ಬಂಟ್ವಾಳ : ಕಳೆದ 41 ವರ್ಷಗಳಿಂದ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಹಾಗೂ ಶ್ರೀ ಮುರುಘೇಂದ್ರ ವನಿತಾ ಸಮಾಜ ಇದರ ವತಿಯಿಂದ ಮಿತ್ರ ಮಂಡಳಿ ಸದಸ್ಯರು, ರಂಗಭೂಮಿ ಕಲಾವಿದರಾಗಿದ್ದ ದಿ.ಲಕ್ಷ್ಮಣ ಶೆಟ್ಟಿಗಾರ್,ದಿ.ಶ್ರೀಧರ್ ಕೆ.ವಿ., ದಿ.ರಘುರಾಮ ಶೆಟ್ಟಿ ಅವರ ಸ್ಮರಣಾರ್ಥ ಏಳು ದಿನಗಳ ದ.ಕ.,ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆ ಫೆ.4ರಿಂದ ಫೆ.11ರವರೆಗೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ.
ಫೆ.4ರಂದು ಪಲ್ಲವಿ ಕಲಾವಿದರು ಕಾರ್ಕಳ ಇವರಿಂದ ದಿಬ್ಬಣ ಫೆ.5 ರಂದು ಅಭಿನಯ ಕಲಾವಿದೆರ್ ಮಂಕುಡೆ ಇವರಿಂದ ಅಜ್ಜ ತತ್ತ್ಂಡಾ ಫೆ.6 ರಂದು ಕಲಾಮೃತ ಕಲಾವಿದೆರ್ ವಾಮಂಜೂರು ಇವರಿಂದ *ಕಥೆ ಏರ್ ಬರೆಪ್ಪೆರ್?, ಫೆ.7 ರಂದು ಕಲಾಶ್ರೀ ಬೆದ್ರ ಇವರಿಂದ ಉಲಾಯಿ ಲೆಪ್ಪುಗಾ, ಫೆ.8 ರಂದು ರಾಜರಾಜೇಶ್ವರಿ ಕಲಾವಿದೆರ್ ಮುಂಡಪಳ್ಳ ಕಾಸರಗೋಡು ಇವರಿಂದ ಲಿಂಕ್ ಲಿಂಗಪ್ಪೆ, ಫೆ.9ರಂದು ಕೃಷ್ಣ ಕಲಾವಿದೆರ್ ಉಡುಪಿ ಇವರಿಂದ ಆನಿದ ಮನದಾನಿ, ಫೆ.10ರಂದು ಪಿಂಗಾರ ಕಲಾವಿದೆರ್ ಬೆದ್ರ ಇವರಿಂದ ಭರಣಿ-ಕೃತ್ತಿಕೆ ನಾಟಕಗಳು ಪ್ರದರ್ಶನಗೊಳ್ಳಲಿದೆ. ಫೆ.11ರಂದು ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಚಂದ್ರನ್ ಕಿರು ಚಿತ್ರ ತಂಡ , ಹಿರಿಯ ರಂಗ ಕಲಾವಿದ ಡಿ.ಎಸ್.ಬೋಳೂರು ಅವರಿಗೆ ಸನ್ಮಾನ ಹಾಗೂ ಮಸ್ಕಿರಿ ಕುಡ್ಲ ಇವರಿಂದ ತೆಲಿಕೆ ಬಂಜಿ ನಿಲಿಕೆ ಕಾಮಿಡಿ ಶೋ ನಡೆಯಲಿದೆ .
ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಿನಾಥ್ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸವರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಅಧ್ಯಕ್ಷತೆ ವಹಿಸಲಿರುವರು. ಮಾಜಿ ಸಚಿವ ಬಿ.ರಮಾನಾಥ ರೈ ರಂಗವೇದಿಕೆ ಉದ್ಘಾಟಿಸುವರು. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಹರೀಶ್ ಪೂಂಜ ಮತ್ತಿತರ ಗಣ್ಯರು ಭಾಗವಹಿಸಲಿರುವರು. ಸಮಾರೋಪದಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅಧ್ಯಕ್ಷತೆ ವಹಿಸಲಿರುವರು. ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಸಂಚಾಲಕ ರಕ್ಷಿತ್ ಶಿವರಾಂ ಬಹುಮಾನ ವಿತರಿಸುವರು. ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ನ್ಯಾಯಾಧೀಶ ದಿನೇಶ್ ಹೆಗ್ಡೆ ಮತ್ತಿತರ ಗಣ್ಯರು ಭಾಗವಹಿಸಲಿರುವರು ಎಂದು ಅಧ್ಯಕ್ಷ ಪ್ರವೀಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖಪುಟ
ಸುದ್ದಿ
ಬಂಟ್ವಾಳ ಫರಂಗಿಪೇಟೆ
ವಾಮದಪದವು
ವಿಟ್ಲ
ಮಾಣಿ
ಕಲ್ಲಡ್ಕ
ವಿಶೇಷ-ವೈವಿಧ್ಯ
ಸಮಾಜಮುಖಿ
ಯೂಟ್ಯೂಬ್ ಚಾನೆಲ್/ವಿಡಿಯೋ
ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ
ಫೆ.4ರಿಂದ ಫೆ.11 : ತುಳು ನಾಟಕ ಸ್ಪರ್ಧೆ
Advertisement
Advertisement
Previous Articleಕುಸಿದು ಬಿದ್ದು ಕುಶಲಕರ್ಮಿ ಸಾವು
Related Posts
Add A Comment