Author: admin

ಬಂಟ್ವಾಳ: ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರವನ್ನುನ ಆಗ್ರಹಿಸಿ ಮಾ. 1 ರಿಂದ ನಡೆಯುವ ಅನಿರ್ಧಿಷ್ಠಾವಧಿ ಮುಷ್ಕರದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ಶಾಖೆಯು ಬೆಂಬಲ ವ್ಯಕ್ತಪಡಿಸಿರುವುದಾಗಿ ಸಂಘದ ಅಧ್ಯಕ್ಷ ಉಮನಾಥ ರೈ ಮೇರಾವು ತಿಳಿಸಿದರು. https://youtu.be/AzFnLcUoiOY ರಾಜ್ಯ ಸರ್ಕಾರಿ ನೌಕರರ ಸಂಘದ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಬಂಟ್ವಾಳ ಶಾಖೆಯ ಬೆಂಬಲ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿ ಫೆ.21ರಂದು ಜರುಗಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲೆ ತಾಲ್ಲೂಕು ಯೋಜನೆ ಶಾಖೆಗಳ ಚುನಾಯಿತ ಪ್ರತಿನಿಧಿಗಳ ಹಾಗೂ ವೃಂದ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳ ತುರ್ತು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ-ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿಯ ಯೋಜನೆಯನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಆಗ್ರಹಪಡಿಸಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮಾ. 1 ರಿಂದ ಅನಿರ್ಧಿಷ್ಟಾವಧಿ…

Read More

ಬಂಟ್ವಾಳ: ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ಜೋಡುಮಾರ್ಗ, ಸಾರ್ವಜನಿಕ ಶ್ರೀ ಶಾರದೋತ್ಸವ ಆಚರಣಾ ಸಮಿತಿ ಸಿದ್ದಕಟ್ಟೆ, ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಸಿದ್ದಕಟ್ಟೆ ಹಾಗೂ ಜಸ್ಟೀಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಫೆ.26ರಂದು ಭಾನುವಾರ ಬೆಳಿಗ್ಗೆ 9ರಿಂದ ಸಿದ್ದಕಟ್ಟೆಯ ಹರ್ಷಾಲಿ ಸಭಾಂಗಣದಲ್ಲಿ ನಡೆಯಲಿದೆ. ಸಾಮಾನ್ಯ ರೋಗ ತಪಾಸಣೆ, ಎಲುಪಬು ಮತ್ತು ಕೀಲು, ಧರ್ಮ ಚಿಕಿತ್ಸೆ, ಉಚಿತ ಇಸಿಜಿ, ಕಿವಿ ಮೂಗು ಗಂಟಲು ವಿಭಾಗ, ರಕ್ತದೊತ್ತಡ ಸಕ್ಕರೆ ರೋಗ ಪರೀಕ್ಷೆ ಸ್ತ್ರೀ ರೋಗಳ ಬಗ್ಗೆ ತಪಾಸಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. Advertisement

