Author: admin
ಬಂಟ್ವಾಳ: ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಕ್ಯಾಂಟೀನ್ ಒಂದರಲ್ಲಿ ಸೋಮವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಸೊತ್ತುಗಳು ಅಗ್ನಿಗಾಹುತಿಯಾದವು. ಸಣ್ಣ ಕ್ಯಾಂಟೀನ್ ಒಂದರಲ್ಲಿ ರಾತ್ರಿ ಸುಮಾರು 7.30ರ ವೇಳೆ ಬೆಂಕಿ ಕಾಣಿಸಿಕೊಂಡಿದ್ದನ್ನು ಹತ್ತಿರದ ಮನೆಯವರು ನೋಡಿ ಆತಂಕದಿಂದ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಸಾರ್ವಜನಿಕರು ಬೆಂಕಿ ನಂದಿಸಿದ್ದು, ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಲಾಗಿದೆ. ಕಲ್ಲಡ್ಕದಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಅಗ್ನಿಶಾಮಕದಳ ಆಗಮಿಸುವುದು ತಡವಾದರೂ ಬಳಿಕ ಕಾರ್ಯಾಚರಣೆ ನಡೆಸಿದರು. ಘಟನೆಯಲ್ಲಿ ಅಪಾರ ಪ್ರಮಾಣದ ಸೊತ್ತುಗಳು ನಾಶವಾಗಿದೆ.
ಬಂಟ್ವಾಳ : ಸಜಿಪಮೂಡ ಗ್ರಾಮದ ಕೊಳಕೆ ನಿವಾಸಿ, ಕೃಷಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಎಸ್.ಗಂಗಾಧರ ಭಟ್ ಕೊಳಕೆ(77) ಅವರು ಅಸೌಖ್ಯದಿಂದ ಸ್ವಗೃಹದಲ್ಲಿ ಫೆ.27ರಂದು ನಿಧನ ಹೊಂದಿದರು. ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರು ನಂದಾವರ ಶ್ರೀ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನದ ಮಾಜಿ ಟ್ರಸ್ಟಿಯಾಗಿ, ಬಂಟ್ವಾಳ ತಾಲೂಕು ಕಸಾಪ ಕನ್ನಡ ಭವನ ನಿರ್ಮಾಣ ಕಟ್ಟಡ ಸಮಿತಿ ಅಧ್ಯಕ್ಷರಾಗಿ, ನೀರ್ಪಾಜೆ ಭೀಮಭಟ್ ಅಭಿಮಾನಿ ಬಳಗದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅವರು ತನ್ನ ದೇಹವನ್ನು ದೇರಳಕಟ್ಟೆ ಆಸ್ಪತ್ರೆಗೆ ದಾನ ಮಾಡಿದ್ದರು.
