Author: admin
ಸಾಹಿತಿ ಸಂಘಟಕ ಬಿ.ತಮ್ಮಯ್ಯ ಅವರ ನೆನಪಿನ ರಾಜ್ಯಮಟ್ಟದ “ಅತೀ ಸಣ್ಣ ಕಥೆ” ಹಾಗೂ ಲಲಿತ ಪಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಎರಡು ವಿಭಾಗಗಳಲ್ಲಿ ಪ್ರತ್ಯೇಕ ಸ್ಪರ್ಧೆಯು ನಡೆಯಲಿದೆ. ಅತೀ ಸಣ್ಣ ಕಥೆ ಸ್ಪರ್ಧೆಯು ಕಥೆಗಾರರಲ್ಲಿರುವ ಕಥಾ ಕೌಶಲವನ್ನು ಪ್ರಕಟಪಡಿಸುವ ವೇದಿಕೆಯಾಗಿದ್ದು, 250 ಪದಮಿತಿಯಲ್ಲಿ ಕಥೆಯನ್ನು ಬರೆದು ಕಳುಹಿಸಬೇಕು.ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ತಮ್ಮ ಆಯ್ಕೆಯ ಯಾವುದಾದರೂ ಒಂದು ವಿಷಯದ ಮೇಲೆ 5 ಪುಟ ಮೀರದಂತೆ ಲಲಿತ ಪ್ರಬಂಧ ಬರೆದು ಕಳುಹಿಸಬಹುದು. ಎರಡೂ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾರ್ಥಿಗಳು ಕಳುಹಿಸುವ ಬರಹಗಳು ಸ್ವಂತ ರಚನೆಯಾಗಿದ್ದು, ಎಲ್ಲಿಯೂ ಪ್ರಕಟಗೊಂಡಿರಬಾರದು. ತಮ್ಮ ಬರಹಗಳನ್ನು ನುಡಿ ಅಥವಾ ಯುನಿಕೋಡ್ ನಲ್ಲಿ 12 ಫಾಂಟ್ ನಲ್ಲಿ ಬರೆದು ಕಳುಹಿಸಬೇಕು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಪ್ರಥಮ:3000, ದ್ವಿತೀಯ: 2000 ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಬರಹಗಾರರಿಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಬರಹಗಾರರು ತಮ್ಮ ಸ್ವವಿಳಾಸವನ್ನು ಮೊಬೈಲ್ ಸಂಖ್ಯೆಯೊಂದಿಗೆ ಸ್ಪಷ್ಟವಾಗಿ ನಮೂದಿಸತಕ್ಕದ್ದು. ತಮ್ಮ ಬರವಣಿಗೆಗಳನ್ನು…
ಬಂಟ್ವಾಳ: ಬೈದ್ಯ ಶ್ರೀ ಟ್ರೋಫಿ 2024 ಕ್ರಿಕೆಟ್ ಪಂದ್ಯಾಟಕ್ಕೆ ಟೀಮ್ ನಮ್ಮ ಬಿರುವೆರ್ ರಾಯಿ ಇದರ ಜೆರ್ಸಿ ಬಿಡುಗಡೆ ಕಾರ್ಯಕ್ರಮ ನಾಗೇಶ್ ಕುಲಾಲ್ ಮಾಲಕತ್ವದ ಸೌತಡ್ಕ ಪರ್ನಿಚರ್ಸ್ ಬಂಟ್ವಾಳದಲ್ಲಿ ನಡೆಯಿತು. ಮುಖ್ಯ ಅತಿಥಿ ಗಳಾಗಿ ಸೌತಡ್ಕ ಫರ್ನಿಚರ್ಸ್ ಮಾಲಕ ನಾಗೇಶ್ ಭಾಗವಹಿಸಿ ಶುಭ ಹಾರೈಸಿದರು. ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ರಾಯಿ ಕೊಯಿಲ ಅರಳ ಇದರ ಅಧ್ಯಕ್ಷ ಶೇಖರ್ ಅಂಚನ್, ಜೈನ್ ಫೈಬರ್ ಡೋರ್ ಮಾಲಕ ರಾಜೇಶ್ ಜೈನ್ ಪಡ್ರಯಿ, ಕುಡ್ಲ ಬಿಲ್ದರ್ಸ್ ಮಾಲಕ ಸುರೇಶ್ ಅಲ್ಲಿಪಾದೆ, ಯುವ ವಾಹಿನಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಬೆಟ್ಟು, ನಮ್ಮ ಬಿರುವೆರ್ ಟೀಮ್ ನ ಮಾಲಕ ಸಮಿತ್ ರಾಯಿ, ಧನ್ವಿ ಎಲೆಕ್ಟ್ರಿಕಲ್ ಮಾಲಕ ನಿತೇಶ್ ರಾಯಿ ಭಾಗವಹಿಸಿದ್ದರು. ತಂಡದ ಆಟಗಾರರು ಉಪಸ್ಥಿತರಿದ್ದರು.
ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಸುಜೀರುವಿನಲ್ಲಿರುವ ಶ್ರೀರಾಮ ವೈದ್ಯನಾಥ ಭಜನಾ ಮಂದಿರದ 75ನೇ ವರ್ಷದ ಏಕಾಹ ಭಜನಾ ಮಹೋತ್ಸವ ಹಾಗೂ ಲೋಕ ಕಲ್ಯಾಣಾರ್ಥ ಶತರುದ್ರಯಾಗ 2025 ಜ.5 ರಿಂದ 14ವರೆಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಭಾನುವಾರ ಸುಜೀರುವಿನ ಶ್ರೀ ರಾಮ ವೈದ್ಯನಾಥ ಭಜನಾ ಮಂದಿರದಲ್ಲಿ ನಡೆಯಿತು. ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.ಗೌರವ ಸಲಹೆಗಾರ ರಾಧಸುರಭಿ ಗೋ ಮಂದಿರದ ಭಕ್ತಿ ಭೂಷಣ್ ಪ್ರಭುಜಿ ಮಾತನಾಡಿ ಶತರುದ್ರ ಯಾಗ ಅತ್ಯಂತ ಶಕ್ತಿಶಾಲಿಯಾದುದು, ಯಾಗ ಮಾಡಲು ನಮ್ಮಲ್ಲಿ ಆಧ್ಯಾತ್ಮ ಶಕ್ತಿ, ಭಕ್ತಿ ಶ್ರದ್ಧೆಯೂ ಬೇಕು. ಯಾಗದ ಸಂದರ್ಭ ಶುದ್ಧಾಚಾರದಲ್ಲಿ ಇದ್ದುಕೊಂಡು ದೇವರ ನಾಮಸ್ಮರಣೆ ಮಾಡಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು. ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಐತಪ್ಪ ಆಳ್ವ ಸುಜೀರು ಗುತ್ತು ಅಧ್ಯಕ್ಷತೆ ವಹಿಸಿ ಮಾತನಾಡಿ ದುಷ್ಟ ಶಕ್ತಿಗಳನ್ನು ನಿವಾರಿಸಿ ನಮ್ಮ ಜೀವನದ ಅಭ್ಯುದಯಕ್ಕೆ ರುದ್ರಯಾಗ ಪ್ರಯೋಜನಕಾರಿಯಾಗಲಿದೆ. ಈ ಪುಣ್ಯ ಕಾರ್ಯದಲ್ಲಿ ಶ್ರದ್ದಾಭಕ್ತಿ,…
ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ ವಿದ್ಯಾಗಿರಿ ಬಂಟ್ವಾಳ, ಇದರ ವತಿಯಿಂದ ಶ್ರೀ ವೆಂಕಟರಮಣ ಸ್ವಾಮಿ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸಂಘದ ಸದಸ್ಯ ಶ್ರೀ ರಾಘವೇಂದ್ರ ಕೂಡಿಗೆ ಶೆಣೈ ಅವರು ತಾಯಿ ಸವಿತಾ ಕೂಡಿಗೆ ಶೆಣೈ ಅವರ ಸ್ಮರಣಾರ್ಥ ನೀಡಲಾಗುವ ಮಧ್ಯಾಹ್ನದ ಉಚಿತ ಬಿಸಿಯೂಟ ಯೋಜನೆಗೆ ಬುಧವಾರ ಚಾಲನೆ ನೀಡಲಾಯಿತು. ಜೆಸಿಐ ವಲಯ ತರಬೇತುದಾರ ಸಂದೀಪ್ ಸಾಲ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಫಲಾನುಭವಿ ವಿದ್ಯಾರ್ಥಿಗಳಿಗೆ ಕಾರ್ಡ್ ವಿತರಿಸಿ ಮಾತನಾಡಿ ದೂರದೂರುಗಳಿಂದ ಬರುವ ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ ಈ ಯೋಜನೆ ಜಾರಿಗೊಳಿಸಿರುವುದು ಅಭಿನಂದನೀಯ, ವಿದ್ಯಾರ್ಥಿಗಳು ಇದರ ಮಹತ್ವವನ್ನು ಅರಿತುಕೊಂಡು ಯೋಜನೆ ಯಶಸ್ವಿಯಾಗಿ ಸಾಕಾರಗೊಳ್ಳಲು ಸಹಕರಿಸುವಂತೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಸುಯೋಗವರ್ಧನ್ ಡಿ.ಎಂ. ಅವರು ಮಾತನಾಡಿ ಕೋವಿಡ್ ಬಳಿಕ ಕಾರಣಾಂತರಗಳಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಆಡಳಿತ ಮಂಡಳಿಯ ತೀರ್ಮಾನದಂತೆ ಈ ಯೋಜನೆಗೆ ಮರು ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುದರ್ಶನ್…
ಬಂಟ್ವಾಳ: ಯಕ್ಷಗಾನದ ಹಾಸ್ಯರಾಜ ಎಂದೇ ಹೇಳಲಾಗುವ ಶುದ್ಧ ಹಾಸ್ಯ ನೀಡುವ ಮೂಲಕ ಪ್ರೇಕ್ಷಕರ ಮನರಂಜಿಸುತ್ತಿದ್ದ ಬಂಟ್ವಾಳ ಜಯರಾಮ ಆಚಾರ್ಯ ಬೆಂಗಳೂರಿನಲ್ಲಿ ಅ.21ರಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಆಗಮಿಸಿದ್ದ ಅವರು ಇಂದು ಮುಂಜಾನೆ ನಾಲ್ಕು ಗಂಟೆಗೆ ಹೃದಯಸ್ತಂಭನವಾಗಿ ಜೊತೆ ಕಲಾವಿದರು ಆಸ್ಪತ್ರೆಗೆ ಸೇರಿಸಿದರೂ ಫಲವಾಗದೆ ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಬಂಟ್ವಾಳದಲ್ಲಿ 1957, ಅಕ್ಟೋಬರ್ 12ರಂದು ಬಂಟ್ವಾಳ ಗಣಪತಿ ಆಚಾರ್ಯ, ಭವಾನಿ ಅಮ್ಮ ಅವರ ಪುತ್ರರಾಗಿ ಜನಿಸಿದ ಜಯರಾಮ ಆಚಾರ್ಯರು, ಬಂಟ್ವಾಳ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಬೋರ್ಡ್ ಶಾಲೆ)ಯಲ್ಲಿ ವಿದ್ಯಾಭ್ಯಾಸ ನಡೆಸಿ, ತಂದೆಯವರ ಪ್ರೇರಣೆಯಿಂದ ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟ ನಡೆಸಿ ವೇಷವನ್ನೂ ಮಾಡಿದ್ದರು. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿದ್ದ `ಲಲಿತ ಕಲಾ ಕೇಂದ್ರ’ಕ್ಕೆ ಸೇರಿ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು. ಅದಾದ ಬಳಿಕ ಕಟೀಲು ಮೇಳದಲ್ಲಿ 4 ವರ್ಷ, ಪುತ್ತೂರು ಮೇಳ, ಕದ್ರಿ ಮೇಳ, ಕುಂಬಳೆ ಮೇಳದಲ್ಲಿ ತಿರುಗಾಟ ನಡೆಸಿದರು.ಮತ್ತೆ ಕಟೀಲು…
