
ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣೆಯ ಆರೋಪಿ ಸುಮಾರು 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಮೂಲತಃ ಬೆಳ್ತಂಗಡಿ ತಾಲೂಕು ಉಜಿರೆ ಟಿ ಕ್ರಾಸ್ ಹಳೆಪೇಟೆ, ಪ್ರಸ್ತುತ ಕೇರಳ ತಾಲೂಕಿನ ಕುಂಬ್ಲೆ ನೀರ್ಜಾಲ್ ನಿವಾಸಿ ನರಸಿಂಹ ಎಂಬವರ ಪುತ್ರ ಮಣಿ ಅಲಿಯಾಸ್ ಮಣಿಕಂಠ (41) ಎಂಬಾತನನ್ನು ಬುಧವಾರ ನಗರ ಪೊಲೀಸರು ಬಂಧಿಸಿದ್ದಾರೆ.
ಠಾಣಾ ಸಿಬ್ಬಂದಿಗಳಾದ ಗಣೇಶ್, ರಾಜೇಶ್, ಪ್ರವೀಣ್ ಅವರ ತಂಡ ಮಾಹಿತಿ ಸಂಗ್ರಹಿಸಿ ಬೆಳ್ತಂಗಡಿ ತಾಲೂಕಿನ ನೆಲ್ಯಾಡಿ ಸಮೀಪದ ಶಿಬಾಜೆ ಎಂಬಲ್ಲಿಂದ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

