Author: admin

ಬಂಟ್ವಾಳ: ಬಿ.ಸಿ.ರೋಡಿನ ಮುನ್ಸಿಫ್ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ಲೋಕಾ ಅದಾಲತ್‌ನಲ್ಲಿ ಬಂಟ್ವಾಳ ಪುರಸಭೆಗೆ ಸಾರ್ವಜನಿಕರಿಂದ ಸುಮಾರು 33,62,284 ರೂಪಾಯಿ ಬಾಕಿ ವಸೂಲಾತಿಯಾಗಿದೆ.ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜೆಂಎಫ್‌ಸಿ ಭಾಗ್ಯಮ್ಮ, ಪ್ರಧಾನ ಸಿವಿಲ್ ನ್ಯಾಯಧೀಶ ಚಂದ್ರಶೇಖರ್ ತಳವಾರ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೃಷ್ಣಮೂರ್ತಿ ಅವರ ಉಪಸ್ಥಿತಿಯಲ್ಲಿ ಲೋಕಾ ಅದಾಲತ್ ನಡೆದಿದ್ದು ಬಂಟ್ವಾಳ ಪುರಸಭೆಗೆ ನೀರಿನ ತೆರಿಗೆ 19,14,881 ರೂಪಾಯಿ, ಮನೆ ತೆರಿಗೆ 5,34,290 ರೂಪಾಯಿ. ಕಟ್ಟಡ ಬಾಡಿಗೆ 9,13,613 ರೂಪಾಯಿ ವಸೂಲಾತಿಯಾಗಿದೆ.ಈ ಹಿಂದೆಯೂ ಲೀನಾಬ್ರಿಟ್ಟೋ ಅವರು ಪುರಸಭೆಯ ಮುಖ್ಯಾಧಿಕಾರಿಯಾಗಿದ್ದ ಸಂದರ್ಭ ಲೋಕಾ ಅದಾಲತ್ ಮೂಲಕ ಸುಮಾರು 10 ಲಕ್ಷ ರೂಪಾಯಿ ತೆರಿಗೆ ಹಣ ವಸೂಲಾತಿಯಾಗಿತ್ತು. ಈ ಬಾರಿ ಅತಿ ಹೆಚ್ಚು ಮೊತ್ತ ಬಾಕಿ ವಸೂಲಾತಿಯಾಗಿದ್ದು ಪುರಸಭೆಯ ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಸಮುದಾಯ ಸಂಘಟಕಿ ಉಮಾವತಿ ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಸಿಬ್ಬಂದಿಗಳಾದ ಅಬ್ದುಲ್ ರಝಾಕ್, ಜಯಶ್ರೀ, ರಮಣಿ ಮೊದಲಾದವರು ಉಪಸ್ಥಿತರಿದ್ದರು.

Read More

ಬಂಟ್ವಾಳ: ತಾಲೂಕಿನ ತಲಪಾಡಿಯ ಪೊನ್ನೋಡಿಯಲ್ಲಿರುವ ಕರ್ನಾಟಕ ರಾಜ್ಯ ಆಹಾರ ನಿಗಮದ ಅಕ್ಕಿ ಶೇಖರಣಾ ಕೇಂದ್ರದಿಂದ ಅನ್ನಭಾಗ್ಯದ ಫಲಾನುಭವಿಗಳಿಗೆ ಸಲ್ಲುವ ಒಟ್ಟು ೩೮೫೦ ಕ್ವಿಂಟಾಲ್ ಅಕ್ಕಿ ಕಳವಾಗಿ ಹಲವು ಸಮಯ ಕಳೆದಿದ್ದು ಇದರ ನೈಜ ಅಪರಾಧಿಗಳನ್ನು ಪತ್ತೆ ಮಾಡುವಂತೆ ಜಿ.ಪಂ. ಮಾಜಿ ಸದಸ್ಯ ತುಂಗಪ್ಪ ಬಂಗೇರ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.ತಲಪಾಡಿ ಪೊನ್ನೋಡಿಯಲ್ಲಿ ಪಡಿತರ ದಾಸ್ತನಿನಲ್ಲಿ ಕೊರತೆ ಕಂಡು ಬಂದಿರುವ ಬಗ್ಗೆ ಶಾಸಕ ರಾಜೇಶ್ ನಾಕ್ ಅವರು ದ.ಕ. ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ ಹಿನ್ನಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ದಾಳಿ ನಡೆಸಿ ಪಿಸ್ಟ್ ತಂತ್ರಾಂಶದ ಪ್ರಕಾರ ಸಗಟು ಮಳಿಗೆಯಲ್ಲಿ ೩೮೫೦ ಕ್ವಿಂಟಲ್ ಅಕ್ಕಿ ಕಳ್ಳತನವಾಗಿರುವುದು ಕಂಡು ಬಂದಿದೆ. ಬಡವರ ಪಡಿತರ ಅಕ್ಕಿಯನ್ನು ಜನರಿಗೆ ನೀಡದೆ ಕಸಿದು ಕಳ್ಳತನದ ಮೂಲಕ ಅವ್ಯವಹಾರ ಮಾಡುವ ಗ್ಯಾಂಗನ್ನು ಪತ್ತೆ ಮಾಡುವಲ್ಲಿ ಜಿಲ್ಲಾಡಳಿತ ಹಾಗೂ ಸರಕಾರ ವಿಫಲವಾಗಿದೆ ಎಂದು ತುಂಗಪ್ಪ ಬಂಗೇರ ಆರೋಪಿಸಿದರು. ಬೇಲಿಯೇ ಎದ್ದು ಹೊಲ ಮೇಯುತ್ತಿರುವಂತಹ ಅಧಿಕಾರಿಗಳಿಗೆ, ಅದಕ್ಕೆ ಪ್ರೋತ್ಸಾಹಿಸುವ ದಳ್ಳಾಳಿಗಳಿಗೆ ಶಿಕ್ಷೆ ಆಗಲೇ ಬೇಕು ಹಾಗೂ ಅವರನ್ನು…

