Author: admin

ಬಂಟ್ವಾಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘ ಚಾಲಕ, ಸಾಮಾಜಿಕ, ಧಾರ್ಮಿಕ,ಸಹಕಾರಿ ನೇತಾರ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ( 61)ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.ಸದಾ ನಗುಮುಖ, ಗಂಭೀರ ವ್ಯಕ್ತಿತ್ವ,ನೇರ ನಡೆ ನುಡಿಯವರಾಗಿದ್ದ ಕೆಲ ಸಮಯಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು,ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಮಧ್ಯಾಹ್ನ 12 ಗಂಟೆಯ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. Advertisement Advertisement ರಾ.ಸ್ವ.ಸೇ.ಸಂಘದಲ್ಲಿ ಮಾತ್ರವಲ್ಲದೆ ಭಾರತೀಯ ಜನತಾ ಪಕ್ಷದಲ್ಲೂ ಗುರುತಿಸಿಕೊಂಡಿದ್ದ ಅವರು ಒಂದುಬಾರಿ ಪುದು ಜಿ.ಪಂ.ಚುನಾವಣೆಗೆ ಸ್ಪರ್ಧಿಸಿ ಸೋಲನ್ನನುಭವಿಸಿದ ಬಳಿಕ ರಾಜಕಾರಣದಿಂದ ದೂರ ಇದ್ದು,ರಾ.ಸ್ವ.ಸೇ. ಸಂಘದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.ಮೇರಮಜಲು ಗ್ರಾ.ಪಂ.ಅಧ್ಯಕ್ಷರಾಗಿ, ಫರಂಗೀಪೇಟೆ ವ್ಯ.ಸೇ.ಸ.ಸಂಘದ ಅಧ್ಯಕ್ಷರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ಕೊಡ್ಮಾಣ್ ಶ್ರೀಶಾರದ ಪೂಜಾ ಸೇವಾ ಸಮಿತಿಯ ಗೌರವಾಧ್ಯಕ್ಷರಾಗಿ,ಕೊಡ್ಮಾಣ್ ಪ್ರೌಢಶಾಲಾ ಎಸ್ ಡಿಎಂಸಿ ಸದಸ್ಯರಾಗಿ ಹಾಗೂ ವಿವಿಧ ಧಾರ್ಮಿಕ ಕೇಂದ್ರಗಳ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.ಈ ಹಿಂದೆ ವಿಟ್ಲ ವಿಧಾನಸಭಾ ಕ್ಷೇತ್ರವಿದ್ದಾಗ ಬಿಜೆಪಿ ವಿಟ್ಲ ಕ್ಷೇತ್ರದ ಪ್ರಧಾನಕಾರ್ಯದರ್ಶಿಯಾಗಿದ್ದರು. ಸ್ಥಳೀಯವಾಗಿ ಯುವಕರ…

