Advertisement
ಬಂಟ್ವಾಳ: ತಾಲೂಕಿನ ಕುಡಂಬೆಟ್ಟು ಗ್ರಾಮದ ಉರುಡಾಯಿ ಶ್ರೀ ಮುಖ್ಯ ಪ್ರಾಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು 5 ಲಕ್ಷ ರೂ. ಮೊತ್ತದ ಆರ್ಥಿಕ ಸಹಾಯಧನದ ಡಿ.ಡಿ.ಯನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜೀರ್ಣೊದ್ಧಾರ ಸಮಿತಿ ಅಧ್ಯಕ್ಷ ಅಮ್ಮು ರೈ ಹರ್ಕಾಡಿ, ಪ್ರ.ಕಾರ್ಯದರ್ಶಿ ಅನಂತರಾಮ ನಾಯಕ್, ಕೋಶಾಧಿಕಾರಿ ಜಯರಾಮ ಕುಲಾಲ್, ಪ್ರಮುಖರಾದ ಮಾಣಿಕ್ಯರಾಜ್ ಜೈನ್, ಲೋಕಯ್ಯ ಪೂಜಾರಿ, ರವೀಂದ್ರ ಕುಲಾಲ್, ಶ್ರೀನಾಥ್ ಬೆಂಗಳೂರು ಅವರು ಉಪಸ್ಥಿತರಿದ್ದರು.
Advertisement