ಬಂಟ್ವಾಳ: ಕ್ರಾಂಗ್ರೆಸ್ ಪಕ್ಷದ ಅಭ್ಯರ್ಥಿ, ಮಾಜಿ ಸಚಿವ ಬಿ.ರಮನಾಥ ರೈ ಅವರು ಗುರುವಾರ ನಾಮಪತ್ರ ಸಲ್ಲಿಸಿದರು. ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ, ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನ ಹಾಗೂ ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮೊಡಂಕಾಪು ಚರ್ಚ್, ಮಿತ್ತಬೈಲು ಮೊಯ್ಯುದ್ದೀನ್ ಜುಮ್ಮಾಮಸೀದಿ, ಕೆಳಗಿನ ಪೇಟೆ ಜುಮ್ಮಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಸಭಾಂಗಣದ ಬಳಿಯಿಂದ ಸಹಸ್ರ ಸಂಖ್ಯೆಯಲ್ಲಿ ಪಕ್ಷದ ಬೆಂಬಲಿಗರು, ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದಲ್ಲಿರುವ ಚುನಾವಣಾಧಿಕಾರಿ ಅಭಿದ್ ಗಡ್ಯಾಲ್ ಅವರಿಗೆ ತನ್ನ ಉಮೇದುವಾರಿಕೆ ಸಲ್ಲಿಸಿದರು.
ಸಹಸ್ರಾರು ಸಂಖ್ಯೆಯಲ್ಲಿ ಜೊತೆಯಾದ ಕಾರ್ಯಕರ್ತರು:
ಮಾಜಿ ಸಚಿವ ಬಿ.ರಮನಾಥ ರೈ ನಾಮಪತ್ರ ಸಲ್ಲಿಕೆಯ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಕೊಂಡು ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು. ಬಂಟ್ವಾಳದ ರಥಬೀದಿಯಲ್ಲಿ ಆರಂಭಗೊಂಡ ಮೆರವಣಿಗೆ ಬಿ.ಸಿ.ರೋಡಿನ ಮುಖ್ಯ ರಸ್ತೆಯಲ್ಲಿ ಆಗಮಿಸಿ ರಕ್ತೇಶ್ವರೀ ದೇವಸ್ಥಾನದ ಬಳಿ ಸಮಾಪನಗೊಂಡಿತು. ಪಕ್ಷದ ಅಭಿಮಾನಿಗಳು ಮೆಚ್ಚಿನ ನಾಯಕನಿಗೆ ಬಿ.ಸಿ.ರೋಡಿನ ಮೇಲ್ಸೆತುವೆ ಮೇಲೆ ನಿಂತು ಪುಷ್ಪವೃಷ್ಠಿ ಹರಿಸಿ ಜಯಕಾರ ಕೂಗಿಸಿದರು.
ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾಜಿ ಸಚಿವ ಬಿ. ರಮನಾಥ ರೈ ಮಾತನಾಡಿ ತನಗೆ ೯ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಪಕ್ಷ ಮಾಡಿಕೊಟ್ಟಿದೆ. ಪಿಎಲ್ಡಿ ಬ್ಯಾಂಕ್ ಮೂಲಕ ಸಾರ್ವಜನಿಕ ಬದುಕಿಗೆ ಪಾದಾರ್ಪಣೆ ಮಾಡಿದ್ದು ತನಗೆ ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಂಡಿದ್ದೇನೆ ತನ್ನ ಅಧಿಕಾರವಧಿಯಲ್ಲಿ ಹೆಚ್ಚಿನ ಹಾಗೂ ಶಾಶ್ವತ ಅಭಿವೃದ್ಧಿ ಕಾರ್ಯವನ್ನು ಮಾಡಿದ ತೃಪ್ತಿ ತನಗಿದೆ, ಪೂರ್ಣ ಬಹುಮತದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೆಲವರಿಗೆ ಗಳಿಗೊಂದು ಪಕ್ಷ, ಗಂಟೆಗೊಂದು ಸಿದ್ದಾಂತ ಆದರೆ ರಮನಾಥ ರೈಗೆ ಒಂದೇ ಪಕ್ಷ ಹಾಗೂ ಒಂದೇ ಸಿದ್ದಾಂತ, ಹಳೇ ಮುಖವಾದರೂ ಎಂದಿಗೂ ಬಣ್ಣ ಬದಲಿಸಿಲ್ಲ ಎಂದು ಟೀಕಾಕಾರಿಗೆ ಉತ್ತರಿಸಿದ ಅವರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಕ್ಷೇತ್ರದ ಮತದಾರರು ಮಾಡಬೇಕಾಗಿದೆ ಎಂದರು. ನಾನು ಹೇಳಿದ್ದನೆ ಮಾಡಿದ್ದೇನೆ, ಮಾಡಿದ್ದೇನೆ ಹೇಳಿದ್ದೇನೆ, ಕ್ಷೇತ್ರದ ಅಭಿವೃದ್ದಿಗಾಗಿ ದುಡಿದ್ದೇನೆ ಎಂದು ತಿಳಿಸಿದರು. ಇದು ನನ್ನ ಕೊನೆಯ ಚುನಾವಣೆಯಾಗಿದ್ದು ಮುಂದೆ ನನ್ನ ಕುಟುಂಬ ಬಂಧುಗಳು ಯಾರೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಬದಲಾಗಿ ನನ್ನ ಜೊತೆ ಕೆಲಸ ಮಾಡಿದ ಯುವಕರಿಗೆ ಮುಂದಿನ ದಿನಗಳಲ್ಲಿ ಅವಕಾಶ ಒದಗಿ ಬರಲಿದೆ ಎಂದರು. ನಾನು ಸೋತ ದಿನಗಳಲ್ಲೂ ಎಂದಿಗೂ ಮನೆಯಲ್ಲಿ ಕೂತವನಲ್ಲ, ಸಕ್ರಿಯವಾಗಿ ಜನರ ಕಷ್ಟ ಸುಖದಲ್ಲಿ ಭಾಗಿಯಾದವನು, ಕರೋನಾ ಸಂದರ್ಬದಲ್ಲೂ ಜನರೊಂದಿಗೆ ಬೆರೆತವನು ಎಂದು ತಿಳಿಸಿದರು.
