Author: admin

ಜಾತ್ಯಾತೀತ ಪಕ್ಷಗಳಿಗೆ ನಮ್ಮ ಬೆಂಬಲ: ಪ್ರೇಮನಾಥ ಶೆಟ್ಟಿ ಬಂಟ್ವಾಳ: ರೈತ ಪರ ನಿರ್ಧಾರ ತೆಗೆದುಕೊಳ್ಳುವ ಸಂವೇದನಾ ಶೀಲ ಸರಕಾರ ಬೇಕು ಆದ್ದರಿಂದ ಜಾತ್ಯಾತೀತ ಪಕ್ಷಗಳಿಗೆ ನಮ್ಮ ಬೆಂಬಲ ಎಂದು ರೈತ ಸಂಘದ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಪ್ರೇಮನಾಥ ಶೆಟ್ಟಿ ಹೇಳಿದರು. Advertisement Advertisement ಅವರು ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಬಡವರು, ರೈತರು, ಕಾರ್ಮಿಕರ ಬೇಡಿಕೆಗಳಿಗೆ ಈ ಹಿಂದಿನ ಸರಕಾರ ಕಿವಿಗೊಡಲಿಲ್ಲ. ರೈತರ ಆದಾಯ ದುಪ್ಪಟ್ಟ ಮಾಡುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಸರಕಾರ ಕಿಸನ್ ಸಮ್ಮಾನ್ ಅನ್ನು ರೈತರಿಗೆ ನೀಡಿದರೆ ಇತ್ತ ರಸಗೊಬ್ಬರಗಳ ಬೆಲೆ ಏರಿಕೆ ಮಾಡಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಹಾಗು ಜೆಡಿಎಸ್ ಸರಕಾರ ರೈತರ ಸಾಲ ಮನ್ನ ಮಾಡಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಸುದ್ದಿಗೋಷ್ಟಿಯಲ್ಲಿ ಸಿಪಿಐಎಂಎಲ್ ಮುಖಂಡ ರಾಮಣ್ಣ ವಿಟ್ಲ, ಬಿ.ಕೆ.ಸಾಹುಲ್ ಹಮೀದ್, ತುಳಸಿದಾಸ್, ಉಪಸ್ಥಿತರಿದ್ದರು.

Read More

ಸೇವಾಂಜಲಿಯಲ್ಲಿ ಕ್ಷಯರೋಗಿಗಳಿಗೆ ಆಹಾರದ ಕಿಟ್ ವಿತರಣೆ ಬಂಟ್ವಾಳ: ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಕೇಂದ್ರ ಸರ್ಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಆಹಾರ ಧವಸ ಧಾನ್ಯ ವಿತರಣ ಕಾರ್ಯಕ್ರಮ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ಶುಕ್ರವಾರ ನಡೆಯಿತು.ನಿಟ್ಟೆ ವಿವಿಯ ಉಪ ಕುಲಪತಿ ಡಾ. ಸತೀಶ್ ಭಂಡಾರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪ್ರಧಾನಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಾರೆ. ಆದರೆ ಅದನ್ನು ಅನುಷ್ಠಾನ ಮಾಡಲು ಸೇವಾಸಕ್ತರು ಸೇಕು. ಅಂತಹ ಕೆಲಸವನ್ನು ಸೇವಾಂಜಲಿ ಪ್ರತಿಷ್ಠಾನ ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಅಭಿನಂದನೀಯ ಎಂದರು. ಕ್ಷಯ ಅತ್ಯಂತ ಹಳೆಯ ರೋಗ, ಕ್ಷಯ ರೋಗಿಗಳಿಗೆ ಔಷಧಿಯ ಜೊತೆಗೆ ಪೋಷಕಾಂಶಯುಕ್ತ ಆಹಾರವು ಅಗತ್ಯ. ಆದ್ದರಿಂದ ಇಲ್ಲಿ ನೀಡುವ ಆಹಾರ ಧವಸ ಧಾನ್ಯವನ್ನು ಸೇವಿಸಿ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. Advertisement Advertisement ಈ ಸಂದರ್ಭ ಪ್ರಮುಖರಾದ ಬಿ. ನಾರಾಯಣ ಮೇರಮಜಲು, ಕೇಶವ ದೋಟ ಮೇರಮಜಲು, ಕುಚ್ಚೂರು ಸಂತೋಷ್ ಆಳ್ವ, ಕಿಶೋರ್ ಸುಜೀರು ವೇದಿಕೆಯಲ್ಲಿದ್ದರು. ಅರುಣ್ ಕುಮಾರ್…

