ಬಂಟ್ವಾಳ: ನಾವೂರು ಗ್ರಾಮದ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದಲ್ಲಿ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಕ್ಷೇತ್ರದ ತಂತ್ರಿಗಳಾದ ಶ್ರೀ ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು ಶನಿವಾರ ಸಂಜೆ ದೇವತಾ ಪ್ರಾರ್ಥನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು ದುರ್ಗಾ ನಮಸ್ಕಾರ ಪೂಜೆ, ಮಹಾಪೂಜೆ, ಉತ್ಸವ ಬಲಿ, ವಸಂತಕಟ್ಟೆ ಪೂಜೆ, ಪ್ರಸಾದ ವಿತರಣೆ ಅನ್ನಸಂರ್ಪಣೆ ಜರುಗಿತು.
ಅಪಾರ ಸಂಖ್ಯೆಯಲ್ಲಿ ಭಕ್ತರು ಈ ಎಲ್ಲಾ ಪೂಜಾ ಕಾರ್ಯಗಳಲ್ಲಿ ಭಾಗಿಯಾಗಿ ದೇವರ ಪ್ರಸಾದ ಸ್ವೀಕರಿಸಿದರು. ಭಾನುವಾರ ಪ್ರಾತಃಕಾಲದಿಂದ ೧೨ ಕಾಯಿ ಗಣಪತಿ ಹೋಮ, ನವಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ದರ್ಶನ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ, ಬಟ್ಟಲು ಕಾಣಿಕೆ ಪ್ರಸಾದ, ಪಿಲಿಚಾಮುಂಡಿ ದೈವಕ್ಕೆ ಬಿಂಬ ಸಮರ್ಪಣೆ, ಪಂಚ ಪರ್ವ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ಹಾಗೂ ಸಂಜೆ ಶ್ರೀ ದುರ್ಗಾಂಬಾ ಭಜನಾ ಮಂದಿರ ಮಂಡಾಡಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಶ್ರೀ ದೇವರಿಗೆ ರಂಗಪೂಜೆ ನಡೆದು ಕ್ಷೇತ್ರದ ಶ್ರೀ ವ್ಯಾಘ್ರಚಾಮುಂಡಿ, ಕಲ್ಲುರ್ಟಿ, ಗುಳಿಗ ದೈವಗಳಿಗೆ ನೇಮೋತ್ಸವ ಜರುಗಿತು.



ಈ ಸಂದರ್ಭ ಪ್ರಮುಖರಾದ ಎಸ್. ಮುರಳೀಧರ ಭಟ್, ರಾಮಚಂದ್ರ ಭಟ್, ಕೃಷ್ಣ ಹೊಳ್ಳ, ಉತ್ಸವ ಸಮಿತಿ ಅಧ್ಯಕ್ಷ ಗಣೇಶ್ ಕುಲಾಲ್ ಉಪಾಧ್ಯಕ್ಷರಾದ ಉಮೇಶ್ ಕೀಲ್ತೋಡಿ, ಜಗದೀಶ್ ಕೊಡಂಗೆ, ರಾಮಣ್ಣ ಪೂಜಾರಿ, ರೋಹಿಣಿ ಕೆಮ್ಮಟೆ, ಜಯಂತಿ ಕಳಮೆ, ಕಾರ್ಯದರ್ಶಿ ಸೀತರಾಮ ಗೌಡ ನೆಕ್ರಾಜೆ, ಜತೆಕಾರ್ಯದರ್ಶಿಗಳಾದ ಸೀತರಾಮ ಗೌಡ ಮಲೆಬಾವು, ಮಧುಸೂದನ್ ಪಕಳಬೆಟ್ಟು, ಚೇತನ್ ನಾವೂರು, ದೀಪಕ್ ಕೆಮ್ಮಟೆ, ಯುವರಾಜ ಸೂರ, ಜಯಲಕ್ಷ್ಮೀ ನಾವೂರು, ಕೋಶಾಧಿಕಾರಿ ಗೋಪಾಲ ಸಪಲ್ಯ, ಪಂಚಾಯತಿ ಅಧ್ಯಕ್ಷ ಉಮೇಶ್ ಕುಲಾಲ್ ನಾವೂರು ಮೊದಲಾದವರು ಭಾಗವಹಿಸಿದ್ದರು.

