Author: admin

ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿ: ಹಾರೂನ್ ರಶೀದ್ ಬಂಟ್ವಾಳ: ರಾಜ್ಯ ಕಂಡ ಅತ್ಯಂತ ಭ್ರಷ್ಠ ಹಾಗೂ ಸಂವಿಧಾನ ವಿರೋಧಿ ಸರಕಾರ ಬೊಮ್ಮಾಯಿ ಸರಕಾರ. 40 ಪರ್ಸೆಂಟ್ ಸರಕಾರ ಎಂದು ಕುಖ್ಯಾತಿ ಪಡೆದಿದೆ. ಅಲ್ಪಸಂಖ್ಯಾತ ವಿರೋಧಿ ಧೋರಣೆಗಳಿಂದಲೇ ಕಾಲ ಕಳೆದ ಸರಕಾರ ಎಂದು ಜಾತ್ಯಾತೀತ ಜನತಾದಳದ ದ.ಕ. ಜಿಲ್ಲಾ ಅಲ್ಪಸಂಕ್ಯಾತ ಘಟಕದ ಅಧ್ಯಕ್ಷ ಹಾರೂನ್ ರಶೀದ್ ಹೇಳಿದರು. Advertisement ಅವರು ಜೆಡಿಎಸ್ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿರು. ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀರಿಸಿದ ಬಳಿಕ ಅನೈತಿಕ ಪೊಲೀಸ್‌ಗಿರಿ ಪ್ರಕರಣ ಹೆಚ್ಚಾಗಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಕೋಮು ವೈಷಮ್ಯದ ಘಟನೆಗಳಲ್ಲೂ ತುಷ್ಟೀಕರಣ ನೀತಿ ಅನುಸರಿಸಿ ಬೊಮ್ಮಾಯಿ ಸರಕಾರ ಮೃತರಿಗೆ ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಆರೋಪಿಸಿದರು. ಆಝಾನ್, ಹಿಜಬ್, ಜಾತ್ರೆಯಲ್ಲಿ ವ್ಯಾಪಾರದಲ್ಲೂ ಕೋಮುವಾದ ಮೊದಲಾದ ಕ್ಷುಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಕೋಮು ಆಧಾರಿತ ರಾಜಕೀಯ ಮಾಡುತ್ತಿರುವುದು ಖಂಡನೀಯ, ಅಧಿಕಾರದಲ್ಲಿ ರಾಜಧರ್ಮ ಪಾಳಿಸಬೇಕಾದ ಬೊಮ್ಮಾಯಿ ಒಂದು ವರ್ಗವನ್ನು ಓಲೈಸಿ…

Read More

ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶ​ 2023: ಇತ್ತೀಚಿನ ಅಧಿಸೂಚನೆಯ ಪ್ರಕಾರ, ಎಸ್​ಎಸ್​ಎಲ್​ಸಿ ಫಲಿತಾಂಶವು (ಮೇ 08) ಬೆಳಿಗ್ಗೆ10 ಗಂಟೆಗೆ ಪ್ರಕಟವಾಗಲಿದೆ. ರಿಸ್ಟಲ್​ ನೋಡುವುದು ಹೇಗೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ. Advertisement Advertisement ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ (KSEEB) ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶ 2023 (Karnataka SSLC Result 2023) ದಿನಾಂಕ ಮತ್ತು ಸಮಯವನ್ನು ಪ್ರಕಟಿಸಿದ್ದು, (May 08) ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಸುದ್ದಿಗೋಷ್ಠಿ ಮೂಲಕ ಫಲಿತಾಂಶ ಪ್ರಕಟಿಸಲಿದೆ. ಬೆಳಗ್ಗೆ 11 ಗಂಟೆಗೆ ಅಧಿಕೃತ ವೆಬ್​ಸೈಟ್ ಅಲ್ಲಿ ಫಲಿತಾಂಶ ಪ್ರಕಟವಾಗಲಿದೆ. sslc.karnataka.gov.in ಮತ್ತು kseab.karnataka.gov.in. ಫಲಿತಾಂಶವನ್ನು ಪರಿಶೀಲಿಸಲು ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಕರ್ನಾಟಕ SSLC ಫಲಿತಾಂಶ 2023: ಪರಿಶೀಲಿಸುವುದು ಹೇಗೆ? ಅಧಿಕೃತ ವೆಬ್‌ಸೈಟ್-sslc.karnataka.gov.in ಗೆ ಹೋಗಿ ಕಾಣಿಸಿಕೊಂಡ ಮುಖಪುಟದಲ್ಲಿ, ಕರ್ನಾಟಕ SSLC 2023 ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ ಹೊಸ ಲಾಗಿನ್ ಪುಟ ತೆರೆಯುತ್ತದೆ…