Read More

ಚುನಾವಣಾ ಪ್ರಚಾರ ವೇಳೆ ಕುಸಿದು ಬಿದ್ದು ಸಾವು ಪುಂಜಾಲಕಟ್ಟೆ: ಮನೆ, ಮನೆ ಚುನಾವಣಾ ಪ್ರಚಾರಕ್ಕೆಂದು ತೆರಳಿದ್ದ ಬಿಜೆಪಿ ಕಾರ್ಯಕರ್ತರೋರ್ವರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ಬಂಟ್ವಾಳ ತಾಲೂಕಿನ ಕಾವಳ ಮೂಡೂರು ಗ್ರಾಮದ ಕಲಾಯಿ ಎಂಬಲ್ಲಿ ಸಂಭವಿಸಿದೆ.ವೃತ್ತಿ ಯಲ್ಲಿ ಛಾಯಾಗ್ರಾಹಕ ರಾಗಿರುವ ಇಲ್ಲಿನ ನಿವಾಸಿ ಪ್ರವೀಣ್ ನಾಯಕ್( 45) ಮೃತ ಪಟ್ಟವರಾಗಿದ್ದಾರೆ.ಪ್ರವೀಣ್ ಮತ್ತು ತಂಡ ಅವರ ನಿವಾಸದ ಪರಿಸರದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರ ಪರ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾಗ ಮಧ್ಯಾಹ್ನ ಸುಮಾರು 1.30 ಘಂಟೆಯ ಹೊತ್ತಿಗೆ ಎದೆನೋವೆಂದು ಕುಸಿದು ಬಿದ್ದಿದ್ದರು.ತತ್ ಕ್ಷಣ ಅವರನ್ನು ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರಕ್ಕೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು. Advertisement ಮೃತರು ಪತ್ನಿ, ಪುತ್ರ,ಹಾಗೂ ಪುತ್ರಿಯನ್ನು ಅಗಲಿದ್ದಾರೆ.ಮುಲ್ಕಾಜೆ ಮಾಡದಲ್ಲಿ ಪ್ರವೀಣ್ ಡಿಜಿಟಲ್ ಸ್ಟುಡಿಯೋ ನಡೆಸುತ್ತಿದ್ದ ಅವರು ಸೌಮ್ಯ ವ್ಯಕ್ತಿ ತ್ವದಿಂದ ಜನಾನುರಾಗಿಯಾಗಿದ್ದರು. Advertisement

