Author: admin

ಬಂಟ್ವಾಳ: ಸಮೃದ್ಧಿ ಚಾರಿ ಟೇಬಲ್ ಟ್ರಸ್ಟ್ ಜೋಡು ಮಾರ್ಗ, ಬಂಟ್ವಾಳ ಆಶ್ರಯದಲ್ಲಿ ಮೂಡೂರು ಫ್ರೆಂಡ್ಸ್ ಕಾವಳಕಟ್ಟೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾವಳಮೂಡೂರು ಹಾಗೂ ಯೆನಪೊಯ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ದೇರಳಕಟ್ಟೆ ಸಹಭಾಗಿತ್ವದೊಂದಿಗೆ ಕಾವಳಕಟ್ಟೆ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಸಮುದಾಯ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯ ಬಿ. ಪದ್ಮಶೇಖರ್ ಜೈನ್, ಕಿಸಾನ್ ಘಟಕದ ಅಧ್ಯಕ್ಷ ಸದಾನಂದ ಶೆಟ್ಟಿ, ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ರಮೇಶ ನಾಯಕ್ ರಾಯಿ, ಟ್ರಸ್ಟಿನ ಸದಸ್ಯರಾದ ಇಬ್ರಾಹಿಂ ನವಾಜ್, ಬಿ.ಆರ್. ಅಂಚನ್, ಪ್ರಮುಖರಾದ ಪ್ರಮೋದ್ ಕುಮಾರ್, ವಸಂತ ಶೆಟ್ಟಿ, ಸತೀಶ್ ಪೂಜಾರಿ ಪಡಂತರ ಬೆಟ್ಟು, ದೂಮಪ್ಪ ಪರವ ಮೊದಲಾದವರಿದ್ದರು.ಅರ್ಹ ಫಲಾನುಭವಿಗಳಿಗೆ ಉಚಿತ ಔಷಧಿ ಮತ್ತು ಕನ್ನಡಕ ವಿತರಿಸಲಾಯಿತು. Promotion

Read More

ಬೆಂಗಳೂರು: ಇಲ್ಲಿನ ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕೆನರಾ ಅಸೋಸಿಯೇಷನ್ ಇದರ 13ನೇ ವಾರ್ಷಿಕೋತ್ಸವ ಅಮೃತಮಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.ಕ ಮುಖ್ಯ ಅತಿಥಿ ತುಳು ಲಿಪಿ ತಜ್ಞಸತೀಶ್ ಆಗ್ಪಲ ಮಾತನಾಡಿ ಕಾಲಕ್ರಮೇಣ ವಿನಾಶದ ಅಂಚಿಗೆ ಸರಿಯುತಿರುವ ತುಳು ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ತುಳುವರ ಜವಾಬ್ದಾರಿ ಹಾಗೂ ಪ್ರಾಮುಖ್ಯತೆಯನ್ನು ತಿಳಿಸಿದರು. ತುಳು ಭಾಷೆ ಹಾಗೂ ತುಳುವರ ಸಂಘಟನೆಗಾಗಿ ಕೆನರಾ ಅಸೋಸಿಯೇಷನ್ ಕೊಡುಗೆಯನ್ನು ಅವರು ಶ್ಲಾಘಿಸಿದರು. ಈ ಸಂದರ್ಭ ಅಸೋಸಿಯೇಷನ್ ವತಿಯಿಂದ ಸತೀಶ್ ಆಗ್ಪಲರವರನ್ನು ಸನ್ಮಾನಿಸಲಾಯಿತು.ಶೈಕ್ಷಣಿಕ ಹಾಗೂ ಇತರ ಕ್ಷೇತ್ರದಲ್ಲಿನ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಉಪಾಧ್ಯಕ್ಷ ಶೀನಪ್ಪ ಗೌಡ ನೆರವೇರಿಸಿದರು.ಆಟಿಡೊಂಜಿ ಕೂಟ ಹಾಗೂ ವಾರ್ಷಿಕ ಕ್ರೀಡಾಕೂಟದಲ್ಲಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅಸೋಸಿಯೇಷನಿನ ಸದಸ್ಯರು ಮತ್ತು ಮಕ್ಕಳು ನೀಡಿದ ವಿವಿಧ ರೀತಿಯ ಸಾಂಸ್ಟ್ರಿತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ವಿಶೇಷ ಮೆರಗು ನೀಡಿತು.ಅಸೋಸಿಯೇಷನಿನ ಕಾರ್ಯದರ್ಶಿ ಎಂ.ವಿಜಯ್ ಕುಲಾಲ್ ಸ್ವಾಗತಿಸಿದರು. ಅಧ್ಯಕ್ಷ ಸತೀಶ್ ಸುವರ್ಣ ಸಂಘ ಪ್ರಸ್ತುತ ಸಾಲಿನಲ್ಲಿ ಕೈಕೊಂಡ ಸಾಂಸ್ಕೃತಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳ…

