ಬಂಟ್ವಾಳ: ಹಲವು ವೈಶಿಷ್ಠ್ಯತೆಯೊಂದಿಗೆ ಸುಮಾರು ಐದು ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಸಂತ ಅಂತೋನಿಯವರ ನವೀಕೃತ ಚರ್ಚ್ ಕಟ್ಟಡ ಹಾಗೂ ನೂತನ ಗುರು ನಿವಾಸದ ಉದ್ಘಾಟನಾ ಸಮಾರಂಭ ಸೋಮವಾರ ಸಂಭ್ರಮದಿಂದ ನಡೆಯಿತು.

ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯ ದ ಧರ್ಮಾಧ್ಯಕ್ಷರಾದ ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ನೂತನ ಚರ್ಚ್ ಕಟ್ಟಡ ಹಾಗೂ ನೂತನ ಗುರು ನಿವಾಸವನ್ನು ಉದ್ಘಾಟಿಸಿ ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಆಶೀರ್ವಚನಗೈದು ಜನರ ಸಹಕಾರ, ತ್ಯಾಗದ ಪ್ರತೀಕವಾಗಿ ಚರ್ಚ್ನ ಧರ್ಮಗುರುಗಳಾದ ಫೆಡ್ರಿಕ್ ಮೊಂತೆರೋ ಅವರ ಕನಸಿ ನೂತನ ಚರ್ಚ್ ಕಟ್ಟಡ ಸುಂದರವಾಗಿ ನಿರ್ಮಾಣಗೊಂಡಿರುವುದು ಅತೀವ ಸಂತಸ ತಂದಿದೆ. ಇದಕ್ಕೆ ಸಹಕರಿಸಿದವರೆಲ್ಲರು ಅಭಿನಂದನಾರ್ಹರು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ರಮಾನಾಥ ರೈ ಅವರು ಮಾತನಾಡಿ, ಸುಂದರ ಚರ್ಚ್ ರೂಪುಗೊಳ್ಳುವಲ್ಲಿ ಫಾ.ಪೆಡ್ರಿಕ್ ಅವರ ಕಾರ್ಯ ಅಭಿನಂದನೀಯವಾಗಿದೆ. ಅಲ್ಲಿಪಾದೆ ಭಾಗದ ಅಭಿವೃದ್ಧಿಯಲ್ಲಿ ಚರ್ಚ್ನ ಪಾತ್ರವು ಮಹತ್ತರವಾಗಿದೆ. ತಾನು ಶಾಸಕನಾಗಿದ್ದ ಕಾಲದಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಶಾಸಕರ ನಿಧಿಯನ್ನು ಬಳಸಿ ಕೊಂಡು ಹಲವಾರು ಚರ್ಚ್ಗಳನ್ನು ಅಭಿವೃದ್ದಿಗೊಳಿಸಿರುವುದನ್ನು ಸ್ಮರಿಸಿದರು.
ಕ್ಯಾಲಿಕಟ್ ಧರ್ಮ ಪ್ರಾಂತ್ಯದ ಶ್ರೇಷ್ಠ ಧರ್ಮಗುರು ವಂ.ಫಾ.ಮೊನ್ಸಿಂಜೋರ್ ಡಾ.ಜೆನ್ಸನ್ ಪುತ್ತನ್ ವಿತ್ತಿಲ್, ಬಂಟ್ವಾಳ ವಲಯ ಪ್ರಧಾನ ಧರ್ಮಗುರು ಫಾ.ವಲೇರಿಯನ್ ಡಿಸೋಜ, ಕ್ಲೂನಿ ಸಿಸ್ಟರ್ಸ್ ಆಪ್ ಸೈಂಟ್ ಜೋಸೆಫ್ ಪ್ರೊವಿನ್ಶಿಯಲ್ ಸುಪಿರೀಯರ್ ವಂ.ಧರ್ಮ ಭಗಿನಿ ಅನ್ನೀಸ್ ಕಲ್ಲರಕಲ್, ಕ್ಲೂನಿ ಕಾನ್ವೆಂಟ್ ಅಲ್ಲಿಪಾದೆ ಸುಪಿರೀಯರ್ ವಂ.ಧರ್ಮಭಗಿನಿ ನರ್ಸಿಜಾ ಸಿಕ್ವೇರಾ, ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಕಿರಣ್ ನೊರೊನ್ಹಾ, ಸಂಯೋಜಕ ಲಾರೆನ್ಸ್ ಡಿಸೋಜ, ಆರ್ಥಿಕ ಸಮಿತಿ ಸದಸ್ಯ ಲಿಯೋ ಫೆರ್ನಾಡೀಸ್ ಉಪಸ್ಥಿತರಿದ್ದರು.
ಇದೇ ವೇಳೆ “ಆಚರ್ಯೆಂ” ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಹಾಗೆಯೇ ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದ ದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಅಲ್ಲಿಪಾದೆ ಚರ್ಚ್ನ ಧರ್ಮಗುರು ಪೆಡ್ರಿಕ್ ಮೊಂತೇರೊ ಪ್ರಸ್ತಾವಿಸಿ, ಸ್ವಾಗತಿಸಿದರು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ನವೀನ್ ಮೋರಾಸ್ ವಂದಿಸಿದರು
ಫಾ. ರೂಪೇಶ್ ತಾವ್ರೋ ಹಾಗೂ ಮಧುವೆನಸ್ ಮೋರಸ್ ಕಾರ್ಯಕ್ರಮ ನಿರೂಪಿಸಿದರು.
