ದೇರಳಕಟ್ಟೆ: ಕೇಶ ವಿನ್ಯಾಸದಲ್ಲಿ ಪ್ರಖ್ಯಾತಿ ಪಡೆದಿರುವ ಮುಂಬೈಯ ಪ್ರತಿಷ್ಠಿತ ಶಿವಾಸ್ ಸಂಸ್ಥೆಯ ಶಿವಾಸ್ ಕಾಲೇಜ್ , ಶಿವಾಸ್ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಇನ್ನೋವೇಷನ್ ( SIIPI ) ಸಂಸ್ಥೆ ಹಾಗೂ ಶಿವಾಸ್ ಸಿಗ್ನೇಚರ್ ಫ್ಯಾಮಿಲಿ ಸೆಲೂನ್ ದೇರಳಕಟ್ಟೆಯ ಪ್ಲಾಮಾ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟನೆ ನೆರವೇರಿಸಿದರು. ಅವರು ಮಾತನಾಡಿ ಬಹಳಷ್ಟು ಜನರ ಜೀವನದಲ್ಲಿ ಹೊಸಬೆಳಕು ಮೂಡಿಸಿದ ಶಿವರಾಮ್ ಭಂಡಾರಿ, ಧರ್ಮಸ್ಥಳದಲ್ಲಿಯೂ ಅವರ ಸೇವೆ ನಡೆಸುತ್ತಾ ಬಂದಿರುವರು. ರುಡ್ಸೆಟ್ ನಲ್ಲಿಯೂ ಸೇವೆ ನೀಡಿ ಯುವಸಮುದಾಯಕ್ಕೆ ಜೀವನದ ದಾರಿ ಮಾಡಿಕೊಟ್ಟವರು. ಶಿವರಾಮ್ ಭಂಡಾರಿ ಮುಂಬೈನಿಂದ ಉಜಿರೆಗೆ ಬರುತ್ತಾರೋ ಅನ್ನುವ ಕಾತುರವಿತ್ತು. ಆದರೆ ಖುದ್ದಾಗಿ ಬಂದು ತರಬೇತಿ ನೀಡಿರುವುದು ಆಶ್ಚರ್ಯ ತಂದಿತ್ತು. ಮೂರು ದಿನಗಳ ಕಾಲ ನಿಂತು ತರಬೇತಿ ನೀಡಿ ಅನೇಕರಿಗೆ ಬೆಳಕಾಗಿದ್ದಾರೆ. ಕೇಶವಿನ್ಯಾಸಕ್ಕೆ ಮುಂಬೈನಲ್ಲಿ ಡಿಪ್ಲೊಮಾ ಕೋಸ್೯ ಆರಂಭಿಸುವ ಮೂಲಕ ವಿಶೇಷ ರೂಪು ನೀಡಿ ಅನೇಕ ಮಂದಿ ಉತ್ತಮ ಸಂಪಾದನೆಯ ಉದ್ಯೋಗವಾಕಾಶ ಮಾಡಿಕೊಟ್ಟವರು. ಬಹಿರಂಗ ಸೌಂದರ್ಯ ಜೊತೆಗೆ ಅಂತರಂಗದ ಸೌಂದಯರ್ಯವೂ ಮುಖ್ಯವಾಗಿರುತ್ತದೆ. ಅದನ್ನು ಶಿವರಾಮ್ ಭಂಡಾರಿ ತೋರಿಸಿಕೊಟ್ಟಿದ್ದಾರೆ. ಕೊರೊನಾ ಸಂದರ್ಭದ ಸೇವೆಯೂ ಮರೆಯುವಂತಿಲ್ಲ. ಉತ್ತಮ ಭವಿಷ್ಯವೂ ಕಾಲೇಜಿನದ್ದಾಗಲಿ ಎಂದು ಶುಭ ಹಾರೈಸಿದರು.
ತುಳು ಚಿತ್ರರಂಗ ಹಾಗೂ ನಾಟಕ ಕಲಾವಿದ ಅರವಿಂದ್ ಬೋಳಾರ್ ಮಾತನಾಡಿ, ಮುಂಬೈನಲ್ಲೇ ಶಿವಾಸ್ ಸಲೂನ್ ನೋಡಿದ ಅನುಭವ. ಸೆಲೂನ್ ಅಲ್ಲ ಅದೊಂದು ಮ್ಯೂಸಿಯಂ.
