ಬಂಟ್ವಾಳ: ಅಕ್ರಮ ಗೋಸಾಗಾಟದ ವಾಹನವನ್ನು ಪತ್ತೆ ಮಾಡಿರುವ ಬಂಟ್ವಾಳ ಪೊಲೀಸರು ದನ ಹಾಗೂ ಕರುವನ್ನು ರಕ್ಷಣೆ ಮಾಡಿ ಟೆಂಪೋ ವಾಹನವನ್ನು ವಶಕ್ಕೆ ಪಡೆದುಕೊಂಡ ಘಟನೆ ಗೋಳ್ತಮಜಲು ಗ್ರಾಮದ ಗಣೇಶ ನಗರದಲಿ ಗುರುವಾರ ನಡೆದಿದೆ.
ಆರೋಪಿಗಳಾದ ಪುದು ಗ್ರಾಮದ ಅಮ್ಮಮಾರ್ ನಿವಾಸಿ ಬಶೀರ್ ಕೆ. (32) ಹಾಗೂ ಒಕ್ಕೆತ್ತೂರುವಿನ ಜೆರಾಲ್ಡ್ ಮಸ್ಕರೇನಸ್ (48) ಎಂಬವರನ್ನು ಬಂಧಿಸಿದ್ದಾರೆ.
ಬಂಟ್ವಾಳ ನಗರ ಪೊಲೀಸರು ಖಚಿತ ಮಾಹಿತಿ ಮೇರೆಗೆ ಗೋಳ್ತಮಜಲು ಗ್ರಾಮದ ಗಣೇಶ್ ನಗರ ಎಂಬಲ್ಲಿ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 11 ಗಂಟೆಯ ವೇಳೆಗೆ ವಿಟ್ಲ ಕಡೆಯಿಂದ ಬಂದ ಟೆಂಪೋ ವಾಹನವನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ದರಲ್ಲಿ ಪರವಾನಿಗೆ ಇಲ್ಲದೇ ವಧೆ ಮಾಡಲು ಸಾಗಾಟ ಮಾಡುತ್ತಿದ್ದ ದನ ಹಾಗೂ ಕರು ಕಂಡು ಬಂದಿದೆ. ರೂ.13ಸಾವಿರ ಮೌಲ್ಯದ ದನ, ರೂ.3ಸಾವಿರ ಮೌಲ್ಯದ ದನದ ಕರು ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ರೂ.75 ಸಾವಿರ ಟೆಂಪೋವನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
Advertisement