Read More

ಉರುಡಾಯಿ ಶ್ರೀ ಮುಖ್ಯಪ್ರಾಣ ಸ್ವಾಮಿ ದೇವಸ್ಥಾನ : ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ಬಂಟ್ವಾಳ: ಸುಮಾರು 1.5ಕೋ.ರೂ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಬಂಟ್ವಾಳ ತಾ. ಕುಡಂಬೆಟ್ಟು ಗ್ರಾಮದ ಉರುಡಾಯಿ ಶ್ರೀ ಮುಖ್ಯಪ್ರಾಣ ಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಮೇ 20 ಶನಿವಾರ ರಂದು ಚಾಲನೆ ದೊರಕಿತು.ಆ ಪ್ರಯುಕ್ತ ಶನಿವಾರ ರಾತ್ರಿ ನಡೆದ ಧಾರ್ಮಿಕ ಸಭೆಯನ್ನು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಉದ್ಘಾಟಿಸಿ ಆಶೀರ್ವಚನ ನೀಡಿದರು. ಬಂದರೆ ಹೋಗದ ಜ್ಞಾನ ಮತ್ತು ಹೋದರೆ ಬಾರದ ಮಾನ ಈ ಎರಡನ್ನು ಜತನದಿಂದ ಕಾಯ್ದಾಗ ಬದುಕು ಹಸನಾಗುವುದು. ಪ್ರಾಣದೇವರ ಉಪಾಸನೆಯಿಂದ ಜ್ಞಾನ ವೃದ್ಧಿಯಾಗುವುದು ಎಂದು ಹೇಳಿದರು. Advertisement ತ್ಯಾಗ, ಸೇವೆಗಳಿಗೆ ಪ್ರತೀಕ ಹನುಮ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣದ ಹೊಸ್ತಿಲಲ್ಲಿ ಮುಖ್ಯಪ್ರಾಣನ ದೇಗುಲವೂ ಪುನರ್ ನಿರ್ಮಾಣಗೊಂಡಿರುವುದು ರಾಷ್ಟ್ರ ಅಭಿವೃದ್ಧಿಯ ಸಂಕೇತ ಎಂದರು.ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮತ್ತೆ ಶಾಸಕನನ್ನಾಗಿ ಆಯ್ಕೆ ಮಾಡಿದ…

Read More

ಬಂಟ್ವಾಳ: ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಬಂಟ್ವಾಳದ ಕೆಳಗಿನಮಂಡಾಡಿ ಎಂಬಲ್ಲಿ ಶನಿವಾರ ತಡರಾತ್ರಿ ನಡೆದಿದ್ದು, ಈ ಸಂದರ್ಭ, ತಲವಾರು ಏಟಿಗೆ ಕೈ ತುಂಡಾಗಿ ನೆಲಕ್ಕೆ ಬಿದ್ದಿದೆ.ವೈಯಕ್ತಿಕ ದ್ವೇಷದಿಂದ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಆರೋಪಿ ಸಂತೋಷ್ ಗಾಗಿ ಬಂಟ್ವಾಳ ನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಗಾಯಾಳು ಶಿವರಾಜ್ ಕುಲಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೈ ಕಳೆದುಕೊಂಡಿದ್ದಾರೆ. Advertisement ವೈಯಕ್ತಿಕ ದ್ವೇಷದಿಂದ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಆರೋಪಿ ಎನ್ನಲಾದ ಸಂತೋಷ್ ಗಾಗಿ ಬಂಟ್ವಾಳ ನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಗಾಯಾಳು ಶಿವರಾಜ್ ಕುಲಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೈ ಕಳೆದುಕೊಂಡಿದ್ದಾರೆ. ಆರೋಪಿ ನಿನ್ನೆ ಮಧ್ಯರಾತ್ರಿ ಶಿವರಾಜ್ ಅವರಿಗೆ ಕರೆ ಮಾಡಿ ಅರ್ಬಿಗುಡ್ಡೆಯ ಅಂಗಡಿಯೊಂದರ ಸಮೀಪ ಬರಹೇಳಿದ್ದು, ಬಳಿಕ ಹಳೆ ವಿಚಾರವನ್ನು ಕೆದಕಿ ಮಾತಿನ ಚಕಮಕಿ ನಡೆಸಿದ್ದಾನೆ. ಈ ಸಂದರ್ಭ ಸಣ್ಣ ತಲವಾರಿನಿಂದ ಕೊಲೆಯತ್ನ ನಡೆಸಿದ ಸಂದರ್ಭ ಕೈ ಅಡ್ಡ ಹಿಡಿದ ಪರಿಣಾಮ, ಶಿವರಾಜ್ ಅವರ ಕೈ ತುಂಡಾಗಿ ನೆಲಕ್ಕೆ ಬಿದ್ದಿದೆ.…