Read More

ಬಂಟ್ವಾಳ: ನವೋದಯ ಮಿತ್ರ ಕಲಾ ವೃಂದ ಹಾಗೂ ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇದರ ೩೬ನೇ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾಗಿ ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಸುರೇಶ್ ಕುಲಾಲ್, ದಾಮೋದರ್ ಬೆರ್ವ, ಗೀತಾ ರವೀಂದ್ರ ನೆತ್ತರಕೆರೆಕಾರ್ಯದರ್ಶಿಯಾಗಿ ದೀಕ್ಷಿತ್ ನೆತ್ತರಕೆರೆ, ಕೋಶಾಧಿಕಾರಿಯಾಗಿ ಶೇಖರ್ ಕೋಡಿ, ನೆತ್ತರ ಕೆರೆ, ಜೊತೆ ಕಾರ್ಯದರ್ಶಿಯಾಗಿ ರಂಜಿತ್ ನೆತ್ತರಕೆರೆ, ದೀಕ್ಷಿತಾ ದಿನೇಶ್, ಕ್ರೀಡಾ ಕಾರ್ಯದರ್ಶಿಯಾಗಿ ಪುನೀತ್ ನೆತ್ತರಕೆರೆ, ಚಾಂದಿನಿ ಸತೀಶ್ ಆಯ್ಕೆಯಾದರು. Promotion

Read More

ದಡ್ಡಲಕಾಡು ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ಬಂಟ್ವಾಳ: ಸರಕಾರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ದಡ್ಡಲಕಾಡು ಕೆನರಾ ರೊಬೇಕೊ ಇವರ ವತಿಯಿಂದ ಆಯ್ದ ೩೦ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸಲಾಯಿತು.. ಕೆನರಾ ರೊಬೆಕೊ ವಲಯ ಮುಖ್ಯಸ್ಥ ಮುರಳೀಧರ ಜಿ ಶೆಣೈ ಹಾಗೂ ಸೀನಿಯರ್ ಕಸ್ಟಮರ್ ಸರ್ವಿಸ್ ರಾಜೇಶ್ ಕೊಯಿಲ ಇವರು ಉಚಿತ ಸೈಕಲನ್ನು ವಿತರಣೆ ಮಾಡಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇನ್ನೂ ಹೆಚ್ಚು ಸೈಕಲನ್ನು ನೀಡುವುದಾಗಿ ಭರವಸೆ ನೀಡಿ, ಶಾಲೆಯ ಶೈಕ್ಷಣಿಕ ಗುಣಮಟ್ಟ ಹಾಗೂ ಶ್ರೀ ದುರ್ಗಾಚಾರಿಟೇಬಲ್ ಟ್ರಸ್ಟ್ ನ ಸೇವೆಯನ್ನು ಶ್ಲಾಘಿಸಿದರು. ಪ್ರೌಢ ಶಾಲಾ ವಿಭಾಗದ ಎಸ್.ಡಿ.ಎಂ.ಸಿ ಅಧ್ಯಕ್ಷ ಪುರುಷೋತ್ತಮ ಅಂಚನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ರಮಾನಂದ, ಪ್ರಾಥಮಿಕ ಶಾಲಾ ವಿಭಾಗದ ಎಸ್.ಡಿ.ಎಂ.ಸಿ ಅಧ್ಯಕ್ಷ ಶೇಖರ್ ಅಂಚನ್, ಟ್ರಸ್ಟ್ ಸದಸ್ಯರಾದ ರಾಮಚಂದ್ರ ಕರೆಂಕಿ, ಪ್ರಾಥಮಿಕ ವಿಭಾಗದ ಮುಖ್ಯಸ್ಥ ಮೌರಿಸ್ ಡಿಸೋಜಾ ಉಪಸ್ಥಿತರಿದ್ದರು. Promotion

