Author: admin
ಬಂಟ್ವಾಳ: ಇಲ್ಲಿನ ಸರಕಾರಿ ಪಾಲಿಟೆಕ್ನಿಕ್‌ನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಸಜೀಪಮೂಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಡಿ.18ರಿಂದ ಡಿ.24ರವರೆಗೆ ನಡೆಯಲಿದ್ದು ಗುರುವಾರ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಜಿಪಿಟಿ ಪ್ರಾಂಶುಪಾಲ ನರಸಿಂಹ ಭಟ್ ಎಚ್. ಅಧ್ಯಕ್ಷತೆ ವಹಿಸಿದ್ದರು. ಸಜಿಪ ಮೂಡ ಗ್ರಾಮ ಪಂಚಾಯತಿ ಅಧ್ಯಕ್ಷೆ ಶೋಭಾ ಶೆಟ್ಟಿ ಶಿಬಿರ ಉದ್ಘಾಟಿಸಿ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಉತ್ತಮ ಸ್ಥಾನಕ್ಕೆ ತಲುಪಿಸುವ ದಿಶೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ, ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ ಸಾಧ್ಯವಾಗುತ್ತದೆ ಹಾಗೂ ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ನೆರವಾಗುತ್ತದೆ ಎಂದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ ಬೆಲ್ಚಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯ ಪ್ರಕಾಶ್ ಪೆರ್ವ, ಪದವಿಪೂರ್ವ ವಿಭಾಗದ ಪ್ರಾಂಶುಪಾಲೆ ಡಾ. ಜೈರಾಬಿ, ಪ್ರೌಢಶಾಲೆಯ ಉಪಾಪ್ರಾಂಶುಪಾಲೆ ಜ್ಯೋತಿ ಕುಮಾರಿ, ಜಿಪಿಟಿ ಯಾಂತ್ರಿಕ ವಿಭಾಗದ ವಿಭಾಗಾಧಿಕಾರಿ ಭಾಗವನ್ ಪ್ರಸಾದ್, ಕಾಮಗಾರಿ ವಿಭಾಗದ ವಿಭಾಗಾಧಿಕಾರಿ ಮೋಹನ್ ರಾಜ್ ಜಿ.ಎಸ್., ಕಂಪ್ಯೂಟರ್…
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಇದರ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಸರಪಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಟ್ಯೂಷನ್ ತರಗತಿ ಆರಂಭಿಸಲಾಯಿತು. ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ಭಾಸ್ಕರ್ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು. ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ಪುರುಷೋತ್ತಮ್ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ವಿನೋಲ ಸಿಲಿಯ ಪಿಂಟೋ,. ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಧನಂಜಯ ಶೆಟ್ಟಿ, ಗಿರಿಧರ್ ನಾಯಕ್, ಒಕ್ಕೂಟ ಅಧ್ಯಕ್ಷ ಗಿರೀಶ್, ಶಿಕ್ಷಕರಾದ ಆದಮ್. ಜಾನವಿಕಾಸ ಸಮನ್ವಯಧಿಕಾರಿ ಸವಿತಾ, ಸೇವಾಪ್ರತಿನಿಧಿ ಮೋಹಿನಿ, ಶುಭ, ಟ್ಯೂಷನ್ ಶಿಕ್ಷಕಿ ಅಶ್ವಿತ ಹಾಗೂ ಶಾಲೆಯ ಶಿಕ್ಷಕರು, ಒಕ್ಕೂಟ ಸದಸ್ಯರು, ಮತ್ತು ಮಕ್ಕಳು ಉಪಸ್ಥಿತರಿದ್ದರು.