ಇರುವೈಲು ತಾಟೆ ಹೆಸರುಳ್ಳ ಜಯಂತ್ ಅಂಚನ್ ರವರ ಹೋಟೆಲ್ ಬಂಟ್ವಾಳ: ತುಳುನಾಡಿನ ಕಂಬಳ ಕ್ರೀಡೆ ದೇಶ ವಿದೇಶಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿರುವಂತೆಯೇ ಕಂಬಳದ ಕೋಣಗಳಿಗೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್, ಸ್ಯಾಂಡಲ್‌ವುಡ್, ಕ್ರಿಕೆಟ್ ತಾರೆಗಳಂತೆ ಕಂಬಳದ ಕೋಣಗಳಿಗೂ ಸ್ಟಾರ್ ವ್ಯಾಲ್ಯೂ ಬಂದಿರುವುದು ವಿಶೇಷ. ಈ ಪೈಕಿ ಕಂಬಳ ಕ್ಷೇತ್ರದಲ್ಲಿ ಅತೀ ಹೆಚ್ಚು ಅಭಿಮಾನಿಯನ್ನು ಹೊಂದಿರುವ ಕೋಣ ಇರುವೈಲು ಪಾಣೆಲದ ತಾಟೆ. ಬಂಟ್ವಾಳ ತಾಲೂಕಿನ ತಾಟೆಯ ಅಪ್ಪಟ ಅಭಿಮಾನಿಯೋರ್ವ ತನ್ನ ಹೊಟೇಲ್ ಗೆ “ಇರುವೈಲು ತಾಟೆ” ಎಂದು ಹೆಸರು ಇಟ್ಟುಕೊಂಡು ತಾಟೆಯ ಮೇಲಿನ ಪ್ರೀತಿ, ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಶಂಭೂರಿನ ಕೊಪ್ಪಳ ನಿವಾಸಿಯಾಗಿರುವ ಜಯಂತ್ ಅಂಚನ್ 9 ವರ್ಷಗಳಿಂದ ಶಿವಶಕ್ತಿ ಎನ್ನುವ ಫಾಸ್ಟ್ ಪುಡ್ ಉದ್ಯಮ ನಡೆಸುತ್ತಿದ್ದರು. ಕಂಬಳ ಪ್ರೇಮಿಯಾಗಿರುವ ಇವರು ಇರುವೈಲು ತಾಟೆಯ ಅಪ್ಪಟ ಅಭಿಮಾನಿ. ಕಳೆದ ಒಂದು ವರ್ಷದ ಹಿಂದೆ ತನ್ನ ಫಾಸ್ಟ್‌ಪುಡ್ ಕೇಂದ್ರವನ್ನು ಹೊಟೇಲ್ ಆಗಿ ಮೇಲ್ದರ್ಜೆಗೇರಿಸಿದಾಗ ಇರುವೈಲು ತಾಟೆ ಎಂದು ನಾಮಕರಣಗೊಳಿಸಿದ್ದಾರೆ. ಶಂಭೂರಿನ ಶೇಡಿಗುರಿಯಲ್ಲಿರುವ “ಹೊಟೇಲ್…
https://youtu.be/vXJ0jt5lniA ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರೀ ದೇವಿಗೆ ಬ್ರಹ್ಮಕುಂಭಾಭಿಷೇಕ ಬಂಟ್ವಾಳ: ಬಿ.ಸಿ.ರೋಡಿನ ಚಂಡಿಕಾನಗರದ ಶ್ರೀ ಚಂಡಿಕಾ ಪರಮೇಶ್ವರೀ ಅಮ್ಮನವರಿಗೆ ಸೋಮವಾರ ವಿಜ್ರಂಭ್ರಣೆಯಿಂದ ಬ್ರಹ್ಮ ಕುಂಭಾಭಿಷೇಕ ನಡೆಯಿತು. ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ ಗಣಹೋಮ, 7.43ರ ಮೀನ ಲಗ್ನದಲ್ಲಿ ಅಷ್ಟಬಂಧ ಲೇಪನ, ಬಳಿಕ ಪರಿಕಲಶಾಭಿಷೇಕ ನಡೆದು ಶ್ರೀ ದೇವಿಗೆ ಬ್ರಹ್ಮಕುಂಭಾಭಿಷೇಕ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಈ ಸಂದರ್ಭ ಉಪಸ್ಥಿತರಿದ್ದು ಪುಣ್ಯದಾಯಕ ದೃಶ್ಯವನ್ನು