Read More

ಬಂಟ್ವಾಳ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಭಾರತ್ಮಿಷನ್ ನಗರ ೨.೦ ಯೋಜನೆಯಡಿ ಸ್ಥಳೀಯ ಮಟ್ಟದಲ್ಲಿ ಪರಿಣಾಮ ಬೀರುವ ಅಭಿಯಾನವನ್ನು ಆರಂಭಿಸಿದ್ದು, ನನ್ನ ಜೀವನ ನನ್ನ ಸ್ವಚ್ಛನಗರ ಯೋಜನೆ ಕಾರ್ಯಕ್ರಮಕ್ಕೆ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಶನಿವಾರ ಚಾಲನೆ ನೀಡಲಾಯಿತು.ಮಂಗಳೂರು ನಗರ ಕೋಶದ ಯೋಜನಾ ನಿರ್ದೇಶಕ ಅಬಿದ್ ಗದ್ಯಾಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನವೀಕರಿಸಿ ಮರುಬಳಸಬಹುದಾದ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ಮತ್ತು ಸುಸ್ಥಿರ ಜೀವನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ರಕ್ಷಣೆ ಮಾಡುವಂಥ ಉದ್ದೇಶದಿಂದ ನನ್ನ ಜೀವನ ನನ್ನ ಸ್ವಚ್ಚ ನಗರ ಯೋಜನೆಯ ಕಾರ್ಯಕ್ರಮದಡಿ ಕಡಿಮೆಗೊಳಿಸುವುದು, ಮರುಬಳಕೆ ಮತ್ತು ಪುನರ್ಬಳಕೆ ಕೇಂದ್ರಗಳನ್ನು ಬಂಟ್ವಾಳ ಪುರಸಭಾ ವ್ಯಾಪ್ತಿಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರ ಅಥವಾ ಗುರುತಿಸಿರುವ ಎಂ.ಆರ್.ಎಫ್. ಗಳಲ್ಲಿ ಹಾಗೂ ನಗರದ ಪ್ರಮುಖ ಸ್ಥಳಗಳಲ್ಲಿ ವಸ್ತು ಮರುಪಡೆಯುವ ಸೌಲಭ್ಯ ಕೇಂದ್ರಗಳನ್ನು ರೆಡ್ಯುಸ್, ರಿಯೂಸ್ ಮತ್ತು ರಿಸೈಕಲ್ (ಆರ್.ಆರ್.ಆರ್.) ಕೇಂದ್ರಗಳಾಗಿ ಬಳಸಿ, ನನ್ನ ಜೀವನ ನನ್ನ…

