Author: admin
ಬಂಟ್ವಾಳ:ಬರಿಮಾರು ಗ್ರಾಮದ ಕಲ್ಲೆಟ್ಟಿ ಕಾನಲ್ತಾಯ ಮಹಾಕಾಳಿ ದೈವಸ್ಥಾನಕ್ಕೆ ರೂ 40 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ತಡೆಗೋಡೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಬುಧವಾರ ಉದ್ಘಾಟಿಸಿದರು.25 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ಪಂಜುರ್ಲಿಗುಡ್ಡೆ ಮಹಾಕಾಳಿಬೆಟ್ಟು, ತಲಾ 10 ಲಕ್ಷ ವೆಚ್ಚದಲ್ಲಿ ಪಾಪೆತ್ತಿಮಾರು ಬರಿಮಾರು, ಕುಲ್ಲಾಜೆ ಲಾದ್ರಕೋಡಿ ರಸ್ತೆ, ಪಾಪರ್ಕಜೆ ಬೊಟ್ಟು ರಸ್ತೆ, ಪಾರ್ಪಕಜೆ ಮುಂಡೇವು ರಸ್ತೆ ಕಾಂಕ್ರೀಟ್ ಕರಣವನ್ನು ಉದ್ಘಾಟಿಸಿದರು. ಬರಿಮಾರು ಶಾಲೆ ಬಳಿ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.ಮುಂದಿನ ಬಾರಿಯೂ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದ ರಾಜೇಶ್ ನಾಯ್ಕ್, ದಾರಿ ತಪ್ಪಿಸುವ ಹೇಳಿಕೆಗಳನ್ನು ಕೆಲವರು ಕೊಡುತ್ತಿದ್ದು, ಈಡೇರಿಸಲು ಅಸಾಧ್ಯವಾದ ಅವಾಸ್ತವಿಕ ಮಾಹಿತಿ ನೀಡಲಾಗುತ್ತಿದೆ ಎಂದರು.ಸಾಮಾನ್ಯ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಿ ಕೆಲಸ ಮಾಡುವ ಕಾರ್ಯವನ್ನು ಮಾಡಿದ್ದೇನೆ. ಜಗತ್ತು ಮೆಚ್ಚುವ ಕೆಲಸವನ್ನು ಕೋವಿಡ್ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಅಡಳಿತದಿಂದಾಗಿ ಇವತ್ತು ನಾವು ಆರೋಗ್ಯವಂತರಾಗಿದ್ದೇವೆ. ನನಗೆ ಹಿಂದುತ್ವ ಮತ್ತು ಅಭಿವೃದ್ಧಿ ಮುಖ್ಯ. ಶಾಂತಿ ಕಾಪಾಡುವ ಆಡಳಿತ ನಡೆಸಿದ್ದು ಹಿಂದುತ್ವವಾಗಿದೆ. ಸಾವಿರದ…
ಬಂಟ್ವಾಳ: ಕೃಷಿ ಭೂಮಿಯನ್ನು ನಾಶಪಡಿಸಿ, ಜಿಲ್ಲೆಯ ರೈತರ ವ್ಯಾಪಕ ವಿರೋಧದ ನಡುವೆಯೂ ನಿರ್ಮಾಣಗೊಳ್ಳುತ್ತಿರುವ ಉಡುಪಿ – ಕಾಸರಗೋಡು ೪೦೦ ಕೆವಿ ವಿದ್ಯುತ್ ಪ್ರಸರಣ ಮಾರ್ಗದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಬುಧವಾರ ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದ ಮುಂಭಾಗ ನಡೆಯಿತು. ಪ್ರತಿಭಟನೆಯ ಕಾವು ಏರುತ್ತಿದ್ದರೂ ಸ್ಥಳಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳು ಬಾರದೇ ಇದ್ದುದರಿಂದ ಆಕ್ರೋಶಗೊಂಡ ಪ್ರತಿಭಟನಕಾರರು ಜಿಲ್ಲಾಧಿಕಾರಿ ಬರ ಬೇಕೆಂದು ಆಗ್ರಹಿಸಿ ಬಿ.