Read More

ಜಾತ್ಯತೀತ ಪಕ್ಷಗಳು ಜೊತೆಯಾಗಿ ಕೋಮುಪಕ್ಷಗಳನ್ನು ಸೋಲಿಸಬೇಕು: ಚಂದ್ರಶೇಖರ ಪೂಜಾರಿ ಬಂಟ್ವಾಳ: ಕೋಮು ಪಕ್ಷಗಳಾದ ಎಸ್ ಡಿ ಪಿ ಐ ಮತ್ತು ಬಿಜೆಪಿಗೆ ಮತ ಹಾಕಬಾರದು. ಧರ್ಮದ ಹೆಸರಿನಲ್ಲಿ ಮತ ಯಾಚನೆ ರಾಜಕೀಯ ನಡೆಯಬಾರದು,ಬಿಜೆಪಿ ಜಾತಿ ಧರ್ಮದ ಹೆಸರಿನಲ್ಲಿ ಮತಯಾಚನೆ ನಡೆಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಚಂದ್ರಶೇಖರ್ ಪೂಜಾರಿ ಆರೋಪಿಸಿದರು.ಅವರು ಬಿ.ಸಿ.ರೋಡಿನ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. Advertisement ಜಾತ್ಯಾತೀತ ಪಕ್ಷಗಳು ಒಟ್ಟಾಗಿ ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸಬೇಕು ಎಂದು ಅವರು ಮತದಾರರಿಗೆ ಮನವಿ ಮಾಡಿದ್ದು,ಕೋಮುವಾದಿ ಪಕ್ಷಗಳಾದ ಬಿಜೆಪಿ ಮತ್ತು ಎಸ್.ಡಿ.ಪಿ. ಈ ಎರಡು ಪಕ್ಷಕ್ಕೆ ಮತ ಹಾಕಿದರೆ ಕೊeಮು ಶಕ್ತಿಗಳೇ ಪ್ರಬಲವಾಗುವುದು ಎಂದರು.135 ವರ್ಷಗಳಿಂದ ದೇಶದಲ್ಲಿ ಅಭಿವೃದ್ಧಿ ಮೂಲಕ ಜನಮನ್ನಣೆ ಗಳಿಸಿರುವ ಕಾಂಗ್ರೇಸ್ ಪಕ್ಷ ಮಾತ್ರ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ತಾಕತ್ತು ಇದೆ ಎಂದು ಅವರು ತಿಳಿಸಿದರು. Advertisement ಕಣ್ಣಿಗೆ ಕಾಣುವ ದೇವತಾ ಮನುಷ್ಯ, ಜನಸೇವೆ ಮಾಡುವ ಅಭಿವೃದ್ಧಿಯ ಹರಿಕಾರ ಬಿ.…

Read More

ಸಾಮೂಹಿಕವಾಗಿ ಸಹಸ್ರನಾಮ ಅರ್ಚನೆ Advertisement Advertisement ಬಂಟ್ವಾಳ: ಕೂಟ ಮಹಾ ಜಗತು ಬಂಟ್ವಾಳ ಇದರ ವತಿಯಿಂದ ನರಸಿಂಹ ಜಯಂತಿ ಅಂಗವಾಗಿ ಬಂಟ್ವಾಳ ಮಹಾಲಿಂಗೇಶ್ವರ ದೇವಸ್ಥಾನ ದ ಮಾಂಗಲ್ಯ ಕಲ್ಯಾಣ ಮಂಟಪದಲ್ಲಿ ಸಾಮೂಹಿಕವಾಗಿ ಸಹಸ್ರನಾಮ ಅರ್ಚನೆ, ಅಷ್ಟೋತ್ತರ ಶತನಾಮ ಅರ್ಚನೆ, ಬಂಟ್ವಾಳ ಅಂಗಸಂಸ್ಥೆ ಅಧ್ಯಕ್ಷ ಜಗದೀಶ ಹೊಳ್ಳ ಎಂ ನೇತೃತ್ವದಲ್ಲಿ ನಡೆಯು. ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ದೇವಸ್ಥಾನದ ಪ್ರಧಾನ ಅರ್ಚಕ ಅನಂತ ಭಟ್, ಗಂಗಾಧರ ಕಾರಂತ ಪದಾಧಿಕಾರಿಗಳಾದ ಕೆ ಗಣಪತಿ ಸೋಮಯಾಜಿ. ನರೇಶ್ ಹೊಳ್ಳ ಡಾ. ಎನ್ ಸೋಮಶೇಖರ ಮಯ್ಯ. ನ್ಯಾಯವಾದಿಗಳಾದ ನಾರಾಯಣ ಸೋಮಯಾಜಿ, ಸುರೇಶ್ ಹೊಳ್ಳ. ರಾಮಚಂದ್ರಮಯ್ಯ. ಶಂಕರ ನಾರಾಯಣರಾವ್. ಮೊದಲಾದವರು ಉಪಸ್ಥಿತರಿದ್ದರು.