Read More

ಬಂಟ್ವಾಳ: ಇಲ್ಲಿನ ಬಂಟ್ವಾಳ ಪೇಟೆಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಹರಿಯುವ ನೇತ್ರಾವತಿ ನದಿಯಲ್ಲಿನ ಬಂಡೆಗಳಲ್ಲಿ ವಿವಿಧ ಕಲಾಕೃತಿಗಳ ಕೆತ್ತನೆಗಳು ಕಾಣಿಸಲಾರಂಭಿಸಿದೆ. ಮಳೆಯಿಲ್ಲದೆ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆಯೇ ಬಂಡೆ ಕಲ್ಲುಗಳ ಮೇಲೆ ಶಿವ, ನಂದಿ, ಪಾದ, ಪಾಣಿಪೀಠ, ಚೆನ್ನೆಮಣೆ, ಊಟದ ಬಟ್ಟಲು, ಜಡೆ, ಸೂರ್ಯ ಚಂದ್ರ, ತಾವರೆ ಮೊದಲಾದ ಅನೇಕ ಕೆತ್ತನೆಗಳು ಗೋಚರಿಸಿದೆ. Advertisement Advertisement ಅನಾದಿಕಾಲದಿಂದಲೂ ಈ ಕೆತ್ತನೆಗಳು ಇದ್ದು ನಾವು ಸಣ್ಣವರಾಗಿದ್ದಾಗ ಇಲ್ಲಿ ಬಂದು ಆಟವಾಡುತ್ತಿದ್ದೇವು. ಇಲ್ಲಿರುವ ಪಾದವನ್ನು ಸೀತೆಯ ಪಾದವೆಂದು ಹಿರಿಯರು ಕರೆಯತಿದ್ದರು ಎಂದು ಸ್ಥಳೀಯರಾದ ಬಂಟ್ವಾಳ ಪುರಸಭೆಯ ಹಿರಿಯ ಸದಸ್ಯ ಗೋವಿಂದ ಪ್ರಭು ತಿಳಿಸಿದ್ದಾರೆ. ಇಲ್ಲಿರುವ ಕೆತ್ತನೆಗಳ ಬಗ್ಗೆ ಸ್ಪಷ್ಟವಾದ ಐತಿಹಾಸಿಕ ದಾಖಲೆಗಳು ಇಲ್ಲದೇ ಇದ್ದರೂ ಕೂಡ ಋಷಿಮುನಿಗಳು ಇಲ್ಲಿ ತಪ್ಪಸ್ಸನ್ನಾಚರಿಸುವ ಸಂದರ್ಭದಲ್ಲಿ ಇಂತಹ ಕೆತ್ತನೆಗಳನ್ನು ಮಾಡಿ ದೇವರನ್ನು ಆರಾಧಿಸುತ್ತಿದ್ದರು ಎನ್ನುವ ನಂಬಿಕೆ ಸ್ಥಳೀಯರಲ್ಲಿದೆ. ನದಿಯಲ್ಲಿ ನೀರಿನ ಮಟ್ಟ ತೀವ್ರ ಕಡಿಮೆಯಾದಾಗ ಈ ಕೆತ್ತನೆಗಳು ಜನರಿಗೆ ಕಾಣಿಸುತ್ತವೆ. ಉಳಿದ ಸಂದರ್ಭದಲ್ಲಿ ನೀರಲ್ಲಿ ಮುಳುಗಡೆಯಾಗಿರುತ್ತದೆ. ಇತಿಹಾಸ…

Read More

ಅಕ್ರಮ ಮರಳು ದಂಧೆಕೋರರು ನನ್ನ ಸೋಲಿಗೆ ಶ್ರಮಿಸಿದ್ದಾರೆ: ಬಿ. ರಮನಾಥ ರೈ ಬಂಟ್ವಾಳ: ಅಕ್ರಮ ಮರಳುದಂಧೆಕೋರರ ಹಣ ಈ ಚುನಾವಣೆಯಲ್ಲಿ ನನ್ನ ಸೋಲಿಗೆ ಹೆಚ್ಚಿನ ಪ್ರಭಾವ ಬೀರಿದೆ, ನಾನು ಗೆದ್ದಲ್ಲಿ ಬಿಜೆಪಿವರಿಗೆ ಅಕ್ರಮ ಮರಳುಗಾರಿಕೆ ಕಡಿವಾಣ ಬೀಳುತ್ತದೆ ಎನ್ನುವ ಭಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮರಳು ಮಾಫಿಯದವರು ಹಣ ಹಂಚಿದ್ದಾರೆ, ಹಣ ಬಲದ ಎದುರು ನನಗೆ ಸೋಲಾಯಿತು ಎಂದು ಮಾಜಿ ಸಚಿವ ಬಿ. ರಮನಾಥ ರೈ ಅಳಲು ತೋಡಿಕೊಂಡಿದ್ದಾರೆ.ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. Advertisement ಬಂಟ್ವಾಳ ಶಾಸಕರು ಕೃಷಿಕ ಎಂದು ಹೇಳಿಕೊಂಡರೂ ವಾಸ್ತವದಲ್ಲಿ ದೊಡ್ಡ ವ್ಯಾಪಾರಿಗಳಾಗಿದ್ದು ಅಕ್ರಮ ವ್ಯವಹಾರದಲ್ಲಿ ತೊಡಗಿದ್ದಾರೆ. ಸಿಮೆಂಟ್ ಉತ್ಪಾದನೆಗೆ ಬಾಕ್ಸೈಟ್ ನ್ನು ಸರಬರಾಜು ಮಾಡುವ ವ್ಯವಹಾರ ಅವರಿಗಿದೆ. ಕೃಷಿ ಹಾಗೂ ಸಮಾಜಸೇವೆ ನನ್ನ ಉದ್ಯೋಗ. ನಾನು ಎಲ್ಲಿಂದಲೋ ಬಂದು ಚುನಾವಣೆಗೆ ನಿಂತಿಲ್ಲ ಎಂದು ತಿಳಿಸಿದರು. ನಾನು ಚುನಾವಣಾ ರಾಜಕೀಯಕ್ಕೆ ಮಾತ್ರ ನಿವೃತ್ತಿ ಘೋಷಿಸಿದ್ದು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷದ ನಾಯಕರು…