ಸಿ.ರೋಡು- ಕೈಕುಂಜೆ ರಸ್ತೆಯಲ್ಲಿ ಕೆಲಹೊತ್ತು ರಸ್ತೆ ಸಂಚಾರ ಬಂದ್ ಮಾಡಿ ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿದರು.ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆದಿದ್ದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಶ್ರೀಮಂತರನ್ನು, ಕೈಗಾರಿಕೋದ್ಯಮಿಗಳನ್ನು ಜೋಪಾನ ಮಾಡುವುದಷ್ಟೇ ಕೇಂದ್ರ ಸರ್ಕಾರದ ಕಾರ್ಯಕ್ರಮಗಳು ಸೀಮಿತವಾಗಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿ ಕಂಪೆನಿಗಳಿಗೆ ಮಾರಿದೆ. ಎಲ್‌ಐಸಿ, ಬ್ಯಾಂಕ್‌ನಂತಹ ಸೇವಾ ಸಂಸ್ಥೆಗಳು ಕೂಡ ಶ್ರೀಮಂತ ಉದ್ಯಮಿಗಳ ಕೈ ಸೇರುವ ದಿಕ್ಕಿನಲ್ಲಿ ಸಾಗುತ್ತಿದೆ ಎಂದರು.…
ಬಂಟ್ವಾಳ: ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಶಿಕ್ಷಣ ಸಂಸ್ಥೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.ರೂ. 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸರಕಾರಿ ಪದವಿಪೂರ್ವ ಕಾಲೇಜು ಬಿ.ಮೂಡ ಇದರ ನೂತನ ತರಗತಿ ಹಾಗೂ ಪ್ರಯೋಗಲಾಯ ಕೊಠಡಿಗಳನ್ನು ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು ತಮಗೆ ಬೇಕಾದ ಶಿಕ್ಷಣವನ್ನು ಆಯ್ಕೆ ಮಾಡಿ ಶಿಕ್ಷಣದಲ್ಲಿ ಮುಂದುವರಿಯಲು ಹಾಗೂ ಭವಿಷ್ಯ ರೂಪಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪುರಸಭಾ ವತಿಯಿಂದ ಸಿಗುವ ಆರ್ಥಿಕ ಪ್ರೋತ್ಸಾಹ ಧನವನ್ನು ಮೂವರು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಗುತ್ತಿಗೆದಾರ ಸುದರ್ಶನ ಬಜ ಅವರನ್ನು ಗೌರವಿಸಲಾಯಿತು. ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ರಜನಿ ಚಿಕ್ಕಯ್ಯಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯೆ ಝೀನತ್ ಫಿರೋಜ್, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಸುಷ್ಮಾ ಚರಣ್, ಸಚಿನ್, ಹರೀಶ್, ಭರತರಾಜ್, ರವೀಂದ್ರ,…