Read More

ಬಂಟ್ವಾಳ: ತಾಲೂಕು ಸಂಜೀವಿನಿ ಒಕ್ಕೂಟದ ಮುಖ್ಯಪುಸ್ತಕ ಬರಹಗಾರ(ಎಂಬಿಕೆ)ರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ(ಎಲ್‌ಸಿಆರ್‌ಪಿ)ಗಳ ಯೂನಿಯನ್ ಅಧ್ಯಕ್ಷರಾಗಿ ಕಾವಳಪಡೂರು ಸಂಜೀವಿನಿ ಒಕ್ಕೂಟದ ಎಂಬಿಕೆ ಸೌಮ್ಯ ಯಶವಂತ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗೋಳ್ತಮಜಲು ಸಂಜೀವಿನಿ ಒಕ್ಕೂಟದ ಎಂಬಿಕೆ ಭವಾನಿ, ಕಾರ್ಯದರ್ಶಿಯಾಗಿ ರಾಯಿ ಗ್ರಾ.ಪಂ.ಒಕ್ಕೂಟದ ಎಲ್‌ಸಿಆರ್‌ಪಿ ಅಕ್ಷತಾ, ಜತೆ ಕಾರ್ಯದರ್ಶಿ ಕೊಳ್ನಾಡು ಗ್ರಾ.ಪಂ.ಎಲ್‌ಸಿಆರ್‌ಪಿ ಚಂದ್ರಕಲಾ, ಕೋಶಾಧಿಕಾರಿ ಸಜೀಪಮುನ್ನೂರು ಎಂಬಿಕೆ ಸುನೀತಾ ಹಾಗೂ ೧೦ ಮಂದಿ ಮುಖ್ಯ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