Read More

ಸಾಲೆತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಮತಯಾಚನೆ ಬಂಟ್ವಾಳ: ಬಿಜೆಪಿ ಅಭ್ಯರ್ಥಿ ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ಸಾಲೆತ್ತೂರು ವರೆಗೆ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು.ಚುನಾವಣೆಗೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿದ್ದು, ಕಾರ್ಯಕರ್ತರು ಮೈಮರೆಯದೆ ಮನೆಮನೆ ಬೇಟಿ ಮಾಡಿ ಮತಯಾಚನೆ ನಡೆಸಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಲು ರಾತ್ರಿ ಹಗಲು ನಿರಂತರವಾಗಿ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಿ ಎಂದರು .ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಬರುವುದು ನೂರಕ್ಕೆ ನೂರು ಸತ್ಯ.ಆದರೆ ರಾಜ್ಯಕ್ಕೆ ಮತ್ತು ಕೇಂದ್ರಕ್ಕೆ ಶಕ್ತಿ ನೀಡಲು ಬಂಟ್ವಾಳ ದಲ್ಲಿ ಪ್ರತಿಯೊಬ್ಬರು ಬಿಜೆಪಿಗೆ ಮತ ನೀಡಿ ಎಂದು ತಿಳಿಸಿದರು. Advertisement ಪ್ರಮುಖರಾದ ರವೀಶ್ ಶೆಟ್ಟಿ ಕರ್ಕಳ,ಮಾಧವ ಮಾವೆ, ಪುಷ್ಪರಾಜ್ ಚೌಟ, ಶಿವಪ್ರಸಾದ್ ಶೆಟ್ಟಿ, ಮೋಹನ್ ದಾಸ್ ಶೆಟ್ಟಿ, ಪುಷ್ಪಾಕಾಮತ್, ರಮೇಶ್ ರಾವ್ ಪತ್ತುಮುಡಿ, ಲೋಹಿತ್ ಅಗರಿ, ಬಾಲಕೃಷ್ಣ ಸೆರ್ಕಳ,ರಾಜೇಶ್ ಶೆಟ್ಟಿ ಮಂಚಿ, ಪ್ರಮೋದ್ ನೂಜಿಪ್ಪಾಡಿ, ರಾಜಾರಾಮ್ ಹೆಗ್ಡೆ, ಅಭಿಷೇಕ್…

