ಬಂಟ್ವಾಳ: ಇಚ್ಚಾಶಕ್ತಿಯ ಮೂಲಕ ಕೆಲಸ ಮಾಡಿದ್ದಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಿದೆ. ಜನರ ಗೌರವಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡಿದ ತೃಪ್ತಿ ಇದೆ. ರಾಜಕೀಯವಾಗಿ ಯಾರಲ್ಲೂ ವೈಯಕ್ತಿಕ ದ್ವೇಷವಿಲ್ಲ, ಪಕ್ಷದ ತತ್ವ ಸಿದ್ದಾಂತದ ಮೂಲಕ ರಾಜಕೀಯ ಮಾಡಿದ್ದು ಈ ಹಿಂದಿಗಿಂತ ನಾಲ್ಕು ಪಾಲು ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಈಗ ಕ್ಷೇತ್ರದಲ್ಲಿ ಆಗಿದೆ ಎಂದು ಬಂಟ್ವಾಳ ಆಸಕ ರಾಜೇಶ್ ನಾಯ್ಕ್ ಹೇಳಿದರು.
ಪಿತ್ತಿಲು ಅಶ್ವತ್ಥ ಕಟ್ಟೆ ಎಂಬಲ್ಲಿ ನಡೆದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದ ಸುಮಾರಿ 10 ಕೋಟಿ ರೂಪಾಯಿ ಅನುದಾನದ ವಿವಿಧ ರಸ್ತೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಲೋಕರ್ಪಾಣೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕಾಂಗ್ರೆಸ್ ನೀರಿನಿಂದ ಮೇಲೆತ್ತಿದ್ದ ಮೀನಿನಂತೆ ಅಧಿಕಾರವಿಲ್ಲದೆ ಒದ್ದಾಡುತ್ತಿದೆ. ಇತ್ತೀಚಿನ ಸರ್ವೆಯಂತೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಭಿವೃದ್ಧಿ ಕಾಯಛ ನಿರಂತರವಾದುದು. ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳು ಆಗಲಿದೆ ಎಂದು ತಿಳಿಸಿದರು. ಹೆಚ್ಚಿನ ಬೇಡಿಕೆಯ ರಸ್ತೆಗಳನ್ನು ಆದ್ಯತೆಯ ನೆಲೆಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಅತೀ ಹೆಚ್ಚು ದೈವ ದೇವಸ್ಥಾನಗಳಿಗೆ ರಸ್ತೆ ಸಹಿತ ಮೂಲಭೂತ ಸೌಕರ್ಯಗಳಿಗೆ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.
ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿ 30ವರ್ಷದಲ್ಲಿ ಆಗದ ಕೆಲಸವನ್ನು ಎರಡೂವರೆ ವರ್ಷದಲ್ಲಿ ಶಾಸಕ ರಾಜೇಶ್ ನಾಯ್ಕ್ ಮಾಡಿದ್ದಾರೆ. ಮತ ನೀಡಿದಕ್ಕೆ ಪ್ರತಿಯಾಗಿ ಅಭಿವೃದ್ಧಿ ಕಾರ್ಯ ಮಾಡಿ ಜನರ ಋಣ ಸಂದಾಯ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಮಾತನಾಡಿ ಇಂದು ಬಂಟ್ವಾಳ ಶಾಂತಿ, ನೆಮ್ಮದಿ ಅಭಿವೃದ್ಧಿಯ ಬಂಟ್ವಾಳ ಆಗಿದ್ದು ಇದು ಮುಂದುವರಿಯ ಬೇಕಾದರೆ ಕಾರ್ಯಕರ್ತರು ರಾಜೇಶ್ ನಾಕ್ ಅವರನ್ನು ಗೆಲ್ಲಿಸಲು ಪಣತೊಡುವಂತೆ ಮನವಿ ಮಾಡಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ,
ಗ್ರಾಮಪಂಚಾಯತಿ ಸದಸ್ಯರಾದ ಸತೀಶ್ ಬಂಗೇರ, ಸುಗಂದಿ, ಸುರೇಶ್ ಬಾರ್ದೊಟ್ಟು, ಉಷಾ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಪುರುಷೋತ್ತಮ ಶೆಟ್ಟಿ ವಾಮದಪದವು, ಹರೀಶ್ ಪ್ರಭು, ಕೇಶವ ಪ್ರಭು, ಶ್ಯಾಮ ನಾಯ್ಕ, ದಿನೇಶ್ ಜ್ಯೇಂಕಾರು, ಯಶವಂತ, ತಾರಾನಾಥ, ಗಿರಿಯಪ್ಪ ಮೂಲ್ಯ, ಹರೀಶ್ ನಾಯ್ಕ್, ವಿನ್ಸೆಂಟ್ ಮನೋಹರ್ ಸೇರಾ, ರೋಹಿನಾಥ್ ಕೆ, ಅರ್ಚನಾ, ಶೇಷಗಿರಿ, ಮಾಲತಿ, ಶೋಭಾ, ರವೀಂದ್ರ ಶೆಟ್ಟಿ, ಮಂಜುನಾಥ ಮಾಡ, ಮತ್ತಿತರರ ಪ್ರಮುಖರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಗ್ರಾಮಪಂಚಾಯತಿ ಸದಸ್ಯ ಸತೀಶ್ ಬಂಗೇರ ಅವರನ್ನು ಬೂತ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಪ್ರಕಾಶ್ ಕರ್ಲ ಸ್ವಾಗತಿಸಿದರು. ತಾರಾನಾಥ ಪರಂಪಳ್ಳಿ ವಂದಿಸಿದರು. ಗ್ರಾ.ಪಂ. ಸದಸ್ಯ ದೇವದಾಸ್ ಅಬುರ ಕಾರ್ಯಕ್ರಮ ನಿರೂಪಿಸಿದರು.