ಬಂಟ್ವಾಳ: ಊರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಶಂಭೂರಿನಿಂದ ದಾವಣಗೆರೆಗೆ ಹೋದ ವ್ಯಕ್ತಿ ಊರಿಗೆ ತೆರಳದೆ ನಾಪತ್ತೆಯಾದ ಬಗ್ಗೆ ವರದಿಯಾಗಿದೆ.
ದಾವಣಗೆರೆ ಮೂಲದ ಜಗಳೂರು ಹುಚ್ಚಂಗಿಪುರ ನಿವಾಸಿ ಕೂಲಿ ಕಾರ್ಮಿಕ ಯಲ್ಲಪ್ಪ (31) ನಾಪತ್ತೆಯಾದ ವ್ಯಕ್ತಿ.
ಶಂಭೂರು ಗ್ರಾಮದ ಅಡೆಪಿಲ ಎಂಬಲ್ಲಿ ತೋಟದ ಕೆಲಸ ಮಾಡುತ್ತಿದ್ದ ಇವರು ಮನೆಯವರ ನೆನಪಾಗಿ ಊರಿಗೆ ಹೋಗಿ ಬರುತ್ತೇನೆ ಎಂದು ಬಿ.ಸಿ.ರೋಡಿನಿಂದ ಬಸ್ ನಲ್ಲಿ ತೆರಳಿದವರು ದಾವಣಗೆರೆಗೆ ಹೋಗದೆ, ವಾಪಸು ಬಾರದೆ ನಾಪತ್ತೆಯಾದ ಬಗ್ಗೆ ಸಹೋದರ ತಿಮ್ಮೇಶ್ ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
Advertisement
Advertisement