Read More

ಬಂಟ್ವಾಳ: ಸುಮಾರು 100 ವರ್ಷಗಳ ಹಿನ್ನೆಲೆ ಹೊಂದಿರುವ ಸಿದ್ಧಕಟ್ಟೆ ಸಮೀಪದ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ‘ವೀರ-ವಿಕ್ರಮ’ ಜೋಡುಕರೆ ಕಂಬಳ ಮಾ.16ರಂದು ನಡೆಯಲಿದ್ದು, ಇದೀಗ ಸಮರ್ಪಕ ಸ್ಥಳಾವಕಾಶ ಕೊರತೆ ಇರುವ ಹಿನ್ನೆಲೆಯಲ್ಲಿ ಇಲ್ಲಿಗೆ ಸಮೀಪದ ಕೊಡಂಗೆ ಎಂಬಲ್ಲಿ ಸುಮಾರು ಐದು ಎಕರೆ ಸರ್ಕಾರಿ ಜಮೀನಿನಲ್ಲಿ ಶಾಶ್ವತ ಕರೆ’ ನಿರ್ಮಿಸಲು ಕಂಬಳ ಸಮಿತಿ ಮಹತ್ತರ ನಿರ್ಧಾರ ಕೈಗೊಂಡಿದೆ ಎಂದು ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ ಹೇಳಿದ್ದಾರೆ.ಇಲ್ಲಿನ ಹೊಕ್ಕಾಡಿಗೋಳಿ ಕೊಡಂಗೆ ಎಂಬಲ್ಲಿ ‘ವೀರ-ವಿಕ್ರಮ’ ಜೋಡುಕರೆ ಬಯಲು ಕಂಬಳಕ್ಕೆ ಬುಧವಾರ ನಡೆದ ನೂತನ ‘ಶಾಶ್ವತ ಕರೆ ನಿರ್ಮಾಣ’ಕ್ಕೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಶಾಶ್ವತ ಕರೆ ನಿರ್ಮಾಣ ಬಳಿಕ ಸ್ಥಳೀಯ ಓಟದ ಕೋಣಗಳಿಗೆ ಕುದಿ ಕಂಬಳ ನಡೆಸಲು ಸಹಕಾರಿಯಾಗಲಿದ್ದು, ಪ್ರೇಕ್ಷಕರಿಗೂ ಸುಸಜ್ಜಿತ ಮೂಲಭೂತ ಸೌಕರ್ಯ ಒದಗಿಸಲು ಸಹಕಾತಿಯಾಗಲಿದೆ ಎಂದರು. ಸ್ಥಳೀಯ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಳದ ಕೃಷ್ಣಪ್ರಸಾದ್ ಅಸ್ರಣ್ಣ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಇಲ್ಲಿನ ಪೂಂಜ ಕ್ಷೇತ್ರ ಮತ್ತು…

Read More

ಬಂಟ್ವಾಳ: ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಶಾರೀರಿಕ ಹಾಗೂ ಸಾಂಸ್ಕೃತಿಕ ವೈವಿಧ್ಯಮಯ ಕ್ರೀಡೋತ್ಸವವು ದಶಂಬರ್ 9 ರಂದು (ಶನಿವಾರ) ಸಂಜೆ ಹನುಮಾನ್ ನಗರದ ವಿಶಾಲ ಮೈದಾನದಲ್ಲಿ ನಿರಂತರ ಎರಡೂವರೆ ತಾಸುಗಳ ಕಾಲ ನಡೆಯಲಿದೆ ಎಂದು ಪುತ್ತೂರು ಶ್ರೀ ವಿವೇಕಾಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ತಿಳಿಸಿದ್ದಾರೆ. ಬುಧವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು 40 ವಿಶೇಷ ಚೇತನ ಮಕ್ಜಳು ಸೇರಿದಂತೆ ಶಿಶುಮಂದಿರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪ.ಪೂ. ಹಾಗೂ ಪದವಿ ತರಗತಿಗಳ ಒಟ್ಟು 3,500 ವಿದ್ಯಾರ್ಥಿಗಳು ಈ ಕ್ರೀಡೋತ್ಸವದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ ಎಂದರು.ವಿದ್ಯಾರ್ಥಿಗಳಿಂದ ಪಥಸಂಚಲನ, ಶಿಶುನೃತ್ಯ, ಘೋಷ್ ವಾದನ, ಜಡೆಕೋಲಾಟ, ನಿಯುದ್ಧ, ದೀಪಾರತಿ, ಯೋಗಾಸನ, ಪ್ರಾಥಮಿಕ ವಿದ್ಯಾರ್ಥಿಗಳ ಸಾಮೂಹಿಕ ಪ್ರದರ್ಶನ, ನೃತ್ಯ ಭಜನೆ, ಮಲ್ಲಕಂಬ, ಘೋಷ್‌ಟಿಕ್‌ಟಿಕ್ ಪ್ರದರ್ಶನ, ನೃತ್ಯ ವೈವಿಧ್ಯ, ದ್ವಿಚಕ್ರ-ಏಕಚಕ್ರಸಮತೋಲನ, ಬೆಂಕಿ ಸಾಹಸ, ಕೇರಳದ ಚೆಂಡೆ ವಾದ್ಯ, ಕಾಲ್ಚಕ್ರ, ಕೂಪಿಕಾ ಸಮತೋಲನ, ಹಾಗೂ…

