Author: admin

ರೋಟರಿ ಕ್ಲಬ್ ಬಂಟ್ವಾಳದಿಂದ ವಿವಿಧ ಶಾಶ್ವತ ಯೋಜನೆಗಳ ಉದ್ಘಾಟನೆ ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳದ ವತಿಯಿಂದ ನಿರ್ಮಾಣಗೊಂಡ ಎರಡು ಶಾಶ್ವತ ಯೋಜನೆಗಳು ಹಾಗೂ ಒಂದು ಬಸ್ಸು ತಂಗುದಾಣದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನಡೆಯಿತು.ನರಿಕೊಂಬು ಗ್ರಾಮದ ಪಂಚಾಯತಿ ಕಚೇರಿ ಬಳಿ ನಿರ್ಮಾಣಗೊಂಡ ಎಸ್ ಎಸ್ ಕಾರಂತ್ ರೋಟರಿ ಬಸ್ಸು ನಿಲ್ದಾಣ, ಪಾಣೆಮಂಗಳೂರಿನ ಶ್ರೀ ಶಾರಾದಾ ಪ್ರೌಢಶಾಲೆಯಲ್ಲಿ ನಿರ್ಮಾಣಗೊಂಡ ವಿಜ್ಞಾನ ಪ್ರಯೋಗಾಲಯ ಹಾಗೂ ಪೆರ್ನೆ ಶ್ರೀ ರಾಮಚಂದ್ರ ವಿದ್ಯಾಲಯದಲ್ಲಿ ನಿರ್ಮಾಣಗೊಂಡ ಜ್ಞಾನ ಸೌರಭ ಗ್ರಂಥಾಲಯವನ್ನು ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಉದ್ಘಾಟಿಸಿದರು. Advertisement ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮ ಜೀವನ ಇನ್ನೊಬ್ಬರಿಗಾಗಿ ಮುಡಿಪಾಗಿಟ್ಟಾಗ ಅದು ಸಾರ್ಥಕವಾಗುತುದೆ. ಪ್ರಕೃತಿ ಇಂದು ಎಲ್ಲವನ್ನು ಬೇರೆಯವರಿಗಾಗಿ ನೀಡುತ್ತದೆ. ಅದಕ್ಕೆ ಅದು ನಮಗೆ ಪೂಜನೀಯವಾಗಿದೆ. ಸಂಪತ್ತು ನಮ್ಮಲ್ಲಿ ಇರುವುದು ಮುಖ್ಯವಲ್ಲ, ಸಂಪತ್ತಿನ ಅರಿವು ಮುಖ್ಯ. ಬದುಕಿಗಾಗಿ ಸಂಪತ್ತು ಇರಬೇಕೆ ಹೊರತು ಸಂಪತ್ತಿಗಾಗಿ ಬದುಕಿರಬಾರದು. ಸಮಾಜಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿದವರ ನೆನೆಪು ಸದಾ ಸ್ಮರಣೀಯವಾಗಿರುತ್ತದೆ.…

Read More

ಮಂಗಳೂರು: ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಆಡಳಿತದಲ್ಲಿರುವ ಇತಿಹಾಸ ಪ್ರಸಿದ್ಧ ಕುಲಾಲ ಸಮುದಾಯದ ಕುಲದೇವರಾದ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನವು ಶಿಲಾಮಯವಾಗಿ ರೂ. ಹತ್ತು ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದ್ದು, ಮೇ 14ರಿಂದ 25ವರೆಗೆ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವವು ಬಹಳ ವಿಜೃಂಭನಣೆಯಿಂದ ಜರಗಲಿದೆ ಎಂದು ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಮಯೂರ್ ಉಳ್ಳಾಲ್ ತಿಳಿಸಿದರು. ಅವರು ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಮೇ 14ರಿಂದ 25ವರೆಗೆ ಜರಗಲಿರುವ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ ಬಗ್ಗೆ ದೇವಸ್ಥಾನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ವಿಷ್ಣುಸ್ವರೂಪಿ ಶ್ರೀ ವೀರನಾರಾಯಣ ದೇವರ ಸಾನಿಧ್ಯವು ದಕ್ಷಿಣ ಭಾರತದಲ್ಲಿಯೇ ಅತ್ಯಂತ ವಿರಳವಾಗಿರುವ ದೇವಸ್ಥಾನ. ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಮಂಗಳೂರು ಇದರ ಆಡಳಿತ ಸಮಿತಿ, ಸೇವಾ ಟ್ರಸ್ಟ್, ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಜೊತೆಯಾಗಿ ಶ್ರೀ ದೇವಸ್ಥಾನದ ಜೀರ್ಣೋದ್ದಾರದಲ್ಲಿ ಸಕ್ರೀಯವಾಗಿ…