https://youtu.be/NfloZzMS_Tw ಸಜೀಪಮೂಡ ಈಶ್ವರಮಂಗಲ ಶ್ರೀ ಸದಾಶಿವ ದೇವಸ್ಥಾನದ ಆವರಣದಲ್ಲಿ ವನ ದಿಗ್ವಿಜಯ ಕಾರ್ಯಕ್ರಮ ಬಂಟ್ವಾಳ: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಬಂಟ್ವಾಳ ತಾಲೂಕು ಸಮಿತಿಯ ಆಶ್ರಯದಲ್ಲಿ ಮಾಧವ ಉಳ್ಳಾಲ್ ಸಾರಥ್ಯದ ಗ್ಲೋಬಲ್ ಗ್ರೀನ್ ಫೌಂಢೇಶನ್ ಸಹಕಾರದೊಂದಿಗೆ ಸಜೀಪಮೂಡ ಗ್ರಾಮದ ಈಶ್ವರ ಮಂಗಳ ಶ್ರೀ ಸದಾಶಿವ ದೇವಸ್ಥಾನ ಹಾಗೂ ಅನ್ನಪ್ಪಾಡಿ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ವನ ದಿಗ್ವಿಜಯ ಕಾರ್ಯಕ್ರಮದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಮಂಗಳವಾರ ಜರುಗಿತು.ಸಜೀಪಮಾಗಣೆಯ ತಂತ್ರಿ, ರೈತ ಸಂಘ ಹಸಿರು ಸೇನೆಯ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್ ಅವರು ವನ ದಿಗ್ವಿಜಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಈ ಸದಾಶಿವ ದೇವಸ್ಥಾನದಲ್ಲಿ ಭಕ್ತಾಭಿಮಾನಿಗಳ ಮನೋಲ್ಲಾಸ ಹೆಚ್ಚಿಸಲು ಹಾಗೂ ದೇವಸ್ಥಾನ ಶೋಭೆ ಹೆಚ್ಚಿಸುವ ನಿಟ್ಟಿನಲ್ಲಿ ರೈತ ಸಂಘ ಹಸಿರು ಸೇನೆಯ ವತಿಯಿಂದ ಔಷಧಿಯ ಸಸ್ಯಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ದಿನಗಳಲ್ಲಿ ದ.ಕ. ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ…
ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆ ಬಂಟ್ವಾಳ: ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರದಂದು ಸಾಮೂಹಿಕ ಶ್ರೀ ಆಶ್ಲೇಷ ಬಲಿ ಪೂಜೆ, ಆಶ್ಲೇಷ ಬಲಿ ಹೋಮ, ರಂಗ ಪೂಜೆ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ನೆರವೇರಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ರಾಮಕೃಷ್ಣ ಭಟ್, ಗಣಪತಿ ಭಟ್, ಶಂಕರನಾರಾಯಣ ಭಟ್, ಸುಧಾಕರ ಕೆ.ಟಿ. ಕಿಶನ್ ಶೇನವ, ಪ್ರದೀಪ್ ಶೆಟ್ಟಿ. ಸುಭಾಷ್ ಮೊದಲಾದವರು ಉಪಸ್ಥಿತರಿದ್ದರು. Promotion