ಶಿವರಾಮ್ ಭಂಡಾರಿ ಅವರ ಕಾಯಕ, ಕೈಚಳಕದಿಂದ ಬಾಲಿವುಡ್ ನಟರು, ರಾಜಕಾರಣಿಗಳು, ಕ್ರಿಕೆಟ್ ಆಟಗಾರರು ಅವರ ಸಲೂನ್ ಬರಲು ಸಾಧ್ಯವಾಗಿದೆ. ಯುವಸಮುದಾಯ ಶಿವರಾಮ್ ಭಂಡಾರಿ ಸಲೂನಿಗೆ ಈಗಲೂ ಬರುತ್ತಾರೆಂದರೆ ಅವರ ಪ್ರಾಮಾಣಿಕತೆ, ಶಿಸ್ತುಬದ್ಧವಾದ ಕಾಯಕ ಈಗಲೂ ನಡೆಯುತ್ತಾ ಬಂದಿದೆ. ಹೊಸತಾಗಿ ಉದ್ಘಾಟನೆಗೊಂಡ ಶಿವಾಸ್ ಕಾಲೇಜು ಕಲಿತವರಿಗೆ ದೇಶ ವಿದೇಶಗಳಲ್ಲಿ ಉತ್ತಮ ಕೆಲಸ ಮಾಡಲು ಅವಕಾಶ ಸಿಗಲಿದೆ ಎಂದು ಹಾರೈಸಿದರು.
ಮಂಗಳೂರು ವಿ.ವಿ ವಿಶ್ರಾಂತ ಉಪಕುಲಪತಿ ಬಿ.ಎಸ್ ಯಡಪಡಿತ್ತಾಯ ಮಾತನಾಡಿ ಸವಿತಾ ಸಮಾಜದ ಏಳಿಗೆಗಾಗಿ ಶಿವಾಸ್ ಅವರ ಶ್ರಮ ಶ್ಲಾಘನೀಯ. ತಲೆಕೂದಲು ಕಟ್ ಮಾಡುವ ಕಾಲವಿತ್ತು, ಇದೀಗ ಅದೊಂದು ಕಲೆಯಾಗಿದೆ. ಆ ಕುರಿತು ವೈಜ್ಞಾನಿಕತೆ , ಕಲೆಯ ರೂಪುರೇಷೆಯನ್ನು ಶಿವಾಸ್ ಕಾಲೇಜು ನೀಡಲಿದೆ. ಸಮಾಜಕ್ಕೆ ಕೊಡುಗೆ ನೀಡುವುದು, ತಾಯಿಯ ಸಂಕಲ್ಪವಾಗಿತ್ತು. ಅದನ್ನು ಮಗ ಈಡೇರಿಸುವ ಮುಖೇನ ತಾಯಿಗೆ ತಕ್ಕ ಮಗನಾಗಿ ಶಿವರಾಮ್ ಭಂಡಾರಿ ಇದ್ದಾರೆ ಎಂದರು.
ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಬಿ.ಜಿ ಹನೀಫ್ ಮಾತನಾಡಿ, ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳ ತವರೂರು ಉಳ್ಳಾಲಕ್ಕೆ ಶಿವಾಸ್ ಅವರು ಕೇಶವಿನ್ಯಾಸದ ಕಾಲೇಜು ಸ್ಥಾಪಿಸುವ ಮೂಲಕ ಕ್ಷೇತ್ರಕ್ಕೆ ನೀಡಿದ ಇನ್ನೊಂದು ಕಿರೀಟವಾಗಿದೆ. ಇದೊಂದು ವಾಣಿಜ್ಯ ಉದ್ದೇಶವಲ್ಲ ನಾಡಿಗೆ ನೀಡಿರುವ ಸೇವೆಯಾಗಿದೆ. ಸರಕಾರದಿಂದ ಮಾತ್ರವಲ್ಲ, ಅದರ ಜತೆಗೆ ಕೈಜೋಡಿಸಿ ದಾಗ ದೇಶದ ಅಭಿವೃದ್ಧಿ ಸಾಧ್ಯ. ಅದನ್ನು ಶಿವರಾಮ್ ಭಂಡಾರಿ ಒದಗಿಸಿದ್ದಾರೆ ಎಂದರು.
ನಿಟ್ಟೆ ಪರಿಗಣಿತ ವಿ.ವಿಯ ಉಪಾಧ್ಯಕ್ಷ ಡಾ.ಸತೀಶ್ ಭಂಡಾರಿ ಮಾತನಾಡಿ ತಾಯ್ನಾಡಿನಲ್ಲಿ ಉತ್ತಮ ಕೆಲಸವನ್ನು ಮಾಡುವ ಮೂಲಕ ತಾಯಿಯ ಆಸೆಯನ್ನು ಈಡೇರಿಸಿದ್ದಾರೆ ಎಂದರು.