Read More

ಬಂಟ್ವಾಳ: ಇಲ್ಲಿನ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಶೇ.80.27 ಮತದಾನವಾಗಿದೆ. 2,28,377 ಮತದಾರರ ಪೈಕಿ, 183326 ಮಂದಿ ಮತಚಲಾಯಿಸಿದ್ದಾರೆ. 116,144 ಮಹಿಳೆಯರ ಪೈಕಿ 93679 ಮಂದಿ ಮತ ಚಲಾಯಿಸಿದರೆ, 112229 ಪುರುಷರ ಪೈಕಿ 89646 ಮಂದಿ ಮತ ಚಲಾಯಿಸಿದ್ದಾರೆ. Advertisement Advertisement

Read More

ಬಂಟ್ವಾಳ: ವಿಧಾನಸಭಾ ಚುನಾವಣೆಯ ಮತದಾನ ಆರಂಭಗೊಂಡಿದ್ದು ಬಂಟ್ಚಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ ಆರಂಭಗೊಂಡಿದೆ. ಬೆಳಗ್ಗಿನಿಂದಲೇ ಜನರು ಮತಗಟ್ಟೆಗೆ ಆಗಮಿಸಿ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು.ಮಾಜಿ ಶಾಸಕ ರಾಜೇಶ್ ನಾಯ್ಕ್ ಎಡಪದವಿನ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಮಾಜಿ ಸಚಿವ ಬಿ.ರಮಾನಾಥ ರೈ ತೊಡಂಬಿಲ ಸೆಕ್ರೆಡ್ ಹಾರ್ಟ್ ಅನುದಾನಿತ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸದರು. ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಎಸ್ ವಿ ಎಸ್ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಇದೇ ಮತಗಟ್ಟೆಯಲ್ಲಿ ಕಿಯೋನಿಕ್ಸ್ ನಿಕಟಪೂರ್ವ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ ಮತಚಲಾಯಿಸಿದರು.