ಕಣ್ತುಂಬಿಕೊಂಡು ಪುನೀತರಾದರು. ಬಳಿಕ ಅಲಂಕಾರ ನಡೆದು ಮಹಾಪೂಜೆ ಜರುಗಿ ಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು. ಈ ಸಂದರ್ಭ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಮಹೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ, ಗೌರವಾಧ್ಯಕ್ಷ ತಿಮ್ಮಪ್ಪ ರೈ ಏರಿಮಾರ್, ಉಪಾಧ್ಯಕ್ಷ ಸದಾಶಿವ ನಾಯಕ್, ಕಾರ್ಯದರ್ಶಿ ಇಂದಿರೇಶ್, ಜತೆ ಕಾರ್ಯದರ್ಶಿ ಮಂಜುನಾಥ ಪೈ, ಕೋಶಾಧಿಕಾರಿ ಐತಪ್ಪ ಆಳ್ವ, ಬ್ರಹ್ಮಕಲಶ ಮಹೋತ್ಸವ ಸಮಿತಿ ಗೌರವಾಧ್ಯಕ್ಷರಾದ ಸದಾನಂದ ಶೆಟ್ಟಿ,…
ಮಂಗಳೂರು: ತಮ್ಮ ಕಚೇರಿಯಲ್ಲಿ ಪ್ರತಿದಿನವೂ ಸ್ವಚ್ಛತೆಯ ಕೆಲಸ ಮಾಡುವ ಹಿರಿಯ ಮಹಿಳೆಯೂ ಸೇರಿ, 32 ಸಿಬ್ಬಂದಿಯನ್ನು ವಿಮಾನದ ಮೂಲಕ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಕರೆದುಕೊಂಡು ಹೋಗಿರುವ ಸಂಸ್ಥೆಯೊಂದರ ಮುಖ್ಯಸ್ಥರು ತಮ್ಮ ಬಹುಕಾಲದ ಕನಸು ಪೂರೈಸಿದ್ದಾರೆ.ಸಹಕಾರಿ ವಲಯದಲ್ಲಿ ಸಾಫ್ಟ್‌ವೇರ್ ಒದಗಿಸುವ ಪ್ರಮುಖ ಸಂಸ್ಥೆ ಆಟೋಮೇಶನ್ ಕ್ಲೌಡ್ ಸೊಲ್ಯೂಶನ್ಸ್‌ನ ಮುಖ್ಯಸ್ಥರಾದ ಜಗದೀಶ್ ರಾಮ ಮತ್ತು ಲೋಕೇಶ್ ಎನ್. ತಮ್ಮ ಸಂಸ್ಥೆಯ ನೌಕರರಿಗೆ ವಿಮಾನ ಪ್ರಯಾಣದ ಅನುಭವ ಒದಗಿಸಿದ್ದಾರೆ. ಒಟ್ಟು 34 ಜನ ವಿಮಾನದಲ್ಲಿ ಮಂಗಳೂರಿಂದ ಬೆಂಗಳೂರಿಗೆ ತೆರಳಿದ್ದು, ಅಲ್ಲಿಂದ ನಂದಿ ಹಿಲ್ಸ್, ಈಶ ಫೌಂಡೇಶನ್‌ಗೆ ತೆರಳಿ ಕೆಲವು ಪುಣ್ಯಕ್ಷೇತ್ರಗಳಿಗೂ ತೆರಳಿದ್ದಾರೆ. ಈ ಪೈಕಿ 28 ಜನರಿಗೆ ಇದು ಮೊದಲ ಸಲ ವಿಮಾನ ಪ್ರಯಾಣದ ಅನುಭವ. ಈ ಪೈಕಿ ಕಚೇರಿಯಲ್ಲಿ ಸ್ವಚ್ಛತೆಯ ಕೆಲಸ ಮಾಡುವ ಸಿಬ್ಬಂದಿ ಕಸ್ತೂರಿ ಅವರನ್ನೂ ಜತೆಯಲ್ಲಿ ಕರೆದುಕೊಂಡು ಹೋಗಿದ್ದರು. ಕೋ ಆಪರೇಟಿವ್ ಸೊಸೈಟಿಗಳಿಗೆ ತಂತ್ರಾಂಶ ಒದಗಿಸುವ ರಾಜ್ಯದ ಮುಂಚೂಣಿಯ ಸಂಸ್ಥೆಯಾದ ಆಟೋಮೇಶನ್ 2000 ಗ್ರಾಹಕರ ಗುರಿ ಮುಟ್ಟಿದ ಸಂಭ್ರಮದ ಅಂಗವಾಗಿ ಈ ಪ್ರವಾಸ…
