Author: admin

ಪುತ್ತೂರು. ಇಲ್ಲಿನ ಭಾರತ್ ಸಿನೆಮಾಸ್ ನಲ್ಲಿ ಬುಧವಾರ ಮಧ್ಯಾಹ್ನ ರೂಪೇಶ್ ಶೆಟ್ಟಿ ನಿರ್ದೇಶಿಸಿ ನಾಯಕ‌ ನಟನಾಗಿ ಅಭಿನಯಿಸಿರುವ ತುಳು ಚಿತ್ರ ‘ಜೈ’ ಯ ವಿಶೇಷ ಪ್ರದರ್ಶನ ನಡೆಯಿತು. ಮಂಗಳೂರಿನ ಎಂ.ಜಿ. ಮೋಟರ್ಸ್ ಪ್ರಾಯೋಜಕತ್ವದಲ್ಲಿ ಬಂಟ್ವಾಳ, ವಿಟ್ಲ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ ಹಾಗೂ ಮಡಿಕೇರಿ ಸೇರಿದಂತೆ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಮಾಧ್ಯಮ ಮತ್ತು ಪತ್ರಿಕಾ ಪ್ರತಿನಿಧಿಗಳು ಹಾಗೂ ಅವರ ಕುಟುಂಬ ವರ್ಗದವರಿಗಾಗಿ ಈ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಪತ್ರಕರ್ತರ ಸೇವೆಯನ್ನು ಗೌರವಿಸುವ ಉದ್ದೇಶದಿಂದ, ಮಾಧ್ಯಮ ಪ್ರತಿನಿಧಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಅಜಯ್ ಪುರುಷೋತ್ತಮ್ ಶೆಟ್ಟಿ ಹಾಗೂ ‘ಜೈ’ ಚಿತ್ರದ ನಾಯಕ ನಟ ರೂಪೇಶ್ ಶೆಟ್ಟಿ ಉಪಸ್ಥಿತರಿದ್ದರು. ಸಿನಿಮಾ ತಂಡ ಹಾಗೂ ಪ್ರಾಯೋಜಕರು ಪತ್ರಿಕಾ ವಲಯದ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

Read More

ಬಂಟ್ವಾಳ: ಪಾಣೆಮಂಗಳೂರಿನ ನೇತ್ರಾವತಿ ನದಿಗೆ ಹಾರಿ ಮಹೊಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ಸಾರೆ. ಮಹಿಳೆ ಸೀರೆ ಉಟ್ಟುಕೊಂಡಿದ್ದು ಗುರುತು ಪತ್ತೆಯಾಗಿಲ್ಲ. ಸ್ಥಳೀಯ ಈಜುಗಾರರು ದೋಣಿಯ ಮೂಲಕ ಮಹಿಳೆಯ ಮೃತದೇಹವನ್ನು ನದಿಯ ಬದಿಗೆ ತಂದಿಟ್ಟಿದ್ದಾರೆ. ಮಹಿಳೆಯ ಜೊತೆಗೆ ಪುರಷರೋರ್ವರು ನದಿಗೆ ಹಾರಿರುವುದಾಗಿ ಸ್ಥಳೀಯರು ತಿಳಿಸಿದ್ದು ಹುಡುಕಾಟ ನಡೆಯುತ್ತಿದೆ.