Read More

ಬಂಟ್ವಾಳ: ವಿಧಾನ ಸಭಾ ಚುನಾವಣೆಗೆ ಬಂಟ್ವಾಳ ತಾಲೂಕು ಸನ್ನದ್ಧಗೊಂಡಿದ್ದು ತಾಲೂಕಾಡಳಿತ ಸಕಲ ಸಿದ್ದತೆಗಳನ್ನು ನಡೆಸಿದೆ. ಶಾಂತಿಯುತ ಮತದಾನ ನಡೆಸುವ ದೃಷ್ಟಿಯಿಂದ ಚುನಾವಣಾ ಆಯೋಗ ಎಲ್ಲಾ ಮತಗಟ್ಟೆಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ರಾತ್ರಿ ಹಗಲ್ಲೆನ್ನದೆ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮೊಡಂಕಾಪಿನ ಇನ್ಫೆಂಟ್ ಜೀಸಸ್ ಶಾಲೆಯಿಂದ ಚುನಾವಣಾ ಸಿಬ್ಬಂದಿಗಳನ್ನು ಆಯಾ ಮತಗಟ್ಟೆ ಕೇಂದ್ರಗಳಿಗೆ ಮಂಗಳವಾರ ಬೆಳಿಗ್ಗೆ ಕಳುಹಿಸಿ ಕೊಡಲಾಗಿದ್ದು ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಿಬ್ಬಂದಿ ನಿಯೋಜನೆ:ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ 249 ಮತಗಟ್ಟೆಗಳಿದ್ದು, ಪ್ರತೀ ಮತಗಟ್ಟೆಗೆ 4 ಮತಗಟ್ಟೆ ಅಧಿಕಾರಿಗಳು, 1 ಗ್ರೂಪ್ ಡಿ, 1 ಪೊಲೀಸ್ ಹಾಗೂ 1200 ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳಿಗೆ 1 ಹೆಚ್ಚುವರಿ ಅಧಿಕಾರಿಗಳನ್ನು ನೇಮಕಾತಿ ಮಾಡಲಾಗಿದೆ. 25 ಸೆಕ್ಟರ್ ಅಧಿಕಾರಿಗಳು ಮಸ್ಟರಿಂಗ್ ಕಾರ್ಯವನ್ನು ನಡೆಸಿಕೊಟ್ಟರು. ಗ್ರೂಪ್ ಡಿ ಮತ್ತು ಪೊಲೀಸ್ ಸಿಬ್ಬಂದಿಗಳನ್ನೂ ಒಳಗೊಂಡಂತೆ ಸುಮಾರು 1572 ಮಂದಿ ಚುನಾವಣಾ ಕರ್ತವ್ಯಕ್ಕಾಗಿ 25 ಬಸ್ ಗಳು, 26 ಮ್ಯಾಕ್ಸಿ ಕ್ಯಾಬ್, 22…

Read More

ಗುಣಶ್ರೀ ವಿದ್ಯಾಲಯದ ಲಹರಿಗೆ 609 ಅಂಕ ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯ ದಲ್ಲಿ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಲಹರಿ ಎಂ.ರಾಯಿ ಇವರು ಒಟ್ಟು 625ರಲ್ಲಿ 609 ಅಂಕ ಗಳಿಸುವ ಮೂಲಕ ಶೇ. 97.44% ಫಲಿತಾಂಶ ದಾಖಲಿಸಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಈಕೆ ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಮತ್ತು ಶಿಕ್ಷಕಿ ರಮಾ ಮೋಹನ್ ಇವರ ಪುತ್ರಿ. ಗುಣಶ್ರೀ ವಿದ್ಯಾಲಯಕ್ಕೆ ಕೀರ್ತಿ ತಂದ ಇವರ ಸಾಧನೆಗೆ ಶಾಲಾ ಮುಖ್ಯಶಿಕ್ಷಕ ಗಿಲ್ಬರ್ಟ್ ಡಿಸೋಜ ಮತ್ತು ಆಡಳಿತ ಸಮಿತಿ ಅಧ್ಯಕ್ಷ , ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ. Advertisement Advertisement

Read More

ಕೊಡ್ಮಾಣ್ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಭಿಕ್ಷಾಗೆ 612 ಅಂಕ ಬಂಟ್ವಾಳ: ಕೊಡ್ಮಾಣ್ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಭಿಕ್ಷಾ 612 (ಶೇ.97.92)ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾಳೆ. ಈಕೆ ಕೊಡ್ಮಾಣ್ ಕಾಪಿಕಾಡಿನ ಪುರುಷೋತ್ತಮ ಬಂಗೇರ ಹಾಗೂ ಲಕ್ಷ್ಮೀ ದಂಪತಿಯ ಪುತ್ರಿ Advertisement Advertisement