Read More

ಬಂಟ್ವಾಳ: ಯುವಕ ವೃಂದ ಮಂಚಿ ಕಟ್ಟೆ ಇದರ ಬೆಳ್ಳಿಹಬ್ಬ ಸಂಭ್ರಮದ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಯುವಕ ವೃಂದದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಭಾನುವಾರ ವಿಜ್ರಂಭಣೆಯಿಂದ ನಡೆಯಿತು. ಮಂಚಿಕಟ್ಟೆಯಲ್ಲಿ ನಿರ್ಮಾಣಗೊಂಡ ಸಂಘದ ನೂತನ ಕಟ್ಟಡವನ್ನು ಡಾ. ಎಂ. ಗೋಪಾಲ ಆಚಾರ್ ಮಂಚಿ ಹಾಗೂ ಮಿತ್ತಾಳ ರಘುನಾಥ ಆಚಾರ್ ಉದ್ಘಾಟಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಕ್ ಅವರು ಭೇಟಿ ನೀಡಿ ಶುಭ ಹಾರೈಸಿದರು. ಮೋಂತಿಮಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೋಕ್ತೇಸರ ಸತೀಶ್ಚಂದ್ರ ಎಸ್.ಆರ್. ಮತ್ತಿತರ ಗಣ್ಯರು ದೀಪ ಪ್ರಜ್ವಲಿಸಿದರು.ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸತೀಶ್ಚಂದ್ರ ಎಸ್.ಆರ್. ಮಾತನಾಡಿ ನಮ್ಮ ದೇಶದಲ್ಲಿ ಶೇ.೫೦ ಕ್ಕಿಂತ ಹೆಚ್ಚು ಯುವಕರಿದ್ದಾರೆ. ಇಂದು ದೇಶ ಸಾಧನೆಯ ಹಾದಿಯಲ್ಲಿ ಮುಂದುವರಿಯಲು ಯುವಕರು ಕಾರಣ ಎಂದರು. ಪ್ರಕೃತಿಯನ್ನು ಆರಾಧಿಸುವ ಮರ ಗಿಡಗಳಲ್ಲೂ ಆಧ್ಯಾತ್ಮಿಕತೆಯನ್ನು ಕಾಣುವ ಜಗತ್ತಿನ ಏಕೈಕ ದೇಶ ಭಾರತ ಎಂದು ತಿಳಿಸಿದ ಅವರು ಯುವಕರು ಸಾಮಾಜಿಕ ಜವಾಬ್ದಾರಿ ಯಿಂದ ಜೀವಿಸಿದಾಗ ಸಮಾಜದ ಅಭಿವೃದ್ದಿಯಾಗುತ್ತದೆ. ಎಂದು…