ಬಾಲಿವುಡ್ ನಟ ಹಾಗೂ ನಿರ್ಮಾಪಕ , ಪದ್ಮಶ್ರೀ ಪುರಸ್ಕೃತ ಡಾ.ಮಧುರ್ ಭಂಡಾರ್ಕರ್ ಮಾತನಾಡಿ, ರಾಷ್ಟ್ರಕ್ಕೆ ಶಿವಾಸ್ ಸಂಸ್ಥೆ ಗೌರವ ತಂದುಕೊಟ್ಟಿದೆ. ಸೈನ್ಯ, ಪೊಲೀಸರ ಸೇವೆಗೆ ತಮ್ಮ ಸಂಸ್ಥೆಯ ಮೂಲಕ ಗೌರವಿಸುತ್ತಾ ಬಾಲಿವುಡ್ ನಟರು, ರಾಜಕಾರಣಿಗಳು ಹಾಗೂ ಕ್ರಿಕೆಟ್ ಆಟಗಾರರ ವಿಶ್ವಾಸವನ್ನು ಪಡೆದುಕೊಂಡಿದೆ. ಇದೀಗ ಕಾಲೇಜು ಸ್ಥಾಪನೆ ಮೂಲಕ ದೊಡ್ಡದಾದ ಮೈಲಿಗಲ್ಲು ಸ್ಥಾಪಿಸಿದೆ ಎಂದರು.
ಭಿವಾಂಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂತೋಷ್ ಎಂ.ಶೆಟ್ಟಿ ಬಿವಾಂಡಿ, ದಶಕಗಳಿಂದ ಶಿವಾಸ್ ಅವರನ್ನು ಹತ್ತಿರದಿಂದ ಗಮನಿಸಿರುವೆ, ವೈಶಿಷ್ಟ್ಯ ತೆಯ ವ್ಯಕ್ತಿ. ನಟರಲ್ಲಿ ಅಮಿತಾಬ್ ಬಚ್ಚನ್ ಗಿಂತ ಶ್ರೇಷ್ಟ ಬೇರೆ ಯಾರೂ ಇಲ್ಲ. ರಾಜಕಾರಣದಲ್ಲಿ ಬಾಳ ಠಾಕ್ರೆ ಯಂತಹ ಹಿರಿಯರಿಲ್ಲ. ಅಂತಹವರ ಜತೆಗೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿ ಶಿವಾಸ್ , ಅವರ ಜೊತೆಗೆ ಚಹಾ ಗೆ ಹಾಲಿರುವಂತೆ ನಮ್ಮ ಸಂಬಂಧ ಎಂದರು.
ಬಾಲಿವುಡ್ ನಟಿ ಪ್ರಾಚಿ ತೆಹ್ಲಾನ್ ಮಾತನಾಡಿ, ದೇಶದುದ್ದಕ್ಕೂ ಬಹಳಷ್ಟು ಸೆಲೂನ್ ಗಳಿವೆ. ಹೊಸ ಚಾಕಚಕ್ಯತೆಯ ಜೊತೆಗೆ ಸಂಸ್ಥೆಯನ್ನಾಗಿ ರೂಪಿಸುವ ಉದ್ದೇಶ ಮಹತ್ವಪೂರ್ಣದ್ದು, ಪೊಲೀಸ್ ಹಾಗೂ ಸೈನ್ಯದವರಿಗೆ ಗೌರವ ಕೊಟ್ಟು ಸ್ಥಾಪಿಸಿರುವ ಕಾರ್ಯ ಮಾಡಿರುವ ಶಿವರಾಮ್ ಭಂಡಾರಿ ಪ್ರಾಮಾಣಿಕ ಹಾಗೂ ಉತ್ತಮ ಮಾನವೀಯತೆಯ ಜೀವಿ ಎಂದರು.