Read More

https://youtu.be/IbnyJeqwoBk ರಮಾನಾಥ ರೈ ಅವರ ಶ್ರಮ ವ್ಯರ್ಥವಾಗಬಾರದೆಂದಿದ್ದರೆ ಅವರಿಗೆ ಮತನೀಡಿ ಗೆಲ್ಲಿಸಿ: ಬಿ. ಜನಾರ್ದನ ಪೂಜಾರಿ ಬಂಟ್ವಾಳ: ರಮಾನಾಥ ರೈ ಒಳ್ಳೆಯ ಮನುಷ್ಯ.. ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.. ಅವರು ಚುನಾವಣೆಯಲ್ಲಿ ಸೋತರೆ ನಾನು ಸತ್ತಂತೆ.. ನಾನು ಸಾಯಬಾರದೆಂದಿದ್ದರೆ ಅವರನ್ನು ಗೆಲ್ಲಿಸಿ..ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಅವರ ಪರವಾಗಿ, ಭಾವನಾತ್ಮಕವಾಗಿ ಮೆಚ್ಚುಗೆಯ ಮಾತಗಳನ್ನಾಡಿದ್ದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ. ಭಾನುವಾರ ಬಿ.ಸಿ.ರೋಡಿನ ಬಸ್ತಿಪಡ್ಪುವಿನಲ್ಲಿರುವ ತನ್ನ ನಿವಾಸ ಚೆನ್ನಮ್ಮ ಕುಟೀರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ನನಗೆ ವಯಸ್ಸಾದ ಕಾರಣ ದೇಹದ ಶಕ್ತಿ ಕುಂದಿದೆ. ಜನರು ನನನ್ನು ಕ್ಷಮಿಸಬೇಕು. ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಲು ಅಸಾಧ್ಯವಾಗಿರುವುದರಿಂದ ಮಾಧ್ಯಮದ ಮೂಲಕ ಮತದಾರರಲ್ಲಿ ಮತ ಯಾಚಿಸುತ್ತೇನೆ ಎಂದರು. advertisement Advertisement ಬಂಟ್ವಾಳ ಕ್ಷೇತ್ರದಲ್ಲಿ ರಮನಾಥ ರೈಯವರು ಹಲವಾರು ವರ್ಷಗಳಿಂದ ಮತಯಾಚಿಸುತ್ತಿದ್ದು ಅವರಿಗೆ ಸಂಪೂರ್ಣ ಬೆಂಬಲಕೊಟ್ಟು ಗೆಲ್ಲಿಸಿದ್ದೀರಿ. ಅವರು ನಿಮ್ಮನ್ನು ಮರೆಯದೆ ನಿಮ್ಮ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ. ಯಾವ…

Read More

https://youtu.be/RUZ-HZhMjQ0 ಬಿ.ಸಿ.ರೋಡಿನಲ್ಲಿ ಯೋಗಿ ಆದಿತ್ಯನಾಥ್ ಅವರಿಂದ ಬೃಹತ್ ರೋಡ್ ಶೋ ಬಂಟ್ವಾಳ: ಉತ್ತರಪ್ರದೇಶದ ಮುಖ್ಯಮಂತ್ರಿ, ಬಿಜೆಪಿಯ ಸ್ಟಾರ್ ಪ್ರಚಾರಕಲ್ಲೋರ್ವರಾದ ಯೋಗಿ ಆದಿತ್ಯನಾಥ್ ಶನಿವಾರ ಸಂಜೆ ಬಿ.ಸಿ.ರೋಡಿನಲ್ಲಿ ಬೃಹತ್ ರೋಡ್‌ಶೋ ನಡೆಸಿ ಇಲ್ಲಿನ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರ ಪರವಾಗಿ ಮತಯಾಚನೆ ನಡೆಸಿದರು. ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದ ಬಳಿಯಿಂದ ರಥದ ಮಾದರಿಯ ವಾಹನದ ಮೂಲಕ ಆಗಮಿಸಿದ ಯೋಗಿ ಆದಿತ್ಯನಾಥ್ ಅವರಿಗೆ ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಮೇಲ್ಸೆತುವೆಯ ಮೇಲಿಂದ ಪುಷ್ಪವೃಷ್ಠಿ ಹರಿಸಿ ಅದ್ದೂರಿಯ ಸ್ವಾಗತ ಕೋರಲಾಯಿತು. ಯೋಗಿ ಆದಿತ್ಯನಾಥ್ ಅವರು ರಸ್ತೆಯ ಇಕ್ಕೆಲಗಳಲ್ಲಿ ನಿಂತ ಬೃಹತ್ ಜನಸ್ತೋಮಕ್ಕೆ ಕೈ ಬೀಸಿ ನಮಿಸಿದರು. ಶಾಸಕ ರಾಜೇಶ್ ನಾಯ್ಕ್ ಅವರು ಯೋಗಿ ಆದಿತ್ಯನಾಥ ಅವರಿಗೆ ಶ್ರೀ ಆಂಜನೇಯನ ಕಂಚಿನ ವಿಗ್ರಹವನ್ನು ನೆನೆಪಿನ ಕಾಣಿಕೆಯಾಗಿ ನೀಡಿದರು.ಬಳಿಕ ಬಿ.ಸಿ.ರೋಡಿನ ಖಾಸಗಿ ಬಸ್ಸು ನಿಲ್ದಾಣ ಬಳಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಬಜರಂಗದಳ ಭಾರತದ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆ. ಇದನ್ನು ಯಾರಿಂದಲೂ ನಿಷೇಧಿಸಲು ಸಾಧ್ಯವಿಲ್ಲ ಎಂದರು. ಪ್ರಭು…