Read More

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ, ಮುಂದಿನ ಅವಧಿಯಲ್ಲೂ ಜನತೆಯ ಪ್ರತಿಯೊಂದು ಕೆಲಸಗಳನ್ನು ಮಾಡಲು ಶಕ್ತವಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.ಅವರು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಬಿಜೆಪಿ ಬಂಟ್ವಾಳ ಮಂಡಲದ ಪೇಜ್ ಪ್ರಮುಖರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ನಾಲ್ಕುವರೆ ವರ್ಷಗಳಲ್ಲಿ 2 ಸಾವಿರ ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಮಾಡಿದ್ದು ಎಲ್ಲವೂ ಪಾರದರ್ಶಕವಾಗಿದೆ ಎಂದ ಅವರು ದಿನಕ್ಕೆ ಒಂದರಂತೆ 1504 ರಸ್ತೆಗಳನ್ನು ಮಾಡಲಾಗಿದೆ. ವಿದ್ಯೆ ಮತ್ತು ಆರೋಗ್ಯ ರಕ್ಷಣೆ ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದ್ದು, ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕ್ಷೇತ್ರದಲ್ಲಿ ಒಟ್ಟು ೪೮ ಕೋಟಿಗೂ ಮಿಕ್ಕಿದ ಹಣ ವಿವಿಧ ಯೋಜನೆ ಯಲ್ಲಿ ಕೃಷಿಕರ ಖಾತೆಗೆ ಬಂದಿದೆ. ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾ ನಿಧಿ ಫಲಾನುಭವಿಗಳಾಗಿದ್ದಾರೆ. ಪ್ರತಿಯೊಬ್ಬ ಬಿಪಿಎಲ್ ಕಾರ್ಡ್ ದಾರ ಮಹಿಳೆಯರ ಬ್ಯಾಂಕ್ ಖಾತೆಗೆ ಎಪ್ರಿಲ್ ನಿಂದ ತಲಾ ಒಂದು ಸಾವಿರದಂತೆ ಹಣ ನೀಡುವ ಘೋಷಣೆಯನ್ನು…

Read More

ಬಂಟ್ವಾಳ: ಬಿ.ಸಿ. ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್‌ಗಳ ಜಂಟಿ ಆಶ್ರಯದಲ್ಲಿ ನಡೆದ ಬಂಟ್ವಾಳ ತಾಲೂಕು ದ್ವಿತೀಯ ಗಮಕ ಸಮ್ಮೇಳನವನ್ನು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರುಉದ್ಘಾಟಿಸಿದರು.ಅವರು ಮಾತನಾಡಿ ಸರಕಾರದ ಪ್ರೊತ್ಸಾಹ ಗಮಕ ಕಲೆಗೂ ಬೇಕಾಗಿದೆ. ಚಿಕ್ಕ ಮಕ್ಕಳಲ್ಲಿ ಗಮಕ ಅಭ್ಯಾಸ ಮಾಡಿಸಬೇಕು. ಗಮಕ ಸಮ್ಮೆಳನಗಳಲ್ಲಿ ಯುವಕರ ಭಾಗವಹಿಸುವಿಕೆ ಅಗತ್ಯ ಎಂದರು. ಕರ್ನಾಟಕ ರಾಜ್ಯ ಗಮಕ ಕಲಾ ಪರಿಷತ್ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಇಂದಿನ ಕಾರ್ಯಕ್ರಮ ಮನ ಮುಟ್ಟಿದೆ. ಹೃದಯ ತಟ್ಟಿದೆ. ಗಮಕ ಇತರ ಭಾಷೆಗಳಿಗೂ ಮುಟ್ಟ ಬೇಕು. ಅದಕ್ಕಾಗಿ ಯೋಜನೆ ರೂಪಿಸಬೇಕಾಗಿದೆ ಎಂದರು. ಬಂಟ್ವಾಳ ತಾಲೂಕು ದ್ವಿತೀಯ ಗಮಕ ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ವಾರಿಜ ನಿರ್ಬೈಲು ಅವರು ಮಾತನಾಡಿ ಗಮಕ ಕಲೆಯ ಸೇವೆ ಸಲ್ಲಿಸುವ ಮೂಲಕ ಅದರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ. ಗಮಕವು ಸಾಹಿತ್ಯ ಸಂಗೀತ ಸಾಂಸ್ಕೃತಿಕ ಕಲಾ ಪ್ರಕಾರ ಎಂದರು.ಗಮಕ ಕಲಾ ಪರಿಷತ್ತು…