Read More

ಬಂಟ್ವಾಳ: ಪುತ್ತೂರು ಹಿಂದೂ ಕಾರ್ಯಕರ್ತರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಖಂಡಿಸಿದ್ದಾರೆ.ಕಾನೂನು ಮೀರಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ಅವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.ಈಗಾಗಲೇ ಯುವಕರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳು ಓರ್ವ ಎಸೈ ಹಾಗೂ ಪೊಲೀಸ ನ್ನು ಸಸ್ಪಂಡ್ ಮಾಡಿದ್ದಾರೆ, ಆದರೆ ಕೇವಲ ಸಸ್ಪಂಡ್ ಮಾಡಿದರೆ ಸಾಲದು ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ಅವರ ಮೇಲೆ ಕ್ರಮ ಕೈಗೊಳ್ಳಲು ಅವರು ಒತ್ತಾಯಿಸಿದ್ದಾರೆ.ಇಂತಹ ಪೋಲೀಸ್ ದೌರ್ಜನ್ಯ ಘಟನೆಗಳು ನಡೆಯಬಾರದು ಎಂದು ತಿಳಿಸಿರುವ ಅವರು ಹಿಂದೂ ಕಾರ್ಯಕರ್ತರ ಜೊತೆಗೆ ಯಾವತ್ತು ನಾವಿದ್ದೇವೆ ,ಯಾವುದೇ ಭಯಬೇಡ ಎಂದು ಅವರು ಭರವಸೆ ನೀಡಿದ್ದಾರೆ. Advertisement Advertisement