Read More

ಕಾರ್ಮಿಕ ವಿರೋಧಿ ಬಿ.ಜೆ.ಪಿಯನ್ನು ಸೋಲಿಸಿ ಕರ್ನಾಟಕ ಉಳಿಸಿ- ಕಾಮ್ರೇಡ್ ಶಂಕರ್ ಬಂಟ್ವಾಳ : ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿ (ಎ.ಐ.ಸಿ.ಸಿ.ಟಿ.ಯು) ದ.ಕ ಜಿಲ್ಲಾ ಸಮಿತಿ ಸಭೆ ಬಿ.ಸಿ.ರೋಡಿ ನಲ್ಲಿ ನಡೆಯಿತು. Advertisement ಸಭೆಯನ್ನುದ್ದೇಶಿಸಿ ಮಾತನಾಡಿದ ಎ.ಐ.ಸಿ‌.ಸಿ.ಟಿ.ಯು ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸಿ.ಪಿ.ಐ.ಎಂ.ಎಲ್ (ಲಿಬರೇಷನ್ ) ಕೇಂದ್ರ ಸಮಿತಿ ಸದಸ್ಯರಾದ ಕಾಮ್ರೇಡ್ ಶಂಕರ್ ಮಾತನಾಡಿಇಂದು ಕಾರ್ಮಿಕ ವರ್ಗ ಅತ್ಯಂತ ಸಂಕಷ್ಟದ ಪರಿಸ್ಥಿತಿ ಯಲ್ಲಿ ಇದ್ದು ನಮ್ಮನ್ನಾಳುತ್ತಿರುವ ಕೇಂದ್ರ ಮತ್ತು ರಾಜ್ಯದ ಬಿ.ಜೆ.ಪಿ ಸರಕಾರದ ನೀತಿ ಗಳು ಕಾರ್ಮಿಕ ವಿರೋಧಿಯಾಗಿದ್ದು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ಹೊರಟಿರುವ ಸರಕಾರವು ಕಾರ್ಮಿಕರ ಪಾಲಿಗೆ ಮರಣ ಶಾಸನವನ್ನು ಬರೆದಿಡುತ್ತಿದೆ ,ಇಂದೆಂದೂ ಇಲ್ಲ ದಂತಹ ಭ್ರಷ್ಟಾಚಾರ,ಬೆಲೆ ಏರಿಕೆ, ಶೈಕ್ಷಣಿಕ ,ವೈದ್ಯಕೀಯ ಮೂಲ ಸೌಕರ್ಯಗಳ ನಾಶ, ಯುವಜನರ ಬದುಕಿಗೆ ಮಾರಕವಾಗಿರುವ ನಿರುದ್ಯೋಗ, ಮಹಿಳೆಯರ ಮೇಲೆ ,ಅಲ್ಪಸಂಖ್ಯಾತ ರ ಮೇಲಿನ ದಾಳಿ ಇವುಗಳಿಂದ ಜನತೆ ತತ್ತರಿಸಿದ್ದು‌ ಈ ಪರಿಸ್ಥಿತಿ ತಂದ ರಾಜ್ಯ ಬಿ.ಜೆ.ಪಿ ಸರಕಾರವನ್ನು ಸೋಲಿಸಿ ಸಂವಿಧಾನ ಪ್ರಜಾಪ್ರಭುತ್ವ…

Read More

ಬಂಟ್ವಾಳ ಪೇಟೆಯಲ್ಲಿ ರಾಜೇಶ್ ನಾಯ್ಕ್ ಮತಯಾಚನೆ ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಬಂಟ್ವಾಳ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮತಯಾಚನೆ ನಡೆಸಿದರು.ಬಳಿಕ ಮಾತನಾಡಿದ ಅವರು ಗೌರವಯುತವಾದ ಮತ್ತು ಶಾಂತಿಯುತ ಬದುಕಿಗಾಗಿ ಬಂಟ್ವಾಳದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.ಬಂಟ್ವಾಳ ಕ್ಷೇತ್ರದಲ್ಲಿ 2 ಸಾವಿರ ಕೋಟಿಗಿಂತಲೂ ಅಧಿಕ ಅನುದಾನದ ಮೂಲಕ ಸರ್ವ ವ್ಯಾಪಿ ಮತ್ತು ಸರ್ವಸ್ಪರ್ಶಿಯಾದ ಅಭಿವೃದ್ಧಿ ಮಾಡಿದ್ದೇನೆ ಎಂಬ ಸಂತೋಷ ಇದೆ, ಅಭಿವೃದ್ಧಿ ಜೊತೆಗೆ ಶಾಂತಿಯುತ ಬಂಟ್ವಾಳವಾಗಿ ನಿರ್ಮಾಣ ಮಾಡಿದ್ದೇನೆ ಎಂದು ತಿಳಿಸಿದರು. Advertisement ಆರೋಗ್ಯ ಕ್ಷೇತ್ರದಲ್ಲಿ ಅಮೂಲಾಗ್ರವಾಗಿ ಸುಧಾರಣೆ ತರಲು ನಾನು ಮಾಡಿದ ಪ್ರಯತ್ನಕ್ಕೆ ಬೆಲೆ ಸಿಕ್ಕಿದೆ. ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಕಲ ವ್ಯವಸ್ಥೆ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕ್ಷೇತ್ರದ ಜನರ ಮನೆಬಾಗಿಲಿಗೆ ತೆರಳಿ ಆರೋಗ್ಯ ತಪಾಸಣೆ ಮಾಡುವ ಉದ್ದೇಶದಿಂದ ಸಂಚಾರಿ ಐಸಿಯು ಬಸ್, ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ, ಐಸಿಯು ಬೆಡ್ ಹೀಗೆ ಹತ್ತಾರು ಯೋಜನೆಗಳನ್ನು ನೀಡಿದ್ದೇನೆ, ಇದರ ಜೊತೆಗೆ ಪುಂಜಾಲಕಟ್ಟೆ…

Read More

Advertisement Advertisement ಬಂಟ್ವಾಳ: ಅಕ್ರಮ ಗೋಸಾಗಾಟದ ವಾಹನವನ್ನು ಪತ್ತೆ ಮಾಡಿರುವ ಬಂಟ್ವಾಳ ಪೊಲೀಸರು ದನ ಹಾಗೂ ಕರುವನ್ನು ರಕ್ಷಣೆ ಮಾಡಿ ಟೆಂಪೋ ವಾಹನವನ್ನು ವಶಕ್ಕೆ ಪಡೆದುಕೊಂಡ ಘಟನೆ ಗೋಳ್ತಮಜಲು ಗ್ರಾಮದ ಗಣೇಶ ನಗರದಲಿ ಗುರುವಾರ ನಡೆದಿದೆ.ಆರೋಪಿಗಳಾದ ಪುದು ಗ್ರಾಮದ ಅಮ್ಮಮಾರ್ ನಿವಾಸಿ ಬಶೀರ್ ಕೆ. (32) ಹಾಗೂ ಒಕ್ಕೆತ್ತೂರುವಿನ ಜೆರಾಲ್ಡ್ ಮಸ್ಕರೇನಸ್ (48) ಎಂಬವರನ್ನು ಬಂಧಿಸಿದ್ದಾರೆ.ಬಂಟ್ವಾಳ ನಗರ ಪೊಲೀಸರು ಖಚಿತ ಮಾಹಿತಿ ಮೇರೆಗೆ ಗೋಳ್ತಮಜಲು ಗ್ರಾಮದ ಗಣೇಶ್ ನಗರ ಎಂಬಲ್ಲಿ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 11 ಗಂಟೆಯ ವೇಳೆಗೆ ವಿಟ್ಲ ಕಡೆಯಿಂದ ಬಂದ ಟೆಂಪೋ ವಾಹನವನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ದರಲ್ಲಿ ಪರವಾನಿಗೆ ಇಲ್ಲದೇ ವಧೆ ಮಾಡಲು ಸಾಗಾಟ ಮಾಡುತ್ತಿದ್ದ ದನ ಹಾಗೂ ಕರು ಕಂಡು ಬಂದಿದೆ. ರೂ.13ಸಾವಿರ ಮೌಲ್ಯದ ದನ, ರೂ.3ಸಾವಿರ ಮೌಲ್ಯದ ದನದ ಕರು ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ರೂ.75 ಸಾವಿರ ಟೆಂಪೋವನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ. Advertisement

Read More

ಬಂಟ್ವಾಳ: ಸಜೀಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿಸಜೀಪ ಮಾಗಣೆ ನಾಲ್ಕೈತ್ತಾಯ ದೈವದ ಮೆಚ್ಚಿ ಜಾತ್ರೆ ಪ್ರಯುಕ್ತ ಮೇ. 9ರಂದು ಅಗೇಲು ಸೇವೆ ಮತ್ತು ಕೋಲ ಸೇವೆ ಇರುವುದಿಲ್ಲ ಎಂದು ದೈವಸ್ಥಾನದ ಪ್ರಟಣೆ ತಿಳಿಸಿದೆ. Advertisement

Read More

Advertisement ಬಂಟ್ವಾಳ: ಬಿಎಲ್‌ಓ ಆಗಿ ಕರ್ತವ್ಯ ನಿರ್ವಹಿಸಿಲ್ಲ ಎನ್ನುವ ಕಾರಣಕ್ಕೆ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಫರ್ಲಾ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಲತಾ ಅವರ ಅಮಾನತು ಆದೇಶವನ್ನು ದ.ಕ. ಜಿಲ್ಲಾಧಿಕಾರಿ ಹಿಂಪಡೆದುಕೊಂಡಿದ್ದು ಕರ್ತವ್ಯಕ್ಕೆ ಪುನರ್ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಲತಾ ಅವರು ಗುರುವಾರದಿಂದಲೇ ಕರ್ತವ್ಯಕ್ಕೆ ಹಾಜರಾಗಿರುವುದಾಗಿ ತಿಳಿದು ಬಂದಿದೆ.ಲತಾ ಅವರು ಬಿಎಲ್‌ಒ ಕೆಲಸ ನಿರ್ವಹಿಸಲು ಅಸಾಧ್ಯವಾಗುತ್ತಿರುವ ಬಗ್ಗೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಮೊದಲೇ ಸಂಬಂಧಪಟ್ಟ ಅಧಿಕಾರಿಗಳಿಗೆಲ್ಲರಿಗೂ ಲಿಖಿತವಾಗಿ ಮತ್ತು ಖುದ್ದಾಗಿ ಪರಿಸ್ಥಿತಿಯನ್ನು ವಿವರಿಸಿದ್ದರೂ, ಜಿಲ್ಲಾಧಿಕಾರಿಯವರು ಅವರನ್ನು ಅಮಾನತು ಮಾಡಿದ್ದರು. ಇದರಿಂದಾಗಿ ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಸಂಘ ಲತಾ ಅವರ ಬೆಂಬಲಕ್ಕೆ ನಿಂತು ಸಂಘದ ಮೂಲಕ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ದಾಖಲೆ ಸಹಿತ ಅವರಿಗೆ ವಿವರಣೆ ನೀಡಿ ಬಡಪಾಯಿ ಲತಾ ಅವರ ಅಮಾನತು ಆದೇಶ ವಾಪಾಸ್ ಪಡೆದು ಹುದ್ದೆಯಲ್ಲಿ ಮುಂದುವರಿಸಲು ಒತ್ತಾಯಿಸಿತ್ತು. ತಮ್ಮ ಮನವಿಗೆ ಸ್ಪಂದಿಸದೇ ಇದ್ದಲ್ಲಿ ಎಲ್ಲಾ ಬಿಎಲ್‌ಓ ಗಳು ಕರ್ತವ್ಯ ರಾಜಿನಾಮೆ ನೀಡುವ ಎಚ್ಚರಿಕೆಯನ್ನು…

Read More