Read More

ಮೇ.7 : ಟಿವಿಎಸ್ ರೋನಿನ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆ ಬಂಟ್ವಾಳ: ಬಿ.ಸಿ. ರೋಡ್‍ನಲ್ಲಿ ಕಾರ್ಯಾಚರಿಸುತ್ತಿರುವ ಸೋನಾ ಟಿವಿಎಸ್ ಶೋರೂಂನಲ್ಲಿ ಅತ್ಯಾಧುನಿಕ ಶೈಲಿಯ ಟಿವಿಎಸ್ ರೋನಿನ್ ದ್ವಿಚಕ್ರ ವಾಹನ ಮೇ 7ರಂದು ಭಾನುವಾರ ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿದೆ.ಪ್ರತಿಷ್ಠಿತ ಟಿವಿಎಸ್ ಕಂಪೆನಿಯ ದ್ವಿಚಕ್ರ ವಾಹನಗಳು ವಿವಿಧ ವಿನ್ಯಾಸ ಮತ್ತು ಆತ್ಯಾಕರ್ಷಕ ಶೈಲಿ ಹಾಗೂ ದ್ವಿಚಕ್ರ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಬಿ.ಸಿ ರೋಡ್‍ನಲ್ಲಿರುವ ಸೋನಾ ಟಿವಿಎಸ್ ಶೋರೂಂನಲ್ಲಿ ಟಿವಿಎಸ್ ರೋನಿನ್ ದ್ವಿಚಕ್ರ ವಾಹನ ಮೇ 7ರಂದು ಬಿಡುಗಡೆಗೊಳ್ಳಲಿದೆ. Advertisement ಪ್ರಥಮ ಗ್ರಾಹಕರಿಗೆ ಬಿಎಚ್‍ಬಿ ಸಂಸ್ಥೆಯ ಮಾಲೀಕರಾದ ಮೊಹಮ್ಮದ್ ಸಾದಿಕ್ ರವರು ಕೀ ಯನ್ನು ಹಸ್ತಾಂತರ ಮಾಡಲಿದ್ದಾರೆ. ಅಂಜು ಹೋಮ್ ಇಂಡಸ್ಟ್ರೀಸ್‍ನ ಮಾಲಕರಾದ ಮಹಮ್ಮದ್ ಫಾರೂಕ್ ಅವರು ಟಿವಿಎಸ್ ರೋನಿನ್‍ನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದ್ದಾರೆ. ಬಿ.ಸಿ ರೋಡ್‍ನ ಸೋನಾ ಟಿವಿಎಸ್ ಶೋರೂಂ ಶುಭಾರಂಭದ ಪ್ರಯುಕ್ತ ನಿಮಗಾಗಿ ಒಂದು ಕೊಳ್ಳಿರಿ, ನಿಮ್ಮವರಿಗಾಗಿ ಒಂದು ಗೆಲ್ಲಿರಿ ಎಂಬ ಲಕ್ಕಿ ಕೂಪನ್‍ನ್ನ ಆಯೋಜಿಸಿದ್ದು, ಇದರ ಡ್ರಾ ಕಾರ್ಯಕ್ರಮವು ನಾಳೆ ಶೋರೂಂನಲ್ಲಿ ಗಣ್ಯರ…