Read More

ಬಂಟ್ವಾಳ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಚ ಭಾರತ್ ಮಿಷನ್-2.೦ ಯೋಜನೆಯಡಿ ಸ್ಥಳೀಯ ಮಟ್ಟದಲ್ಲಿ ಪರಿಣಾಮ ಬೀರುವ ಅಭಿಯಾನವನ್ನು ಪ್ರಾರಂಭಿಸಿದ್ದು, ನವೀಕರಿಸಿ ಮರು ಬಳಸ ಬಹುದಾದಂತಹ ವಸ್ತುಗಳ ಉತ್ಪಾದನೆಯನ್ನು ಕಡಿಮೆ ಗೊಳಿಸಲು ಮತ್ತು ಸುಸ್ಥಿರ ಜೀವನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರವನ್ನು ರಕ್ಷಿಸುವ ಪ್ರಮುಖ ಉದ್ದೇಶದಿಂದ ನನ್ನ ಜೀವನ ನನ್ನ ಸ್ವಚ್ಛ ನಗರ ಯೋಜನೆಯ ಕಾರ್ಯಕ್ರಮದಡಿ ಕಡಿಮೆಗೊಳಿಸುವುದು, ಮರುಬಳಕೆ ಮತ್ತು ಪುನರ್ಬಳಕೆ ಕೇಂದ್ರಗಳನ್ನು ಬಂಟ್ವಾಳ ಪುರಸಭಾ ವ್ಯಾಪ್ತಿಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರ ಅಥವಾ ಗುರುತಿಸಿರುವ ನಗರದ ಪ್ರಮುಖ ಸ್ಥಳಗಳಲ್ಲಿ ವಸ್ತು ಮರು ಪಡೆಯುವ ಸೌಲಭ್ಯಕೇಂದ್ರಗಳನ್ನುನ ಆರಂಭಿಸಿದೆ. Advertisement Advertisement ಕಡಿಮೆಗೊಳಿಸುವುದು, ಮರುಬಳಕೆ ಮತ್ತು ಪುನರ್ಬಳಕೆ ಕೇಂದ್ರಗಳಾಗಿ ಬಳಸಿ, ನನ್ನಜೀವನ ನನ್ನ ಸ್ವಚ್ಚನಗರ ಯೋಜನೆಯನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲು ಬಂಟ್ವಾಳ ಪುರಸಭೆಯು ತೀರ್ಮಾನಿಸಿದ್ದು ದಿನಾಂಕ 20.5.2023 ರಿಂದ 05.06.2023 ರವರೆಗೆ ಬಡ್ಡಕಟ್ಟೆ ವೈಕುಂಠ ಬಾಳಿಗ ವಾಣಿಜ್ಯಸಂಕೀರ್ಣ, ಬಿ.ಸಿ.ರೋಡ್ ಬಸ್ ನಿಲ್ದಾಣ ಬಳಿ, ಪಾಣೆಮಂಗಳೂರು ಮಾರುಕಟ್ಟೆ ಬಳಿಈ ಕೆಳಕಂಡ…

Read More

ಬಂಟ್ವಾಳ: ಸಂಘಟನೆಯ ಮೂಲ ಉದ್ದೇಶವೇ ಮಕ್ಕಳಲ್ಲಿ ನೈತಿಕತೆಯ ಜಾಗೃತಿ ಮೂಡಿಸುವುದು. ಮಕ್ಕಳು ಶಾಲೆಯ ಶಿಕ್ಷಣವನ್ನು ಪಡೆದು ಶೈಕ್ಷಣಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತಾರೆ ಅದೇ ರೀತಿ ಸಂಸ್ಕಾರ ಶಿಕ್ಷಣ ಮಾನಸಿಕತೆ ಮತ್ತು ಬೌದ್ಧಿಕತೆಯ ಬೆಳವಣಿಗೆಯನ್ನು ಮಾಡಬೇಕು. ಆ ಮೂಲಕ ಆಧಾತ್ಮಿಕತೆಯ ಬೆಳವಣಿಗೆ, ಧಾರ್ಮಿಕ ಮನೋಭಾವದ ಅಭಿವೃದ್ಧಿಯಾಗಬೇಕು ಎಂದು ಸಂಸ್ಕಾರ ಭಾರತಿ ದ.ಕ. ಜಿಲ್ಲಾಧ್ಯಕ್ಷ ತಾರನಾಥ ಕೊಟ್ಟಾರಿ ಹೇಳಿದರು.ಪುದು ಗ್ರಾಮದ ನಾಣ್ಯದ ನಾಗರಕ್ತೇಶ್ವರಿ ಕ್ಷೇತ್ರದಲ್ಲಿ ಸಂಸ್ಕಾರ ಭಾರತಿ ದ.ಕ. ಜಿಲ್ಲೆ ಇದರ ಬಂಟ್ವಾಳ ಘಟಕದ ವತಿಯಿಂದ ತೃಷಾ ಶೆಟ್ಟಿ ನಿರ್ದೇಶನದಲ್ಲಿ ನಡೆದ ಐದು ದಿನಗಳ ಸಂಸ್ಕಾರ ಸೌರಭ ಮಕ್ಕಳ ಬೇಸಿಗೆ ಹಬ್ಬದ ಸಮಾರೋಪ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ರಾಧಾಸುರಭಿ ಗೋ ಮಂದಿರದ ಸಂಸ್ಥಾಪಕ ಭಕ್ತಿ ಭೂಷಣ ಪ್ರಭೂಜಿ, ಸಂಸ್ಕಾರ ಭಾರತಿಯ ಮಲ್ಲಿಕಾ ಶೆಟ್ಟಿ, ಪುದು ಪಂಚಾಯತಿ ಸದಸ್ಯ ಮನೋಜ್ ಆಚಾರ್ಯ ನಾಣ್ಯ, ಉಮಾ ಚಂದ್ರಶೇಖರ ಉಪಸ್ಥಿತರಿದ್ದರು.ಬೇಸಿಗೆ ಶಿಬಿರ ವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ತೃಷಾ ಶೆಟ್ಟಿ ಹಾಗು ಭಕ್ತಿ ಭೂಷಣ ಪ್ರಭೂಜಿ ಯವರನ್ನು…