ಬಂಟ್ವಾಳ: ಜೆಸಿಐ ಬಂಟ್ವಾಳದ ವತಿಯಿಂದ ಮೆಸ್ಕಾಂ ಲೈನ್‌ಮ್ಯಾನ್ ಕೆ. ಶೀನಾ ಮೊಡಂಕಾಪು ಇವರಿಗೆ ಸೈಲೆಂಟ್ ವರ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶುಕ್ರವಾರ ಬಿ.ಸಿ.ರೋಡಿನ ಪ್ರೀತಿ ಕಾಂಪ್ಲೆಕ್ಸ್‌ನಲ್ಲಿ ನಡೆದ ಮಾಸಿಕ ಸಭೆಯಲ್ಲಿ ಅಧ್ಯಕ್ಷ ರಾಜೇಂದ್ರ ಕೆ. ಅವರು ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ವಲಯ ಉಪಾಧ್ಯಕ್ಷ ಅಜಿತ್ ಕುಮಾರ್ ರೈ ಅವರು ಘಟಕಾಭಿವೃದ್ದಿ ಮತ್ತು ನಿರ್ವಹಣೆಯ ಬಗ್ಗೆ ತರಬೇತಿ ಕಾರ್ಯಗಾರ ನಡೆಸಿಕೊಟ್ಟರು. ಕಾರ್ಯದರ್ಶಿ ರಶ್ಮಿ ಶೆಟ್ಟಿ, ಕೋಶಾಧಿಕಾರಿ ಶ್ರೀನಿವಾಸ ಅರ್ಬಿಗುಡ್ಡೆ ಹಗೂ ಜೆಸಿಐ ಬಂಟ್ವಾಳದ ಪೂರ್ವಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು. Advertisement
https://youtu.be/NsXpxiugEpk ಸಿದ್ದಕಟ್ಟೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಬಂಟ್ವಾಳ: ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ಜೋಡುಮಾರ್ಗ, ಸಾರ್ವಜನಿಕ ಶ್ರೀ ಶಾರದೋತ್ಸವ ಆಚರಣಾ ಸಮಿತಿ ಸಿದ್ದಕಟ್ಟೆ, ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಸಿದ್ದಕಟ್ಟೆ ಹಾಗೂ ಜಸ್ಟೀಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಸಿದ್ದಕಟ್ಟೆಯ ಹರ್ಷಾಲಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.ಟ್ರಸ್ಟ್ ಅಧ್ಯಕ್ಷ ರಮೇಶ್ ನಾಯಕ್ ರಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಮಾರ್ಗದರ್ಶನದಂತೆ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ಆರಂಭಗೊಂಡಿದ್ದು ಬಡವರಿಗೆ ಅನುಕೂಲವಾಗುವ ಉದ್ದೇಶದಿಂದ ಉಚಿತ ಆರೋಗ್ಯ ಶಿಬಿರದಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.ಇದರ ಜೊತೆಗೆ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಸಾಧಕರಿಗೆ ಗೌರವ, ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕಾರ್ಯವನ್ನು ಟ್ರಸ್ಟ್ ಮಾಡಿಕೊಂಡು ಬರುತ್ತಿದೆ ಎಂದರು. ಜಸ್ಟೀಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇಲ್ಲಿನ ವೈದ್ಯ ವಿವೇಕ್ ಎಸ್. ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಎಲ್ಲರೂ ಶಿಬಿರದ ಪ್ರಯೋಜನ…