Read More

ಬಂಟ್ವಾಳ: ಸ್ವಾತಂತ್ರ್ಯ ಯೋಧ ಡಾ| ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ ಮತ್ತು ಜನ್ಮ ಶತಾಬ್ದಿ ಆಚರಣೆ ಸಮಿತಿ ವತಿಯಿಂದ ಡಾ| ಅಮ್ಮೆಂಬಳ ಬಾಳಪ್ಪರ ಜನ್ಮಶತಾಬ್ದಿ ಸಂಭ್ರಮ ಫೆ. 25ರಂದು ಬೆಳಗ್ಗೆ 10ರಿಂದ ಬಿ.ಸಿ.ರೋಡ್‌ನ ಸ್ಪರ್ಶಾ ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿ ಗೌರವಾಧ್ಯಕ್ಷ ಡಿ. ಚಂದಪ್ಪ ಮೂಲ್ಯ ಉಪ್ಪಿನಂಗಡಿ ತಿಳಿಸಿದರು. ಗುರುವಾರ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಬಾಳಪ್ಪನವರು ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ, ಭೂ ನ್ಯಾಯ ಮಂಡಳಿ ನೇತಾರ, ಶಿಕ್ಷಕ, ಪತ್ರಕರ್ತ, ಆಯುರ್ವೇದ ವೈದ್ಯ, ಸಹಕಾರಿ ಬ್ಯಾಂಕ್ ಸ್ಥಾಪಕಾಧ್ಯಕ್ಷರಾಗಿ ತಮ್ಮನ್ನು ಗುರುತಿಸಿಕೊಂಡಿದ್ದರು. ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡೀಸ್ ಅವರ ರಾಜಕೀಯ ಗುರುವಾಗಿದ್ದ ಅವರು ಗಾಂಧಿವಾದಿಯಾಗಿ ತುಳು ಸಿರಿ ಎನ್ನುವ ತುಳು ಭಾಷೆಯ ಮೊದಲ ಪತ್ರಿಕೆ, ಮಿತ್ರ ಎನ್ನುವ ಕನ್ನಡ ಪತ್ರಿಕೆಯನ್ನು ಪ್ರಾರಂಭಿಸಿ ಪತ್ರಿಕಾ ಕ್ಷೇತ್ರದಲ್ಲೂ ಮಿಂಚಿದ್ದರು. ಎಷ್ಟೇ ಎತ್ತರಕ್ಕೇರಿದರೂ ಹಮ್ಮು ಬಿಮ್ಮುಗಳಿಲ್ಲದೆ ಬಾಳಿದ್ದು ಇವರ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.ಫೆ. 25ರಂದು ಬೆಳಗ್ಗೆ 9…

Read More

ಬಂಟ್ವಾಳ: ಜೀರ್ಣೋದ್ಧಾರ ಹಂತದಲ್ಲಿರುವ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಪ್ರಧಾನ ಗರ್ಭಗುಡಿಯ ಮೇಲ್ಛಾವಣಿಗೆ ಮರದ ಹೊದಿಕೆಯ ಮುಹೂರ್ತ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಹಾಗೂ ಪುರೋಹಿತ ವಿಜಯಕೃಷ್ಣ ಐತಾಳ್ ಅವರು ಧಾರ್ಮಿಕ ವಿಽ ವಿಧಾನ ನೆರವೇರಿಸಿದರು. ಅರ್ಚಕ ಜಯರಾಮ ಕಾರಂತ ಸಹಕರಿಸಿದರು. ಬಳಿಕ ದಾರುಶಿಲ್ಪಿ ಹರೀಶ್ ಆಚಾರ್ಯ ಬೋಳಿಯಾರು ಅವರಿಗೆ ಪ್ರಸಾದ ನೀಡಿ ಬಳಿಕ ಮರದ ಹೊದಿಕೆಯ ಕಾರ್ಯ ಪ್ರಾರಂಭಿಸಲಾಯಿತು. ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಪ್ರಮುಖರಾದ ವಿಠಲ್ ಎಂ. ಆರುಮುಡಿ, ಉಮೇಶ್ ಆಳ್ವ ಕೊಟ್ಟುಂಜ, ಕುಸುಮಾಕರ ಶೆಟ್ಟಿ ಕುರ್ಯಾಳ, ರಾಧಾಕೃಷ್ಣ ರೈ ಕೊಟ್ಟುಂಜ, ಪುರುಷೋತ್ತಮ ಪೂಜಾರಿ ಮಜಲು, ಗಿರಿಧರ್ ನಾಯ್ಕ್ ಎಸ್, ಪ್ರಕಾಶ್ಚಂದ್ರ ಆಳ್ವ, ದಯಾವತಿ ಮಠದಬೆಟ್ಟು, ಕೊರಗಪ್ಪ ಗೌಡ ಪಠಣ, ಸುರೇಂದ್ರ ಪೈ ಸರಪಾಡಿ, ರಾಹುಲ್ ಕೋಟ್ಯಾನ್, ಚೇತನ್ ಬಜ, ಕಿಶನ್ ಸರಪಾಡಿ, ನಾರಾಯಣ ದೇವಾಡಿಗ ಹೊಳ್ಳರಗುತ್ತು, ಯೋಗೀಶ್ ಗೌಡ ನೀರೊಲ್ಬೆ, ಗಿರೀಶ್ ನಾಯ್ಕ್ ನೀರಪಲ್ಕೆ, ಆನಂದ ಶೆಟ್ಟಿ…

Read More

ಬಂಟ್ವಾಳ: ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ 30ರ ನೆನಪು ವಿಚಾರ ಸಂಕಿರಣ – ಅರಿವು ಯಾನ ಮಾಲಿಕೆ ಕೃತಿ ಬಿಡುಗಡೆ-ತಜ್ಞ ಸಂವಾದ ಕಾರ್ಯಕ್ರಮ ಗುರುವಾರ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಹೇಮಾವತಿ ವಿ. ಹೆಗ್ಗಡೆ ಅವರು ವಿಚಾರ ಸಂಕಿರಣವನ್ನು ಉದ್ಘಾಟನೆಗೈದು ಕೃತಿಕಾರರಾದ ಡಾ. ಪಿ.ಎನ್. ನರಸಿಂಹ ಮೂರ್ತಿ ಅವರ ಅಳುಪರು-ಕರಾವಳಿ ಕರ್ನಾಟಕದ ಒಂದು ಪ್ರಾಚೀನ ಅರಸು ಮನೆತನ ಮತ್ತು ಐಗಳ್ ಎಂಬ ದ.ಕ.ಇತಿಹಾಸದ ದಂತಕಥೆ ಎಂಬ ಎರಡು ಕೃತಿಗಳ ಬಿಡುಗಡೆಗೊಳಿಸಿದರು.ಬಳಿಕ ಮಾತನಾಡಿದ ಡಾ.ಹೇಮಾವತಿ ವಿ.ಹೆಗ್ಗಡೆ ಅವರು ಕೃಷಿಯ ಬಗ್ಗೆ ಆಳ- ಅರಿವು ತಿಳಿಯದವರಿಂದ ನಷ್ಟವುಂಟಾಗುತ್ತಿದೆ. ವಿದ್ಯಾವಂತರು ಕೃಷಿಗೆ ಬಂದರೆ ಕೃಷಿಯಲ್ಲಿ ಅಭಿವೃದ್ಧಿಯೊಂದಿಗೆ ಆದಾಯ ಪಡೆಯಲು ಸಾಧ್ಯವಿದೆ. ಕೃಷಿ ಸಂಸ್ಕೃತಿ ನಾಶವಾಗಿರುವುದರಿಂದ ಹಿಂದಿನ ತಲೆಮಾರಿನ ವಸ್ತುಗಳು ಮ್ಯೂಸಿಯಂ ವಸ್ತುಗಳಾಗಿವೆ. ದಿನಬಳಕೆ ವಸ್ತುಗಳು ಪ್ಲಾಸ್ಟಿಕ್ ಆಗಿ ಬಳಯಾಗುತ್ತಿದೆ .ಅವಿಭಕ್ತ ಕುಟುಂಬದ ಕಲ್ಪನೆಯನ್ನು…