Read More

https://youtu.be/YUe_X23Gj48 ಬಂಟ್ವಾಳ: ಇಲ್ಲಿನ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ. ರಮಾನಾಥ ರೈಯವರ ಚುನಾವಣಾ ಪ್ರಚಾರದ ಭಾಗವಾಗಿ ಮೆಗಾ ರೋಡ್ ಶೋ ಸೋಮವಾರ ಸಂಜೆ ಬಿ.ಸಿ.ರೋಡಿನಲ್ಲಿ ನಡೆಯಿತು.ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿಯಿಂದ ಆರಂಭಗೊಂಡ ಮೆರವಣಿಗೆ ಬಿ.ಸಿ.ರೋಡಿನ ಮುಖ್ಯ ರಸ್ತೆಯಲ್ಲಿ ಸಾಗಿ ಕೈಕಂಬದ ಪೊಳಲಿ ದ್ವಾರದ ಬಳಿ ಸಮಾಪನ ಗೊಂಡಿತು. ಪಕ್ಷದ ಅಭ್ಯರ್ಥಿ ಬಿ. ರಮನಾಥ ರೈ ತೆರೆದ ವಾಹನದಲ್ಲಿ ಸಾಗಿ ಮತಯಾಚನೆ ಮಾಡಿದರು. ಸಾವಿರಾರು ಸಂಕ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ರಮನಾಥ ರೈ ಅಭಿಮಾನಿಗಳು ಹಾಗೂ ಹಿತೈಷಿಗಳು ರೋಡ್‌ಶೋನಲ್ಲಿ ಹೆಜ್ಜೆಹಾಕಿದರು. ಬಳಿಕ ಕೈಕಂಬದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬಿ. ರಮಾನಾಥ ರೈ ಮಾತನಾಡಿಜನರು ನೀಡಿದ ಪ್ರೀತಿ ನನಗೆ ಶಕ್ತಿ. ಎಲ್ಲಾ ಜಾತಿ ಧರ್ಮವನ್ನು ಸಮಾನವಾಗಿ ನೋಡಿ ಕೊಂಡು ರಾಜಕೀಯ ಮಾಡಿದ ಹೆಮ್ಮೆ ನನಗಿದೆ ಎಂದರು. ಅನೇಕ ಅಭಿವೃದ್ಧಿ ಕೆಲಸಗಳು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಆಗಿದೆ. ಎಷ್ಟೇ ಕೆಲಸ ಮಾಡಿದರೂ ಅಪಪ್ರಚಾರದ ಮೂಲಕ ಕಳೆದ ಬಾರಿ ಸೋಲಿಸಲಾಗಿದೆ.…

Read More

ರೈ ಗೆಲುವಿಗಾಗಿ ಕಾಂಗ್ರೆಸ್‌ಗೆ ಮತ ನೀಡಿ: ಹೊನ್ನಪ್ಪ ಕುಂದರ್ ಬಂಟ್ವಾಳ: ಇಲ್ಲಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ರಮನಾಥ ರೈ ಅವರನ್ನು ಗೆಲ್ಲಿಸುವಂತೆ ದ.ಕ. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಠ ಜಾತಿ ಘಟಕದ ಮಾಜಿ ಸಂಚಾಲಕ ಹೊನ್ನಪ್ಪ ಕುಂದರ್ ಆಗ್ರಹಿಸಿದರು. Advertisement ಅವರು ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ರಮಾನಾಥ ರೈ ಅವರು ತನ್ನ ಅಧಿಕಾರವಧಿಯಲ್ಲಿ ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ೩ ಕೋಟಿಗೂ ಮಿಕ್ಕಿದ ಅಂಬೇಡ್ಕರ್ ಭವನವನ್ನು ನಿರ್ಮಿಸಿರುವುದು ಅವರಿಗೆ ದುರ್ಬಲ ವರ್ಗದ ಜನರ ಮೇಲಿರುವ ಅಪಾರ ಪ್ರೀತಿಗೆ ಸಾಕ್ಷಿಯಾಗಿದೆ. ಪ.ಜಾ. ಮತ್ತು ಮಂಗಡಕ್ಕೆ ಡಿಸಿ ಮನ್ನಾ ಜಮೀನು ಹಂಚಬೇಕೆಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಒತ್ತಾಯ ಮಾಡಲಾಗಿದೆ. ಸತ್ಯ ಸಾರಮಾನಿ ಮೂಲ ಕ್ಷೇತ್ರದ ಬಗ್ಗೆಯೂ ರೈಯವರು ಮುಂಚೂಣಿ ನಾಯಕತ್ವ ವಹಿಸಿ ಪ್ರಣಾಳಿಕೆಯಲ್ಲಿ ಈ ಬಗ್ಗೆ ಉಲ್ಲೇಖವಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.ಬಂಟ್ವಾಳದ ನಿಕಟಪೂರ್ವ ಶಾಸಕರು ತನ್ನ ೫ ವರ್ಷದ ಆಡಳಿತದಲ್ಲಿ ೩ ತಿಂಗಳಿಗೊಮ್ಮೆ ನಡೆಯುವ ಎಸ್‌ಸಿ ಎಸ್ ಟಿಯವರ ಅಭಿವೃದ್ದಿ ಸಭೆಗೆ ಒಂದು ಸಲವೂ…

