ಬಂಟ್ವಾಳ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ 10 ನೇ ಕಾವಳಮುಡೂರು – ಎನ್. ಸಿ.ರೋಡು ಶಾಖೆ ಕಾವಳಮೂಡೂರು ಗ್ರಾಮದ ಎನ್.ಸಿ. ರೋಡಿನಲ್ಲಿರುವ ತೌಹೀದ್ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡಿತು.
ನೂತನ ಶಾಖೆಯನ್ನು ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಉದ್ಘಾಟಿಸಿದರು. ಅವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಜನರಿಗೆ ಆರ್ಥಿಕ ವ್ಯವಹಾರವನ್ನು ಒದಗಿಸುವ ಕಾರ್ಯವನ್ನು ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಮಾಡಿಕೊಂಡು ಬರುತ್ತಿದೆ. ಇಂದು ಈ ಸಹಕಾರಿ ಸಂಘ ಕೇವಲ ಮೂರ್ತೆದಾರರಿಗೆ ಮಾತ್ರ ಸೀಮಿತವಾಗಿ ಉಳಿಯದೇ ಸಮಾಜದ ಎಲ್ಲಾ ವರ್ಗದ ಜನರು ಆರ್ಥಿಕ ವ್ಯವಹಾರ ಮಾಡುವ ನಿಟ್ಟಿನಲ್ಲಿ ಮುಂದುವರಿಯುತ್ತಿದೆ ಎಂದರು. ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಂಘದ ಆಡಳಿತ ಮಂಡಳಿ ಮಹಿಳೆಯರಿಗೆ ಉದ್ಯೋಗ ಒದಗಿಸಿ ಕೊಡುತ್ತಿರುವುದು ವಿಶೇಷ. ಗ್ರಾಹಕರೇ ಸಂಘದ ಶಕ್ತಿಯಾಗಿದ್ದು ಗ್ರಾಹಕರ ಕಷ್ಟದ ಸಂದರ್ಭದಲ್ಲಿ ಆರ್ಥಿಕ ಚೈತನ್ಯವನ್ನು ನೀಡುವ ಕಾರ್ಯವನ್ನು ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಮಾಡಿಕೊಂಡು ಬಂದಿದೆ ಎಂದರು.
ಜಿ.ಪಂ ಮಾಜಿ ಸದಸ್ಯ ಎಂ. ತುಂಗಪ್ಪ ಬಂಗೇರ ದೀಪ ಪ್ರಜ್ವಲಿಸಿ ಮಾತನಾಡಿ ಹಳ್ಳಿ ಹಳ್ಳಿಯಲ್ಲಿ ಸಹಕಾರಿ ಸಂಘದ ಶಾಖೆಯನ್ನು ಆರಂಭಿಸುವ ಮೂಲಕ ಬಡಜನರ ಋಣಸಂದಾಯ ಮಾಡುವ ಕಾರ್ಯ ಆಗಿದೆ. ಸಾಲ ಪಡೆದು ಸರಿಯಾಗಿ ಮರು ಪಾವತಿಸುವ ಜವಬ್ದಾರಿ ಪ್ರತಿಯೊಬ್ಬ ಸಾಲಗರಿನಿಗೂ ಇದೆ. ನಮ್ಮ ಸಹಕಾರಿ ಸಂಘ ಎನ್ನುವ ಮನೋಭಾವನೆಯಿಂದ ಸೇವೆ ನೀಡಿದಾಗ ಸಹಕಾರಿ ಸಂಘಗಳು ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಕುಚ್ಚುಗುಡ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಮೂರ್ತೆದಾರರ ಶ್ರೇಯೋಭಿವೃದ್ಧಿಯ ಉದ್ದೇಶದೊಂದಿಗೆ ಆರಂಭಗೊಂಡ ಸಹಕಾರಿ ಸಂಘ ಇಂದು ದ.ಕ. ಜಿಲ್ಲೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಕೋವಿಡ್ ಸಮಯದಲ್ಲೂ ಸದಸ್ಯರಿಗೆ ಶೇ. 25 ಡಿವಿಡೆಂಡ್ ನೀಡಿದ ಹೆಗ್ಗಳಿಕೆ ಈ ಬ್ಯಾಂಕಿಗಿದೆ ಎಂದರು. ಗುರುದೇವ ಸೇವಾ ಸಹಕಾರಿ ಸಂಘದ ವಿಶೇಷಾಧಿಕಾರಿ ಮೋನಪ್ಪ ಪೂಜಾರಿ ಭದ್ರತಾ ಕೊಠಡಿ ಉದ್ಘಾಟಿಸಿದರು. ಈ ಸಂದರ್ಭ ಉಳಿತಾಯ ಖಾತೆ ಹಾಗೂ ಠೇವಣಿ ಪತ್ರ ಬಿಡುಗಡೆಗೊಳಿಸಲಾಯಿತು. ಮುಖ್ಯ ಅತಿಥಿಯಾಗಿ ಜಿ.ಪಂ. ಮಾಜಿ ಸದಸ್ಯ ಪದ್ಮಶೇಖರ ಜೈನ್, ನಿವೃತ್ತ ಉಪ ತಹಶೀಲ್ದಾರ್ ಲೋಕನಾಥ್ ಪೂಜಾರಿ, ಕಾವಳ ಮೂಡೂರು ಗ್ರಾ.ಪಂ. ಪಂಚಾಯತಿ ಸದಸ್ಯ ಶೇಷಗಿರಿ ಪೂಜಾರಿ, ವಿಶ್ವನಾಥ ಪೂಜಾರಿ, ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನ ಪಾಲು, ಸಂಘದ ನಿರ್ದೇಶಕರಾದ ರಮೇಶ್ ಅನ್ನಪ್ಪಾಡಿ, ಅರುಣ್ ಕುಮಾರ್ ಉಪಸ್ಥಿತರಿದ್ದರು.
ನಿರ್ದೇಶಕರಾದ ವಿಠಲ ಬೆಳ್ಚಾಡ, ಅಶೋಕ್ ಪೂಜಾರಿ ಕೋಮಾಲಿ, ಗಿರೀಶ್ ಕುಮಾರ್ ಪೆರ್ವ, ಜಯಶಂಕರ್ ಕಾನ್ಸಲೆ, ಕೆ. ಸುಜಾತ ಮೋಹನದಾಸ, ವಾಣಿವಸಂತ, ಆಶಿಶ್ ಪೂಜಾರಿ,
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಮತಾ ಜಿ. ಶಾಖಾ ವ್ಯವಸ್ಥಾಪಕಿ ಅಶ್ವಿತಾ ಉಪಸ್ಥಿತರಿದ್ದರು. ನಿರ್ದೇಶಕ ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.