Author: admin
ಬಂಟ್ವಾಳ: ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ನ.೧೯ರಂದು ಮಂಗಳವಾರ ಶಂಭೂರು ಶಾಲೆಯಲ್ಲಿ ನಡೆಯಲಿದೆ ಎಂದು ಮಕ್ಕಳ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಹೇಮಚಂದ್ರ ಭಂಡಾರದ ಮನೆ ಶಂಭೂರು ತಿಳಿಸಿದರು.ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ನರಿಕೊಂಬು ಗ್ರಾಮ ಪಂಚಾಯತಿ ಅಧ್ಯಕ್ಷ ಸಂತೋಷ್ ಕುಮಾರ್ ಶೇಡಿಗುರಿಯಲ್ಲಿ ಮೆರವಣಿಗೆಗೆ ಚಾಲನೆ ನೀಡುವರು. ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಪ್ರೇಕ್ಷಾ ಸರ್ವಾಧ್ಯಕ್ಷತೆ ವಹಿಸಲಿರುವರು. 17ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಕಡೇಶಿವಾಲಯ ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿನಿ ಸಾನ್ವಿ ಸುವರ್ಣ ಸಮ್ಮೇಳನವನ್ನು ಉದ್ಘಾಟಿಸುವರು ಎಂದರು. ಮಕ್ಕಳ ಸ್ವರಚಿತ ಕೃತಿಗಳನ್ನು ಸಾಹಿತಿ, ನಿವೃತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೂಂತಾರು ಬಿಡುಗಡೆ ಮಾಡುವರು. ಬೆಳ್ತಂಗಡಿ ವಾಣಿ ಪಿ.ಯೂ ಕಾಲೇಜಿನ ದ್ವಿತೀಯ ಪಿ.ಯು. ತರಗತಿಯ ವಿಜ್ಞಾನ ವಿಭಾಗದ…
ಬಂಟ್ವಾಳ: ಸಜೀಪ ನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ಪ್ರಿಯತಮೆಯನ್ನು ಭೇಟಿಯಾಗಲು ಬಂದ ಯುವಕನಿಗೆ ಸ್ಥಳೀಯರು ಕಟ್ಟಿಹಾಕಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಂಚಿನಡ್ಕಪದವು ನಿವಾಸಿಗಳಾದ ಮಹಮ್ಮದ್ (25) ಮಹಮ್ಮದ್ ರಿಜ್ವಾನ್ (25) ಇರ್ಪಾನ್(27) ಅನೀಸ್ ಅಹಮ್ಮದ್ (19) ನಾಸೀರ್ (೨೭27) ಎಂದು ಗುರುತಿಸಲಾಗಿದೆ. ಕಳೆದ ನವೆಂಬರ್ 7 ರಂದು ರಾತ್ರಿ 19 ಉಳ್ಳಾಲ ತಾಲೂಕು ವ್ಯಾಪ್ತಿಯ ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಮಹಮ್ಮದ್ ಮುಸ್ತಾಪ ಎಂಬಾತನನು ಆತನ ದೂರದ ಸಂಬಂಧಿ ಹುಡುಗಿಯೊಬ್ಬಳು ಸಜೀಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ಮನೆಗೆ ಬರಲು ಹೇಳಿದಂತೆ ಕಂಚಿನಡ್ಕಪದವಿಗೆ ಬಂದಾಗ ಆರೋಪಿಗಳು ಮಹಮ್ಮದ್ ಮುಸ್ತಾಫ್ ನ ಬಗ್ಗೆ ಸಂಶಯ ವ್ಯಕ್ತಪಡಿಸಿ ಗುಂಪು ಸೇರಿಕೊಂಡು ಕಂಬಕ್ಕೆ ಹಗ್ಗದಿಂದ ಕಟ್ಟಿಹಾಕಿ ಹಲ್ಲೆ ನಡೆಸಿದೆ. ಈ ಮಹಮ್ಮದ್ ಮುಸ್ತಾಫ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಹಲ್ಲೆಗೊಳಗಾದ ಮಹಮ್ಮದ್ ಮುಸ್ತಾಫ ಚಿಕಿತ್ಸಗಾಗಿ ಮಂಗಳೂರಿನ ಖಾಸಗಿ…