ಶಿಕ್ಷಣ,ಸ್ವಾವಲಂಬನೆ,ಸ್ವಾಭಿಮಾನ ಈ ಮೂರನ್ನು ಮಹಿಳೆಯರು ತಮ್ಮ ಬದುಕಿನಲ್ಲಿ ರೂಢಿಸಿಕೊಂಡಾಗ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂಬುದಾಗಿ ಮಂಗಳೂರಿನ ಸ್ವಸ್ತಿಕ್ ಕಾಲೇಜಿನ ಪ್ರಾಂಶುಪಾಲೆ ಡಾ. ಮಾಲಿನಿ ಹೆಬ್ಬಾರ್ ಅವರು ಹೇಳಿದರು. ಪುರುಷರನ್ನು ಪ್ರಶ್ನಿಸಬಹುದೇ ಹೊರತು ಕೌಟುಂಬಿಕ ಸಮಗ್ರತೆಯಲ್ಲಿ ಈರ್ವರ ಅನಿವಾರ್ಯತೆಯನ್ನೂ ಅರ್ಥ ಮಾಡಿಕೊಂಡು ಮುಂದೆ ಸಾಗಬೇಕಾಗುತ್ತದೆ, ಎಂದು ಅವರು ಪ್ರತಿಪಾದಿಸಿದರು. ದ.ಕ ಜಿಲ್ಲಾ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಇದರ ಮಹಿಳಾ ವಿಭಾಗದವರಿಂದ ಬಂಟ್ವಾಳದ ತುಳು ಶಿವಳ್ಳಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಮಹಿಳೆ ಇಲ್ಲದ ಜಗತ್ತನ್ನು ಊಹಿಸಲೇ ಸಾಧ್ಯವಿಲ್ಲ ಎಂದು ಬಿ.ಸಿ.ರೋಡು ಸೋಮಯಾಜಿ ಆಸ್ಪತ್ರೆಯ ವೈದ್ಯೆ ಡಾ.ಶಶಿಕಲಾ ಸೋಮಯಾಜಿ ಅವರು ಅಭಿಪ್ರಾಯಪಟ್ಟರು. ಜಗತ್ತಿನಲ್ಲಿ ಸ್ತ್ರೀಯನ್ನು ಮಾತೃಸ್ವರೂಪದಲ್ಲಿ ಗೌರವಿಸುವ ದೇಶವಿದ್ದರೆ ಅದು ಭಾರತ ಮಾತ್ರ. ವೈದಿಕ ಪರಂಪರೆ ಅಥವಾ ಋಷಿ ಪರಂಪರೆಯಲ್ಲೇ ಇರಬಹುದು ಸ್ತ್ರೀ ಯಾವತ್ತೂ ಪರಿಪೂರ್ಣತೆಗೆ ಸಾಕ್ಷಿಯಾಗಿ ನಿಲ್ಲುತ್ತಾಳೆ, ಆಕೆಯನ್ನು ಹೊರತಾದ ಸಮಾಜವನ್ನು ಕಲ್ಪಿಸುವುದೂ ಅಸಾಧ್ಯ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ…
https://youtu.be/-CZSEoAs138 ಬಂಟ್ವಾಳ: ಮುಂಬರುವ ಚುನಾವಣೆಯ ಉದ್ದೇಶದಿಂದ ಬಿ.ಸಿ.ರೋಡಿನ ಹೊಟೇಲ್ ರಂಗೋಲಿಯಲ್ಲಿ ಬಿಎಲ್‌ಎ ಮತ್ತು ಬಿಎಲ್‌ಓಗಳ ಸಭೆ ಕರೆದು ಏಕಾಏಕಿ ಸಮಯ ಬದಲಾವಣೆ ಮಾಡಿರುವ ಬಗ್ಗೆ ಬಿಎಲ್‌ಓ ಗಳು ಸಭಗೆ ಆಹ್ವಾನಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಮುಂಬರುವ ಚುನಾವಣೆಯ ಉದ್ದೇಶದಿಂದ ಬಿ.ಸಿ.ರೋಡಿನ ಹೊಟೇಲ್ ರಂಗೋಲಿಯಲ್ಲಿ ಸೋಮವಾರ ಸಂಜೆ ಮೂರು ಗಂಟೆಗೆ ಸಭೆ ನಡೆಯಲಿದ್ದು ಎಲ್ಲಾ ಬಿಎಲ್‌ಓಗಳು ಭಾಗವಹಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಅಂಗವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕಿಯರು ಮೂರು ಗಂಟೆಗೆ ಮುಂಚಿತವಾಗಿಯೇ ಸಭಾಂಗಣಕ್ಕೆ ಆಗಮಿಸಿದರು. ಆದರೆ ಇಲ್ಲಿಗೆ ಬಂದ ಬಳಿಕ ಸಭೆಯನ್ನು ನಾಲ್ಕು ಗಂಟೆಗೆ ಮುಂದೂಡಿರುವ ಬಗ್ಗೆ ತಿಳಿಸಿದ್ದು ಬಿಎಲ್‌ಓಗಳನ್ನು ಕೆರಳಿಸಿದೆ. ಸಭಾಂಗಣದ ಮುಂದೆ ಕಾದು ಸುಸ್ತಾಗಿ ತಮ್ಮ ಅಸಮಾಧಾನವನ್ನು ಮಾಧ್ಯಮದ ಮುಂದೆ ತೋಡಿಕೊಂಡ ಬಿಎಲ್‌ಓಗಳು ನಾವು ಮನೆಗೆ ಹೋಗುವ ಸಂದರ್ಬದಲ್ಲಿ ನಮ್ಮನ್ನು ಸಭೆಗೆ ಕರೆಯುತ್ತಾರೆ, ಆದರೆ ಗ್ರಾಮೀಣ ಭಾಗದ ದೂರದೂರುಗಳಿಂದ ನಾವು ಬರುತ್ತೇವೆ, ಸಭೆಯನ್ನು ಇಷ್ಟು ತಡವಾಗಿ ಆರಂಭಿಸಿದರೆ ವಾಪಸ್ಸು ಮನೆಗೆ ಹೋಗಲು ನಮಗೆ ಸಮಸ್ಯೆಯಾಗುತ್ತದೆ. ಯಾಕೆ ಈ…
https://youtu.be/ov5MjhmXUvI ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಕ್ಷಯ ರೋಗಿಗಳಿಗೆ ಆಹಾರ ಧವಸ ಧಾನ್ಯ ವಿತರಣ ಕಾರ್ಯಕ್ರಮ ಬಂಟ್ವಾಳ: ಕೇಂದ್ರ ಸರಕಾರದ ನಿಕ್ಷಯ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಕ್ಷಯ ರೋಗಿಗಳಿಗೆ ಆಹಾರ ಧವಸ ಧಾನ್ಯ ವಿತರಣ ಕಾರ್ಯಕ್ರಮ ಸೋಮವಾರ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು.ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕ್ಷಯ ರೋಗ ನಿವಾರಣೆಗೆ ಔಷಧಿಯಷ್ಟೇ ಪೌಷ್ಟಿಕಾಹಾರ ಸೇವೆನೆಯೂ ಮುಖ್ಯ. ಆದ್ದರಿಂದ ಸೇವಾಂಜಲಿ ಪ್ರತಿಷ್ಠಾನವು ತಾಲೂಕಿನ ಕ್ಷಯ ರೋಗಿಗಳನ್ನು ಗುರುತಿಸಿ ದೊಡ್ಡಮಟ್ಟದಲ್ಲಿ ಆಹಾರ ಧವಸ ಧಾನ್ಯ ವಿತರಿಸುವ ಕಾರ್ಯ ಹಮ್ಮಿಕೊಂಡಿದೆ ಎಂದರು. ಕಣ್ಣಿಗೆ ಕಾಣದ ದೇವರಿಗೆ ಪೂಜೆ, ಖರ್ಚು ಮಾಡುವ ಬದಲು ಸಂಕಷ್ಟದಲ್ಲಿರುವವರಿಗೆ, ನೊಂದವರಿಗೆ ಅಪೇಕ್ಷಿಸಿದನ್ನು ನೀಡುವ ಮೂಲಕ ದೇವರನ್ನು ಕಾಣುವುದು ಶ್ರೇಷ್ಟ ಗುಣ.ಇಂತಹ ಮಹಾನ್ ಕಾರ್ಯವನ್ನು ಸೇವಾಂಜಲಿ ಪ್ರತಿಷ್ಠಾನ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದರು.ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಮಾತನಾಡಿ ಆಶಾಕಾರ್ಯಕರ್ತರು ತಾಯಿಯ ಸ್ಥಾನದಲ್ಲಿ ನಿಂತು…
ಬಂಟ್ವಾಳ : ಬದ್ರಿಯಾ ಜುಮಾ ಮಸೀದಿ ಹಾಗೂ ಬದ್ರಿಯಾ ಯಂಗ್ ಮೆನ್ಸ್ ಇರ್ವತ್ತೂರು ಪದವು ಇದರ ಆಶ್ರಯದಲ್ಲಿ ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮವು ಮಾರ್ಚ್ 11 ರಂದು ಮಗ್ರಿಬ್ ಬಳಿಕ ಇಲ್ಲಿನ ತಾಜುಲ್ ಉಲಮಾ-ಶಂಸುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಮಸೀದಿ ಅಧ್ಯಕ್ಷ ಎಸ್.