Read More

ಬಂಟ್ವಾಳ: ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಿಕೊಂಡು ಪೌಷ್ಟಿಕ ಆಹಾರವನ್ನು ಸೇವಿಸಿಕೊಂಡು ಆರೋಗ್ಯ ರಕ್ಷಣೆ ಮಾಡಬೇಕು. ಆ ಮೂಲಕ ತಾವು ಕ್ಷಯ ರೋಗ ಮುಕ್ತರಾಗಿ ಕ್ಷಯ ಮುಕ್ತ ಭಾರತ ನಿರ್ಮಿಸಲು ಸಹಕರಿಸಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು. ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ2025 ರ ವೇಳೆಗೆ ಭಾರತವನ್ನು‌ ಕ್ಷಯ ಮುಕ್ತ ರಾಷ್ಟ್ರವನ್ನಾಗಿ ರೂಪಿಸುವ ಉದ್ದೇಶದಿಂದ ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಆಹಾರ ದವಸ ಧಾನ್ಯ ವಿತರಿಸಿ ಮಾತನಾಡಿದರು. ಇದೊಂದು ಪವಿತ್ರವಾದ ಕೆಲಸ. ನಮ್ಮ ಜಿಲ್ಲೆಯಲ್ಲಿ ಸಿಡುಬು, ಆನೆಕಾಲು ರೋಗದಂತಹ ಮಾರಣಾಂತಕ ರೋಗಗಳು ಇದ್ದರೂ ಈಗ ಸಂಪೂರ್ಣ ನಿರ್ಮೂಲನವಾಗಿದೆ. ಸೂಕ್ತ ಔಷಧಿ ಹಾಗೂ ಪೌಷ್ಟಿಕ ಆಹಾರವನ್ನು ಸೇವಿಸುವುದರಿಂದ ಕ್ಷಯ ರೋಗವನ್ನು ಗುಣಪಡಿಸಲು ಸಾಧ್ಯವಿದೆ ಎಂದು ತಿಳಿಸಿದರು. ಪೌಷ್ಟಿಕ ಆಹಾರವನ್ನು ನೀಡುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಬೇಕಾಗಿದ್ದು ಆರ್ಥಿಕ ಹೊರೆಯ ಮಧ್ಯೆಯೂ ಕೃಷ್ಣ ಕುಮಾರ್ ಪೂಂಜ ಅವರ ನೇತೃತ್ವದಲ್ಲಿ ಸೇವಾಂಜಲಿ ಸಂಸ್ಥೆ ನಿಸ್ವಾರ್ಥವಾಗಿ, ನಿರಂತರವಾಗಿ ಮಾಡಿಕೊಂಡು…

Read More

ಬಂಟ್ವಾಳ: ಮೆಲ್ಕಾರ್‌ನ ನರಹರಿ ಪರ್ವತ ಶ್ರೀ ಸದಾಶಿವ ದೇವಾಲಯದ ಜೀರ್ಣೋದ್ಧಾರದ ಪ್ರಯುಕ್ತ ಸಹಸ್ರ ಸೀಯಾಳಾಭಿಷೇಕ ಸೋಮವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಕಳೆದ ಮೇ.೨೬ರಂದು ಶ್ರೀ ಕ್ಷೇತ್ರದಲ್ಲಿ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ಪ್ರಶ್ನಾಚಿಂತನೆಯು ನಡೆದಿದ್ದು ಅದರಂತೆ ದೇವಸ್ಥಾನಕ್ಕೆ ಸಂಬಂಧಿಸಿದ ಅಮ್ಟೂರು, ಗೋಳ್ತಮಜಲು, ಬೊಂಡಾಲ, ಶಂಭೂರು, ಪಾಣೆಮಂಗಳೂರು ಗ್ರಾಮಗಳ ಪ್ರತೀ ಮನೆಗಳಲ್ಲಿ ನಗರ ಭಜನೆಯನ್ನು ನಡೆಸಿ ಶ್ರೀ ದೇವರಿಗೆ ಸೀಯಾಳಾಭಿಷೇಕ ನಡೆಸಲಾಗಿದೆ. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ| ಪ್ರಶಾಂತ ಮಾರ್ಲ, ಜೀಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಆತ್ಮರಂಜನ್ ರೈ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ತಹಶೀಲ್ದಾರ್ ಎಸ್.ಬಿ.ಕೂಡಲಗಿ, ಉಪತಹಶೀಲ್ದಾರ್ ನವೀನ್ ಬೆಂಜನಪದವು ಆಡಳಿತ ಸಮಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Read More

