ಬಂಟ್ವಾಳ: ಮನೆಯೊಂದರ ಮಹಡಿ ಮೇಲೆ ಪೈಪ್ಲೈನ್ ಅಳವಡಿಕೆ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರೋರ್ವರು ಆಯತಪ್ಪಿ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಗುರುವಾರ ಕುಕ್ಕಿಪಾಡಿ ಗ್ರಾ.ಪಂ.ವ್ಯಾಪ್ತಿಯ ಮಾಡಮೆ ಎಂಬಲ್ಲಿ ಸಂಭವಿಸಿದೆ.
ಸಿದ್ದಕಟ್ಟೆ ದೇವಸ ನಿವಾಸಿ ಬಾಲಕೃಷ್ಣ ಆಚಾರ್ಯ ಅವರ ಪುತ್ರ ದುರ್ಗಾಪ್ರಸಾದ್(32)ಅವರು ಮೃತಪಟ್ಟವರಾಗಿದ್ದಾರೆ. ಅವರು ಮಾಡಮೆಯ ತೋಮಸ್ ಲೋಬೋ ಅವರ ಮನೆಯ ನೀರಿನ ಟ್ಯಾಂಕ್ಗಾಗಿ ಮಧ್ಯಾಹ್ನ ಪೈಪ್ಲೈನ್ ಅಳವಡಿಸುತ್ತಿದ್ದಾಗ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿದ್ದು, ಅವರ ತಲೆಗೆ ಗಂಭೀರ ಏಟಾಗಿತ್ತು. ತತ್ಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು.ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Advertisement
ದುರ್ಗಾಪ್ರಸಾದ್ ಅವರು ಬಾಲಕೃಷ್ಣ ದಂಪತಿಯ ಆರು ಮಂದಿ ಮಕ್ಕಳಲ್ಲಿ ಇಬ್ಬರು ಪುತ್ರರಲ್ಲಿ ಹಿರಿಯವನಾಗಿದ್ದು, ಮನೆಗೆ ಆಧಾರವಾಗಿದ್ದರು.ಅವಿವಾಹಿತರಾಗಿದ್ದ ಅವರು ಬಿಜೆಪಿ ಹಾಗೂ ಬಜರಂಗದಳ ಕಾರ್ಯಕರ್ತರಾಗಿದ್ದರು.
Advertisement