ಕಡಂದಲೆ ಸುರೇಶ್ ಭಂಡಾರಿ ಮಾತನಾಡಿ ದೀಪವು ಜಗತ್ತಿಗೆ ಬೆಳಕು ನೀಡಿದಂತೆ, ಗಂಧದ ಕೊರಳು ಪರಿಮಳ ಕೊಟ್ಟಂತೆ, ಶಿವಾರಾಮಭಂಡಾರಿ ಇಡೀ ಸಮುದಾಯಕ್ಕೆ ಬೆಳಕು ಚೆಲ್ಲಿದವರು. ಕರ್ತವ್ಯವನ್ನು ಜಾತಿಯ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದಾಗ ಸಿಗುವ ಯಶಸ್ಸು ಭಂಡಾರಿಯವರಿಂದ ನೋಡಿ ಕಲಿಯಬೇಕಿದೆ. 23 ಸಂಸ್ಥೆಗಳನ್ನು ತೆರೆದಿರುವುದು ಬಹುದೊಡ್ಡ ಸಾಧನೆ ಎಂದರು.
ಶಿವಾಸ್ ಸಿಗ್ನೇಚರ್ ಫ್ಯಾಮಿಲಿ ಸಲೂನ್ ಅನ್ನು ಪದ್ಮಶ್ರೀ ಪುರಸ್ಕೃತ ಬಾಲಿವುಡ್ ನಟ ಹಾಗೂ ನಿರ್ಮಾಪಕ
ಮಧುರ್ ಭಂಡಾರ್ಕರ್ ಉದ್ಘಾಟಿಸಿದರು. ಶಿವಾಸ್ ವಿಮೆನ್ ಎಕ್ಸ್ ಕ್ಲೂಸಿವ್ ಸಲೂನ್ ಅನ್ನು ನಟಿ ಪ್ರಾಚಿ ತೆಹ್ಲಾನ್ ಉದ್ಘಾಟಿಸಿದರು. ಲ್ಯಾಬ್ ಅನ್ನು ವಿಶ್ರಾಂತ ಉಪಕುಲಪತಿ ಪಿ.ಸುಬ್ರಹ್ಮಣ್ಯ ಎಡಪಡಿತ್ತಾಯ ಉದ್ಘಾಟಿಸಿದರು.
ರಾಜೀವ್ ಗಾಂಧಿ ವಿ.ವಿಗಳ ಸೆನೆಟ್ ಮಾಜಿ ಸದಸ್ಯ ಡಾ.ಯು.ಟಿ. ಇಫ್ತಿಕಾರ್ ಆಲಿ, ಶಿವಾಸ್ ಹೇರ್ ಡಿಸೈನಸ್ ೯ ಪ್ರೈ.ಲಿ ಮುಖ್ಯಸ್ಥ ಡಾ. ಶಿವರಾಮ್ ಕೆ.ಭಂಡಾರಿ, ಸಿ ಇಒ ಡಾ.ವಿನೋದ್ ಛೋಪ್ರಾ, ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟೀಗಳಾದ ಅನುಶ್ರೀ ಎಸ್.ಭಂಡಾರಿ, ಶ್ವೇತಾ ಆರ್ ಭಂಡಾರಿ, ರೋಹಿಲ್ ಭಂಡಾರಿ, ಆರಾಧ್ಯ ಭಂಡಾರಿ, ಕಾಲೇಜು ಪ್ರಾಂಶುಪಾಲೆ ರೋವಿನಾ , ರುಡ್ಸೆಟ್ ಪ್ರಬಂಧಕ ಎಸ್.ಸೋನ್ಸ್, ರುಡ್ಸೆಟ್ ಮುಖ್ಯಸ್ಥ ಗಿರಿಧರ್ ಕಲ್ಲಾಪು, ಪ್ಲಾಮಾ ನೆಸ್ಟ್ ಅಪಾಟ್೯ಮೆಂಟ್ ಓನರ್ಸ್ ಅಸೋಸಿಯೇಷನ್ನಿನ ಅಧ್ಯಕ್ಷ ಮೊಹಮ್ಮದ್ ಸಲೀಮ್, ನಿಟ್ಟೆ ವಿ.ವಿ ಆಡಳಿತ ವಿಭಾಗ ಉಪಾಧ್ಯಕ್ಷ ಡಾ.ಸತೀಶ್ ಕುಮಾರ್ ಭಂಡಾರಿ, ಮಲ್ಲಿಕಟ್ಟ ನ್ಯುರೋ ಸೆಂಟರ್ ಆಡಳಿತ ನಿರ್ದೇಶಕ ಡಾ.ಶಂಕರ್ ಎನ್, ಭಿವಂಡಿ ಬಿಜೆಪಿ ಜಿಲ್ಲಾಧ್ಯಕ್ಷ ಸಂತೋಷ್ ಎಂ.ಶೆಟ್ಟಿ ಭೀವಂಡಿ, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್, ಉಪಸ್ಥಿತರಿದ್ದರು