Read More

ಬಂಟ್ವಾಳ: ಈ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿ ಸೌಹಾರ್ದತೆ ನೆಲಸಬೇಕಾದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಬೇಕು ಎಂದು ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಶುಂಠಿಕೊಪ್ಪ ತಿಳಿಸಿದರು. ಅವರು ಬಿ.ಸಿ.ರೋಡಿನಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಬಂಟ್ವಾಳದಲ್ಲಿ ಶಾಂತಿ ನೆಲೆಸಬೇಕಾದರೆ ಕಾಂಗ್ರೆಸ್ ಗೆಲ್ಲಬೇಕು ರಮನಾಥ ರೈ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ೯ನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ, ಅವರು ಮಾತ್ರ ಈ ತಾಲೂಕಿನ ನಿವಾಸಿಯಾಗಿದ್ದಾರೆ ಉಳಿದ ಅಭ್ಯರ್ಥಿಗಳು ಹೊರಗಿನವರು. ಈ ಕ್ಷೇತ್ರದ ಜನರ ನಾಡಿ ಮಿಡಿತ ಅವರಿಗೆ ತಿಳಿದ್ದಿದ್ದು ಸುಮಾರು 40 ವರ್ಷಗಳಿಂದ ಜನರ ಸೇವೆ ಮಾಡುತ್ತಿದ್ದಾರೆ. ಕಳೆದ ಬಾರಿ ಯಾವುದೋ ಕಾರಣಕ್ಕೆ ಸೋತಿದ್ದರು, ಆದರೆ ಈ ಬಾರಿ ಬಹುಮತದಿಂದ ಅವರನ್ನು ಗೆಲ್ಲಿಸುವಂತೆ ಮತದಾರರಲ್ಲಿ ವಿನಂತಿಸಿದರು. Advertisement Advertisement ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ಸದಸ್ಯ ಪಿಯೂಸ್‌ಎಲ್.ರೋಡ್ರಿಗಸ್, ಪ್ರಮುಖರಾದ ಬಿ. ಮೋಹನ್, ಪರಮೇಶ್ವರ ಮೂಲ್ಯ, ಅಬ್ಬಾಸ್ ಅಲಿ, ಜಯಂತಿ ವಿ. ಪೂಜಾರಿ, ಲೋಲಾಕ್ಷ ಶೆಟ್ಟಿ, ನಾರಾಯಣ ನಾಯ್ಕ,ಜೋಸ್ಪಿನ್ ಡಿಸೋಜಾ, ಜೆಸಿಂತಾ ಡಿಸೋಜಾ, ಶಬೀರ್ ಸಿದ್ದಕಟ್ಟೆ ಉಪಸ್ಥಿತರಿದ್ದರು.

Read More

ಬಂಟ್ವಾಳ: ಬಡವರು ಹಾಗೂ ಮಧ್ಯಮ ವರ್ಗದ ಜನರ ಅಭಿವೃದ್ದಿಗಾಗಿ ಬಿ. ರಮಾನಾಥ ರೈಯವರು ಅಧಿಕಾರಕ್ಕೆ ಬರಬೇಕು, ಆದ್ದರಿಂದ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಮನವಿ ಮಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಹಿಳಾ ಕಲ್ಯಾಣ ಕಾರ್ಯಕ್ರಮಗಳು ಜಾರಿ: ಜಯಂತಿ ವಿ. ಪೂಜಾರಿ ಬಿ.ಸಿ.ರೋಡಿನಲ್ಲಿರುವ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ ರೂ. ೨ ಸಾವಿರ ನೀಡುವ ಗೃಹಲಕ್ಷ್ಮಿ ಯೋಜನೆ, ಯುವಕರಿಗೆ ಯುವನಿಧಿ ಪದವೀಧರ ನಿರುದ್ಯೋಗಿಗಳಿಗೆ 3 ಸಾವಿರ ರೂ. ಡಿಪ್ಲೊಮಾದಾರರಿಗೆ 15೦೦ ರೂ. ನಿರುದ್ಯೋಗ ಭತ್ಯೆ,ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಮನೆಯ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿ, ಮಹಿಳೆಯರಿಗೆ ಉಚಿತ ಸರಕಾರಿ ಬಸ್ ಪ್ರಯಾಣ, ವಿಧವಾ ಪಿಂಚಣಿ ರೂ. 2500ಕ್ಕೆ ಹೆಚ್ಚಳ, ದುಡಿಯುವ ಮಹಿಳೆಯರಿಗಾಗಿ 100 ಹಾಸ್ಟೆಲ್‌ಗಳ…

Read More

ಬಂಟ್ವಾಳ: ಇಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದ.ಕ. ಜಿಲ್ಲೆಯ ಬಂಟ್ವಾಳದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಪರ ಬೃಹತ್ ರೋಡ್ ಶೋ ನಡೆಸಲಿದ್ದು,ಈ ಸಂದರ್ಭ ರಸ್ತೆ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ಪರ್ಯಾಯ ಮಾರ್ಗವಾಗಿ ವಾಹನಗಳು ಸಂಚರಿಸಲು ಮಾರ್ಗ ಬದಲಾವಣೆ ಮಾಡಿ ಆದೇಶಿಸಲಾಗಿದೆ Advertisement ಯೋಗಿ ಆದಿತ್ಯನಾಥ್ ಅವರು ಆಗಮಿಸುವ ಹೆಲಿಪ್ಯಾಡ್ ಸ್ಥಳ ಬದಲಾವಣೆಯಾಗಿದ್ದು, ಅವರು ಬಂಟ್ವಾಳ ತಾಲೂಕು ಶಾಂತ ಜಿ ಮೇಲಾಂಟ ಇವರ ಬಸ್ತಿಪಡು ಮೈದಾನದಲ್ಲಿರುವ ಹೆಲಿಪ್ಯಾಡ್ ನಲ್ಲಿ ಇಳಿಯಲಿರುವುದರಿಂದ ಮತ್ತು ಕಾರ್ಯಕ್ರಮಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದು, ಜನ ಸಂದಣಿಯಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ಮಧ್ಯಾಹ್ನ 12.00 ಗಂಟೆಯಿಂದ ರಾತ್ರಿ 8.00 ಗಂಟೆಯವರೆಗೆ ಪರ್ಯಾಯ ಮಾರ್ಗವಾಗಿ ವಾಹನಗಳು ಸಂಚರಿಸಲು ಮಾರ್ಗ ಬದಲಾವಣೆ ಮಾಡಲಾಗಿದೆ. Advertisement

Read More

ಅಪಪ್ರಚಾರ, ಕೋಮು ಭಾವನೆ ಕೆರಳಿಸುವುದೇ ಬಿಜೆಪಿ ಬಂಡವಾಳ : ರಮಾನಾಥ ರೈ ಬಂಟ್ವಾಳ : ಅಪಪ್ರಚಾರ, ಸುಳ್ಳು ಮತ್ತು ಕೋಮು ಭಾವನೆಯನ್ನು ಕೆರಳಿಸುವುದೇ ಬಿಜೆಪಿ ಬಂಡವಾಳ. ಬಿಜೆಪಿ ಸರಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದು, ಇವರ ಅವಧಿಯಲ್ಲಿ ಅಭಿವೃದ್ಧಿ ಶೂನ್ಯ. ಹೀಗಾಗಿ, ಸುಳ್ಳು ವದಂತಿಗಳ ಮೂಲಕವೇ ಚುನಾವಣೆ ಎದುರಿಸಲು ಅವರು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಏಮಾಜೆ ಹಾಗೂ ನೇರಳಕಟ್ಟೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು.ನನ್ನ ಶಾಸಕ, ಸಚಿವ ಸ್ಥಾನದ ಅವಧಿಯಲ್ಲಿ ಕ್ಷೇತ್ರಕ್ಕೆ ೫,೦೦೦ ಕೋಟಿಗೂ ಅಧಿಕ ಅನುದಾನ ತಂದು ಕ್ಷೇತ್ರದಾದ್ಯಂತ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಬಂಟ್ವಾಳದಲ್ಲಿ ಏನಾದರೂ ಸರಕಾರಿ ಯೋಜನೆಗಳು ಕಾರ್ಯಗತವಾಗಿದ್ದರೆ ಅದು ನನ್ನ ಅವಧಿಯಲ್ಲಿ ಜಾರಿಯಾಗಿರುವಂತದ್ದು. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನನ್ನ ಅವಧಿಯಲ್ಲಾಗಿದ್ದರೂ, ಅಪಪ್ರಚಾರದಿಂದ ನನ್ನನ್ನು ಸೋಲಿಸಲಾಗಿದೆ. ಸೋತ ಬಗ್ಗೆ ಬೇಸರವಿಲ್ಲ, ಅಪಪ್ರಚಾರ, ಸುಳ್ಳು, ವದಂತಿಗಳನ್ನು ಹರಡುವ ಮೂಲಕ, ವೈಯಕ್ತಿಕ ತೇಜೋವಧೆಯ ಮೂಲಕ ಸೋಲಿಸಿದ…

Read More