ಬಂಟ್ವಾಳ: ಅಲ್ಲಿಪಾದೆ ಸಂತ ಅಂತೋನಿಯವರ ದೇವಾಲಯದಲ್ಲಿ ನವೀಕೃತ ಚರ್ಚ್ ಹಾಗೂ ನೂತನ ಗುರುನಿವಾಸದ ಉದ್ಘಾಟನೆ ಪ್ರಯುಕ್ತ ಪೂರ್ವಭಾವಿಯಾಗಿ ಭಾನುವಾರ ಸಂಜೆ ಮೊಡಂಕಾಪು ಚರ್ಚ್ ವಠಾರದಿಂದ ಸರ್ವಧರ್ಮೀಯರ ಹೊರೆಕಾಣಿಕೆ ಮೆರವಣಿಗೆ ವಿಜ್ರಂಭಣೆಯಿಂದ ನಡೆಯಿತು.

ಅಗ್ರಾರ್ ಚರ್ಚ್ ಧರ್ಮಗುರು ವಂ.ಫಾ.ಪೀಟರ್ ಡಿಸೋಜ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂಟ್ವಾಳ ವಲಯ ಪ್ರಧಾನ ಧರ್ಮಗುರು ಅತಿ ವಂದನೀಯ ಫಾಧರ್ ವಲೇರಿಯನ್ ಡಿಸೋಜ ಮುಖ್ಯ ಅತಿಥಿಗಳಾಗಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭ ಸೂರಿಕುಮೇರು ಚರ್ಚ್ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರ, ಲೊರೆಟ್ಟೊ ಚರ್ಚ್ ಧರ್ಮಗುರು ವಂ.ಫಾ.ಫ್ರಾನ್ಸಿಸ್ ಕ್ರಾಸ್ತಾ, ಅಮ್ಟೂರ್ ಚರ್ಚ್ ಧರ್ಮಗುರು ವಂ.ಫಾ.ಆಲ್ವಿನ್ ಡಿಕುನ್ಹ, ಪಿಡಬ್ಲ್ಯುಪಿಎನ್ ನಿರ್ದೇಶಕ ವಂ.ಫಾ.ರೂಪೇಶ್ ತಾವ್ರೊ, ಸಹಾಯಕ ಧರ್ಮಗುರು ವಂದನೀಯ ಫಾಧರ್ ರಾಹುಲ್ ರಾಹುಲ್ ಡೆಕ್ಸ್ಟರ್ ಡಿಸೋಜ, ಅಲ್ಲಿಪಾದೆ ಧರ್ಮಗುರು ವಂ.ಫಾ. ಫ್ರೆಡ್ರಿಕ್ ಮೊಂತೇರೊ, ಸುಪೀರಿಯರ್ ಕ್ಲೂನಿ ಕಾನ್ವೆಂಟ್ ವಂದನೀಯ ಭಗಿನಿ ನರ್ಸಿಜಾ ಸಿಕ್ವೇರಾ, ಮಾಜಿ ಸಚಿವ ಬಿ ರಮಾನಾಥ ರೈ, ಪ್ರಮುಖರಾದ ಪಿಯೂಸ್.ಎಲ್ ರೊಡ್ರಿಗಸ್, ಬೇಬಿ ಕುಂದರ್, ನಾವೂರು ಗ್ರಾಪಂ ಅಧ್ಯಕ್ಷ ಉಮೇಶ್ ಕುಲಾಲ್, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ನವೀನ್ ಮೊರಾಸ್, ಪ್ರಮುಖರಾದ ಕಿರಣ್ ನೊರೊನ್ಹ, ಲಾರೆನ್ಸ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

ಹಣ್ಣು ಹಂಪಲು, ತರಕಾರಿ, ಅಕ್ಕಿ ಬೇಳೆಗಳನ್ನು ಹೊತ್ತ ವಾಹನಗಳೊಂದಿಗೆ ಬಿ.ಸಿ. ರೋಡು ರಾಷ್ಟ್ರೀಯ ಹೆದ್ದಾರಿ ಮೂಲಕ ಚರ್ಚ್ನ ಭಕ್ತರು ಸಾಗಿದರು. ಇದೇ ಸಂದರ್ಭ ಸಂತ ಅಂತೋನಿಯವರ ಕುರಿತ ವಿವರಗಳನ್ನು ಹೇಳುವ ಟ್ಯಾಬ್ಲೊ ಗಮನ ಸೆಳೆಯಿತು. ನಾವೂರು ಗ್ರಾಮದ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನ ಬಳಿ ದೇವಸ್ಥಾನದ ವತಿಯಿಂದ ಹೊರೆಕಾಣಿಕೆಯಲ್ಲಿ ಸಾಗುವ ಭಕ್ತರಿಗೆ ಮಜ್ಜಿಗೆ, ಪಾನೀಯದ ವ್ಯವಸ್ಥೆ ಕಲ್ಪಿಸಲಾಯಿತು.