ಬಂಟ್ವಾಳ: ಸಜೀಪಮೂಡ ಗ್ರಾಮದ ಸುಭಾಷ್‌ನಗರ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ರಮೇಶ್ ಅನ್ನಪ್ಪಾಡಿ ಆಯ್ಕೆಯಾದರು. ಇತ್ತೀಚೆಗೆ ನಡೆದ ಸಮಿತಿಯ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ, ಉಪಾಧ್ಯಕ್ಷರಾಗಿ ತಿಲಕರ ಪೂಜಾರಿ, ಕಾರ್ಯದರ್ಶಿಯಾಗಿ ಅಶ್ವಿನ್ ಪೂಜಾರಿ ಭಜನಾಧ್ಯಕ್ಷರಾಗಿ ಲೋಕೇಶ್ ಸುಭಾಷ್ ನಗರ, ಕೋಶಾಧಿಕಾರಿಯಾಗಿ ನಾರಾಯಣ್ ಪೂಜಾರಿ ಕೊಟ್ಟರಿಪಾಲು, ಜೊತೆ ಕಾರ್ಯದರ್ಶಿಯಾಗಿ ನಾರಾಯಣ್ ಅಮೀನ್, ಸಂಘಟನಾ ಕಾರ್ಯದರ್ಶಿಯಾಗಿ ಅಶೋಕ್ ಪೂಜಾರಿ ಕೊಮಾಲಿ, ಭಜನಾ ಉಪಾಧ್ಯಕ್ಷರಾಗಿ ಸಂತೋಷ್ ದಾಸರಗುಡ್ಡೆ, ಭಜನಾ ಕಾರ್ಯದರ್ಶಿಯಾಗಿ ನಿತಿನ್ ಮಾರ್ನಬೈಲ್ ಜೊತೆ ಕಾರ್ಯದರ್ಶಿಯಾಗಿ ಲಕ್ಷ್ಮೀಶ ಅಗರಿ ಮತ್ತು ಮಧುಸೂಧನ್ ಕರಂದಾಡಿ ಸಂಚಾಲಕರಾಗಿ ಮಹೇಶ್ ಪೂಜಾರಿ ಪಟ್ಟುಗುಡ್ಡೆ ಆಯ್ಕೆಯಾದರು.

Read More

ಬಂಟ್ವಾಳ ತಾಲೂಕಿನ ಬೆಂಜನಪದವು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಕ್ಲಾಂತ ಕನ್ನಡ ಚಿತ್ರದ ತುಳು ಧ್ವನಿಸುರುಳಿ ಕಾರ್ಯಕ್ರಮ ನಡೆಯಿತು. ಖ್ಯಾತ ಹಿನ್ನಲೆಗಾಯಕ ರಾಜೆಶ್ ಕೃಷ್ಣನ್ ಅವರು ಈ ತುಳು ಹಾಡನ್ನು ಹಾಡಿದ್ದು ಸ್ವತಃ ಅವರೇ ಧ್ವನಿ ಸುರುಳಿಯನ್ನು ಬೆಂಜನಪದವಿನ ಕೊರಗಜ್ಜ ಸನ್ನಿಧಿಯಲ್ಲಿ ಬಿಡುಗಡೆಗೊಳಿದರು. ಈ ಸಂದರ್ಭ ಕ್ಲಾಂತ ಚಿತ್ರತಂಡ ಅವರ ಜೊತೆಗಿತ್ತು.ತುಳುನಾಡಿನ ಕಾರಣಕ ದೈವ ಕೊರಗಜ್ಜನ ಕ್ಷೇತ್ರಕ್ಕೆ ಆಗಮಿಸಿದ ರಾಜೇಶ್ ಕೃಷ್ಣನ್ ಭಕ್ತಿಯಿಂದ ಶ್ರೀ ಕೊರಗಜ್ಜನಿಗೆ ನಮಿಸಿ ಚಿತ್ರದ ತುಳು ಧ್ವನಿ ಸುರುಳಿ ಬಿಡುಗಡೆಗೊಳಿಸಿದರು. ಹಾಡು ಕೇಳಿ ಬರುತ್ತಿದ್ದಂತೆಯೇ ಕೈ ಮುಗಿದು ಹಾಡನ್ನು ಹಾಡುತ್ತ ಭಾವಪರವಶರಾದರು. ಬಳಿಕ ಬೆಂಜನಪದವು ಕೊರಗಜ್ಜ ಕ್ಷೇತ್ರ ಹಾಗೂ ಕ್ಲಾಂತ ಚಿತ್ರ ತಂಡದ ವತಿಯಿಂದ ರಾಜೇಶ್ ಕೃಷ್ಣನ್ ಅವರನ್ನು ಗೌರವಿಸಲಾಯಿತು. ಕ್ಷೇತ್ರದ ಧರ್ಮದರ್ಶಿಗಳು ದೈವದ ಕರಿಗಂಧ, ಪ್ರಸಾದವನ್ನು ಚಿತ್ರತಂಡ ಹಾಗೂ ರಾಜೇಶ್ ಕೃಷ್ಣನ್ ಅವರಿಗೆ ನೀಡಿದರು. ಚಿತ್ರದ ನಿರ್ದೆಶಕ ವೈಭವ್ ಪ್ರಶಾಂತ್ ಅವರು ಮಾತನಾಡಿ ಈಗಾಗಲೇ ಕ್ಲಾಂತ ಚಿತ್ರೀಕರಣ ಪೂರ್ಣಗೊಂಡಿದ್ದು ಆದಷ್ಟು ಬೇಗ ಚಿತ್ರ ಸಿನಿಮಾ ಮಂದಿರಕ್ಕೆ ಬರಲಿದೆ.…

Read More

ಬಂಟ್ವಾಳ: ಅಕ್ಷಯಪಾತ್ರೆ ಫೌಂಡೇಶನ್‌ನ ವತಿಯಿಂದ ಕೃಷ್ಣನ ಪ್ರಸಾದವನ್ನು ಮಕ್ಕಳಿಗೆ ವಿತರಿಸುವ ಸತ್ಕಾರ್ಯ ಹಲವು ವರ್ಷಗಳಿಂದ ನಡೆಯುತ್ತಿದೆ. ಇಸ್ಕಾನ್ ಫೌಂಡೇಶನ್ ಮೂಲಕ ಇಡೀ ದೇಶದಲ್ಲಿ ೨೩ ಲಕ್ಷ ಮಂದಿಗೆ ಮಧ್ಯಾಹ್ನದ ಊಟ ತಲುಪುತ್ತಿದ್ದು, ಇದು ಅತ್ಯಂತ ಶ್ಲಾಘನೀಯ ಕೆಲಸವಾಗಿದೆ. ಅಕ್ಷಯಪಾತ್ರ ನೀಡುವ ಸಾತ್ವಿಕ ಆಹಾರದ ಮೂಲಕ ಮಕ್ಕಳಿಗೆ ಆದ್ಯಾತ್ಮಿಕ ಸಾಧನೆಯನ್ನು ನೀಡುವ ಕಾರ್ಯವನ್ನು ಇಸ್ಕಾನ್ ನಡೆಸುತ್ತಿದೆ. ಗ್ರಾಮೀಣ ಭಾಗದಲ್ಲಿ ತಲೆ ಎತ್ತಿನಿಂತಿರುವ ಈ ಘಟಕ ಯಶಸ್ವಿಯಾಗಿ ನಡೆಯಲಿ. ಇಸ್ಕಾನ್ ಮೂಲಕ ಕೃಷ್ಣನ ಪ್ರಸಾದದ ರವಾನೆ ಇಡೀ ಪ್ರಪಂಚಾದಾದ್ಯಂತ ನಡೆಯಲಿ ಎಂದು ಎಂದು ಉಡುಪಿಯ ಪುತ್ತಿಗೆ ಮಠದ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಹೇಳಿದರು.ಅಕ್ಷಯ ಪಾತ್ರೆ ಫೌಂಡೇಶನ್ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ ನಿರ್ಮಿಸಿರುವ ಕೇಂದ್ರೀಕೃತ ಅಡುಗೆ ಮನೆಗೆ ಚಾಲನೆ ನೀಡಿ ಆರ್ಶೀವಚನ ನೀಡಿದರು. ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತ್ ದಾಸ ಮಾತನಾಡಿ ಮಂಗಳೂರಿನಲ್ಲಿ ನಮ್ಮ ಅತ್ಯಾಧುನಿಕ ಅಡುಗೆಮನೆಯ ಪ್ರಾರಂಭವು ಅಕ್ಷಯ ಪಾತ್ರ ಫೌಂಡೇಶನ್ನ…

Read More