ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಮುಡಿಪು ಶಾಖೆಯು ಸಂಘದ ಸ್ವಂತ ಕಟ್ಟಡ ಮುಡಿಪು ಜಂಕ್ಷನ್ ನಲ್ಲಿರುವ ಶಂಕರಿ ಕಾಂಪ್ಲೆಕ್ಸ್ನ ಒಂದನೇ ಮಹಡಿಗೆ ಸ್ಥಳಾಂತರಗೊಂಡು ಉದ್ಘಾಟನೆ ಹಾಗೂ 2022-23 ನೇ ಸಾಲಿನ ಡಾ.ಅಮ್ಮೆಂಬಳ ಬಾಳಪ್ಪ ಪ್ರಶಸ್ತಿ ಪ್ರಧಾನ ಸಮಾರಂಭ ಭಾನುವಾರ ನಡೆಯಿತು.
ಶ್ರೀದಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ,
ಆಶೀರ್ವಚನ ನೀಡುತ್ತಾ, ಸಹಕಾರಿ ಕ್ಷೇತ್ರದಲ್ಲಿ ಸಮಾಜಸೇವಾ ಸಹಕಾರಿ ಬ್ಯಾಂಕ್ ನ ಕಾರ್ಯವ್ಯಾಪ್ತಿ ವಿಶಾಲವಾಗಿದ್ದು, ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಮುಡಿಪುವಿನಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡ ಬ್ಯಾಂಕ್ ಇನ್ನಷ್ಟು ಬೆಳವಣಿಗೆಯೊಂದಿಗೆ ಮುನ್ನಡೆಯಲಿ ಎಂದರು.
ಶಾಸಕರಾದ ಯು.ಟಿ.ಖಾದರ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಇದೇ ವೇಳೆ ದೈವದ ಮೂಲ್ಯಣ್ಣ ಬಾಲಕೃಷ್ಣ ಸಾಲ್ಯಾನ್ ಅವರಿಗೆ 2022-23 ನೇ ಸಾಲಿನ ಡಾ.ಅಮ್ಮೆಂಬಳ ಬಾಳಪ್ಪ ಪ್ರಶಸ್ತಿ ಪ್ರಧಾನಗೈದು ಶುಭ ಹಾರೈಸಿದರು.
ದ.ಕ.ಬಿಜೆಪಿ ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಶುಭ ಕೋರಿದರು.
ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ಚಾಳ ಇದರ ಅಧ್ಯಕ್ಷರಾದ ಸುರೇಶ್ ಕುಲಾಲ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಬ್ಯಾಂಕಿನ ಏಳಿಗೆಗೆ ಎಲ್ಲರ ಸಹಕಾರವನ್ನು ಯಾಚಿಸಿದರು. ಮಂಗಳೂರು ಕುಲಾಲ್ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಅವರು ಕಂಪ್ಯೂಟರನ್ನು ಹಾಗೂ ಅಮ್ಮೆಂಬಳ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಟಿ.ಜಿ.ರಾಜಾರಾಮ ಭಟ್ ಅವರು ಸೇಫ್ ಲಾಕರ್ ಉದ್ಘಾಟಿಸಿ ಶುಭಕೋರಿದರು.
ಕುರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ನಾಯ್ಕ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ, ಮುಡಿಪು ಕುಲಾಲ ಸಂಘದ ಅಧ್ಯಕ್ಷರಾದ ಪುಂಡರೀಕಾಕ್ಷ, ಕುರ್ನಾಡು ಗ್ರಾಮ ಪಂಚಾಯತ್ ಸದಸ್ಯ ಗೋಪಾಲ್ ಮಿತ್ತಕೋಡಿ, ಮುಡಿಪು ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರಾದ ಪುರಂದರ, ಸಾಂಬಾರತೋಟ ಜುಮ್ಮಾ ಮಸೀದಿ ಅಧ್ಯಕ್ಷರಾದ ಇಬ್ರಾಹಿಂ ಹಾಜಿ, ಶಂಕರಿ ಕಾಂಪ್ಲೆಕ್ಸ್ ನ ಮಾಲಕರಾದ ರಮೇಶ್ ಎಂ,ಅವರು ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ಉತ್ತಮ ಸಾಲಮರುಪಾತಿಗಾರರನ್ನು ಹಾಗೂ ಠೇವಣಾತಿದಾರರನ್ನು ಗೌರವಿಸಲಾಯಿತು.
ಸಂಘದ ಸಹಾಯಕ ವ್ಯವಸ್ಥಾಪಕ ಮೋಹನ್ ಅವರು ಇವರ ವಿವರವನ್ನು ವಾಚಿಸಿದರು.
ಸಂಘದ ಕಲ್ಲಡ್ಕ ಶಾಖೆಯ ವ್ಯವಸ್ಥಾಪಕಿ ಕಮಲ ಅವರು ಸ್ವಸಹಾಯ ಸಂಘಗಳ ಗುರುತಿಸುವಿಕೆಯ ವಿವರ ಹಾಗೂ ನಿರ್ದೇಶಕ ಸತೀಶ್ ಪಲ್ಲಮಜಲು ಅವರು ಸನ್ಮಾನ ಪತ್ರ ವಾಚಿಸಿದರು.
ಸಂಘದ ಪ್ರಧಾನ ವ್ಯವಸ್ಥಾಪಕರಾದ ಬೋಜ ಮೂಲ್ಯ, ಪ್ರಸ್ತಾವನೆಗೈದರು. ಶಾಖಾ ವ್ಯವಸ್ಥಾಪಕರಾದ ನಳಿನಿ ಮತ್ತು ಬ್ಯಾಂಕ್ ನ ನಿರ್ದೇಶಕರಾದ ವಿಶ್ವನಾಥ ಕೆ.ಬಿ.,ಅರುಣ್ ಕುಮಾರ್,ರಮೇಶ್ ಸಾಲಿಯಾನ್,ನಾಗೇಶ್ ಬಿ.,ಎಂ.ವಾಮನಟೈಲರ್,ಸುರೇಶ್ ಎನ್.,ವಿ.ವಿಜಯಕುಮಾರ್,ಜನಾರ್ಧನ ಬೊಂಡಾಲ,ಜಗನ್ನೀವಾಸ ಗೌಡ, ಎಂ.ಕೆ.ಗಣೇಶ್ ಸಮಗಾರ,ವಿಜಯಲಕ್ಷ್ಮೀ, ಜಯಂತಿ,ವಿದ್ಯಾ, ಉಪಸ್ಥಿತರಿದ್ದರು.ಸಹಕಾರಿ ಸಂಘದ ಉಪಾಧ್ಯಕ್ಷರಾದ ಪದ್ಮನಾಭ ವಿ ಸ್ವಾಗತಿಸಿದರು.ನಿರ್ದೇಶಕ ಬಿ.ರಮೇಶ್ ಸಾಲ್ಯಾನ್ ವಂದಿಸಿದರು.ಶಿವರಾಮ ಮರ್ತಾಜೆ ಹಾಗೂ ವೆಂಕಟೇಶ್ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು.