ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಬಂಟ್ವಾಳ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮತಯಾಚನೆ ನಡೆಸಿದರು.
ಬಳಿಕ ಮಾತನಾಡಿದ ಅವರು ಗೌರವಯುತವಾದ ಮತ್ತು ಶಾಂತಿಯುತ ಬದುಕಿಗಾಗಿ ಬಂಟ್ವಾಳದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಬಂಟ್ವಾಳ ಕ್ಷೇತ್ರದಲ್ಲಿ 2 ಸಾವಿರ ಕೋಟಿಗಿಂತಲೂ ಅಧಿಕ ಅನುದಾನದ ಮೂಲಕ ಸರ್ವ ವ್ಯಾಪಿ ಮತ್ತು ಸರ್ವಸ್ಪರ್ಶಿಯಾದ ಅಭಿವೃದ್ಧಿ ಮಾಡಿದ್ದೇನೆ ಎಂಬ ಸಂತೋಷ ಇದೆ, ಅಭಿವೃದ್ಧಿ ಜೊತೆಗೆ ಶಾಂತಿಯುತ ಬಂಟ್ವಾಳವಾಗಿ ನಿರ್ಮಾಣ ಮಾಡಿದ್ದೇನೆ ಎಂದು ತಿಳಿಸಿದರು.
ಆರೋಗ್ಯ ಕ್ಷೇತ್ರದಲ್ಲಿ ಅಮೂಲಾಗ್ರವಾಗಿ ಸುಧಾರಣೆ ತರಲು ನಾನು ಮಾಡಿದ ಪ್ರಯತ್ನಕ್ಕೆ ಬೆಲೆ ಸಿಕ್ಕಿದೆ. ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಕಲ ವ್ಯವಸ್ಥೆ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕ್ಷೇತ್ರದ ಜನರ ಮನೆಬಾಗಿಲಿಗೆ ತೆರಳಿ ಆರೋಗ್ಯ ತಪಾಸಣೆ ಮಾಡುವ ಉದ್ದೇಶದಿಂದ ಸಂಚಾರಿ ಐಸಿಯು ಬಸ್, ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ, ಐಸಿಯು ಬೆಡ್ ಹೀಗೆ ಹತ್ತಾರು ಯೋಜನೆಗಳನ್ನು ನೀಡಿದ್ದೇನೆ, ಇದರ ಜೊತೆಗೆ ಪುಂಜಾಲಕಟ್ಟೆ ಆಸ್ಪತ್ರೆಯನ್ನು 13 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ಪಾಲಕ್ಕಾಡ್ ಬಿಜೆಪಿ ಜಿಲ್ಲಾಧ್ಯಕ್ಷ ಹರಿದಾಸ್, ರಾಜ್ಯ ನ.ನೀ.ಸ. ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನ ಜಿ.ಕೆಭಟ್, ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ,ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಸಮಿತಿ ಪ್ರಮುಖರಾದ ಪ್ರಕಾಶ್ ಅಂಚನ್, ರಮನಾಥ ರಾಯಿ, ಗಣೇಶ್ ರೈ ಮಾಣಿ, ಸುರೇಶ್ ಕುಲಾಲ್, ದಿನೇಶ್ ಭಂಡಾರಿ, ಮಾದವ ಮಾವೆ, ಉದಯಕುಮಾರ್ ರಾವ್, ಗೋವಿಂದ ಪ್ರಭು, ಶ್ರೀಧರ್ ಶೆಟ್ಟಿ ಪುಳಿಂಚ, ಪ್ರಭಾಕರ ಪ್ರಭು, ರಂಜಿತ್ ಮೈರ, ವಿವೇಕ್ ಶೆಟ್ಟಿ ನಗ್ರಿಗುತ್ತು, ಶರ್ಮಿತ್ ಜೈನ್, ಮೋಹನ್ ಪಿ.ಎಸ್, ಯಶೋಧರ ಕರ್ಬೆಟ್ಟು, ರಾಜಾರಾಮ್ ನಾಯಕ್ , ಚಂದ್ರಶೇಖರ್ ಪೂಜಾರಿ ಅಗ್ರಹಾರ್ , ರಮನಾಥ ಪೈ, ಲಕ್ಮೀನಾರಾಯಣ, ನಾರಾಯಣ ಕುಲಾಲ್ ಭಂಡಾರಿಬೆಟ್ಟು,ಭಾರತಿ ಚೌಟ, ಮೀನಾಕ್ಷಿ ಕೆ.ಗೌಡ, ರೇಖಾ ಪೈ, ಶಶಿಕಲಾ , ಗೋಪಾಲ ಸುವರ್ಣ, ಗುರುದತ್ ನಾಯಕ್, ಸುಪ್ರೀತ್ ಆಳ್ವ, ಚರಣ್ ಜುಮಾದಿಗುಡ್ಡೆ, ಪುರುಷೋತ್ತಮ ಶೆಟ್ಟಿ , ಜನಾರ್ದನ ಬೊಂಡಾಲ,ರೋಶನ್ ಡಿ.ಸೋಜ, ಮತ್ತಿತರರು ಉಪಸ್ಥಿತರಿದ್ದರು.