ಬಂಟ್ವಾಳ: ಸೂರಿಲ್ಲದೆ ಬಳಲುವ ಬಂಟ ಸಮುದಾಯಕ್ಕೆ ಆಸರೆಯಾಗುವಲ್ಲಿ ಇಂಟೆರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ (ರಿ) ಅವಿರತ ಶ್ರಮಿಸುತ್ತಿದೆ . ಫರಂಗಿಪೇಟೆ ವಲಯದ ಮನವಿಗೆ ಒಂದು ವರ್ಷದಲ್ಲಿ ಇನ್ನೊಂದು ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಹೇಳಿದರು.
ಫರಂಗಿಪೇಟೆ ವಲಯ ಬಂಟರ ಸಂಘ ದ ಮನವಿ ಮೇರೆಗೆ ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ (ರಿ) ವತಿಯಿಂದ 6 ಲಕ್ಷ ವೆಚ್ಚದ ಸದಾಶ್ರಯ ಮನೆಯನ್ನು ಕೊಟ್ಟಿಂಜ ಸುಗುಣ ಉಮೇಶ್ ಶೆಟ್ಟಿ ಯವರಿಗೆ ಹಸ್ತಾಂತರಿಸಿ ಮಾತನಾಡಿದರು.
ಈ ಸಂದರ್ಭ ದಲ್ಲಿ ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ್ ಡಿ ಶೆಟ್ಟಿ , ಇಂಟೆರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ (ರಿ ) ನ ಉಪಾಧ್ಯಕ್ಷರಾದ ಸುರೇಶ್ಚಂದ್ರ ಶೆಟ್ಟಿ , ಕಾರ್ಯದರ್ಶಿ ರಾಜ್ ಗೋಪಾಲ ರೈ , ಯುವ ವಿಭಾಗದ ಗೌರವಾಧ್ಯಕ್ಷ ರಾದ ದೇವಿ ಚರಣ್ ಶೆಟ್ಟಿ , ನವನೀತ್ ಶೆಟ್ಟಿ ಕದ್ರಿ , ನಿವೃತ್ತ ಪೊಲೀಸ್ ಅಧಿಕಾರಿ ಜಯಂತ ಶೆಟ್ಟಿ ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ , ಸದಸ್ಯರುಗಳಾದ ಪ್ರಸಾದ್ ರೈ ಕಲ್ಲಿಮಾರ್ , ವಿಟ್ಲ ವಲಯ ಬಂಟರ ಸಂಘದ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ , ಫರಂಗಿಪೇಟೆ ವಲಯ ಬಂಟರ ಸಂಘದ ಗೌರವಾಧ್ಯಕ್ಷರಾದ ಕಲ್ಲ ತಡಮೆ ಸುಂದರ ಶೆಟ್ಟಿ , ಅಧ್ಯಕ್ಷರಾದ ದೇವದಾಸ್ ಶೆಟ್ಟಿ ಕೊಡ್ಮಣ್ , ಕಾರ್ಯದರ್ಶಿ ಎ ಕೆ ಗಿರೀಶ್ ಶೆಟ್ಟಿ ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ ಕೊಟ್ಟಿಂಜ ಗುತ್ತು , ಕೋಶಾಧಿಕಾರಿ ಪ್ರತಾಪ್ ಆಳ್ವ ಸುಜೀರ್ ಗುತ್ತು ,ಹಿರಿಯರಾದ ಹರಿಣಾಕ್ಷಿ ಶೆಟ್ಟಿ ಕೊಳಂಬೆ , ಮಹಿಳಾ ವಿಭಾಗದ ಅಧ್ಯಕ್ಷೆ ವೀಣಾ ಮನೋಹರ ಶೆಟ್ಟಿ , ತಾಲೂಕು ಬಂಟರ ಸಂಘದ ಕಾರ್ಯಕಾರಿಣಿ ಸದಸ್ಯರುಗಳಾದ ನವೀನಚಂದ್ರ ಶೆಟ್ಟಿ ಮುಂಡಾಜೆ ಗುತ್ತು , ಶೈಲಜಾ ಸುಂದರಶೆಟ್ಟಿ ಕಲ್ಲ ತಡಮೆ , ಅರ್ಭಿ ಸುರೇಶ್ ಭಂಡಾರಿ , ಶೈಲಜಾ ಪದ್ಮನಾಭ ಶೆಟ್ಟಿ ಕೊಟ್ಟಿಂಜ , ಹರಿಶ್ಚಂದ್ರ ಆಳ್ವ ಪದೆಂಜಾರ್ , ಸುಮಾ ನವೀನ್ ಶೆಟ್ಟಿ ಮುಂಡಾಜೆ ಗುತ್ತು , ಸದಾಶಿವ ಶೆಟ್ಟಿ ಕೊಟ್ಟಿಂಜ ಗುತ್ತು , ನಾಗಪ್ಪ ಶೆಟ್ಟಿ ಪೊನ್ನೋಡಿ ಮತ್ತಿತರಿದ್ದರು . ಗುತ್ತಿಗೆದಾರ ಸುಕೇಶ್ ಶೆಟ್ಟಿ ತೇವು ಅವರನ್ನು ಗೌರವಿಸಲಾಯಿತು
ಫರಂಗಿಪೇಟೆ ವಲಯ ಬಂಟರ ಸಂಘ ದ ಅಧ್ಯಕ್ಷ ದೇವದಾಸ್ ಶೆಟ್ಟಿ ಕೊಡ್ಮಣ್ ಸ್ವಾಗತಿಸಿದರು ಜತೆ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೊಟ್ಟಿಂಜ ವಂದಿಸಿದರು