ಬಂಟ್ವಾಳ: ಕೂಡಿಬೈಲು ಬಸದಿಯಲ್ಲಿ ನಡೆದ. ಜೈನ್‌ಮಿಲನ್ ಐದನೇ ಮಾಸಿಕ ಸಭೆಯಲ್ಲಿ ಜೈನ್ ಮಿಲನ್ ಬಂಟ್ವಾಳ ಮತ್ತು ಕೂಡಿಬೈಲು ಬಸದಿ ಹಾಗೂ ಪಾಣಂತಬೈಲು ಬಸದಿಯ ಆಡಳಿತ ಸಮಿತಿಯ ಸಹಯೋಗದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು ಜೈನ್‌ಮಿಲನ್ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೂಡಿಬೈಲು ಬಸದಿ ಆಡಳಿತ ಸಮಿತಿಯ ಗೌರವಾಧ್ಯಕ್ಷ, ಮಾಜಿ ಸಚಿವ ಕೆ. ಅಭಯ ಚಂದ್ರ ಜೈನ್, ಎಕ್ಸೆಲ್ ಪದವಿಪೂರ್ವ ಕಾಲೇಜಿನ ನಿರ್ದೇಶಕ ಸುಮಂತ್ ಕುಮಾರ್ ಜೈನ್, ಎಸ್‌ಡಿಎಂ ಕಾಲೇಜಿನ ನಿವೃತ್ತ ಪ್ರಾಧ್ಯಪಕ ಎ. ಅರ್ಕಕೀರ್ತಿ ಹೆಗ್ಡೆ ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಸರಣ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ್, ನಿವೃತ್ತ ಉಪಪ್ರಾಂಶುಪಾಲ ಉದಯಕುಮಾರ್ ಬಿ.ಮಧ್ವ, ನಿವೃತ್ತ ಶಿಕ್ಷಕಿ ರಾಜಮ್ಮ ಪದ್ಮಶೇಖರ್, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಆದಿರಾಜ್ ಕೆ. ಜೈನ್, ನಿವೃತ್ತ ಅಂಚೆ ಪಾಲಕ ಬಾಲಚಂದ್ರ ಜೈನ್, ಎಸ್‌ಡಿಎಂ ದಂತ ಕಾಲೇಜಿನ ನಿವೃತ್ತ ಮೇಲ್ವಿಚಾರಕ ಯುವರಾಜ್ ಜೈನ್ ಅವರನ್ನು ಸನ್ಮಾನಿಸಲಾಯಿತು. ಭಾರತೀಯ…
ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು ವಾಮದಪದವು ಇಲ್ಲಿನ ಪ್ರೌಢಶಾಲಾ ವಿಭಾಗದ ಕೊಠಡಿಯೊಂದು ಆರ್ಟ್ ಗ್ಯಾಲರಿಯಾಗಿ ಪರಿವರ್ತನೆಯಾಗಿದೆ. ಈ ಕೊಠಡಿಯೊಳಗೆ ಪ್ರವೇಶೀಸುತ್ತಿದ್ದಂತೆಯೇ ನೂರಾರು ಬಣ್ಣದ ಚಿತ್ರಗಳು, ವ್ಯಕ್ತಿ ಚಿತ್ರಗಳು, ಗಣ್ಯರ ಮೂರ್ತಿಗಳು, ಮುಖವಾಡ, ಗೂಡುದೀಪ ಸಹಿತ ವಿವಿಧ ಬಗೆಯ ಕಲಾಕೃತಿಗಳು ನಮ್ಮ ಗಮನ ಸೆಳೆಯುತ್ತದೆ. ಕಳೆದ 23 ವರ್ಷಗಳಿಂದ ಈ ಶಾಲೆಯ ವಿದ್ಯಾರ್ಥಿಗಳು ರಚಿಸಿದ ನೂರಾರು ಚಿತ್ರಕಲೆಗಳು ಇಲ್ಲಿವೆ. ಶಾಲೆಯ ಚಿತ್ರಕಲಾ ಶಿಕ್ಷಕ ಮುರಳೀಕೃಷ್ಣ ರಾವ್ ಕೆ.