ಪಿ. ಮುಹಮ್ಮದ್ ರಫೀಕ್ ಅಧ್ಯಕ್ಷತೆ ವಹಿಸಲಿದ್ದು, ಖತೀಬ್ ಉಮರ್ ಮದನಿ ಉದ್ಘಾಟಿಸುವರು. ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ, ಸದಸ್ಯರಾದ ಹಂಝ ಬಸ್ತಿಕೋಡಿ, ಇಬ್ರಾಹಿಂ ಕೈಲಾರ್, ಪ್ರಮುಖರಾದ ರಫೀಕ್ ಮದನಿ, ಸಿದ್ದೀಕ್ ಸಖಾಫಿ, ಹಾಜಿ ಯೂಸುಫ್ ಮೂರ್ಜೆ, ಪಿ ಕೆ ಇದ್ದಿನಬ್ಬ ಇರ್ವತ್ತೂರುಪದವು, ಅಬ್ದುಲ್ ಲತೀಫ್ ಕಲಾಬಾಗಿಲು, ಅಬೂಬಕ್ಕರ್ ಟಿ.ಎಸ್.ಎನ್, ಸಾಗರ್ ಮುಹಮ್ಮದ್ ಮದ್ದಡ್ಕ, ರಹ್ಮತುಲ್ಲಾ ಸಾಹೇಬ್, ಅಬ್ದುಲ್ ರಝಾಕ್ ಮಾವಿನಕಟ್ಟೆ, ಅಬ್ದುಲ್ ರಶೀದ್ ನೇರಳಕಟ್ಟೆ, ಅಬ್ದುಲ್ ನಝೀರ್ ಸಾಹೇಬ್, ಮೂಸಾ ನೈನಾಡ್, ಪಿ.ಎಚ್. ಇಸ್ಮಾಯಿಲ್ ಝಕೀರ್, ಶೇಖ್ ರಹ್ಮತುಲ್ಲಾ ಕಲಾಬಾಗಿಲು, ಮೊಯಿದಿನ್ ಕಟ್ಟದಪಡ್ಪು, ಮುಹಮ್ಮದ್ ರಫೀಕ್, ಮುಹಮ್ಮದ್…
ಬಂಟ್ವಾಳ: ಕೂಟದಲ್ಲಿ ಭಾಗವಹಿಸಿದ ಕೋಣಗಳುಕನೆಹಲಗೆ: 4 ಜೊತೆಅಡ್ಡಹಲಗೆ: 7 ಜೊತೆಹಗ್ಗ ಹಿರಿಯ: 21 ಜೊತೆನೇಗಿಲು ಹಿರಿಯ: 27 ಜೊತೆಹಗ್ಗ ಕಿರಿಯ: 25 ಜೊತೆನೇಗಿಲು ಕಿರಿಯ: 105 ಜೊತೆಒಟ್ಟು ಕೋಣಗಳ ಸಂಖ್ಯೆ: 189 ಜೊತೆಕನೆಹಲಗೆ ವಿಭಾಗದಲ್ಲಿ ಪ್ರಥಮ ಬೇಲಾಡಿ ಬಾವ ಅಶೋಕ್ ಶೆಟ್ಟಿ, ಹಲಗೆ ಮುಟ್ಟಿದವರು ತೆಕ್ಕಟ್ಟೆ ಸುಧೀರ್ ದೇವಾಡಿಗದ್ವಿತೀಯ ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೋಹಲಗೆ ಮುಟ್ಟಿದವರು ಬೈಂದೂರು ಮಹೇಶ್ ಪೂಜಾರಿಅಡ್ಡ ಹಲಗೆಯಲ್ಲಿ ಪ್ರಥಮ ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೋ, ಹಲಗೆ ಮುಟ್ಟಿದವರು ಸಾವ್ಯ ಗಂಗಯ್ಯ ಪೂಜಾರಿ,ದ್ವಿತೀಯ ಮಾನೆಲ್ ಪುರಲ್ದಪ್ಪೆ ಮಣ್ಣ್ ದ ಜೋಕುಲ್ ಜವನೆರ್ ಹಲಗೆ ಮುಟ್ಟಿದವರು ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ನಂದಳಿಕೆ ಶ್ರೀಕಾಂತ್ ಭಟ್ “ಬಿ”, ಓಡಿಸಿದವರು ಬಂಬ್ರಾಣ ಬೈಲು ವಂದಿತ್ ಶೆಟ್ಟಿ, ದ್ವಿತೀಯ ಕೊಳಚ್ಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ “ಬಿ” ಓಡಿಸಿದವರು ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ, ಹಗ್ಗ ಕಿರಿಯ ವಿಭಾಗದಲ್ಲಿ ಪ್ರಥಮ ಕಾವಲು ಕಟ್ಟೆ ಕರಂಬಾರು ಬೆಟ್ಟು ಹರೀಶ್ ದಾಸ್ಓಡಿಸಿದವರು:…