ಬಂಟ್ವಾಳ: ಮದುವೆ ಹಾಲ್ ನಲ್ಲಿ ಮಹಿಳೆಯೊಬ್ಬಳು ಇಬ್ಬರು ಮಕ್ಕಳ ಚಿನ್ನದ ಸರ ಕಳ್ಳತನ ನಡೆಸಿದ ಘಟನೆ ಭಾನುವಾರ ಬಂಟ್ವಾಳದ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮೀ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಸರ ಕಳ್ಳತನ ಮಾಡಿದ ಬಳಿಕ ಮಹಿಳೆ ಕಲ್ಯಾಣ ಮಂಟಪದಿಂದ ಕಾಲ್ಕಿತ್ತಿದ್ದಾಳೆ.ಭಾನುವಾರ ಬಂಟ್ವಾಳ ದ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮೀ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ಇತ್ತು. ಈ ಸಂದರ್ಭ ಸಲ್ವಾರ್ ಧರಿಸಿಕೊಂಡು ಬಂದಿದ್ದ ಮಹಿಳೆಯೊಬ್ಭಳು ಅಲ್ಲಿದ್ದ ಮಕ್ಕಳನ್ನು ಟಾರ್ಗೆಟ್ ಮಾಡಿ ಸರಕಳ್ಳತನಕ್ಕೆ ಇಳಿದಿದ್ದಳು. ಬಾಲಕಿಯೊಬ್ಬಳ ಕತ್ತಿನಲ್ಲಿ ಇರುವೆ ಇದೆ ಎಂದು ಹೇಳಿ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ್ದಾಳೆ. ಈ ಸಂದರ್ಭ ಬಾಲಕಿ ಈ ವಿಷಯವನ್ನು ತನ್ನ ಅಕ್ಕನಲ್ಲಿ ತಿಳಿಸಿದ್ದು ಅಕ್ಕ ಮನೆಮಂದಿಗೆ ತಿಳಿಸುವ ವೇಳೆ ಕಳ್ಳಿ ಕಲ್ಯಾಣ ಮಂಟಪದಿಂದ ಪರಾರಿಯಾಗಿದ್ದಾಳೆ. ಸುದ್ದಿ ಮದುವೆ ಹಾಲ್ ನಲ್ಲಿ ಹರಿದಾಡುತ್ತಿದ್ದಂತೆಯೇ ಪೋಷಕರು ತಮ್ಮ ಮಕ್ಕಳ ಚಿನ್ನಾಭರಣವನ್ನು ಪರಿಶೀಲಿಸಿದಾಗ ಇನ್ನೊರ್ವ ಬಾಲಕನ ಕತ್ತಿನಿಂದ ಸರ ಎಗರಿಸಿರುವುದು ಬೆಳಕಿಗೆ ಬಂದಿದೆ. ಮತ್ತೋರ್ವ ಬಾಲಕನ ಕತ್ತಿಗೆ ಕೈ ಹಾಕುವಾಗ…
ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ಇದರ 4ನೇ ಶಾಖೆಯಾದ ಕುಕ್ಕಾಜೆ ಶಾಖೆಯ 25ನೇ ವರ್ಷಾಚರಣೆಯ ಅಂಗವಾಗಿ ಸದಸ್ಯ ಗ್ರಾಹಕ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಸಭಾ ಕಾರ್ಯಕ್ರಮದ ಪೂರ್ವಭಾವಿಯಾಗಿ ಶಾಖೆಯಲ್ಲಿ ಗಣಹೋಮ ಮತ್ತು ಶ್ರೀ ಲಕ್ಷ್ಮೀ ಪೂಜೆಯನ್ನು ನೇರವೆರಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಸಂಘದ ಅಭಿವೃದ್ಧಿಗೆ ಶ್ರಮಿಸಿದ ಗ್ರಾಹಕರನ್ನು ಮತ್ತು ಸಿಬ್ಬಂದಿಗಳನ್ನು ಗೌರವಿಸಲಾಯಿತು. ಉತ್ತಮ ವ್ಯವಹಾರ ನಡೆಸಿದ ಅಮೂಲ್ಯ ಸ್ವ-ಸಹಾಯ ಸಂಘಗಳನ್ನು ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಖೆಯ ಏಳಿಗೆಗೆ ಶ್ರಮಿಸಿದ ಎಲ್ಲಾ ಸದಸ್ಯ ಗ್ರಾಹಕರಿಗೆ ಅಭಿನಂದನೆ ಸಲ್ಲಿಸಿದರು. ಮುಂದೆಯು ಇನ್ನೂ ಉತ್ತಮ ಸಹಕಾರ ನೀಡುವಂತೆ ವಿನಂತಿಸಿದರು. ಸರಕಾರಿ ಪ್ರೌಢ ಶಾಲೆ ಮಂಚಿಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಕಾರ್ಯಧ್ಯಕ್ಷ ಗಣೇಶ್ ಐತಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಂಘದ ಸ್ಥಾಪಕಾಧ್ಯಕ್ಷ ಡಾ| ಅಮ್ಮೆಂಬಳ ಬಾಳಪ್ಪರವರ ಒಡನಾಟವನ್ನು ನೆನಪಿಸಿದರು. ಪಣೋಲಿಬೈಲು ಕ್ಷೇತ್ರದ ಅರ್ಚಕ ನಾರಾಯಣ ಮೂಲ್ಯ, ಮಹಾದೇವಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಮೋಹನ ನಾಯಕ್, ಯಕ್ಷಗಾನ ಕಲಾವಿದ…
ಬಂಟ್ವಾಳ: ಸನಾತನ ಹಿಂದೂ ಜಾತ್ರೆ ವ್ಯಾಪಾರಸ್ಥರ ಸಂಘ ದ.ಕ.ಜಿಲ್ಲೆ ವತಿಯಿಂದ 3ನೇ ವರ್ಷದ ವಾರ್ಷಿಕೋ ತ್ಸವ ಹಾಗೂ ಸಾರ್ವಜನಿಕ ಧನಲಕ್ಷ್ಮೀ ಪೂಜೆ ಬಿ.ಸಿ.ರೋಡ್ ನ ಶ್ರೀ ರಕೇಶ್ವರಿ ದೇವಸ್ಥಾನ ವಠಾರದಲ್ಲಿ ನಡೆಯಿತು.ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಹಾಗೂ ಶ್ರೀಧಾಮ ಮಾಣಿಲ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನಗೈದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸಾಮಾಜಿಕ ಕಾರ್ಯ ಕರ್ತ, ಕಲಾವಿದ ಬಿ.ಆರ್. ಕಬಕ ಹಾಗೂ ಕರೆಂಕಿ ಶ್ರೀದುರ್ಗಾ ಫ್ರೆಂಡ್ಸ್‌ನ ಸಮಾಜ ಮುಖಿ ಕಾರ್ಯ ಗುರುತಿಸಿ, ಅಧ್ಯಕ್ಷರು, ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಅನಾರೋಗ್ಯ ದಿಂದ ಬಳಲುತ್ತಿದ್ದ ಕಿಶೋರ್ ರಾವ್ ಮೂಡಬಿದಿರೆ ಅವರಿಗೆ ನೆರವು ವಿತರಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಪ್ರಮುಖರಾದ ಪುರುಷೋತ್ತಮ ಮೊಗರ್ನಾಡ್, ಜನಾರ್ದನ ಭಟ್ ಮಂಗಳೂರು, ಶರಣ್ ಪಂಪ್ ವೆಲ್, ಪುನೀತ್ ಕೆರೆಹಳ್ಳಿ, ಭರತ್ ಕುಮ್ಡೇಲ್, ಉದ್ಯಮಿ…
ಬಂಟ್ವಾಳ: ರೂಟ್ ಪರ್ಮಿಟ್ ಬಸ್ಸುಗಳು ಮತ್ತು ಶಾಲಾ ಬಸ್ಸುಗಳು ಅನಧಿಕೃತವಾಗಿ ಬಾಡಿಗೆ ಮಾಡುತ್ತಿರುದನ್ನು ನಿಲ್ಲಿಸಿ ಟೂರಿಸ್ಟ್ ವ್ಯಾನ್ ಚಾಲಕ ಮಾಲಕರಿಗೆ ಆಗುವ ತೊಂದರೆಯನ್ನು ತಪ್ಪಿಸುವಂತೆ ಕೋರಿ ಆರ್‌ಟಿಓ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕರಿಗೆ ಬಂಟ್ವಾಳ ತಾಲೂಕು ಟೂರಿಸ್ಟ್ ವಾಹನ ಚಾಲಕ ಮಾಲಕರ ಸಂಘದ ವತಿಯಿಂದ ಅಧ್ಯಕ್ಷ ಸದಾನಂದ ಹಳೆಗೇಟು ಅವರ ನೇತೃತ್ವದಲ್ಲಿ ಮಂಗಳವಾರ ಮನವಿ ಸಲ್ಲಿಸಲಾಯಿತು.