
ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ಕ್ಷೇತ್ರ ದೇವಾಡಿಗ ಸಮಾಜ ಶ್ರೀ ನಂದಾವರ ದೇವಸ್ಥಾನ ರಥ ಸಮರ್ಪಣ ಸಮಿತಿ ಇದರ ವತಿಯಿಂದ ನಂದಾವರ ಕ್ಷೇತ್ರಕ್ಕೆ ಸಮರ್ಪಿಸುವ ರಥಕ್ಕೆ ರಥ ಪರಿಗ್ರಹ, ರಥ ಭೂ ಸ್ಪರ್ಶ, ರುದ್ರಹೋಮ, ಪೂರ್ಣಾಹುತಿ, ಹೋಮ ಕಲಶಾಭಿಷೇಕ ಕಾರ್ಯಕ್ರಮ ಸೋಮವಾರ ನಡೆಯಿತು
ದೇವಸ್ಥಾನದ ಪ್ರಧಾನ ಅರ್ಚಕ ಮಹೇಶ್ ಭಟ್ ಪೌರೋಹಿತ್ಯ ನೆರವೇರಿಸಿದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅರವಿಂದ ಭಟ್, ರಥ ಸಮರ್ಪಣಾ ಸಮಿತಿ ಅಧ್ಯಕ್ಷ ರಾಮದಾಸ ಬಂಟ್ಚಾಳ, ಪ್ರಧಾನ ಕಾರ್ಯದರ್ಶಿ ಸದಾಶಿವ ಮೊಯಿಲಿ, ಕೋಶಾಧಿಕಾರಿ ಪ್ರವೀಣ್ ದೇವಾಡಿಗ, ಪ್ರಮುಖರಾದ ಪದ್ಮನಾಭ ದೇವಾಡಿಗ, ಡಾ. ಸುಂದರ ಮೊಯಿಲಿ, ಸುಧೀರ್ ಕುಮಾರ್, ದಾಮೋದರ ದೇವಾಡಿಗ, ಸುಧಾಕರ ದೇವಾಡಿಗ, ಪ್ರಮೀಳಾ ದೇವಾಡಿಗ, ಹರೀಶ್ ದೇವಾಡಿಗ, ವಿಜಯಪ್ರಕಾಶ್ ದೇವಾಡಿಗ, ಶೀತಲ್ ದೇವಾಡಿಗ, ಜ್ಞಾನೇಶ್ ದೇವಾಡಿಗ, ಜಯಶಂಕರ ಬಾಸ್ರಿತ್ತಾಯ, ಅರುಣ್ ಕುಮಾರ್ ಕುಕ್ಕುದಕಟ್ಟೆ, ವಸಂತ ಕೊಯಮಜಲು, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.