Read More

ಬಂಟ್ವಾಳ: ನನ್ನ ಅಧಿಕಾರವಧಿಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಶಾಂತಿ ನೆಲೆಸಿತ್ತು, ಆದರೆ ಧರ್ಮಾಧರಿತ ಹತ್ಯೆ ನಡೆಸಿ ಅಪಪ್ರಚಾರ ಮಾಡಲಾಗಿತ್ತು. ಕೊಲೆ ಆರೊಪಿಗಳು ಯಾರೂ ಕಾಂಗ್ರೆಸ್ ಕಾರ್ಯಕರ್ತರಲ್ಲ, ಇಲ್ಲಿನ ಅಶಾಂತಿಗೆ ಮತೀಯವಾದ ಪಕ್ಷಗಳೇ ಕಾರಣ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.ಬಂಟ್ವಾಳ ಪ್ರಜಾಧ್ವನಿ ರಥಯಾತ್ರೆಯ ಪ್ರಯುಕ್ತ ಬಡಕಬೈಲು ಜಂಕ್ಷನ್ ನಲ್ಲಿ ಶುಕ್ರವಾರ ಸಂಜೆ ನಡೆದ ಮೊದಲ ದಿನದ ಸಮಾರೋಪ ಸಭೆಯಲ್ಲಿ ಅವರು ಮಾತನಾಡಿದರು.ರಾಜಕೀಯ ಲಾಭಕ್ಕಾಗಿ ನೀಚ ಕೆಲಸ ಮಾಡುವವರಿದ್ದಾರೆ, ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5 ಸಾವಿರ ಕೋಟಿಯ ಕೆಲಸ ಮಾಡಿದ್ದಾನೆ, ಅದರ ಲೆಕ್ಕ ಕೇಳುತ್ತಾರೆ, ಮೊದಲು 2 ಸಾವಿರ ಕೋಟಿಯ ಲೆಕ್ಕವನ್ನು ಕೊಡಲಿ ಎಂದು ಸವಾಲು ಹಾಕಿದರು. ಸುಳ್ಳು ಆರೋಪ ಮಾಡಿದವರಿಗೆ, ಅಪಪ್ರಚಾರ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು, ನಾನು ತಪ್ಪು ಮಾಡಿಲ್ಲ, ಯಾವುದೇ ಆಮಿಷಾ ಆಕಾಂಕ್ಷೆಗಳಿಗೆ ಬಲಿಯಾಗದೆ ಪ್ರಾಮಾಣಿಕತೆಯಿಂದ ಬದುಕುತ್ತುದ್ದೇನ ಎಂದರು.ವಿಧಾನಪರಿಷತ್ತ್ ಸದಸ್ಯ ಮಂಜುನಾಥ ಭಂಡಾರಿ ಪ್ರಧಾನ ಭಾಷಣ ಮಾಡಿ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಈ ಮೂರು ಕೊಡುಗೆಯನ್ನು ಕಾಂಗ್ರೇಸ್…