ಇದರ ಹಿಂದಿರುವ ಪ್ರೇರಕ ಶಕ್ತಿ. ಮುರಳಿಕೃಷ್ಣ ರಾವ್ ಅವರು 23 ವರ್ಷಗಳಿಂದ ವಾಮದಪದವು ಸರಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸಿ ಅವರಿಗೆ ಮಾರ್ಗದರ್ಶನ ಮಾಡಿದ ಪರಿಣಾಮ ಇಂದು ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿಗಳು ಕಲಾಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ. ಗುರುಗಳ ಮಾರ್ಗದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳು ಚಿತ್ರಿಸಿದ ಒಂದೊಂದು ಚಿತ್ರಗಳು ಪರಿಣಿತ ಕಲಾವಿದರನ್ನು ಮೀರಿಸುವಂತಿದೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ನಾಲ್ವಡಿ ಕೃಷ್ಣರಾಜ ಒಡೆಯರ್, ರತನ್ ಟಾಟ ಮತ್ತಿತರ…
ಬಂಟ್ವಾಳ: ತುಳುನಾಡಿನಲ್ಲಿ ದಿನ ಬಳಕೆಯ ವಸ್ತುಗಳಾಗಿ ಜನಮಾನಸದಲ್ಲಿ ಬೆರೆತು ಪ್ರಸುತ ಪ್ಲಾಸ್ಟಿಕ್, ಸ್ಟೀಲ್, ವಸ್ತುಗಳ ಭರಾಟೆಯಿಂದಾಗಿ ತೆರೆಮರೆಗೆ ಸರಿದಿರುವ ಹಿರಿಯರ ಕಾಲದ ಹಳೆಯ ವಸ್ತುಗಳ ಪ್ರದರ್ಶನವನ್ನು ಬಂಟ್ವಾಳ ತಾಲೂಕಿನ ಫರ್ಲಾ ವೆಲಂಕಣಿ ಆರೋಗ್ಯಮಾತಾ ಚರ್ಚಿನಲ್ಲಿ ಹಮ್ಮಿಕೊಳ್ಳಾಗಿದ್ದು, ತುಳುನಾಡಿನ ಜನರ ಬದುಕನ್ನು ಅನಾವರಣಗೊಳಿಸಿತು. ವಸ್ತು ಪ್ರದರ್ಶನವನ್ನು ವೀಕ್ಷಿಸಿದ ಯುವ ಸಮುದಾಯಕ್ಕೆ ತಮ್ಮ ಹಿರಿಯರ ಜೀವನವನ್ನು ನೆನೆಪಿಸಿದರೆ, ಹಿರಿಯರಿಗೆ ತಮ್ಮ ಬಾಲ್ಯ ದಿನಗಳನ್ನು ಮೆಲುಕು ಹಾಕುವಂತೆ ಮಾಡಿತು. ಫರ್ಲಾ ವೆಲಂಕಣಿ ಆರೋಗ್ಯಮಾತಾ ದೇವಾಲಯದ ವತಿಯಿಂದ ಚರ್ಚಿನ 9 ವಾರ್ಡ್ ಗಳಲ್ಲಿರುವ ಸದಸ್ಯರಿಗೆ ನಮ್ಮ ಹಿರಿಯರು ದಿನೋಪಯೋಗಿ ವಸ್ತುಗಳಾಗಿ ಬಳಸಿದ ಪರಿಕರಗಳನ್ನು ಸಂಗ್ರಹಿಸಿ, ಚರ್ಚಿನ ಸಭಾಂಗಣದಲ್ಲಿ ಪ್ರರ್ದಶನಕ್ಕಿಡುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 9 ವಾರ್ಡ್ ಗಳ ಮನೆಯಿಂದ ನೂರಾರು ಹಳೆಯ ವಸ್ತುಗಳು ಸಂಗ್ರಹಗೊಂಡವು. ಅವುಗಳನ್ನು ಚರ್ಚ್ ಸಭಾಂಗಣದಲ್ಲಿ ಸುಂದರವಾಗಿ ಜೋಡಿಸಿಟ್ಟು, ಪ್ರತೀ ವಸ್ತುಗಳ ಹೆಸರು, ಅದರ ಉಪಯೋಗದ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಮಣ್ಣಿನಿಂದ ತಯಾರಿಸಿದ ಹಾಗೂ ಹಿತ್ತಾಳೆಯ ಅಡಿಗೆ ಮನೆಯ ಪರಿಕರಗಳು, ಕೃಷಿ ಬಳಕೆಯ ಸಾಮಾಗ್ರಿಗಳು, ವೃತ್ತಿ…