Read More

ಬಂಟ್ವಾಳ: ಇಲ್ಲಿನ ಮೊಡಂಕಾಪು ಚೆನ್ನರಪಾಲು ಎಂಬಲ್ಲಿ ಮಂಗಳವಾರ ರಾತ್ರಿ ನಡೆದ ಶ್ರೀ ದೇವಿ ಮಹಾತ್ಮೆ ಯಕ್ಷಗಾನದ ವೇಳೆ ದೇವಿಯ ಶಿರದಲ್ಲಿ ಹಕ್ಕಿಯಿಂದು ಕುಳಿತು ಅಚ್ಚರಿ ಮೂಡಿಸಿದೆ. ಇಲ್ಲಿನ ಡೊಂಬಯ್ಯ ಕುಲಾಲ್ ಸಹೋದರರು ವತಿಯಿಂದ‌ ಕಟೀಲು 6ನೇ ಮೇಳದ ಯಕ್ಷಗಾನ ನಡೆದಿತ್ತು. ರಾತ್ರಿ 11 ಗಂಟೆಯ ವೇಳೆಗೆ ಶ್ರೀ ದೇವಿ ಕದಂಬ ವನದಲ್ಲಿ ಉಯ್ಯಾಲೆಯಲ್ಲಿ ತೂಗಾಡುವ ಸಂದರ್ಭ ಎಲ್ಲಿಂದಲೋ ಹಾರಿ ಬಂದ ಹಕ್ಕಿಯೊಂದು ಶ್ರೀ ದೇವಿ ವೇಷಧಾರಿಯ ಮಡಿಲಲ್ಲಿ ಕುಳಿತು ಅಚ್ಚರಿ ಮೂಡಿಸಿತು. ಬಳಿಕ ಅಲ್ಲಿಂದ ನಿಧಾನವಾಗಿ ಮೇಲೆರುತ್ತಾ ಶಿರದಲ್ಲಿ ಕುಳಿತಿದ್ದರೂ ಶ್ರೀ ದೇವಿ ಪಾತ್ರದಾರಿ ನಗು ನಗುತ್ತಲೆ ಹಕ್ಕಿಯ ಚಲನೆಯನ್ನು ಗಮನಿಸುತ್ತಿದ್ದರು. ಇತ್ತ ಯಕ್ಷಗಾನ ನೋಡಲು ಬಂದ ಪ್ರೇಕ್ಷಕರು ಕೂಡ ದೇವಿಯ ಶಿರ ದಲ್ಲಿ ನಿರ್ಭಯವಾಗಿ ಕುಳಿತಿರುವ ಹಕ್ಕಿಯನ್ನು ನೋಡಿ ಸಂಭ್ರಮ ಪಟ್ಟರು.

Read More

ಬಂಟ್ವಾಳ: ಜಿಲ್ಲೆಯ ಪ್ರಸಿದ್ದ ಕಾರಣಿಕ ದೈವಸ್ಥಾನ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಾವಧಿ ಕೋಲವು ನ.25ರಂದು ಮಂಗಳವಾರ ರಾತ್ರಿ 12 ಗಂಟೆಗೆ ನಡೆಯಲಿದೆ. ನ.24ರಂದು ಸೋಮವಾರ ಸಂಜೆ 5.10ಕ್ಕೆ ಕೊಪ್ಪರಿಗೆ ಮುಹೂರ್ತ ನಡೆಯಲಿದೆ. 5.15ಕ್ಕೆ ದೀಪೋಜ್ವಲನೆಗೊಂಡು ಕುಣಿತ ಭಜನೆ, ರಾತ್ರಿ 7.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ನ.25ರಂದು ಮಂಗಳವಾರ ಬೆಳಿಗ್ಗೆ ಗಂಟೆ 8ರಿಂದ ನವಕ ಕಲಶ ಪ್ರದಾನ ಮತ್ತು 12 ತೆಂಗಿನಕಾಯಿ ಗಣಹೋಮ, ಬೆಳಿಗ್ಗೆ 10ರಿಂದ ನಾಗತಂಬಿಲ, 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ 2.30ರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಸಂಜೆ 6.45ಕ್ಕೆ ಪಣೋಲಿಬೈಲು ಶ್ರೀ ಕೃಷ್ಣ ಮಂದಿರದಿಂದ ಶ್ರೀ ಕ್ಷೇತ್ರಕ್ಕೆ ಮೆರವಣಿಗೆ ಆಗಮಿಸಲಿದೆ. 7 ರಿಂದ ವಿವಿಧ ಸಾಂಸ್ಕೃತಿಕ ವೈವಿಧ್ಯ, 7.45ಕ್ಕೆ ಸಂಗೀತ ಗಾನ ಸಂಭ್ರಮ 9.15ಕ್ಕೆ ಹಾಸ್ಯ ನಾಟಕ ನಡೆಯಲಿದೆ. ರಾತ್ರಿ 10ಕ್ಕೆ ಭಂಡಾರದ ಮನೆಯಿಂದ ದೈವಗಳ ಭಂಡಾರ ಬಂದು 12ಕ್ಕೆ ವರ್ಷಾವಧಿ ಕೋಲ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವದ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸುವಂತೆ…

