ಬಂಟ್ವಾಳ: ಕುರಿಯಾಳ ಗ್ರಾಮ ದುರ್ಗಾ ನಗರದ ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರದಲ್ಲಿ ನವರಾತ್ರಿ ದುರ್ಗಾಷ್ಟಮಿಯ ಪ್ರಯುಕ್ತ ಶ್ರೀ ದೇವರಿಗೆ ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆ ಸಂಪನ್ನಗೊಂಡಿತು.
ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅರ್ಚಕ ಸುದರ್ಶನ್ ಬಲ್ಲಾಳ್ ಪೌರೋಹಿತ್ಯ ನೆರವೇರಿಸಿದರು.
ಈ ಸಂದರ್ಭ ಭಜನೆ ಮಂಗಳ, ನವರಾತ್ರಿ ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು.
Advertisement
ವೇಷಗಳ ಪ್ರದರ್ಶನ:
ಅ. 23ರಂದು ಸೋಮವಾರ ಬೆಳಗ್ಗೆ 8ಕ್ಕೆ ಶ್ರೀ ದೇವಿಗೆ ಪೂಜೆ, ವಾಹನ ಪೂಜೆ, ಸಂಜೆ 6.30ರಿಂದ ಭಜನೆ ಪ್ರಾರಂಭಗೊಂಡು ರಾತ್ರಿ 8.30ಕ್ಕೆ ಭಜನೆ ಮಂಗಳ, ನವರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 9.30ರಿಂದ ವೇಷಗಳ ಪ್ರದರ್ಶನ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ತುಳಸಿಕಲಾ ತಂಡ ಕುರಿಯಳದಿಂದ ‘ಪೊಣ್ಣು ಬಾಲೆ’ ನಾಟಕ ಪ್ರದರ್ಶನಗೊಳ್ಳಲಿದೆ
Advertisement