Author: admin
ಬಂಟ್ವಾಳ : ವೀರಕಂಬ ಗ್ರಾಮದ ಬಳ್ಳಮಲೆ ರಕ್ಷಿತಾರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಕಸ್ಮಿಕವಾಗಿ ಬೆಂಕಿ ತಗುಲಿ ಅರಣ್ಯವಿಡಿ ವ್ಯಾಪಿಸಿಕೊಂಡಿದೆ. ಬಂಟ್ವಾಳ ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ಊರ ನಾಗರಿಕರು ಬೆಂಕಿನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. https://youtu.be/cfY0RaXrVLI ಬಲ್ಲಮಲೆ ರಕ್ಷಿತಾರಣ್ಯದಲ್ಲಿ ಬೆಂಕಿ Remembrance Space for paid advertisement
ಅಡೆಪಿಲ ವಾರ್ಷಿಕ ನೇಮೋತ್ಸವದ ಗೊನೆ ಮುಹೂರ್ತ ಬಂಟ್ವಾಳ: ಮಾ. 9,10 ಮತ್ತು 11 ರಂದು ನಡೆಯಲಿರುವ ಅಡೆಪಿಲ ಅಲಂಗಾರ ಮಾಡ -ಶ್ರೀ ಧರ್ಮರಸು ಚಿತ್ತ ದೈವದ ಮೂಲಸ್ಥಾನ ಹಾಗೂ ದಿಂಡಿಕೆರೆ ಜೋಡುಸ್ಥಾನ ಶ್ರೀ ವೈದ್ಯನಾಥ ದೈವದ ಮೂಲಸ್ಥಾನ ದ ನೇಮೋತ್ಸವಕ್ಕೆ ಗುರುವಾರ ಗೊನೆ ಮುಹೂರ್ತ ಮತ್ತು ಕೋರಿಗುಂಟ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮದ ಒಂದನೇ ಗುತ್ತಿನ ಯಜಮಾನರಾದ ವಿಶ್ವನಾಥ ಇರಂತಬೆಟ್ಟು , ಬಾವಗುತ್ತಿನ ಮನೋಹರ, ಬರ್ಕೆ ಗುತ್ತಿನ ಮೋನಪ್ಪ, ಕೊಲ್ಲೂರು ಗುತ್ತಿನ ಕ್ರಷ್ಣಪ್ಪ, ದೈವದ ಪ್ರಧಾನ ಅರ್ಚಕರಾದ ಜಗನ್ನಾಥ ಪೂಜಾರಿ,ಶೇಖರ ಕೋಟ್ಯಾನ್ ಸೀತರಾಮ ಪೂಜಾರಿ, ಅಡೆಪಿಲ ಭಂಡಾರದ ಮನೆಯ ಡಾ.ನವೀನ್ ಬಪ್ಪಳಿಗೆ ಸ್ಥಾನದ ಮನೆಯ ಸಂಜೀವ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು. Remembrance Space for paid advertisement
ಬಂಟ್ವಾಳ: ಆರಂಭದ ದಿನಗಳಲ್ಲಿ ನೆರೆ ಸಮಸ್ಯೆ ಮತ್ತು ಕೋವಿಡ್ ನಿಂದ ತತ್ತಿರಿಸಿದರೂ ಕಳೆದ ಎರಡು ವರ್ಷದ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರದ್ಯಂತ ಸಾಕಷ್ಡು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಶಾಸಕನಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ನನ್ನ ಕರ್ತವ್ಯ. ಈಗ ಆಗಿರುವ ಅಭಿವೃದ್ಧಿ ಕಾರ್ಯದಲ್ಲಿ ತೃಪ್ತಿ ಇದೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು. ಕರ್ಪೆ ಗ್ರಾಮದಲ್ಲಿ 8.34 ಕೋಟಿ ರೂಪಾಯಿ ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳನ್ನು ಉದ್ಘಾಟಿಸಿ ಬಳಿಕಕರ್ಪೆ ಗುತ್ತಿಗೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಕಾಲಘಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಸುಳ್ಳು ಮಾಹಿತಿ ನೀಡಲು ಸಾಧ್ಯವಿಲ್ಲ. ಈಗ ಆಗಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು. ಕಳೆದ ನಾಲ್ಕು ವರ್ಷ ಹತ್ತು ತಿಂಗಳಿನಲ್ಲಿ ನನ್ನ ಕ್ಷೇತ್ರ ಗಲಭೆ, ದೊಂಬಿಗಳಿಲ್ಲದೆ ಶಾಂತಿ, ಅಭಿವೃದ್ಧಿಯ ಕ್ಷೇತ್ರವಾಗಿ ಪರಿವರ್ತಿತವಾರುವುದು ಖುಷಿ ನೀಡಿದೆ ಎಂದರು. ವೇದಿಕೆಯಲ್ಲಿ ಸಂಗಬೆಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ್ ಪೂಜಾರಿ ಅಳಕ್ಕೆ, ಉಪಾಧ್ಯಕ್ಷೆ ವಿಮಾಲ…
ತಲೆ ಮರೆಸಿಕೊಂಡಿದ್ದ ಆರೋಪಿ ಮಣಿ ಅಲಿಯಾಸ್ ಮಣಿಕಂಠ (41) ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣೆಯ ಆರೋಪಿ ಸುಮಾರು 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಮೂಲತಃ ಬೆಳ್ತಂಗಡಿ ತಾಲೂಕು ಉಜಿರೆ ಟಿ ಕ್ರಾಸ್ ಹಳೆಪೇಟೆ, ಪ್ರಸ್ತುತ ಕೇರಳ ತಾಲೂಕಿನ ಕುಂಬ್ಲೆ ನೀರ್ಜಾಲ್ ನಿವಾಸಿ ನರಸಿಂಹ ಎಂಬವರ ಪುತ್ರ ಮಣಿ ಅಲಿಯಾಸ್ ಮಣಿಕಂಠ (41) ಎಂಬಾತನನ್ನು ಬುಧವಾರ ನಗರ ಪೊಲೀಸರು ಬಂಧಿಸಿದ್ದಾರೆ.ಠಾಣಾ ಸಿಬ್ಬಂದಿಗಳಾದ ಗಣೇಶ್, ರಾಜೇಶ್, ಪ್ರವೀಣ್ ಅವರ ತಂಡ ಮಾಹಿತಿ ಸಂಗ್ರಹಿಸಿ ಬೆಳ್ತಂಗಡಿ ತಾಲೂಕಿನ ನೆಲ್ಯಾಡಿ ಸಮೀಪದ ಶಿಬಾಜೆ ಎಂಬಲ್ಲಿಂದ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. Remembrance
ಬಂಟ್ವಾಳ: ಪಕ್ಷ ಅವಕಾಶ ನೀಡಿದರೆ ಈ ಬಾರಿ ಕೊನೆಯ ಸ್ಪರ್ಧೆ ಮಾಡುತ್ತೇನೆ. ಶಾಸಕನಾಗಿ ಆಯ್ಕೆಯಾದರೆ ಮುಂದಿನ ಐದು ವರ್ಷದಲ್ಲಿ ಅದ್ಭುತ ಕೆಲಸ ಮಾಡಿ ತೋರಿಸುತ್ತೇನೆ. ಅಧಿಕಾದಲ್ಲಿದ್ದಾಗ ಹೇಳಿದ್ದನ್ನೇ ಮಾಡಿದ್ದೇನೆ, ಮಾಡಿದ್ದನೇ ಹೇಳಿದ್ದೇನೆ. ನನ್ನ ಬಟ್ಟೆಯಷ್ಟೇ ಮನಸ್ಸು ಕೂಡ ಶುಭ್ರವಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.ನಾನು ಚುನಾವಣೆಯಲ್ಲಿ ಸ್ಪರ್ಧಿಸಲೆಂದು ಬಂಟ್ವಾಳಕ್ಕೆ ಬಂದವನಲ್ಲ. ಬಂಟ್ವಾಳ ತಾಲೂಕಿನಲ್ಲಿಯೇ ಬೆಳೆದವನು. ಪಕ್ಷದ ವಿವಿಧ ಹುದ್ದೆಯಲ್ಲಿ ಕೆಲಸ ಮಾಡಿದ ಹಿನ್ನಲೆಯಲ್ಲಿ ನನಗೆ ಪಕ್ಷ ಅವಕಾಶ ನೀಡಿದಾಗ ಅವಕಾಶವನ್ನು ನಾನು ಸರಿಯಾಗಿ ಉಪಯೋಗ ಮಾಡಿದ್ದೇನೆ. ಕಳೆದ ಅವಧಿಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕನಾಗಿದ್ದ ೫ ಸಾವಿರ ಕೋಟಿಗೂ ಮಿಕ್ಕಿದ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಎಂದರು.ನಮ್ಮ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಗುತ್ತಿದೆ ಎನ್ನುವ ಆರೋಪ ನಮ್ಮ ಪಕ್ಷದ ಶಾಸಕರೇ ಮಾಡುತ್ತಿದ್ದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಮಿನಿ ವಿಧಾನ ಸೌಧ, ಕೆಎಸ್‌ಆರ್‌ಟಿಸಿ…
