾಡಿ ದೇಶದ ಅಸ್ಮಿತೆ ಪುಣ್ಯ ಕ್ಷೇತ್ರಗಳಲ್ಲಿದೆ. ಅಂತಹ ಪುಣ್ಯಕ್ಷೇತ್ರಗಳಲ್ಲೊಂದಂತಹ ಧರ್ಮಸ್ಥಳ ಹಾಗೂ ಧರ್ಮಧಿಕಾರಿಯ ವಿರುದ್ರ ಅಪಪ್ರಚಾರ, ಅವಹೇಳನದ ಮೂಲಕ ದೇಶದ ಅಸ್ಮಿತೆಯನ್ನು ನಾಶ ಮಾಡುವ ಕಾರ್ಯ ನಡೆಯುತ್ತಿದೆ. ಕ್ಷೇತ್ರದ ದಾನ ಪರಂಪರೆಯ ಮೇಲೆ ಆಕ್ರಮಣವಾಗುತ್ತಿದೆ. ನಮ್ಮ ಧರ್ಮ ಕ್ಷೇತ್ರದ ವಿರುದ್ಧ ಅಪಚಾರ ಆಗುವಾಗ ನಾವೆಲ್ಲ ಒಟ್ಟಾಗಿ ಮೈ ಕೊಡವಿ ಎದ್ದು ನಿಲ್ಲಬೇಕು, ಧರ್ಮಸ್ಥಳ ಕ್ಷೇತ್ರದ ವಿರುದ್ದ ಅಪಪ್ರಚಾರ ಮಾಡುವವರಿಗೆ ಹಣ ಎಲ್ಲಿಂದ ಬರುತ್ತಿದೆ, ಅವರ ಹಿಂದೆ ಯಾರಿದ್ದಾರೆ ಎನ್ನುವುದು ತನಿಖೆಯಾಗಬೇಕು, ಕ್ಷೇತ್ರದ ಪರವಾದ ಹೋರಾಟ ಅಭಿಯಾನ ಆಗಬೇಕು, ಈ ಒಟ್ಟು ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಮಾತನಾಡಿ ಇದೊಂದು ಅಂತರಾಷ್ಟ್ರೀಯ ಷಡ್ಯಂತ್ರ ಇದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲೇ ಹಣಕಾಸು ವ್ಯವಸ್ಥೆ ನಡೆಯುತ್ತಿದೆ. ಇಂತಹ ಷಡ್ಯಂತ್ರದ ವಿರುದ್ದ ಜತೆಯಾಗಬೇಕು ಎಂದರು.
ಕಣಿಯೂರು ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ,
ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಪ್ರಕಾಶ್ ಕಾರಂತ್, ಸೇವಾಂಜಲಿ ಪ್ರತಿಷ್ಠಾನ ದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ , ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಪ್ರಮುಖರಾದ ರಾಮದಾಸ್ ಬಂಟ್ವಾಳ, ಅಶೋಕ್ ಶೆಟ್ಟಿ ಸರಪಾಡಿ, ಸುದರ್ಶನ ಜೈನ್
ಜಿ.ಪಂ. ಮಾಜಿ ಸದಸ್ಯರಾದ ತುಂಗಪ್ಪ ಬಂಗೇರ ಪದ್ಮಶೇಖರ್ ಜೈನ್ , ತಾ.ಪಂ. ಮಾಜಿ ಉಪಾಧ್ಯಕ್ಷ ದಿನೇಶ ಅಮ್ಟೂರು, ಸುಲೋಚನ ಭಟ್, ಜನಜಾಗೃತಿ ವೇದಿಕೆ ಅಧ್ಯಕ್ಷ
ರೋನಾಲ್ಡ್ ಡಿಸೋಜ, ಸಂತೋಷ್ ಕುಮಾರ್ ಶೆಟ್ಟಿ ಬೋಳ್ಯಾರ್, ದೇವಪ್ಪ ಕುಲಾಲ್ ಪಂಜಿಕಲ್ಲು, ಹರೀಂದ್ರ ಪೈ, ಕರುಣೇಂದ್ರ ಪೂಜಾರಿ ಕೊಂಬರ ಬೈಲು, ವಸಂತ ಮಣಿಹಳ್ಳ, ಮಾಣಿಕ್ಯರಾಜ್ ಜೈನ್, ರಾಜೇಂದ ಜೈನ್, ಕಿರಣ್ ಹೆಗ್ಡೆ
ಚಂದ್ರಹಾಸ ಡಿ. ಶೆಟ್ಟಿ ಪ್ರಶಾಂತ್ ಕೆಂಪುಗುಡ್ಡೆ ಉಪಸ್ಥಿತರಿದ್ದರು.
ಸದಾನಂದ ಗೌಡ ನಾವೂರು ಸ್ವಾಗತಿಸಿದರು, ತಾ.ಪಂ. ಮಾಜಿ ಸದಸ್ಯ ಪ್ರಭಾಕರ ಪ್ರಭು ಕರ್ಪೆ ಮನವಿ ಪತ್ರ ವಾಚಿಸಿದರು, ಬಾಳಕೃಷ್ಣ ಆಳ್ವ ಕೋಡಾಜೆ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಶ ಕಲಾಮಂದಿರದಿಂದ ಬಿ.ಸಿ.ರೋಡಿಗೆ ಆಗಮಿಸಿ, ಬಿ.ಸಿ.ರೋಡಿನಲ್ಲಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
Advertisement