Read More

ಬಂಟ್ವಾಳ: ನಾವೂರು ಗ್ರಾಮ ಪಂಚಾಯತಿಯಲ್ಲಿ ಆಗುತ್ತಿರುವ ಅವ್ಯವಸ್ಥೆಯ ವಿರುದ್ಧ ಬಿಜೆಪಿ ವತಿಯಿಂದ ಗುರುವಾರ ಬೆಳಿಗ್ಗೆ ಪ್ರತಿಭಟನೆ ನಡೆಯಿತು. 9/11, ಕಟ್ಟಡ ಪರವಾನಿಗೆ , ನಿರಾಕ್ಷೇಪಣಾ ಪತ್ರ, ಕಾಲುದಾರಿ ಸಮಸ್ಯೆ , ಪಂಚಾಯತಿ ರಸ್ತೆ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದ್ದು ಈ ಬಗ್ಗೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಹಾಗೂ ಗ್ರಾಮ ಸಭೆಯಲ್ಲಿ ಉನ್ನತ ಅಧಿಕಾರಿಗಳಿಗೆ ಹಲವು ಬಾರಿ ದೂರು ಸಲ್ಲಿಸಿದರೂ ಸ್ಪಂದಿಸದ ಕಾರಣ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಕಾರರು ತಿಳಿಸಿದರು.ಕುಡಿಯುವ ನೀರಿನ ಪೈಪ್ ದುರಸ್ತಿ ಹಾಗೂ ಪಂಪು ಕೆಟ್ಟು ಹೋದಾಗ ದೂರು ನೀಡಿದರೆ ವಾರ್ಡಿನ ಸದಸ್ಯರು ಸರಿ ಮಾಡುತ್ತಾರೆ ಎಂದು ಸಮಜಾಯಿಷಿಕೆ ನೀಡುತ್ತಾರೆ, ಸರಕಾರಿ ಜಾಗದಲ್ಲಿ ನಿವೇಶನ ಮಂಜೂರಾಗಿ ಮನೆ ಮಾಡಿ ವಾಸವಿರುವ ಮನೆಗಳಿಗೆ ಹೋಗುವ ರಸ್ತೆಯನ್ನು ಪಂಚಾಯತ್ ರಸ್ತೆ ಎಂದು ನಮೂದು ಮಾಡುತ್ತಿಲ್ಲ, ಕರ್ನಾಟಕ ಸರಕಾರ ಗ್ರಾಮ ಒನ್ ಕಾರ್ಯಕ್ರಮ ನೀಡಿ ಗ್ರಾಮ ಪಂಚಾಯತ್‌ನಲ್ಲಿ ಎಲ್ಲಾ ಸವಲತ್ತು ಸಿಗುವಂತೆ ಮಾಡಿದರೂ, ನಾವೂರು ಪಂಚಾಯತ್‌ನಲ್ಲಿ ಇದು ಆಗುತ್ತಿಲ್ಲ, ಮನೆ…

Read More

ಬಂಟ್ವಾಳ: ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಮಾನಸಿಕ ಹಾಗೂ ದೈಹಿಕ ದೃಢತೆ ಹೆಚ್ಚಾಗುವುದರೊಂದಿಗೆ ನಮ್ಮಲ್ಲಿ ಧನಾತ್ಮಕ ಚಿಂತನೆಗೆ ಪ್ರೇರಣೆ ನೀಡುತ್ತದೆ. ಎಂದು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಹೇಳಿದರು.ಅವರು ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶ ಮಹೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಲಕ್ಷ್ಮಿ ಸರಸ್ವತಿ, ಶಕ್ತಿಯನ್ನು ನೀಡುವ ಜಗದಂಬಿಕೆಯನ್ನು ಆರಾಧಿಸುವುದು ಧಾರ್ಮಿಕ ಕರ್ತವ್ಯ, ಜಡ ವಸ್ತುಗಳಲ್ಲಿ ಚೈತನ್ಯ ನೀಡುವವಳು ಜಗದಂಬಿಕೆ ಎಂದರು. 64 ಕ್ಷೇತ್ರ ಕಲೆಗಳನ್ನು ಕ್ರೋಡಿಕರಿಸಿ ವ್ಯಕ್ತಿತ್ವವನ್ನು ರೂಪಿಸಲು ದೇವಸ್ಥಾನಗಳು ಬೇಕು. ವಿಚಾರಗಳನ್ನು ಆಚಾರದಲ್ಲಿ ಅನುಷ್ಠಾನ ಮಾಡಿಕೊಳ್ಳಬೇಕು ಎಂದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ ಈ ಭಾಗಕ್ಕೆ ಚೇತನ ಕೊಡುವ ಕಾರ್ಯ ಬ್ರಹ್ಮಕಲಶೋತ್ಸದ ಮೂಲಕ ಆಗಿದೆ. ಊರ ಸಮಸ್ತ ಭಕ್ತಾಭಿಮಾನಿಗಳಲ್ಲಿ ಪ್ರಸನ್ನತೆ ಮೂಡಿಸುವ ಕಾರ್ಯಕ್ರಮ ನಡೆದಿದೆ ಎಂದರು.ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಉಪವಿಭಾಗದ ಎಎಸ್ಪಿ ಪ್ರತಾಪ್ ಸಿಂಗ್ ಥೋರಾಟ್, ಜೀರ್ಣೋದ್ಧಾರ ಹಾಗೂ…

