Advertisement
ಬಂಟ್ವಾಳ: ಮೊಡಂಕಾಪುವಿನ ಕಾರ್ಮೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜು ಇಲ್ಲಿ ಈ ಭಾರಿ ದ್ವಿತೀಯ ಪಿಯುಸಿ ಪರೀಕ್ಷೆಗೆ 358 ವಿದ್ಯಾರ್ಥಿಗಳು ಹಾಜರಾಗಿದ್ದು 115ಮಂದಿ ವಿಶಿಷ್ಟ ಶ್ರೇಣಿ, 215 ಮಂದಿ ಪ್ರಥಮ ಶ್ರೇಣಿ, 26 ಮಂದಿ ದ್ವಿತೀಯ ಶ್ರೇಣಿ ಹಾಗೂ ಒರ್ವ ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿ ಒಟ್ಟು 99.72 ಶೇ. ಫಲಿತಾಂಶ ದಾಖಲಾಗಿದೆ.
ಕಲಾ ವಿಭಾಗದಲ್ಲಿ ಶೇ. 100, ವಾಣಿಜ್ಯ ವಿಭಾಗದಲ್ಲಿ ಶೇ. 99.5, ವಿಜ್ಞಾನ ವಿಭಾಗದಲ್ಲಿ ಶೇ. 100 ಫಲಿತಾಂಶ ಬಂದಿದೆ.
ಕಲಾ ವಿಭಾಗದಲ್ಲಿ ಸಾಕ್ಷಿ ಆನಂದ ಸಾಲ್ಯಾನ್ 560 ಅಂಕ, ವಾಣಿಜ್ಯ ವಿಭಾಗದಲ್ಲಿ ಗೌತಮಿ 586 ಅಂಕ, ವಿಜ್ಞಾನ ವಿಭಾಗದಲ್ಲಿ ಸಮಂತಾ ಅಥೆನಾ ಡಿಸೋಜಾ 584 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಗಳಾಗಿದ್ದಾರೆ.
Advertisement