ಬಂಟ್ವಾಳ: ಯುವ ಸಮೂಹದ ಸದ್ಬಳಕೆಯು ದೇಶದ ಅಭಿವೃದ್ದಿಗೆ ಪೂರಕವಾಗಿದೆ. ಯುವ ಸಮುದಾಯದ ಸಕಾರಾತ್ಮಕ ಚಿಂತನೆಗಳಲ್ಲಿ ತೊಡಗಿಸಿಕೊಂಡಾಗ ಸಮಾಜದ ಎಲ್ಲ ರೀತಿಯ ದುಷ್ಚಟಗಳಿಗೆ ಕಡಿವಾಣ ಬೀಳುವುದರ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅಭಿಪ್ರಾಯಪಟ್ಟರು. ಭೂಯಾ ಸ್ಪೋಟ್ರ್ಸ್ ಕ್ಲಬ್ ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಹಾಗೂ ರಮಾನಾಥ ರೈ ಅಭಿಮಾನಿ ಬಳಗ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ ಸಹಯೋಗದಲ್ಲಿ ಆಹ್ವಾನಿತ 16 ತಂಡಗಳ ನಿಗದಿತ ಓವರ್ ಗಳ “ಕಾಂಗ್ರೆಸ್ ಟ್ರೋಫಿ-2023” ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಭೂಯಾ ಸ್ಪೋಟ್ರ್ಸ್ ಕ್ಲಬ್ ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಹಾಗೂ ರಮಾನಾಥ ರೈ ಅಭಿಮಾನಿ ಬಳಗ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ ಸಹಯೋಗದಲ್ಲಿ ಆಹ್ವಾನಿತ 16 ತಂಡಗಳ ನಿಗದಿತ ಓವರ್ ಗಳ “ಕಾಂಗ್ರೆಸ್ ಟ್ರೋಫಿ-2023” ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಪ್ರಯುಕ್ತ ಭಾನುವಾರ ಆಲಡ್ಕ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್…
ಮಹಿಳೆಯರು ಸಂಘಟಿತರಾದಾಗ ಸಮಾಜಕ್ಕೆ ಒಳಿತು . ಬಂಟ ಮಹಿಳೆಯರು , ಯುವತಿಯರು ವಿವಿಧ ಕ್ಷೇತ್ರ ಗಳಲ್ಲಿ ವಿಶ್ವ ದಲ್ಲೇ ಗಣನೀಯ ಸಾಧನೆ ಮಾಡಿರುತ್ತಾರೆ . ಎಂದು ಬಂಟ್ವಾಳ ತಾಲೂಕು ಬಂಟರ ಸಂಘ ದ ಅಧ್ಯಕ್ಷರಾದ ಚಂದ್ರಹಾಸ್ ಶೆಟ್ಟಿ ಯವರು ಫರಂಗಿಪೇಟೆ ವಲಯ ಬಂಟರ ಸಂಘ ಮಹಿಳಾ ವಿಭಾಗದ ದಶ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿದರು .ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಬಂಟ ಸಮಾಜದ ಯುವತಿಯರನ್ನು ವೇದಿಕೆಯಲ್ಲಿ ಗೌರವಿಸಲಾಯಿತುವೇದಿಕೆಯಲ್ಲಿ ಬಂಟ್ವಾಳ ತಾಲೂಕು ಬಂಟರ ಸಂಘ ಮಹಿಳಾ ವಿಭಾಗದ ಅಧ್ಯಕ್ಷೆ ರಮಾ ಎಸ್ ಭಂಡಾರಿ , ಫರಂಗಿಪೇಟೆ ವಲಯ ಬಂಟರ ಸಂಘ ದ ಮಾಜಿ ಅಧ್ಯಕ್ಷರಾದ ಸದಾನಂದ ಆಳ್ವ ಕಂಪ , ಫರಂಗಿಪೇಟೆ ವಲಯ ಬಂಟರ ಸಂಘ ಅಧ್ಯಕ್ಷ ದೇವದಾಸ್ ಶೆಟ್ಟಿ ಕೊಡ್ಮಾಣ್ , ಕಾರ್ಯದರ್ಶಿ ಗಿರೀಶ್ ಶೆಟ್ಟಿ ಮಹಿಳಾ ವಿಭಾಗದ ಅಧ್ಯಕ್ಷೆ ವೀಣಾ ಎಂ ಶೆಟ್ಟಿ , ಕಾರ್ಯದರ್ಶಿ ಸರೋಜಿನಿ ಆಳ್ವ , ಸಂಚಾಲಕಿ ನಾಗರತ್ನ ಯು ರೈ ,…