ಬಂಟ್ವಾಳ: ಆನಿಯಾ ದರ್ಬಾರ್ ಗ್ರೂಪ್ ಆಫ್ ಹೊಟೇಲ್ಸ್ ನ ನೂತನ ಕಚೇರಿ ಬಿ.ಸಿ.ರೋಡಿನ ಜಿ.ಕೆ. ಸ್ಮಾರ್ಟ್ ಸಿಟಿಯ ಮೊದಲ ಮಹಡಿಯಲ್ಲಿ ಶುಭಾರಂಭಗೊಂಡಿತು. ಮಿತ್ತಬೈಲು ಮಸೀದಿಯ ಖತೀಬರಾದ ಇರ್ಶಾದ್ ದಾರಿಮಿ ದುವಾ ನೆರವೇರಿಸಿದರು.ಹಿದಾಯ ಫೌಂಡೇಷನ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ನೂತನ ಕಚೇರಿ ಉದ್ಘಾಟಿಸಿ ಮಾತನಾಡಿ ಆನಿಯ ಹೊಟೇಲ್ ನ ಮಾಲಕ ಹಂಝ ಬಸ್ತಿಕೋಡಿಯವರು ಎಲ್ಲಾ ಧರ್ಮದ ಜನರೊಂದಿಗೆ ಉತ್ತಮವಾದ ಒಡನಾಟ ಹೊಂದಿ ಮಾದರಿ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಅವರ ಉದ್ಯಮ ಕ್ಷೇತ್ರ ಇನ್ನಷ್ಟು ವಿಸ್ತರಿಸಲಿ ಎಂದು ಶುಭ ಹಾರೈಸಿದರು. ಬಂಟ್ಚಾಳ ಪುರಸಭೆಯ ಉಪಾಧ್ಯಕ್ಷ ಮೂನೀಶ್ ಅಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಎಲ್ಲಾ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜ ಹಾಗೂ ಸಮುದಾಯಕ್ಕೆ ತನ್ನ ಕೊಡುಗೆಗಳನ್ನು ನೀಡುತ್ತಿರುವ ಹಂಝ ಅವರು ಎಲ್ಲಾ ಜಾತಿ, ಧರ್ಮದವರನ್ನು ಪ್ರೀತಿಸುವ ಅಜಾತಶತ್ರು ಎಂದು ತಿಳಿಸಿದರು. ಮುಂಬೈ ಬಿಲ್ಲವ ಅಸೋಸಿಯೇಷನ್ ನ ಕಾರ್ಯಧ್ಯಕ್ಷ ನೀಲೇಶ್ ಪೂಜಾರಿ ಪಲಿಮಾರು ಮಾತನಾಡಿ ಮುಂಬೈಯಲ್ಲೇ ಉತ್ತಮ ಗೆಳೆಯರಾಗಿದ್ದ ಹಂಝರವರು ಎಲ್ಲ ಸಮುದಾಯದ ಜನರನ್ನು…
ಬಂಟ್ವಾಳ: ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟ ಕ್ಷೇತ್ರದಲ್ಲಿ ಬಂಟ್ವಾಳ ತಾಲೂಕಿನಾದ್ಯಂತ ಮನೆಮಾತಾಗಿರುವ ಪ್ರತಿಷ್ಠಿತ ಶ್ರೀ ಪೊಳಲಿ ಎಲೆಕ್ಟ್ರಾನಿಕ್ಸ್ ಯಶಸ್ವಿ 10ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.ಈ ಸುಸಂದರ್ಭದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಮಾರಾಟ ಮಳಿಗೆಯನ್ನು ವಿಸ್ತೃತ ಗೊಳಿಸಿದ್ಸು ಇದರ ಶುಭಾರಂಭ ಬಂಟ್ವಾಳ ಬೈಪಾಸ್ ನ ಅಜೆಕಲದಲ್ಲಿರುವ ಸ್ಮೃತಿ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ಖ್ಯಾತ ಜ್ಯೋತಿಷಿ ಅನಿಲ್ ಪಂಡಿತ್ ನೂತನ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ ಆರಂಭದಲ್ಲಿ ಸಣ್ಣ ಉದ್ಯಮವನ್ನು ಆರಂಭಿಸಿ ಕಠಿಣ ಪರಿಶ್ರಮದಿಂದ ಯಶಸ್ಸನ್ನು ಗಳಿಸುವ ಮೂಲಕ ಪೊಳಲಿ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಮಾಲಕರು ಸಾಧನೆಯನ್ನು ಮಾಡಿದ್ದಾರೆ. ನಿರಂತರ ಪ್ರಯತ್ನದಿಂದ ಒಬ್ಬ ವ್ಯಕ್ತಿ ಏನು ಬೇಕಾದರೂ ಸಾಧನೆಯನ್ನು ಮಾಡಬಹುದು ಎನ್ನುವುದಕ್ಕೆ ಕಿರಣ್ ಹಾಗೂ ಲಿಖಿತ ದಂಪತಿಗಳೇ ಸಾಕ್ಷಿ. ಅವರ ಉದ್ಯಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭ ಕಟ್ಟಡ ಮಾಲಕ ಸತೀಶ್ ಸಪಲ್ಯ ದಂಪತಿ, ಸಂಸ್ಥೆಯ ಪ್ರವರ್ತಕರ ಮಾತಾ ಪಿತರಾದ ಕೃಷ್ಣಪ್ಪ, ಲೀಲಾ, ಅಜ್ಜಿ ಅಪ್ಪಿ ಹಾಗೂ ಸಂಸ್ಥೆಯ ಮಾಲಕರಾದ ಕಿರಣ್, ಲಿಖಿತ ಉಪಸ್ಥಿತರಿದ್ದರು. ಶ್ರೀ ಪೊಳಲಿ ಎಲೆಕ್ಟ್ರಾನಿಕ್ಸ್…
ಬಂಟ್ವಾಳ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಡೆಸಲ್ಪಡುತ್ತಿರುವ ಶ್ರೀ ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಗಿರಿಗುಡ್ಡೆ ಇದರ ಹಾಸ್ಟೆಲ್ ಡೇ ಹಾಗೂ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಶನಿವಾರ ಸಂಜೆ ವಿದ್ಯಾರ್ಥಿ ನಿಲಯದ ಆವರಣದಲ್ಲಿ ನಡೆಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದಿಯಾ ನಾಯಕ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾತು ಉತ್ತಮವಾಗಿರ ಬೇಕು, ಮಾತಿನಲ್ಲಿ ಇನ್ನೊಬ್ಬರನ್ನು ನಿಂದಿಸದೆ, ನೋಯಿಸದೇ, ವಿಡಂಬಣೆ ಮಾಡದೆ ಸದ್ವಿಚಾರ ಹಾಗೂ ಮೌಲ್ಯಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡಾಗ ವಿದ್ಯಾರ್ಥಿಗಳ ಭವಿಷ್ಯ ಉಜ್ಬಲವಾಗಿರುತ್ತದೆ ಎಂದು ತಿಳಿಸಿದರು. ವಾಮದಪದವು ವಿದ್ಯಾರ್ಥಿ ನಿಲಯದ ವಾರ್ಡ್ ನ್ ಭವಾನಿ, ಜಿಪಿಟಿಯ ಕಂಪ್ಯೂಟರ್ ಶಿಕ್ಷಕ ಶ್ರೀನಿವಾಸ ಗೌಡ, ಶಂಭೂರು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ವಾರ್ಡನ್ ವಿಶ್ವನಾಥ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.ಗಿರಿಗುಡ್ಡೆ ವಿದ್ಯಾರ್ಥಿನಿಲಯದ ವಾರ್ಡನ್ ಪುಷ್ಪಲತಾ ಸ್ವಾಗತಿಸಿದರು, ಕೌಶಲ್ ಬಹುಮಾನಿತರ ಪಟ್ಟಿ ವಾಚಿಸಿದರು, ನಿಖಿಲ್ ವಂದಿಸಿದರು.…