Read More

120 ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೆ: ವಿಶ್ವಾಸ ವ್ಯಕ್ತಪಡಿಸಿದ ಕೆ.ಹರಿಕೃಷ್ಣ ಬಂಟ್ವಾಳ ಬಂಟ್ಚಾಳ: ಅಧಿಕಾರ ಪಡೆಯುವುದೊಂದೆ ಬಿಜೆಪಿ ತಂತ್ರಗಾರಿಕೆ ಅಲ್ಲ. ಗುಲಾಮಗಿರಿಯಂತಹ ವಿಷ ಬೀಜ ತೆಗೆದು ದೇಶವನ್ನು ಸ್ವಾವಲಂಬಿ, ವಿಶ್ವಗುರು ಮಾಡುವ ಅಜೆಂಡ ಬಿಜೆಪಿಯಲ್ಲಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ ಹೇಳಿದರು.ಕ್ರಿಮಿನಲ್ ದಂದೆಯ ಅಜೆಂಡ ಬಿಜೆಪಿಯಲ್ಲಿಲ್ಲ ಎಂದ ಅವರು ರಾಜ್ಯದಲ್ಲಿ ಜನತೆ ಮೋದಿ ಅಮಿತ್ ಷಾ ಅವರ ಮಾತಿಗೆ ಬೆಲೆ ನೀಡುತ್ತಾರೆ, ಬಿಜೆಪಿ 120 ಸ್ಥಾನವನ್ನು ಗೆದ್ದು ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ದೇಶ ವಿರೋಧಿ ಶಕ್ತಿಗಳು ಕಾಂಗ್ರೆಸ್ ಜೊತೆ ಕೆಲಸ ಮಾಡುತ್ತಿದೆ. ಪ್ರತ್ಯೇಕವಾದಕ್ಕೆ ಕುಮ್ಮಕ್ಕು ನೀಡುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್ ಉಚಿತ ಕೊಡುಗೆಗಳ ಘೊಷಣೆ ಮಾಡುವುದರಲ್ಲಿ ಮೊದಲು, ಕೊಡುವುದರಲ್ಲಿ ಕೊನೆ ಎಂದು ಛೇಡಿಇಸದರು. Advertisement ಕರ್ನಾಟಕ ದಲ್ಲಿ ಐದು ಕಾಂಗ್ರೆಸ್ ಕೋಟೆ ಇದೆ. ಸಿದ್ದರಾಮಯ್ಯ ಟಿಪ್ಪುವಿನ ಕಲ್ಲಿನಲ್ಲಿ ಡಿಕೆಶಿ ಭ್ರಷ್ಠಾಷಾರದ ಕಲ್ಲಿನಲ್ಲಿ, ಮಲ್ಲಿಕಾರ್ಜುನ ಕರ್ಗೆ ಪ್ರಧಾನಿಯನ್ನು ನಿಂದಿಸಿ ಕೋಟೆ ಕಟ್ಟಿದ್ದಾರೆ. ಮೋದಿ ಕರ್ನಾಟಕಕ್ಕೆ…

Read More