ಬಂಟ್ವಾಳ: ತಾಲೂಕಿನ ಪುದು ಗ್ರಾಮ ಪಂಚಾಯತ್ ಗೆ ಶನಿವಾರ ಶಾಂತಯತವಾಗಿ ಮತದಾನ ನಡೆದಿದ್ದು ಶೇ. 73.7 ಶೇ. ರಷ್ಟು ಮತದಾನವಾಗಿದೆ ಎಂದು ಚುನಾವಣಾ ಶಾಖೆಯ ಉಪತಹಸೀಲ್ದಾರ್ ನವೀನ್ ಬೆಂಜನಪದವು ತಿಳಿಸಿದ್ದಾರೆ.ಪುದು ಗ್ರಾ.ಪಂ.ನಲ್ಲಿ ಒಟ್ಟು 11,164 ಮತದಾರರ ಪೈಕಿ 8,228 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ,ಇದರಲ್ಲಿ 5730 ಗಂಡಸರ ಪೈಕಿ 4060 ಹಾಗೂ 5534 ಮಹಿಳೆಯರ ಪೈಕಿ 4168 ಮಂದಿ ಮತ ಚಲಾಯಿಸಿದ್ದಾರೆ.ಬೆಳಿಗ್ಗೆಯಿಂದಲೇ ಬಿರುಸಿನಿಂದ ಮತದಾನ ನಡೆದಿದ್ದು, ಕೆಲ ಮತಗಟ್ಟೆಯಲ್ಲಿ ಮತದಾರ ತಾಸುಗಟ್ಟಲೇ ಸರತಿ ನಿಲ್ಲುವ ಸನ್ನಿವೇಶ ಉಂಟಾಯಿತು.ಜನಸಂಖ್ಯೆಗನುಗುಣವಾಗಿ ಹೆಚ್ಚುವರಿ ಮತಗಟ್ಟೆ ತೆರೆಯದಿರುವುದರಿಂದ ಮತದಾರ ಸಾಲುಗಟ್ಟಿ ನಿಲ್ಲಬೇಕಾಯಿತು. 34 ಸ್ಥಾನಗಳನ್ನು ಹೊಂದಿರುವ ಪುದು ಗ್ರಾ.ಪಂ. ಗೆ ಒಟ್ಟು 99 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.ಈ ಬಾರಿ ಬ್ಯಾಲೆಟ್ ಪೇಪರ್ ಮೂಲಕವೇ ಮತದಾನ ನಡೆದಿದೆ.ವಿವಿಧ ಕಾರಣಗಳಿಂದ ತೆರವಾಗಿದ್ದ ಅನಂತಾಡಿ ಮತ್ತು ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಕ್ರಮವಾಗಿ 79.7ಶೇ.ಹಾಗೂ 73 ಶೇ.ಮತದಾನ ನಡೆದಿದ್ದು, ಇಲ್ಲಿಯೂ ಶಾಂತಿಯುತವಾಗಿ ಮತದಾನ ನಡೆದಿದೆ.ಯಾವುದೇ ಅಹಿತಕರ ಘಟನೆಗೆ ಅವಕಾಶವಿಲ್ಲದೆ…
ಬಂಟ್ವಾಳ : ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಮತ್ತುದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲ ಬಿ.ಸಿ.ರೋಡ್ , ಹಾಗೂಶ್ರೀ ಗುರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮೆಲ್ಕಾರ್ ಇದರ ಸಿಬಂದಿಗಳಿಗೆ ಸಹಕಾರಿ ಕಾನೂನು, ವ್ಯವಹಾರ ಮಾಹಿತಿ ಕಾರ್ಯಾಗಾರವು ಫೆ 25 ರಂದು ಮೆಲ್ಕಾರ್ ಬಿರ್ವ ಸೆಂಟರ್ ಮಿನಿ ಆರ್ಚಿಡ್ ಹಾಲ್ನಲ್ಲಿ ನಡೆಯಿತು.