ಬಂಟ್ವಾಳ: ದ.ಕ.ಜಿಲ್ಲೆಯ ಪ್ರಸಿದ್ಧ ದೈವಸ್ಥಾನ ಸಜೀಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಂಪ್ರತಿಯಂತೆ ಪುದ್ದರ್ದ ಅಗೇಲು ಗುರುವಾರ ನಡೆಯಿತು.ಪ್ರತೀ ವರ್ಷ ಕಾವೇರಿ ಸಂಕ್ರಮಣದಂದು ತಾಯಿಗೆ ಹೊಸ ಅಕ್ಕಿಯ ಅನ್ನ ಹಾಗೂ ಹಲವಾರು ಬಗೆಯ ತರಕಾರಿಯಿಂದ ತಯಾರಿಸಿದ ಪದಾರ್ಥದ ನೈವೇದ್ಯದೊಂದಿಗೆ ಅಗೇಲು ಸಮರ್ಪಿಸುವ ಪರಂಪರೆ ನಡೆದುಕೊಂಡು ಬರುತ್ತಿದ್ದು ಗುರುವಾರ 1242 ಅಗೇಲು ಸೇವೆ ಸಲ್ಲಿಕೆಯಾಗಿದೆ. ಈ ಸಂದರ್ಭ ಪಣೋಲಿಬೈಲು ದೈವಸ್ಥಾನದ ಅರ್ಚಕರಾದ ವಾಸು ಮೂಲ್ಯ, ನಾರಾಯಣ ಮೂಲ್ಯ, ಮೋನಪ್ಪ ಮೂಲ್ಯ , ಕಾರ್ಯನಿರ್ವಾಹಣಾಧಿಕಾರಿ ದಿವಾಕರ ಮುಗುಳಿ ದೈವದ ಚಾಕರಿಯವರು, ಸಿಬ್ಬಂದಿಗಳು ಹಾಗೂ ಭಕ್ತವೃಂದ ಹಾಜರಿದ್ದರು.
ಬಂಟ್ವಾಳ : ಬಿ.ಸಿ.ರೋಡಿನ ಉದ್ಯಮಿ,ಜೋಡುಮಾರ್ಗ ನೇತ್ರಾವತಿ ಜೇಸಿ, ಬಂಟ್ವಾಳ ರೋಟರಿ ಟೌನ್ ಪೂರ್ವಾಧ್ಯಕ್ಷರೂ ಆಗಿದ್ದ ಉದ್ಯಮಿ ನಿರ್ಮಲ್ ಎಸೋಸಿಯೇಟ್ಸ್ ಮಾಲಕರಾದ ಉಮೇಶ್ ನಿರ್ಮಲ್ (53) ಅವರು ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ದಿಢೀರ್ ಹೃದಯಾಘಾತದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅಸು ನೀಗಿರುವುದಾಗಿ ವೈದ್ಯರು ತಿಳಿಸಿದರು.ಶಿಕ್ಷಣ ಸಂಪನ್ಮೂಲ ಕೇಂದ್ರ, ಜಿಲ್ಲಾ ಜುವಿನೈಲ್ ಜಸ್ಟೀಸ್ ಬೋರ್ಡ್ ಜೀವ ವಿಮಾ ನಿಗಮ ಕ್ಲಬ್ ಸದಸ್ಯ ಪರಿಸರಾಸಕ್ತರ ಒಕ್ಕೂಟ JCI, ರೋಟರಿ ಹಾಗೂ ವಿವಿದ ಸಮಾಜ ಮುಖಿ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದವರಾಗಿರುತ್ತಾರೆ.ಅವರು ಪತ್ನಿ ಸವಿತಾ ನಿರ್ಮಲ್, ಮಗ ಶಮಿತ್ ನಿರ್ಮಲ್ ಮಗಳು ತನ್ಮಯಿ ನಿರ್ಮಲ್ ಅವರನ್ನು ಅಗಲಿದ್ದಾರೆ..