Read More

ಪತ್ರಕರ್ತ ಜಯಾನಂದ ಪೆರಾಜೆ ಬಂಟ್ವಾಳ: ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಇವರು ಕೊಡಮಾಡುವ ರಾಜ್ಯ ಮಟ್ಟದ ಪತ್ರಕರ್ತ ಸೌರಭ ಪ್ರಶಸ್ತಿ 2023 ಪ್ರಶಸ್ತಿಗೆ ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಆಯ್ಕೆಯಾಗಿರುತ್ತಾರೆಂದು ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧು ನಾಯ್ಕ್ ಹೂವಿನಹಡಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಜಯಾನಂದ ಪೆರಾಜೆಯವರು 1986 ರಲ್ಲಿ ಸುದ್ದಿ ಬಿಡುಗಡೆ ವಾರ ಪತ್ರಿಕೆ ಬಂಟ್ವಾಳದಲ್ಲಿ ವರದಿಗಾರರಾಗಿ ಕಾರ್ಯಾರಂಭಿಸಿ ಬಳಿಕ ಹೊಸದಿಗಂತ, ಮುಂಗಾರು, ಸಂಯುಕ್ತಕರ್ನಾಟಕ ಕನ್ನಡ ಪ್ರಭ ದಿನಪತ್ರಿಕೆಗಳಲ್ಲಿ ಸುದೀರ್ಘ ಕಾಲ ಬಂಟ್ವಾಳ ತಾಲೂಕು ವರದಿಗಾರರಾಗಿ ಸೇವೆಸಲ್ಲಿಸಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಅಂಕಣಕಾರರಾಗಿ, ಕವಿ, ಸಾಹಿತಿಯಾಗಿ ಲೇಖನಗಳನ್ನು ಪ್ರಕಟಿಸಿರುತ್ತಾರೆ. ಹೊಸದಿಗಂತಪತ್ರಿಕೆಯ ವರದಿಗಾರರಾಗಿ ಇರುವ ಇವರು ಪ್ರಸ್ತುತ ಮಧುಪ್ರಪಂಚ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿರುತ್ತಾರೆ. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಬರಹಗಾರರ ವೇದಿಕೆಯ ಜಿಲ್ಲಾಧ್ಯಕ್ಷರಾಗಿರುತ್ತಾರೆ.ಫೆ.26ರಂದು ವಿಜಯಪುರದ ಹಂಪಿಯಲ್ಲಿ ನಡೆಯುವ ರಾಜ್ಯ ಸಮ್ಮೇಳನ ಮತ್ತು ಸಾವಿರ ಗೋಷ್ಠಿಯ ಸಂಭ್ರಮ ಕಾಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಘಟಕದ ಸಹಯೋಗದೊಂದಿಗೆ ನಡೆಯುವ…

