ಜೆಸಿಐ ಬಂಟ್ವಾಳ ಇದರ ವತಿಯಿಂದ ಮೊಡಂಕಾಪುವಿನ ದೀಪಿಕಾ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಪೂರ್ವ ತಯಾರಿ ತರಬೇತಿ ಕಾರ್ಯಗಾರ ಮಂಗಳವಾರ ನಡೆಯಿತು.
Advertisement
ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ನಂದಕಿಶೋರ್ ಅವರು ಸಂನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಬೇತಿ ನೀಡಿದರು. ಈ ಸಂದರ್ಭ ಟ್ರಾಫಿಕ್ ವಾರ್ಡ್ ನ್ ದೊಡ್ಡಮನೆ ಎ.ಆರ್. ಪಟೇಲ್ ಅವರಿಗೆ ಸೆಲ್ಯೂಟ್ ಟೂ ಸೈಲೆಂಟ್ ವರ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕ ಸಾಧು, ಜೆಸಿಐ ಬಂಟ್ವಾಳದ ನಿಕಟಪೂರ್ವಾಧ್ಯಕ್ಷ ರೋಷನ್ ರೈ, ಕಾರ್ಯಕ್ರಮ ಸಂಯೋಜಕ ಸದಾನಂದ ಬಂಗೇರ, ಕಾರ್ಯದರ್ಶಿ ರಶ್ಮಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷರಾದ ಸುರೇಶ್ ನಾವೂರು, ಸಂತೋಷ್ ಜೈನ್, ಉಮೇಶ್ ಪೂಜಾರಿ,ಉಪಾಧ್ಯಕ್ಷ ಕಿಶೋರ್ ಆಚಾರ್ಯ
ಸಹಕರಿಸಿದರು.
Advertisement