Read More

ಬಂಟ್ವಾಳ: ಮಡಕ್ಕಿಲ ಬಂಜನ್ ಕುಟುಂಬದ ವಾರ್ಷಿಕ ಪರ್ವ ಸೇವೆ ಕುಟುಂಬದ ಮೂಲ ಮನೆಯಲ್ಲಿ ತನಿಯಪ್ಪ ಮೂಲ್ಯ ಅವರ ಉಪಸ್ಥಿತಿಯಲ್ಲಿ ಸಮಿತಿ ಅಧ್ಯಕ್ಷ ಸುರೇಶ್ ಬಂಗೇರ ಹಾಗೂ ಕುಟುಂಬ ಸದಸ್ಯರ ಭಾಗವಹಿಸುವಿಕೆಯಿಂದಿಗೆ ನಡೆಯಿತು. ಬೆಳಿಗ್ಗೆ ಗಣ ಹೋಮ, ದೈವದ ಮುಡಿಪು ಕಟ್ಟುವ ಮೂಲಕ ದೇವತಾ ಕಾರ್ಯ ಜರಗಿತು. ಕುಟುಂಬದ ಸದಸ್ಯರಾದ ಅನಿಲ್ ಕುಮಾರ್ ಮತ್ತು ತನುಜ ಅವರ ಪುತ್ರಿ ಅಪೂರ್ವ ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. 100 ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕವನ್ನು ಕುಟುಂಬದ ಕ್ಷೇಮ ನಿಧಿಯಿಂದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಡಕ್ಕಿಲ ಕುಟುಂಬದ ಗೌರವ ಅಧ್ಯಕ್ಷ ತನಿಯಪ್ಪ ಮೂಲ್ಯ, ಅಧ್ಯಕ್ಷ ಸುರೇಶ್ ಬಂಗೇರ ಸಂಚಯಗಿರಿ ಉಪಾಧ್ಯಕ್ಷ ಬಾಲಕೃಷ್ಣ ರೇಷ್ಮೆರೋಡ್, ದಿನೇಶ್ ಬರ್ಕಾಜೆ, ಕೋಶಾಧಿಕಾರಿ ಗುರುಪ್ರಸಾದ್,ಜೊತೆ ಕಾರ್ಯದರ್ಶಿ ಸದಾನಂದ ಬ್ರಾಹ್ಮರಿ, ಪ್ರವೀಣ್ ಬಳ್ಳಮಂಜ, ವಾಸು ಮೂಲ್ಯ ಬಳ್ಳಮಂಜ ಉಪಸ್ಥಿತರಿದ್ದರು. ಸತೀಶ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

Read More

ಬಂಟ್ವಾಳ: ವಿದ್ಯಾಸಂಸ್ಥೆಗಳು ದೇವ ಮಂದಿರವಿದ್ದಂತೆ. ಮನಸ್ಸು ಶುದ್ದವಾಗಿದ್ದಾಗ ದಿನದ ಕೆಲಸಕಾರ್ಯಗಳು ನಮಗೆ ಅನುಕೂಲಕರವಾಗಿರುತ್ತದೆ. ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವು ಇರಬೇಕು, ತಾಳ್ಮೆ ಇದ್ದಾಗ ಸಾಧಕರಾಗಲು ಸಾಧ್ಯವಿದೆ ಎಂದು ಬಿ. ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ದಿ ಸಮಿತಿ ಉಪಾಧ್ಯಕ್ಷೆ ರಜನಿ ಚಿಕ್ಕಯ ಮಠ ಹೇಳಿದರು. ಮಂಗಳವಾರ ಕಾಲೇಜಿನಲ್ಲಿ ನಡೆದ ವಾರ್ಷಿಕ ಪ್ರತಿಭಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪುರಸಭೆ ಸದಸ್ಯೆ ಝೀನತ್ ಫಿರೋಜ್, ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಯಶೋಧಾ ಭಾಗವಹಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಯೂಸುಫ್ ವಿಟ್ಲ ಸ್ವಾಗತಿಸಿದರು, ಉಪಾನ್ಯಾಸಕ ಇರ್ಷಾದ್ ವಂದಿಸಿದರು. ಉಪನ್ಯಾಸಕಿ ಹೇಮಾ ಕಾರ್ಯಕ್ರಮ ನಿರೂಪಿಸಿದರು.