Read More

ವಗ್ಗ ಕುಲಾಲ ಸಮಾಜ ಸೇವಾ ಸಂಘದಿಂದ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ದೇಣಿಗೆ ಹಸ್ತಾಂತರ ಬಂಟ್ವಾಳ: ತಾಲೂಕಿನ ವಗ್ಗ ಕುಲಾಲ ಸಮಾಜ ಸೇವಾ ಸಂಘದಿಂದ ಕುಲಾಲ ಸಮಾಜದ ಆಡಳಿತವಿರುವ ಕುಲಶೇಖರ ವೀರನಾರಾಯಣ ದೇವಸ್ಥಾನದಲ್ಲಿ ಮೇ 14ರಂದು ಆರಂಭಗೊಂಡು 24ರ ವರೆಗೆ ನಡೆಯುತ್ತಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ದೇಣಿಗೆ ಮತ್ತು 95 ತಾಮ್ರ ಕಲಶ ಸೇವೆಯ ಬಾಬ್ತು ಒಟ್ಟು ರೂ. 2,87,739 ಹಣವನ್ನು ಜಿಲ್ಲಾ ಮಾತೃ ಸಂಘದ ಬ್ರಹ್ಮಕಲಶೋತ್ಸವ ಸಮಿತಿಗೆ ಹಸ್ತಾಂತರಿಸಲಾಯಿತು. Advertisement Advertisement ವಗ್ಗ ವಲಯಕ್ಕೆ ಸಂಬಂದಿಸಿದ ಕುಲಾಲ ಸಮಾಜ ಬಾಂಧವರ ೪೧೦ ಮನೆಗಳಿಗೆ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ಬ್ರಹ್ಮಕಲಶೋತ್ಸವದ ಆಮಂತ್ರಣ ನೀಡಿದ ಸಂದರ್ಭ ದೇಣಿಗೆಯನ್ನು ಸಂಗ್ರಹಿಸಲಾಯಿತು. ಕುಲಶೇಖರ ಕ್ಷೇತ್ರಕ್ಕೆ ಹಸ್ತಾಂತರಿಸುವ ಸಂದರ್ಭ ವಗ್ಗ ಕುಲಾಲ ಸಂಘದ ಅಧ್ಯಕ್ಷ ಪುರುಷೋತ್ತಮ ಕುಲಾಲ್ ಹೇರೊಟ್ಟು, ಉಪಾಧ್ಯಕ್ಷ ಗೋಪಾಲ್ ಸಾಲ್ಯಾನ್ ಕಟ್ಲೋಡಿ ಮತ್ತು ಕಾರ್ಯದರ್ಶಿ ಚಂದು ಕುಲಾಲ್ ವಗ್ಗ, ಸದಸ್ಯರಾದ ಸತೀಶ್ ಮಧ್ವ, ವಿಜಯ್ ಪಣೆಕಲ, ಜಯಂತ ಬಂಗೇರ ಉಗ್ಗಬೆಟ್ಟು, ಕೃಷ್ಣ ಕುಲಾಲ್, ಚಂದ್ರಹಾಸ್…

Read More