ಬಂಟ್ವಾಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನೀಡಿದ ಬಂದ್ ಕರೆಯನ್ವಯ ಬಂಟ್ವಾಳ ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳು ಬಂದ್ ನಡೆಸಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿತು. ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಸಂಘಟನೆಯ ಒಗ್ಗಟ್ಟು ಪ್ರದರ್ಶಿಸಿದರು. ಸದಾ ಸಾರ್ವಜನಿಕರಿಂದ ತುಂಬಿರುತ್ತಿದ್ದ ತಾಲೂಕು ಆಡಳಿತ ಸೌಧ, ಪುರಸಭೆ ಕಾರ್ಯಲಯ, ಸರ್ಕಾರಿ ಆಸ್ಪತ್ರೆ, ನೋಂದಾಣಿ ಕಚೇರಿ ಬಿಕೋ ಎನ್ನುತ್ತಿದ್ದವು. ಸಾರ್ವಜನಿಕ ಸೇವೆ ಲಭ್ಯವಾಗದೆ ಜನರು ತೊಂದರೆ ಪಡುವಂತಾಯಿತು. ಮುಷ್ಕರದ ಬಗ್ಗೆ ಮಾಹಿತಿ ಇಲ್ಲದೆ ಜನರು ಸರ್ಕಾರಿ ಕಚೇರಿಗೆ ಆಗಮ,ಇಸಿ ವಾಪಸ್ಸು ತೆರಳುವ ದೃಶ್ಯ ಅಲ್ಲಲ್ಲಿ ಕಂಡು ಬಂತು. ಸರ್ಕಾರಿ ಕಚೇರಿಗಳು ಕಾರ್ಯ ಸ್ಥಗಿತಗೊಳಿಸಿರುವುದರಿಂದ ಬಂದ್ ಬಿಸಿ ನೇರವಾಗಿ ಸಾರ್ವಜನಿಕರ ಮೇಲೆ ತಟ್ಟಿತು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇದರ ಬಂಟ್ವಾಳ ಶಾಖೆಯ ಅಧ್ಯಕ್ಷ ಉಮನಾಥ ರೈ ಹಾಗೂ ಕಾರ್ಯದರ್ಶಿ ಸಂತೋಷ್ ತುಂಬೆ ಪ್ರತಿಕ್ರಿಯಿಸಿ ಸರ್ಕಾರ ನಮ್ಮ ಬೇಡಿಕೆಗೆ ಆಂಶಿಕ ಒಪ್ಪಿಗೆಯನ್ನು ನೀಡಿದ ಹಿನ್ನಲೆಯಲ್ಲಿ ಮುಷ್ಕರವನ್ನು ವಾಪಸ್ಸು ಪಡೆಯಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಸರ್ಕಾರಿ…
ಬಂಟ್ವಾಳ: ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಬಂಟ್ವಾಳ ತಾಲೂಕೊನ ಪುದು ಗ್ರಾಮ ಪಂಚಾಯತ್ ಗೆ ಫೆ.25 ರಂದು ನಡೆದ ಚುನಾವಣೆಯ ಮತ ಎಣಿಕೆ ಶನಿವಾರ ಬಿ.ಸಿ.ರೋಡಿನ ಆಡಳಿತ ಸೌಧದಲ್ಲಿ ಮಂಗಳವಾರ ನಡೆದಿದ್ದು,ರಾತ್ರಿ ವೇಳೆಗೆ ಸಂಪೂರ್ಣ ಫಲಿತಾಂಶ ಪ್ರಕಟಗೊಂಡು ನಿರೀಕ್ಷೆಯಂತೆ ಕಾಂಗ್ರೆಸ್ ಬೆಂಬಲಿತರು 21 ಸ್ಥಾನಗಳಲ್ಲಿ ಜಯಭೇರಿ ಸಾಧಿಸುವ ಮೂಲಕ ಮರಳಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.ಎಸ್.ಡಿ.ಪಿ.