ಬಂಟ್ವಾಳ: ರಾಜಕೀಯ ರಹಿತವಾದ ಸಹಕಾರಿ ಕ್ಷೇತ್ರ ದ.ಕ.ದಲ್ಲಿದೆ. ರಾಜಕೀಯ ರಹಿತವಾಗಿ ಜನರ ಸೇವೆ ಮಾಡಲು ಸಹಕಾರಿ ಕ್ಷೇತ್ರದಲ್ಲಿ ಸಾಧ್ಯವಿದ್ದು ಎಲ್ಲರೂ ಜೊತೆಯಾಗಿ ಕೆಲಸ ಮಾಡೋಣವೆಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ . ರಾಜೇಂದ್ರ ಕುಮಾರ್ ಹೇಳಿದರು. ಸಹಕಾರ ರತ್ನ ಟಿ.ಬಿ. ರಾಜರಾಂ ಭಟ್ ಅಭಿನಂದನಾ ಸಮಿತಿ ವತಿಯಿಂದ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಶನಿವಾರ ನಡೆದ ಟಿ.ಬಿ. ರಾಜರಾಮ ಭಟ್ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಕ್ಷಾತೀತವಾಗಿ ಸಹಕಾರಿ ರತ್ನ ಪ್ರಶಸ್ತಿ ನೀಡಿದರೆ ಅದಕ್ಕೆ ಬೆಲೆ ಬರುತ್ತದೆ. ಈ ಭಾರಿ 10 ಮಂದಿಗೆ ಜಿಲ್ಲೆಯಲ್ಲಿ ಸಹಕಾರ ರತ್ನ ಪ್ರಶಸ್ತಿ ಬಂದಿದೆ. ಇವರಿಗೆ ಎಲ್ಲಾ ಸಹಕಾರಿಗಳು ಗೌರವಿಸಿದಾಗ ಪ್ರಶಸ್ತಿಯ ಗೌರವವೂ ಹೆಚ್ಚುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ ದ.ಕ. ಜಿಲ್ಲೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಜನರಿಗೆ ರಕ್ತಗತವಾಗಿದೆ. ದೇಶಕ್ಕೆ 4 ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ನೀಡಿದ ಹೆಗ್ಗಳಿಕೆ ದ.ಕ.ಜಿಲ್ಲೆಗಿದೆ ಎಂದರು. ಮಾಜಿ…
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬಂಟ್ವಾಳ ಇದರ ಯಶಸ್ವಿ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಪೌಷ್ಟಿಕ ಆಹಾರ ಕಾರ್ಯಕ್ರಮ ಹಳೇಗೇಟು ನಿತ್ಯಾನಂದ ಭಜನಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನ ಜಾಗ್ರತಿ ವೇದಿಕೆ ಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಉದ್ಘಾಟಿಸಿದರು. ಜ್ಞಾನ ವಿಕಾಸ ಕಾರ್ಯಕ್ರಮದಿಂದ ಅನೇಕ ಮಂದಿ ಮಹಿಳೆಯರು ಸ್ವಾವಲಂಬಿಯಾಗಿ ಜೀವನ ಮಾಡುತಿದ್ದಾರೆ. ಹೇಮಾವತಿ ಹೆಗ್ಗಡೆಯವರ ಜ್ಞಾನ ವಿಕಾಸ ಕಾರ್ಯಕ್ರಮದಿಂದ ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಗುರುತಿಸುವಂತೆ ಆಗಿದೆ ಎಂದರು. ಕಾರ್ಯಕ್ರಮದಲ್ಲಿ ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ವಿದ್ಯಾ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಯೋಜನಧಿಕಾರಿ ಜಯಾನಂದ, ಜನಜಾಗೃತಿ ಸದಸ್ಯರಾದ ಸದಾನಂದ ನಾವೂರು, ಪ್ರವೀಣ್. ಕಾಡಬೆಟ್ಟು, ವಲಯ ಮೇಲ್ವಿಚಾರಕ ರಾಜೇಶ್, ಜ್ಞಾನ ವಿಕಾಸ ಸಮನ್ವಯಧಿಕಾರಿ ಸವಿತಾ, ಸೇವಾಪ್ರತಿನಿಧಿ ವಿಜಯ, ಹಾಗೂ ವಲಯದ ಸೇವಾಪ್ರತಿನಿಧಿಗಳು. ಜ್ಞಾನ ವಿಕಾಸ ಸದಸ್ಯರು ಉಪಸ್ಥಿತರಿದ್ದರು. Advertisement
ಬಂಟ್ವಾಳ ತಾಲೂಕಿನ ಗೋವಿಂತೋಟದಲ್ಲಿರುವ ರಾಧ ಸುರಭಿ ಗೋಮಂದಿರದಲ್ಲಿ 12 ಬಗೆಯ ಗಿಡಮೂಲಿಕೆಗಳು , ಗೋವಿನ ಹಾಲಿನ ಅರ್ಕ ಮತ್ತಿತರ ಉತ್ಪನ್ನಗಳನ್ನು ಸೇರಿಸಿ ತಯಾರಿಸಿದ “ಕುಕುಬಾ ” ಹೆಸರಿನ ಆರೋಗ್ಯ ವರ್ಧಿತ ತಂಪು ಪಾನಿಯವನ್ನು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಶ್ರೀ ಸಿದ್ಧರೂಡ ಮಿಷನ್ ನ ಅಧ್ಯಕ್ಷ ಡಾ. ಆರೂಢ ಭಾರತೀ ಸ್ವಾಮೀಜಿ ತಂಪು ಪಾನೀಯ ಬಿಡುಗಡೆಗೊಳಿಸಿದದರು. ಸುಳ್ಯ ಮರ್ಕಂಜದ ಅನ್ನಪೂರ್ಣೇಶ್ವರೀ ಕ್ಷೇತ್ರ ಯೋಗೀಶ್ವರ ಸಿದ್ಧ ಮಠದ ಧರ್ಮದರ್ಶಿ ರಾಜೇಶ್ ನಾಥ್ ಜಿ ಮಾತನಾಡಿ ಗೋಶಾಲೆಗಳನ್ನು ನಿರ್ಮಾಣ ಮಾಡಿ ಆ ಮೂಲಕ ಗೋವುಗಳನ್ನು ಸಂರಕ್ಷಣೆ ಮಾಡಿ, ದೇಶಾದ್ಯಂತ ಗೋವಿನ ಬಗ್ಗೆ ಜಾಗೃತಿ ಮೂಡಿಸುತ್ತಿರುವ ರಾಧ ಸುರಭೀ ಗೋ ಮಂದಿರದ ವತಿಯಿಂದ ಜನರ ಆರೋಗ್ಯ ವರ್ಧನೆ ಮಾಡುವ ಪಾನೀಯ ಬಿಡುಗಡೆಗೊಂಡಿರುವುದು ಅಭಿನಂದನೀಯ ಎಂದರು. ರಾಧ ಸುರಭಿ ಗೋ ಮಂದಿರದ ಅಧ್ಯಕ್ಷ ಭಕ್ತಿ ಭುಷಣ್ ಜಿ ಮಾತನಾಡಿ ಇಂದು ಮಾರುಕಟ್ಟೆಯಲ್ಲಿರುವ ರಾಸಾಯನಿಕ ಮಿಶ್ರಿತ ಪಾನಿಯಗಳನ್ನು ಸೇವಿಸಿ ರೋಗ ರುಜಿನವನ್ನು ಆಹ್ವಾನಿಸಿಕೊಳ್ಳುತ್ತಾರೆ. ಅದಕ್ಕೆ…
ಬಂಟ್ವಾಳ: ಕಳೆದ 35 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದ ಸೃಜನಶೀಲ ವ್ಯಕ್ತಿತ್ವದ ಪ್ರತಿಭಾವಂತ ಗೋಪಾಲ ಅಂಚನ್ ಅವರದು ಈಗ ಅನಾರೋಗ್ಯದ ಬದುಕು. ತನ್ನ ಸ್ವಂತ ಬದುಕನ್ನು ಲೆಕ್ಕಿಸದೇ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕ್ರತಿಕ ಹಾಗೂ ಸಾಹಿತ್ಯಿಕ ಸೇವೆಗಳಿಗಾಗಿಯೇ ಜೀವನವನ್ನು ಮುಡಿಪಾಗಿಟ್ಟ ಇವರು ಇದೀಗ ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ. ಗೋಪಾಲ ಅಂಚನ್ ಅವರು ಯಾವುದೇ ಸಂಸ್ಥೆಯಲ್ಲಿ ಮಾಸಿಕ ವೇತನಕ್ಕೆಂದು ದುಡಿಯದೆ ತನ್ನ ಸೇವೆಗಾಗಿ ಕೆಲವು ಸಂಸ್ಥೆಗಳು ಕೊಟ್ಟ ಗೌರವಧನವನ್ನಷ್ಟೇ ಸ್ವೀಕರಿಸಿ ಬದುಕು ನಡೆಸುತ್ತಾ ಜೀವನದುದ್ದಕ್ಕೂ ಆರ್ಥಿಕ ಸಂಕಷ್ಟವನ್ನು ಅನುಭವಿಸಿದವರು. ಇದೀಗ ಕಳೆದ ಮೂರುವರೆ ವರ್ಷಗಳಿಂದ ಎರಡು ಕಿಡ್ನಿಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದು ಮತ್ತು ಹೊಟ್ಟೆಗೆ ಸಂಬಂಧಿಸಿದ ಕೆಲವು ಕಾಯಿಲೆಗಳಿಂದ ಇವರ ಅನಾರೋಗ್ಯ ತೀವ್ರಗೊಂಡಿದ್ದು ಮೂರೂವರೆ ವರ್ಷದಿಂದ ಯಾವುದೇ ಉದ್ಯೋಗ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದುವರೆಗೆ ಐದಾರು ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದು ಚಿಕಿತ್ಸೆಗಾಗಿ 6 ಲಕ್ಷಕ್ಕೂ ಹೆಚ್ಚು ರೂಪಾಯಿ ಸಾಲ ಮಾಡಿ ವಿನಿಯೋಗಿಸಲಾಗಿದೆ. ವೃದ್ಧಾಪ್ಯದಲ್ಲಿರುವ ತಂದೆ,ತಾಯಿ, ಹೆಂಡತಿ ಮತ್ತು…
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸೌಭಾಗ್ಯ ಮತ್ತು ಶ್ರೀದುರ್ಗಾ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಬೆಂಜನಪದವು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಕಾರ್ಯಕ್ರಮವನ್ನು ಉದ್ಘಾಟಿಸಿ ಜ್ಞಾನವಿಕಾಸದ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಮಹಿಳಾ ಸಾಂತ್ವನ ಕೇಂದ್ರದ ಸಮಾಲೋಚಕಿ ದ್ರಾಕ್ಷಿಯಿನಿ, ಒಕ್ಕೂಟ ನಿಕಟಪೂರ್ವ ಅಧ್ಯಕ್ಷ ಉಮೇಶ್, ಜಯಂತ್, ವಲಯ ಅಧ್ಯಕ್ಷ ಜನಾರ್ಧನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಾಮನ ಆಚಾರಿ, ಬ್ರಹ್ಮರಕೂಟ್ಲು ಒಕ್ಕೂಟದ ಅಧ್ಯಕ್ಷೆ ಗೀತಾ, ಮೇಲ್ವಿಚಾರಕರಾದ ರೂಪ, ಗಿರೀಶ್, ಜ್ಞಾನ ವಿಕಾಸ ಸಮನ್ವಯಧಿಕಾರಿ ಸವಿತಾ, ಸೇವಾಪ್ರತಿನಿಧಿ ರತ್ನ, ಭವ್ಯ ಹಾಗೂ ಕೇಂದ್ರದ ಸದಸ್ಯರು ಹಾಗೂ ಶೌರ್ಯ ಘಟಕದ ಸದಸ್ಯರು ಉಪಸ್ಥಿತರಿದ್ದರು.