Read More

ಬಂಟ್ವಾಳ: ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ಶ್ರೀ ಬೆಳ್ಳಿಪ್ಪಾಡಿ ರಮಾನಾಥ ರೈ ಅಭಿನಂದನಾ ಸಮಿತಿ ವತಿಯಿಂದ ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ಶ್ರೀ ಬೆಳ್ಳಿಪ್ಪಾಡಿ ರಮಾನಾಥ ರೈಯವರಿಗೆ ಅಭಿನಂದನಾ ಸಮಾರಂಭ ಮಂಗಳವಾರ ಬಿ.ಸಿ.ರೋಡಿನ ಸ್ಪರ್ಶಾಕಲಾ ಮಂದಿರದಲ್ಲಿ ನಡೆಯಿತು. ಎಡನೀರು ಮಠದ ಶಂಕರಾಚಾರ್ಯ, ತೋಟಕಾಚಾರ್ಯ ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿ ಕಾರ್ಯಕ್ರಮದಲ್ಲಿ ದೀಪಪ್ರಜ್ವಲನೆಗೈದು ಆಶೀರ್ವಚನ ನೀಡಿದರು. ಹರಿಕೃಷ್ಣ ಪುನರೂರು ಹಾಗೂ ರಮಾನಾಥ ರೈ ಇಬ್ಬರೂ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡವರು. ಧಾರ್ಮಿಕ ನೆಲೆಗಟ್ಟಿನಲ್ಲಿ ಬದುಕಿದ ಈರ್ವರು, ಜಾತ್ಯಾತೀತವಾಗಿ, ಪಕ್ಷತೀತವಾಗಿ ಅಭಿನಂದಿಸಲ್ಪಟ್ಟಿರುವುದು ಸಂತೋಷ ನೀಡಿದೆ. ಸಮಾಜವನ್ನು ಒಂದುಗೂಡಿಸುವುದು ಧರ್ಮ, ಅವರು ನೀಡಿದ ಸೇವೆ ಇಂದು ಅವರ ಮೇಲಿನ ಅಭಿಮಾನದಿಂದ ಜನರನ್ನು ಇಲ್ಲಿ ಒಂದುಗೂಡಿಸಿದೆ ಎಂದರು. ಅಭಿನಂದನೆ ಸ್ವೀಕರಿಸಿದ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಸಾರ್ವಜನಿಕ ಬದುಕು ಸೇವೆಗಾಗಿ ಇರುವುದು. ಅವಕಾಶ ಸಿಕ್ಕಾಗ ಪ್ರಾಮಾಣಿಕವಾಗಿ ಸೇವೆ ಮಾಡುವುದು ನಮ್ಮ ಕರ್ತವ್ಯ. ಜಾತಿ ಧರ್ಮ ಮೀರಿ ಮನುಷ್ಯರಾಗಿ ಬಾಳಬೇಕೆನ್ನುವ ಆಶಯದೊಂದಿಗೆ ಭೇದ ರಹಿತವಾಗಿ ಬದುಕಿಕೊಂಡು…

