ತುಂಬೆ: ಬಿಜೆಪಿಯ ತತ್ವ ಸಿದ್ದಾಂತ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರದ ಸಾಧನೆಯನ್ನು ಮೆಚ್ಚಿ ತುಂಬೆ ಗ್ರಾಮದ ಜ್ಯೋತಿಗುಡ್ಡೆಯಲ್ಲಿ ಹಲವು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಪುದು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಸುವರ್ಣ ಅವರ ನೇತೃತ್ವದಲ್ಲಿ ಬುಧವಾರ ರಾತ್ರಿ ಬಿಜೆಪಿ ಪಕ್ಷ ಸೇರಿದರು. ಬಿಜೆಪಿ ಮಂಗಳೂರು ಕ್ಷೇತ್ರದ ಅಭ್ಯರ್ಥಿ ಸತೀಶ್ ಕುಂಪಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಅವರು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು. ಪ್ರಮುಖರಾದ ಆರ್ ಎಸ್. ಜಯ ರಾಮಲ್ ಕಟ್ಟೆ, ರೂಪೇಶ್ ಜ್ಯೋತಿ ಗುಡ್ಡೆ, ಹರೀಶ್ ಜ್ಯೋತಿಗುಡ್ಡೆ, ಕೃಷ್ಣಪ್ಪ ಜ್ಯೋತಿ ಗುಡ್ಡೆ ಪ್ರಜ್ವಲ್, ಪ್ರತೀಕ್, ಕಿರಣ್ ಜ್ಯೋತಿಗುಡ್ಡೆ ಬಿಜೆಪಿ ಸೇರಿದರು.
ಬಳಿಕ ಬಿಜೆಪಿ ಮಂಗಳೂರು ಮಂಡಲ ವಾರ್ಡ್ 87ರ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಅಭ್ಯರ್ಥಿ
ಸತೀಶ್ ಕುಂಪಲ ಮಾತನಾಡಿ ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಯನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಿಂದ ಇದು ಜಗತ್ತು ಭಾರತವನ್ನು ನೋಡುತ್ತಿದೆ. ಬಿಜೆಪಿಯಂತಹ ಜಗತ್ತಿನ ಅತೀ ದೊಡ್ಡ ಪಕ್ಷದ ಕಾರ್ಯಕರ್ತರೆನ್ನಲು ಹೆಮ್ಮೆಯಾಗುತ್ತಿದೆ ಎಂದರು. ಮಂಗಳೂರು ಕ್ಷೇತ್ರದಲ್ಲಿ ಇನ್ನೂ ಕೂಡ ರಸ್ತೆ, ಕುಡಿಯುವ ನೀರಿನ ಸಮಸ್ಯೆ ಸಹಿತ ಅನೇಕ ಮೂಲಭೂತ ಸಮಸ್ಯೆ ಜನರನ್ನು ಕಾಡುತ್ತಿದೆ. ಬಿಜೆಪಿ ಪಕ್ಷ ಸಾಮಾನ್ಯ ಕಾರ್ಯಕರ್ತರನ್ನು ಬೆಳೆಸಿ ಅವರಿಗೆ ಅವಕಾಶ ನೀಡುವ ಪಕ್ಷವಾಗಿದೆ. ತಮ್ಮ ಅಮೂಲ್ಯ ಮತವನ್ನು ನೀಡಿದ್ದಲ್ಲಿ ಒಂದೊಂದು ಮತಕ್ಕೂ ಗೌರವ ಬರುವ ರೀತಿಯಲ್ಲಿ ಕೆಲಸ ಮಾಡುವುದಾಗಿ ತಿಳಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ
ಸಂತೋಷ್ ಕುಮಾರ್ ರೈ ಮಾತನಾಡಿ ಪಕ್ಷವನ್ನು ಮಾತೃ ಸ್ಥಾನದಲ್ಲಿ ಆರಾಧಿಸುವ ನಮ್ಮಂತಹ ಸಾಮಾನ್ಯ ಕಾರ್ಯಕರ್ತರಿಗೆ ಒಂದಲ್ಲ ಒಂದು ದಿನ ಪಕ್ಷ ಅವಕಾಶ ನೀಡುತ್ತದೆ. ಜೊತೆಯಾಗಿ ಪಕ್ಷಕ್ಕಾಗಿ ಕೆಲಸ ಮಾಡೋಣ. ಅಮೂಲ್ಯವಾದ ಮತವನ್ನು ನೀಡುವ ಮೂಲಕ
ಸತೀಶ್ ಕುಂಪಲರನ್ನು ನಾವು ಗೆಲ್ಲಿಸೋಣ ಎಂದರು.
ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ನವೀನ್ ಪಾಗಾಲ್ಪಾಡಿ, ಜಿಲ್ಲಾ ಕಾರ್ಯದರ್ಶಿ ಜಯಶ್ರೀ ಕರ್ಕೆರಾ, ಪುದು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಪ್ರಮುಖರಾದ ಸೋಮಪ್ಪ ಕೋಟ್ಯಾನ್, ವಿಠಲ ಸಾಲ್ಯಾನ್, ಬೂತ್ ಅಧ್ಯಕ್ಷ ಪ್ರವೀಣ್ ಜ್ಯೋತಿಗುಡ್ಡೆ, ಉದಯ್ ತುಂಬೆ, ಶಕ್ತಿ ಕೇಂದ್ರದ ಅಧ್ಯಕ್ಷ ಕಿಶೋರ್ ರಾಮಲ್ ಕಟ್ಟೆ, ಜಯಂತಿ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.