
ಬಂಟ್ವಾಳ: ಮಂಚಿ ವಲಯ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟ ಗುರುವಾರ ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಾಲಾ ಎಸ್ ಡಿಎಂಸಿ ಕಾರ್ಯಧ್ಯಕ್ಷ ಜಯಪ್ರಕಾಶ್ ಪೆರ್ವ ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಸೀತಾರಾಮ ಅಗೋಳಿಬೆಟ್ಟು ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಸಂದೀಪ್ ಸಾಲ್ಯಾನ್ ಶುಭ ಹಾರೈಸಿದರು.

ಪಂಚಾಯತಿ ಸದಸ್ಯ ವಿಶ್ವನಾಥ ಬೆಳ್ಚಾಡ, ಎಸ್ಡಿಎಂಸಿ ಸದಸ್ಯರಾದ ದಾಮೋದರ ಮಡಿವಾಳ ಪಡ್ಪು, ನಳಿನಾಕ್ಷಿ, ಆಯುಷ್ ವೈದ್ಯಾಧಿಕಾರಿ ಡಾ.ಮಣಿಕರ್ಣಿಕಾ, ಪೋಷಕರಾದ ಸಂಜೀವ ಪೂಜಾರಿ , ಅಶೋಕ , ಚಂದ್ರಶೇಖರ, ಸಿಆರ್ ಪಿ ಇಂದಿರಾ
ವಲಯ ನೋಡಲ್ ರಫೀಕ್, ರಾಘವೇಂದ್ರ ಉಪಸ್ಥಿತರಿದ್ದರು.
ಶಾಲಾ ಉಪಪ್ರಾಂಶುಪಾಲೆ ಜ್ಯೋತಿ ಕುಮಾರಿ ಸ್ವಾಗತಿಸಿದರು,ಶಿಕ್ಷಕಿ ಮೋಕ್ಷಿತಾ ವಂದಿಸಿದರು, ಸಹಶಿಕ್ಷಕ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Advertisement