Read More

ಬಂಟ್ವಾಳ: ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಮಂಗಳೂರು ಇದರ ಆಶ್ರಯದಲ್ಲಿ ಸಂತ ಜೋಸೆಫರ ಪದವಿ ಪೂರ್ವ ಕಾಲೇಜು ಬಜ್ಪೆ ಇದರ ಸಹಕಾರದೊಂದಿಗೆ ಸೋಮವಾರ ನಡೆದ ಪದವಿ ಪೂರ್ವ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಕಲ್ಲಡ್ಕ ಶ್ರೀ ರಾಮ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯೂಸಿ ವಿದ್ಯಾರ್ಥಿ ಬೆನಝೀರ್ ಲಿಂಗ್ ದೋದ್ ಬಾಕ್ಸಿಂಗ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದುಕೊಂಡಿದ್ದಾನೆ. ಈತ ರಾಜೇಶ್ ಬ್ರಹ್ಮರಕೂಟ್ಲು ಅವರಿಂದ ಮಾರ್ಷಲ್ ಆರ್ಟ್ ತರಬೇತಿ ಪಡೆಯುತ್ತಿದ್ದಾನೆ. ರಾಜೇಶ್ ಬ್ರಹ್ಮರಕೂಟ್ಲು ಅವರು ನೆತ್ತರಕೆರೆ ಸರಕಾರಿ ಶಾಲೆಯಲ್ಲಿ ಕರಾಟೆ, ಜೂಡೋ, ಕಲರಿ, ಸಿಲಂಬಂ, ಬಾಕ್ಸಿಂಗ್, ಸ್ಕೇಟಿಂಗ್ ಮೊದಲಾದ ಮಾರ್ಷಲ್ ಆರ್ಟ್ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಬೆನಝೀರ್ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಜೂಡೋ ಸ್ಪರ್ಧೆಯಲ್ಲೂ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾನೆ

Read More

ಬಂಟ್ವಾಳ: ಬಿ.ಸಿ. ರೋಡ್ ಬಳಿ ನಾರಾಯಣಗುರು ವೃತ್ತಕ್ಕೆ ಇನೋವಾ ಕಾರುಡಿಕ್ಕಿಯಾಗಿ ಮೂವರ ದಾರುಣವಾಗಿ ಸಾವಿಗೀಡಾಗಿದ್ದಾರೆ. ನಿನ್ನೆ ಬೆಳಗಿನ ಜಾವ ಘಟನೆ ನಡೆದಿದ್ದು ಬೆಂಗಳೂರಿನಿಂದ ಉಡುಪಿಯ ಕಡೆಗೆ ತೆರಳುವಾಗ ಈ ದುರ್ಘಟನೆ ನಡೆದಿದೆ. ಬೆಂಗಳೂರು ನಿವಾಸಿಗಳಾದ ರವಿ (64), ನಂಜಮ್ಮ (75), ರಮ್ಯಾ(23) ಎಂಬವರುಗಳು ಮೃತಪಟ್ಟವರು. ಗಾಯಾಳುಗಳಾದ ಸುಶೀಲ, ಕೀರ್ತಿ ಕುಮಾರ್, ಕಿರಣ್, ಬಿಂದು, ಪ್ರಶಾಂತ್ ಹಾಗೂ ಚಾಲಕ ಸುಬ್ರಹ್ಮಣ್ಯ ಸೇರಿದಂತೆ ಉಳಿದ 6 ಜನರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬಂಟ್ವಾಳ: ದ.ಕ. ಜಿಲ್ಲಾ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘಗಳ ಒಕ್ಕೂಟ ಇದರ ಬಂಟ್ವಾಳ ತಾಲೂಕು ಘಟಕದ ಪ್ರಥಮ ಮಹಾಸಭೆಯು ನ.18ರಂದು ಮಂಗಳವಾರ ಬೆಳಿಗ್ಗೆ 9.30ಕ್ಕೆ ಬಿ.ಸಿ.ರೋಡಿನ ಲಯನ್ಸ್ ಸೇವಾಮಂದಿರದಲ್ಲಿ ನಡೆಯಲಿದೆ. ಮಂಗಳೂರು ಘಟಕದ ಅಧ್ಯಕ್ಷ ಭರತ್ ಕುಮಾರ್ ಮಂಗಳೂರು ಅಧ್ಯಕ್ಷತೆ ವಹಿಸುವರು, ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಹೆಚ್ಚವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಚರಣ್ ಕೆ. ವಕೀಲ ಕೆ. ರಮೇಶ್ ಉಪಾಧ್ಯಾಯ, ಉದ್ಯಮಿ ಸುನೀಲ್ ಬಿ., ಮಂಗಳೂರು ಘಟಕದ ಗೌರವಾಧ್ಯಕ್ಷ ಅಶೋಕ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ಬಂಟ್ವಾಳ ತಾಲೂಕು ರಿಕ್ಷಾ ಚಾಲಕ ಮಾಲಕ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ

Read More