ಐ. ಬೆಂಬಲಿತ 7 ಸ್ಥಾನಗಳಲ್ಲಿ ಗೆಲುವನ್ನು ದಾಖಲಿಸಿದರೆ,ನಿರೀಕ್ಷಿತ 6 ಸ್ಥಾನದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿ.ಸಿ.ರೋಡಿನ ಆಡಳಿತ ಸೌಧದಲ್ಲಿ ಮತ ಎಣಿಕೆ ನಡೆಯುತ್ತಿರುವುದು ಕಳೆದ ಅವಧಿಯಲ್ಲಿ 27 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಬೆಂಬಲಿತರು ಈ ಚುನಾವಣೆಯಲ್ಲಿ ಆರು ಸ್ಥಾನವನ್ನು ಕಳೆದುಕೊಂಡಿದ್ದು,ಒಂದು ಸ್ಥಾನದಲ್ಲಿದ್ದ ಎಸ್ ಡಿಪಿಐ ಆರು ಸ್ಥಾನವನ್ನು ಹೆಚ್ಚಿಸಿಕೊಂಡು 7 ಸ್ಥಾನ ಪಡೆದು ಬೀಗಿದೆ.ಇತ್ತ ಬಿಜೆಪಿ ಬೆಂಬಲಿತರು ನಿರೀಕ್ಷಿತ ಆರುಸ್ಥಾನವನ್ನು ಪಡೆದು ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ.ರಿಯಾಜ್,ಮಹಮ್ಮದ್,ಇಸಾಮ್,ರಜಿಯಾ,ರಮ್ಲಾನ್,ರಜಾಕ್,ಮಹಮ್ಮದ್ ಅನ್ಸ್,ಸಹರಾ,ಅಥಿಕಾ ,ಲಿಡಿಯಾ ಪಿಂಟೋ,ಇಕ್ಬಾಲ್ ಸುಜೀರ್, ಈಶು ಕುಮಾರ್,ಮಮ್ತಾಜ್,ರೆಹನಾ,ಹುಸೈನ್ ಪಾಡಿ,ನಬೀಸಾ,ರುಕ್ಸಾನ,ಜಯಂತಿ,ರಶೀದಾಬಾನು (ಎಲ್ಲರೂ ಕಾಂಗ್ರೆಸ್ ಬೆಂಬಲಿತ ವಿಜೇತರು)ಪದ್ಮನಾಭ ಶೆಟ್ಟಿ ಪುಂಚಮೆ, ಸುಬ್ರಹ್ಮಣ್ಯರಾವ್,ಸುಗುಣ,ಮನೋಜ್ ಅಚಾರ್ಯ…
ಬಂಟ್ವಾಳ: ಮಂಗಳೂರು ಕ್ಷೇತ್ರ ಹಾಗೂ ಬಂಟ್ವಾಳ ಕ್ಷೇತ್ರದ ಹಲವು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ ಪೈಪ್‌ಲೈನ್ ಕಾಮಗಾರಿ ಗೊಂದಲದ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಸಜೀಪ ಮುನ್ನೂರು ಗ್ರಾ.ಪಂ. ವ್ಯಾಪ್ತಿಯ ಆಲಡಿಯಲ್ಲಿ ನಿರ್ಮಾಣ ಗೊಂಡಿರುವ ಜಾಕ್‌ವೆಲ್‌ಗೆ ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ್ ಭೇಟಿ ನೀಡಿ ಅಧಿಕಾರಿಗಳು ಹಾಗೂ ಗ್ರಾ.ಪಂ.ಸದಸ್ಯರ ಜೊತೆ ಸಮಾಲೋಚನೆ ನಡೆಸಿದರು. ಸಜೀಪ ಮುನ್ನೂರು ಸೇರಿದಂತೆ 5 ಗ್ರಾ.ಪಂ.ವ್ಯಾಪ್ತಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ವಿಶೇಷ ಪ್ರಯತ್ನ ದಿಂದ 279 ಕೋಟಿ ರೂ ಗಳು ಮಂಜೂರಾಗಿದ್ದು, ಅದರ ಅನುಷ್ಠಾನ ಕೊಂಚ ವಿಳಂಬವಾಗುವುದರಿಂದ, ಈ ಗ್ರಾಮದ ಜನತೆಗೆ ಕುಡಿಯುವ ನೀರು ತತಕ್ಷಣ ನೀಡಲು ಕರೋಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರು ಶುದ್ದೀಕರಣಕ್ಕಾಗಿ ಪಿಲ್ಟರ್ ಅಳವಡಿಸಿ, 0.2 ಎಂ.ಎಲ್.ಡಿ. ನೀರನ್ನು ಸಜೀಪ ಮುನ್ನೂರು ಗ್ರಾಮಕ್ಕೆ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.ಜತೆಗೆ ಉಳ್ಳಾಲ ಹಾಗೂ ಬಂಟ್ವಾಳದ ಹಲವು ಗ್ರಾಮಗಳಿಗೆ ನೀರನ್ನು ಒದಗಿಸುವ ಕಚ್ಚಾನೀರು…