Read More

ಬಂಟ್ವಾಳ: ಫೆ.22 ರಿಂದ ಫೆ. 28ರವರೆಗೆ ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದದಲ್ಲಿ ನಡೆಯಲಿರುವ ಅಷ್ಟಬಂಧ, ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಬುಧವಾರ ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಮೂಲಕ ಚಾಲನೆ ಸಿಕ್ಕಿತು. ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದ ಹೊರೆಕಾಣಿಕೆ ಸಂಗ್ರಹಣಾ ಕೇಂದ್ರ ಬಳಿ ಗಣ್ಯರ ಸಮಕ್ಷಮದಲ್ಲಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಚೆಂಡೆ, ಗೊಂಬೆ ಕುಣಿತ, ಕೀಲು ಕುದರೆ ಕುಣಿತ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ರಾಷ್ಟ್ರೀಯ ಹೆದ್ದಾರಿ ಮೂಲಕ ಕೈಕಂಬಕ್ಕೆ ಹೋಗಿ, ಕೈಕಂಬದ ಸಂಗ್ರಹಣ ಕೇಂದ್ರದ ಬಳಿ ಹಸಿರು ಹೊರೆಕಾಣಿಕೆಯನ್ನು ಸೇರಿಸಿಕೊಂಡು ಮತ್ತೆ ವಾಪಸ್ಸು ದೇವಸ್ಥಾನದತ್ತ ಮೆರವಣಿಗೆ ಸಾಗಿ ಬಂತು. ಹೊರೆ ಕಾಣಿಕೆ ಹೊತ್ತ ವಾಹನಗಳು ಮೆರವಣಿಗೆಯ ಸರತಿಯಲ್ಲಿ ಸಾಗಿ ಸಂಭ್ರಮದ ಬ್ರಹ್ಮಕಲಶೋತ್ಸವಕ್ಕೆ ಮುನ್ನುಡಿ ಬರೆಯಿತು.ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜೀರ್ಣೊದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಕೇಶ್…

Read More

ಬಂಟ್ವಾಳ:ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ 30 ರ ನೆನಪು ವಿಚಾರ ಸಂಕಿರಣ ಮತ್ತು ಅರಿವು ಯಾನ ಮಾಲಿಕೆಯ ಕೃತಿ ಬಿಡುಗಡೆ ಫೆ.23 ರಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ ಎಂದು ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ್ ಪೂಜಾರಿ ತಿಳಿಸಿದ್ದಾರೆ. ಡಾ. ಹೇಮಾವತಿ ವಿ. ಹೆಗ್ಗಡೆ ಅವರು ವಿಚಾರ ಸಂಕಿರಣದ ಉದ್ಘಾಟನೆ ಮತ್ತು ಕೃತಿಗಳ ಬಿಡುಗಡೆಗೊಳಿಸುವರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಉದ್ಯಮಿ ಮೂಡಂಬೈಲು ರವಿ ಶೆಟ್ಟಿ ಅತಿಥಿಯಾಗಿ ಭಾಗವಹಿಸಲಿದ್ದು,ಡಾ.ಪಿ.ಎನ್. ನರಸಿಂಹಮೂರ್ತಿಪ್ರೊ. ಕೆ. ಶಂಕರ ಭಟ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬಳಿಕ ಗೋಷ್ಠಿಗಳು ನಡೆಯಲಿದ್ದು,ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ’ ನೂರರ ನೆನಪು ಎಂಬ ವಿಷಯದ ಬಗ್ಗೆ ಉಡುಪಿ ಎಂಜಿಎಂ ಕಾಲೇಜಿನ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರಾದ ಡಾ. ಮಾಲತಿ ಮೂರ್ತಿ ಹಾಗೂ ಆಳುಪರು ಕರಾವಳಿ ಕರ್ನಾಟಕದ ಒಂದು ಪ್ರಾಚೀನ ಅರಸು ಮನೆತನ ಎಂಬ ವಿಷಯದ ಬಗ್ಗೆ…

Read More