
ಬಂಟ್ವಾಳ: ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಇದರ ಆಶ್ರಯದಲ್ಲಿ ಟೈನಿ ಟ್ಯಾಲೆಂಟ್ (ಪುಟ್ಟ ಪ್ರತಿಭೆ)- 2023 ಕಾರ್ಯಕ್ರಮ ಸಂಚಯಗಿರಿಯ ನರಸಿಂಹ ರಾಜ ಹೊಳ್ಳ ಅವರ ಮನೆಯ ಆವರಣದಲ್ಲಿ ಭಾನುವಾರ ನಡೆಯಿತು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭಅವರು ಮಾತನಾಡಿ ಹಿರಿಯರ ನಿರಂತರ ಪರಿಶ್ರಮದಿಂದ ಸಂಚಯಗಿರಿ ಎನ್ನುವ ಸುಂದರ ಪರಿಸರ ಮೂಡಿ ಬಂದಿದೆ. ಆರೋಗ್ಯಕರ ಆಲೋಚನೆಯಿಂಂದಾಗಿ ಸಾಮಾನ್ಯ ವ್ಯಕ್ತಿಯಾಗಿದ್ದ ಸುರೇಶ್ ಬಂಗೇರ ಅಸಾಮಾನ್ಯ ವ್ಯಕ್ತಿಯಾಗಿ ಮೂಡಿ ಬಂದಿದ್ದಾರೆ. ನಿಷ್ಕಲ್ಮಶವಾದ ಮುಗ್ದ ಮನಸ್ಸಿನ ಮಕ್ಕಳಿಗೆ ಆರೋಗ್ಯಕರ ವಾತವರಣ ನಿರ್ಮಿಸಿ ಅವರ ಪ್ರತಿಭೆಗೆ ಪೂರಕವಾದ ವ್ಯವಸ್ಥೆ ಕಲ್ಪಿಸುವಂತಹ ಈ ಕಾರ್ಯಕ್ರಮ ಅತ್ಯದ್ಭುತ ಚಿಂತನೆಯಾಗಿದೆ ಎಂದರು. ಬದುಕು ನಮ್ಮ ಕಣ್ಣ ಮುಂದೆಯೇ ಇದೆ, ಆದ್ದರಿಂದ ಕ್ರಿಯಾಶೀಲರಾಗಿ ಒಂದು ಕ್ಷಣವನ್ನು ವ್ಯರ್ಥ ಮಾಡದೆ ಬದುಕು ರೂಪಿಸಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.


ಮುಖ್ಯ ಅತಿಥಿ ಪ್ರಾಧ್ಯಾಪಕಿ ಡಾ. ಆಶಾಲತಾ ಎಸ್. ಸುವರ್ಣ ಮಾತನಾಡಿ ಬ್ಯಾಗ್ನಲ್ಲಿ ಪುಸ್ತಕ ತುಂಬಿಸುವದರ ಜೊತೆಗೆ ಮಸ್ತಕದೊಳಗೆ ಪುಸ್ತಕದ ಜ್ಞಾನವನ್ನು ತುಂಬಿಸಿಕೊಳ್ಳಬೇಕು. ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು, ಅಭ್ಯಾಸಗಳು ವ್ಯಸನವಾಗದಂತೆ ನೋಡಿಕೊಳ್ಳಬೇಕು ಎಂದರು.
ನಾಗರಿಕ ಕ್ರಿಯಾಸಮಿತಿ ಅಧ್ಯಕ್ಷ ಸುರೇಶ್ ಬಂಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳೇ ಮುಂದಿನ ಭವಿಷ್ಯ. ಮುಂದಿನ ದಿನಗಳಲ್ಲಿ ಮಕ್ಕಳೇ ಇಂತಹ ಕಾರ್ಯಕ್ರಮಗಳನ್ನು ಮಾಡುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಬೇಕು ಎಂದರು. ಸಂಚಯಗಿರಿಯ ಪರಿಸರದ ಎಲ್ಲಾ ಮನೆಯವರ ಸಹಕಾರದಿಂದ ಈ ಕಾರ್ಯಕ್ರಮ ಯಶ್ವಸ್ವಿಯಾಗಿ ಮೂಡಿ ಬಂದಿದೆ ಎಂದರು.
ಹಿರಿಯರಾದ ದಾಮೋದರ್ ಎ. ಸಂಚಯಗಿರಿ, ನಯನ ಹೊಳ್ಳ, ಸಮಿತಿಯ ಉಪಾಧ್ಯಕ್ಷೆ ಪ್ರಿಯಾಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಿತಿಯ ಪದಾಧಿಕಾರಿಗಳಾದ ಸುಧಾಕರ ಸಾಲ್ಯಾನ್ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಪ್ರಾಸ್ತವಿಕವಾಗಿ ಮಾತನಾಡಿದರು. ಬಳಿಕ ಸ್ಥಳೀಯ ಮಕ್ಕಳಿಗೆ ಬೆಂಕಿ ರಹಿತ ಅಡುಗೆ, ಆಶುಭಾಷಣ ಹಾಗೂ ಸಂಗೀತ ಸ್ಪರ್ಧೆ ನಡೆಯಿತು.
ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಪ್ರೊ. ಶ್ಯಾಂ ಪ್ರಸಾದ್ ವಿದ್ಯಾರ್ಥಿಗಳಲ್ಲಿ ಕಲಿಕೆಯ ಮನೋಭಾವ ನಿಲ್ಲಬಾರದು, ಕಲಿಕೆ ನಿರಂತರವಾಗಿದ್ದಾಗ ಇಂತಹ ಕಾರ್ಯಕ್ರಮ ಸಾರ್ಥಕತೆ ಪಡೆಯುತ್ತದೆ ಎಂದರು. ಈ ಸಂದರ್ಭ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಪುಸ್ತಕ ವಿತರಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾಣ ವಿತರಿಸಲಾಯಿತು. ಅಧ್ಯಕ್ಷ ಸುರೇಶ್ ಬಂಗೇರ, ಕಾರ್ಯದರ್ಶಿ ಶಿವನಾಯ್ಕ್, ಉಪಾಧ್ಯಕ್ಷೆ ಪ್ರಿಯಾಲತಾ, ಕ್ರೀಡಾ ಕಾರ್ಯದರ್ಶಿ ಪುರಂದರ ಶೆಟ್ಟಿ ಉಪಸ್ಥಿತರಿದ್ದರು. ಉಪಪ್ರಾಂಶುಪಾಲೆ ಜಯಲಕ್ಷ್ಮಿ, ನಯನ ಹೊಳ್ಳ, ರಮಾ ಕುಮಾರಿ , ಅಕ್ಷಿತಾ ಬಿ., ಭವತಾರಿಣಿ, ಆಶಾಲತಾ, ಬಬಿತಾ ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಸಹಕರಿಸಿದರು.
ದಾಮೋದರ ಎ ವಂದಿಸಿದರು. ಸತೀಶ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ಸಾಲ್ಯಾನ್ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ನಡೆಸಿಕೊಟ್ಟರು.