ಈ ಸಂದರ್ಭ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ವಿಧಾನಪರಿಷತ್ತ್ ಸದಸ್ಯರಾದ ಡಾ. ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಮಂಜೇಶ್ವರ ಶಾಸಕ ಎ.ಕೆ. ಎಂ. ಅಶ್ರಫ್, ಮಾಜಿ ಶಾಸಕಿ ಶಕುಂತಳ ಶೆಟ್ಟಿ, ಕೇರಳದ ನ್ಯಾಯವಾದಿ ಗೋವಿಂದನ್, ಪಕ್ಷದ ಅಭ್ಯರ್ಥಿಗಳಾದ ಅಶೋಕ್ ಕುಮಾರ್ ರೈ. ಕೆ. ಕೃಷ್ಣಪ್ಪ, ರಮನಾಥ ರೈ ಪತ್ನಿ ಧನಭಾಗ್ಯ ರೈ, ಪುತ್ರಿ ಚರಿಷ್ಮಾ ರೈ, ಪುತ್ರ ಚೈತ್ರದೀಪ್ ರೈ, ಸಹೋದರಿ ಚೆನ್ನವೇಣಿ ಎಂ. ಶೆಟ್ಟಿ, ಪಕ್ಷದ ಪ್ರಮುಖರಾದ ಅಶ್ವನಿ ಕುಮಾರ್ ರೈ, ರಾಕೇಶ್ ಮಲ್ಲಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಎಂ.ಎಸ್. ಮಹಮ್ಮದ್, ಮಮತಾಗಟ್ಟಿ, ಪಿಯೂಸ್ ಎಲ್. ರೋಡ್ರಿಗಸ್, ಸುದರ್ಶನ್ ಜೈನ್, ಸದಾಶಿವ ಬಂಗೇರ, ವಾಸು ಪೂಜಾರಿ, ಬಿ.ಎಚ್.ಖಾದರ್, ಜಯಂತಿ ಪೂಜಾರಿ, ಲವೀನಾ ವಿಲ್ಮಾ ಮೋರಸ್, ಮಲ್ಲಿಕಾ ಶೆಟ್ಟಿ, ಸುರೇಶ್ ಜೋರಾ, ಇಬ್ರಾಹಿಂ ನವಾಝ್, ಮಾಯಿಲಪ್ಪ ಸಾಲ್ಯಾನ್, ಕೆ. ಸಂಜೀವ ಪೂಜಾರಿ, ಚಂದ್ರಶೇಖರ ಪೂಜಾರಿ, ಚಿದಾನಂದ ರೈ, ಸುರೇಶ್ ಕುಮಾರ್ ನಾವೂರು, ಉಮೇಶ್ ಕುಲಾಲ್, ದೇವಪ್ಪ ಕುಲಾಲ್ ಪಂಜಿಕಲ್ಲು, ಉಮೇಶ್ ಸಪಲ್ಯ ಬೋಳಂರೂರು, ಮನೋಹರ ನೇರಂಬೋಳು, ಚಿತ್ತರಂಜನ್ ಶೆಟ್ಟಿ, ಅಪ್ಪಿ, ಮಹಮ್ಮದ್ ಶರೀಫ್, ಜೆಸಿಂತಾ ಡಿಸೋಜಾ, ಜನಾರ್ದನ ಚೆಂಡ್ತಿಮಾರ್, ಉಸ್ಮಾನ್ ಕರೋಪಾಡಿ, ಪಿ.ಎ. ರಹೀಂ, ಮಲ್ಲಿಕಾ ಪಕ್ಕಳ, ಪ್ರಕಾಶ್ ಶೆಟ್ಟಿ ಶ್ರೀ ಶೈಲಾ, ಇಬ್ರಾಹಿಂ ಕೈಲಾರ್, ಚಿತ್ರರಂಜನ್ ಶೆಟ್ಟಿ, ರೋಷನ್ ರೈ, ಸೀತರಾಮ ಶೆಟ್ಟಿ, ಬಾಲಕೃಷ್ಣ ಆಳ್ವ, ಪ್ಲೋಸಿ ಡಿಸೋಜಾ, ಸಂಪತ್ ಕುಮಾರ್ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ರಮೇಶ್ ಕುಲಾಲ್, ಗಿರೀಶ್ ಪೆರ್ವ, ಜಗದೀಶ್ ಕುಂದರ್, ಗಂಗಾಧರ ಪೂಜಾರಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.