ಮೂರ್ತೆದಾರರ ಮಹಾ ಮಂಡಲ .ಮತ್ತು ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ನಿರ್ದೇಶಕರಾದ ಆಶೋಕ್ ಪೂಜಾರಿ, ಆಶಿಶ್ ವಾಮದಪದವು, ಸುಜಾತಾ, ವಾಣಿ ವಸಂತ , ಅರುಣ್ ಕುಮಾರ್ ಉಪಸ್ಥಿತರಿದ್ದರು.ಪುತ್ತೂರು ವಿಭಾಗ ಸಹಕಾರಿ ಸಂಘಗಳ ಸಹಾಯಕ ನಿಬಂದಕಿ ತ್ರಿವೇಣಿ ರಾವ್, ಜಿಲ್ಲಾ ಕೇ೦ದ್ರ ಸಹಕಾರಿ ಬ್ಯಾಂಕ್ ನಿವೃತ್ತ ಡಿಜಿಎಂಲೀಲಾ ರಾಮ್, ಹಿರಿಯ ನ್ಯಾಯವಾದಿ ಅಶ್ವನಿ ಕುಮಾರ್ ರೈ ವಿವಿಧ ಮಾಹಿತಿ ನೀಡಿದರು.ಮೂರ್ತೆದಾರರ ಸೇವಾ ಸಹಕಾರಿ ಸಂಘದ ಸಿಇಒ ಮಮತಾ ಜಿ ಚೇಳೂರು, ಶ್ರೀ ಗುರು ಕ್ರೆಡಿಟ್ ಸಿಇಒ ಪ್ರವೀಣ್ ಉಪಸ್ಥಿತರಿದ್ದರು.ಶ್ರೀಗುರು ಸೊಸೈಟಿ ಉಪಾಧ್ಯಕ್ಷ .…
ಬಂಟ್ವಾಳ: ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪನವರಿಗೆ ಸಮಾಜದ ಮೇಲೆ ಇದ್ದ ಪ್ರೀತಿ, ಅವರು ಸಮಾಜವನ್ನು ತಿದ್ದು ತೀಡಿದ ರೀತಿ ನಮಗೆ ಆದರ್ಶ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. https://youtu.be/-V0OK0cm37Y ಸ್ವಾತಂತ್ರ್ಯ ಯೋಧ ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಮಾರಂಭ ಸ್ವಾತಂತ್ರ್ಯ ಯೋಧ ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಆಚರಣಾ ಸಮಿತಿ ವತಿಯಿಂದ ಶನಿವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆದ ಸ್ವಾತಂತ್ರ್ಯ ಯೋಧ ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಸಮಾಜ ಸೇವಾ ಸಹಕಾರಿ ಸಂಘ ಇಂದು ಅದೆಷ್ಟೋ ಜನರಿಗೆ ಉದ್ಯೋಗ ನೀಡಿ ಬಡವರಿಗೆ ಪ್ರಯೋಜನವಾಗಿದ್ದರೆ ಅದರ ಹಿಂದೆ ಡಾ. ಅಮ್ಮೆಂಬಳ ಬಾಳಪ್ಪರ ಚಿಂತನೆ ಇದ್ದು ಇಂದು ಮಂಥನವಾಗುತ್ತಿದೆ. ಮುಂದಿನ ಪೀಳಿಗೆಯ ಮಕ್ಕಳಿಗೆ ಅವರ ಸಾಧನೆ ತತ್ವಾದರ್ಶದ ಬಗ್ಗೆ ಅಭಿರುಚಿ ಮೂಡಿಸುವ ಕಾರ್ಯ ಪ್ರತಿ ಮನೆ ಮನೆಯಲ್ಲೂ ಆಗಬೇಕಾಗಿದೆ ಎಂದರು.ಶಾಸಕ ರಾಜೇಶ್ ನಾಯ್ಕ್ ಬಾಳಪಥ ಎನ್ನುವ ಡಾ. ಅಮ್ಮೆಂಬಳ ಬಾಳಪ್ಪರ…