Read More

ಬಂಟ್ವಾಳ: ಇಲ್ಲಿನ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ಲೀನಾ ಬ್ರಿಟ್ಟೋ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಮುಖ್ಯಾಧಿಕಾರಿಯಾಗಿ ಕರ್ತವ್ಯದ್ದಲ್ಲಿದ್ದ ಎಂ. ಆರ್. ಸ್ವಾಮಿ ಅವರು ಪುತ್ತೂರು ನಗರ ಸಭೆ ರೆವೆನ್ಯೂ ಆಫೀಸರ್ ಆಗಿ ವರ್ಗಾವಣೆಗೊಂಡಿದ್ದು ತೆರವಾದ ಸ್ಥಾನಕ್ಕೆ ಲೀನಾ ಬ್ರಿಟ್ಟೋ ಆಗಮಿಸಿದ್ದಾರೆ.ಈ ಹಿಂದೆ ಎರಡು ಬಾರಿ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಅನುಭವ ಹೊಂದಿರುವ ಇವರ ಅವಧಿಯಲ್ಲಿ ವಿವಾದದ ಕೇಂದ್ರ ಬಿಂದುವಾಗಿ ಹಲವು ವರ್ಷಗಳಿಂದ ನಿಷ್ಪ್ರಯೋಜಕವಾಗಿದ್ದ ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿತ್ತು. ತರಕಾರಿ ತ್ಯಾಜ್ಯ ಸಹಿತ ಹಸಿ ಕಸಗಳನ್ನು ಬಂಟ್ವಾಳ ಪುರಸಭೆಯ ಹಿಂಭಾಗದಲ್ಲಿ ಗೊಬ್ಬರವನ್ನಾಗಿ ಪರಿವರ್ತಿಸುವ ಘಟಕವನ್ನು, ಎರೆಹುಳ ಗೊಬ್ಬರ ಘಟಕವನ್ನು ಆರಂಭಿಸಿ ತ್ಯಾಜ್ಯ ಸಮಸ್ಯೆಗೆ ಮುಕ್ತಿ ನೀಡಿದ್ದರು. ಕಸ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಹಿನ್ನಲೆಯಲ್ಲಿ ಸಿಸಿ ಕ್ಯಾಮರ ಅಳವಡಿಸುವ ಬಗ್ಗೆ ದಿಟ್ಟ ನಿರ್ಧಾರ ಕೈಗೊಂಡು ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಅದೇ ಸಂದರ್ಭದಲ್ಲಿ ಅವರು ಮಂಗಳೂರು ಮಹಾನಗರ ಪಾಲಿಕೆಗೆ ವರ್ಗಾವಣೆಗೊಂಡಿದ್ದರು. ಇದೀಗ ಪದೋನ್ನತಿಗೊಂಡು…

Read More

ಬಂಟ್ವಾಳ: ಯುವಕ ವೃಂದ ಮಂಚಿ ಕಟ್ಟೆ ಇದರ ಬೆಳ್ಳಿಹಬ್ಬ ಸಂಭ್ರಮದ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಯುವಕ ವೃಂದದ ನೂತನ ಕಟ್ಟಡ ಉದ್ಘಾಟನ ಸಮಾರಂಭ ಮಾ. 12ರಂದು ನಡೆಯಲಿದೆ.ಬೆಳಿಗ್ಗೆ 6ಗಂಟೆಗೆ ನೂತನ ಕಟ್ಟಡದಲ್ಲಿ ಗಣಹೋಮ ನಡೆಯಲಿದೆ. ಬಳಿಕ ಮಂಚಿಕಟ್ಟೆಯ ಅಶ್ವಥ ಕಟ್ಟೆಯಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಮಿತ್ತಾಳ ಶ್ರೀ ರಾಘವ ಆಚಾರ್ ದೀಪಪ್ರಜ್ವಲಿಸುವರು, ಬೆಳಿಗ್ಗೆ 10 ರಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಪ್ರಾರಂಭಗೊಳ್ಳಲಿದೆ, 12.30ಕ್ಕೆ ಭಜನಾ ಮಂಗಲೋತ್ಸವ, ಮಹಾಮಂಗಳರಾತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೬ರಿಂದ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. Space for paid Promotion ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಎಂ. ಗೋಪಾಲ ಆಚಾರ್ ಮಂಚಿ ಹಾಗೂ ಮಿತ್ತಾಳ ರಘುನಾಥ ಆಚಾರ್ ಮಂಚಿ, ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಮೋಂತಿಮಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೋಕ್ತೇಸರ…

Read More