
ಬಂಟ್ವಾಳ: ಅಮ್ಮಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕಳೆದ ಸಾಲಿನಲ್ಲಿ ಒಟ್ಟು 277.22 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ, ರೂ 1.13 ಕೋಟಿ ಮೊತ್ತದ ಲಾಭ ಗಳಿಸುವ ಮೂಲಕ ಸದಸ್ಯರಿಗೆ ಶೇ10ರಷ್ಟು ಲಾಭಾಂಶ ವಿತರಿಸುತ್ತಿದೆ ಎಂದು ಸಂಘದ ಅಧ್ಯಕ್ಷೆ ಮಲ್ಲಿಕಾ ವಿ ಶೆಟ್ಟಿ ಹೇಳಿದರು.
ತೊಡಂಬಿಲ ಸೇಕ್ರೆಡ್ ಹಾರ್ಟ್ ಚರ್ಚ್ ಹಾಲ್ ನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘವು ಸದಸ್ಯರಿಗೆ ಅನೇಕ ಯೋಜನೆಗಳನ್ನು ರೂಪಿಸಿದ್ದು ಅದರ ಸದುಪಯೋಗ ಪಡೆಯುವಂತೆ ವಿನಂತಿಸಿದರು, ಸಂಘವು ಅಡಿಟ್ ವರ್ಗಿಕರಣದಲ್ಲಿ “ಎ” ಸ್ಥಾನಮಾನ ಪಡೆದು, ಸಾಲ ವಸೂಲಾತಿಯಲ್ಲಿ ಶೇ 99.40 ಪ್ರಗತಿ ದಾಖಲಿಸಿದೆ ಎಂದರು.
ವಾರ್ಷಿಕ ಮಹಾ ಸಭೆಯನ್ನು ಸಂಘದ ಹಿರಿಯ ಸದಸ್ಯರಾದ ಪದ್ಮನಾಭ ರಾವ್, ರಾಘವನ್ ನಾಯರ್, ಮೊಂತು ಡಿ ಸೋಜಾ, ಪಿಲಿಪ್ ಮೊಂತೆರೋ, ಪ್ಲಾವಿಯ ಮೊಂತೆರೋ, ಉದ್ಘಾಟಿಸಿದರು.
ಇದೇ ವೇಳೆ ಸಂಘದ ಸಿಇಒ ಅಜಯ್ ಕುಮಾರ್ ಅಜಿಲ ವಾರ್ಷಿಕ ವರದಿ ಮಂಡಿಸಿ, ರೂ47.85ಕೋಟಿ ಠೇವಣಿ ಸಂಗ್ರಹ, ರೂ45.57ಕೋಟಿ ಸಾಲ ನೀಡಿದೆ, ಸಂಘದಲ್ಲಿ 5181ಸದಸ್ಯರಿದ್ದು ರೂ 2.81 ಕೋಟಿ ಪಾಲು ಬಂಡವಾಳ, ರೂ 65.24ಕೋಟಿ ದುಡಿಯುವ ಬಂಡವಾಳ, ರೂ1.98 ಕೋಟಿ ವಿವಿಧ ನಿಧಿಗಳನ್ನು ಹೊಂದಿದೆ ಎಂದರು.


ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ವಿಲ್ಮಾ ಪ್ರಿಯ ಆಲ್ಬುಕರ್ಕ್(ಕೃಷಿ) ಜೆರಾಲ್ಡ್ ಫೆರ್ನಾಂಡಿಸ್ ಪೆದಮಲೆ(ಆತ್ಮರಕ್ಷಣ ಕಲೆ) ಚಂದ್ರಹಾಸ ಕಡೆಗೋಳಿ (ಕುಸ್ತಿ) ಗಣೇಶ್ ಪೂಜಾರಿ ಕುರಿಯಾಳ (ರಂಗಭೂಮಿ)ಸುಧೀರ್ ಕುಮಾರ್ ಜಾರಂದಗುಡ್ಡೆ (ಮುಖ್ಯಮಂತ್ರಿ ಚಿನ್ನದ ಪದಕ) ಡಾ ನವೀನ್ ಶೆಟ್ಟಿ ಮುಂಡಾಜೆ ಗುತ್ತು (ವೈದ್ಯಕೀಯ) ಡಾ ಅನಿಕೇತ್ ಪಿಂಟೋ (ವೈದ್ಯಕೀಯ)ಗೀತೇಶ್ ನೆತ್ತರಕೆರೆ (ಕ್ರೀಡೆ) ಫಿಲೋಮಿನಾ ರೋಡ್ರಿಗಸ್(ಹೈನುಗಾರಿಕೆ)ಇವರನ್ನು ಸನ್ಮಾನಿಸಲಾಯಿತು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ನರಸಿಂಹ ಹೊಳ್ಳ, ಅಲ್ವಿನ್ ವಿನಯ್ ಲೋಬೊ, ಕಮಲಾಕ್ಷ, ಯಶವಂತ ಅಡಪ, ವೀಣಾ ಡಿ ಸೋಜಾ, ಬಬಿತ ಕೋಟ್ಯಾನ್, ಎಡ್ವಾರ್ಡ್ ಅಲ್ವಿನ್ ಫೆರ್ನಾಂಡಿಸ್, ಕಮಲ, ತುಕಾರಾಮ, ರೋಷನ್ ಪಿಂಟೋ ಉಪಸ್ಥಿತರಿದ್ದರು.
ಸಿಬ್ಬಂದಿಗಳಾದ ರೇಣುಕಾ ರೈ, ಅಲ್ವಿನ್ ವೇಗಸ್, ರಮ್ಯ, ದುರ್ಗಾಪ್ರಸಾದ್ ಸನ್ಮಾನ ಪತ್ರ ವಾಚಿಸಿದರು, ಉಪಾಧ್ಯಕ್ಷ ರಾಯಸ್ ಸಚಿನ್ ರೋಡ್ರಿಗಸ್ ಸ್ವಾಗತಿಸಿ, ನಿರ್ದೇಶಕ ಹರೀಶ್ ಶೆಟ್ಟಿ ಪಡು ವಂದಿಸಿದರು, ಶಾಖಾ ವ್ಯವಸ್ಥಾಪಕ ದಿನೇಶ್ ಅಮೀನ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.
Advertisement