ಬಂಟ್ವಾಳ ತಾಲೂಕಿನಲ್ಲಿ ಸುಮಾರು ೮೦ಕ್ಕೂ ಹೆಚ್ಚು ಮಿನಿ ಬಸ್, ಮ್ಯಾಕ್ಸಿಕ್ಯಾಬ್, ಟೆಂಪೋ ಟ್ರಾವೆಲ್ಸ್ ವಾಹನಗಳು ಇದ್ದು ಮಿನಿ ಬಸ್ ಒಂದಕ್ಕೆ 60 ಸಾವಿರ, ಟೆಂಪೋ ಟ್ರಾವೆಲರ್‌ಗೆ 23ಸಾವಿರದವರೆಗೆ ವಾರ್ಷಿಕ ತೆರಿಗೆಯನ್ನು ಟೂರಿಸ್ಟ್ ಪರ್ಮಿಟ್ ಆಧಾರದಲ್ಲಿ ಸರಕಾರಕ್ಕೆ ಪಾವತಿ ಮಾಡಲಾಗುತ್ತಿದೆ. ಈ ಟೂರಿಸ್ಟ್ ವಾಹನಗಳಿಗೆ ವಾರದಲ್ಲಿ ಒಂದು ಎರಡು ಬಾಡಿಗೆ ಆಗುತ್ತಿದ್ದು ಚಾಲಕರು ಕಷ್ಟದ ಜೀವನವನ್ನು ಸಾಗಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೂಟ್ ಪರ್ಮಿಟ್ ಬಸ್ಸುಗಳು ಬಿ.ಸಿ.ರೋಡ್- ತೊಕ್ಕೊಟ್ಟು -ಮಂಗಳೂರು, ಬಿ.ಸಿ.ರೋಡು – ಕೈಕಂಬ- ಕಟೀಲ್, ಬಿ.ಸಿ.ರೋಡು- ಪಂಜಿಕಲ್ಲು- ವಾಮದಪದವು, ಬಿ.ಸಿ.ರೋಡು -ಮೂಡಬಿದ್ರೆ, ಕುಕ್ಕಾಜೆ, ಮಂಚಿ, ಸಾಲೆತ್ತೂರ್…
ಬಂಟ್ವಾಳ: ಸ್ವಸ್ಥ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ತನ್ನ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಸಮಾಜದ ಜನರ ನಿಸ್ವಾರ್ಥ ಸೇವಾ ಮಾಡುತ್ತಿರುವ ಕೃಷ್ಣ ಕುಮಾರ್ ಪೂಂಜ ಅವರ ಸೇವಾ ಕಾರ್ಯ ಅನುಕರಣೀಯ ಎಂದು ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್ ಹೇಳಿದರು. ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಕ್ಷಯರೋಗಿಗಳಿಗೆ ದವಸಧಾನ್ಯಗಳ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಉತ್ತಮವಾದ ಕೆಲಸವನ್ನು ಪೂಂಜರು ಮಾಡುತ್ತಿದ್ದಾರೆ. ಕ್ಷಯರೋಗಿಗಳನ್ನು ಗುರುತಿಸಿ ಅವರಿಗೆ ಪೌಷ್ಠಿಕ ಆಹಾರವನ್ನು ಪ್ರತೀ ತಿಂಗಳು ನೀಡುವ ಮೂಲಕ ಅವರ ಸೇವೆ ಮಾಡುತ್ತಿದ್ದಾರೆ. ಇದನ್ನು ರೋಗಿಗಳು ಸದ್ಬಳಕೆ ಮಾಡಿಕೊಂಡು ರೋಗ ಗುಣಮುಖರಾಗುವುದೇ ಅವರಿಗೆ ಕೊಡುವ ಪ್ರತಿಫಲವಾಗಿದೆ ಎಂದು ತಿಳಿಸಿದರು. ಕ್ಷಯ ರೋಗಿಗಳು ಎನ್ನುವ ಕೀಳರಿಮೆ, ಹಿಂಜರಿಕೆ ಬಿಟ್ಟು ರೋಗ ನಿರ್ಮೂಲನೆಗೆ ಸಹಕರಿಸ ಬೇಕು. ನಮ್ಮ ಆಸುಪಾಸಿನಲ್ಲಿ ಬೇರೆ ಯಾರಾದರೂ ರೋಗಿಗಳಿದ್ದರೆ ಅವರಿಗೂ ಚಿಕಿತ್ಸೆಗೆ ನೆರವಾಗಬೇಕು ಎಂದರು. ಬಂಟ್ವಾಳ ರೋಟರಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಬಿ.ಪ್ರಕಾಶ್ ಬಾಳಿಗ…
ತುಂಬೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳವು ಬಂಟ್ವಾಳ: ತುಂಬೆಯ ಶ್ರೀ ಮಹಾಲಿಂಗೇಶ್ವರದೇವಸ್ಥಾನಕ್ಕೆ ಸೋಮವಾರ ರಾತ್ರಿ ಕಳ್ಳರು ನುಗ್ಗಿ ಸೊತ್ತುಗಳನ್ನು ಕಳವುಗೈದಿದ್ದಾರೆ. ದೇವಸ್ಥಾನದ ಕಚೇರಿಯಲ್ಲಿದ್ದ ಬೆಳ್ಳಿಯ ಅಭಿಷೇಕದ ಜಲಧಾರಿಣಿ ಹಾಗೂ ದೇವಸ್ಥಾನದ ಒಳಗಿದ್ದ ಹುಂಡಿಯ ಕಾಣಿಕೆ ಹಣವನ್ನು ಕಳ್ಳರು ದೋಚಿದ್ದಾರೆ. ದೇವಸ್ಥಾನಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳವನ್ನೂ ಕರೆಸಿಕೊಳ್ಳಲಾಗಿದೆ. ಸೋಮವಾರ ಇಲ್ಲೇ ಪಕ್ಕದ ಸುಜೀರು ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು ಜನ ಆತಂಕ ಗೊಂಡಿದ್ದಾರೆ
ಬಂಟ್ವಾಳ: ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಬಂಟ್ವಾಳ ವಲಯ ಇದರ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಸಂಘದ ಸದಸ್ಯ ದಿನೇಶ್ ಕುಲಾಲ್ ಅವರ ಚಿಕಿತ್ಸೆಗೆ ೧ ಲಕ್ಷ ರೂಪಾಯಿ ಆರ್ಥಿಕ ಸಹಕಾರವನ್ನು ಸಂಘದ ಅಧ್ಯಕ್ಷ ಸುಧೀರ್ ಪೂಜಾರಿ ಹಸ್ತಾಂತರಿಸಿದರು. ಈ ಸಂದರ್ಭ ಸಂಘದ ಗೌಲ ಸಲಹೆಗಾರರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು
ಸಿಸಿ ಟಿವಿ ದೃಶ್ಯಗಳು ಬಂಟ್ವಾಳ: ಪುದು ಗ್ರಾಮದ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿಯೇ ಇರುವ ಸುಜೀರು ಶ್ರೀ ದೇವಕಿ ಕೃಷ್ಣ ರವಳನಾಥ ದೇವಸ್ಥಾನದಲ್ಲಿ ಸೋಮವಾರ ಪ್ರಾಥಃ ಕಾಲದ ವೇಳೆ ಕಳ್ಳರು ನುಗ್ಗಿ ಚಿನ್ನ ಬೆಳಿ ಸಹಿತ ಹುಂಡಿಯಲ್ಲಿದ್ದ ಕಾಣಿಕೆಯನ್ನು ದೋಚಿ ಪರಾರಿಯಾಗಿದ್ದಾರೆ. ಮೂರು ಮಂದಿ ಕಳ್ಳರು ದೇವಸ್ಥಾನದ ಒಳನುಗ್ಗಿ ಗರ್ಭಗುಡಿ ಪ್ರವೇಶಿಸಿ ಸೊತ್ತುಗಳನ್ನು ಕಳವುಗೈಯ್ಯುತ್ತಿರುವ ದೃಶ್ಯಗಳು ಸಿಸಿ ಟವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ. ಸುಜೀರ್‌ಕಾರ್‍ಸ್ ಕುಟುಂಬಕ್ಕೆ ಸಂಬಂಧಪಟ್ಟ ದೇವಸ್ಥಾನ ಇದಾಗಿದ್ದು ಭಾನುವಾರ ಇಲ್ಲಿ ದೀಪಾವಳಿ ಆಚರಣೆ ಸಂಭ್ರಮದಿಂದ ನಡೆದಿತ್ತು. ಮಧ್ಯರಾತ್ರಿಯ ಬಳಿಕ ಕಳ್ಳರು ನುಗ್ಗಿ ಬೆಳ್ಳಿಯ ದೀಪಗಳು, ಗಿಂಡೆ, ಚೊಂಬು, ಪ್ರಭಾವಳಿಯ ಮೇಲಿಡುವ ಚಿನ್ನದ ಸಣ್ಣ ಕೊಡೆ, ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಎಗರಿಸಿರುವುದಾಗಿ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.








