ಬಂಟ್ವಾಳ: ಜಿ.ಎಚ್.ಎಮ್ ಫೌಂಡೇಶನ್ (ರಿ) ಮೂಲರಪಟ್ಣ ಇದರ ವತಿಯಿಂದ ಶೈಕ್ಷಣಿಕ ಕಾರ್ಯಾಗಾರ ಮೌಲಾನ ಅಝಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಮೂಲರಪಟ್ಣ ಇಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಶಾಲಿ ಎಮ್ ಎಸ್ ವಹಿಸಿದ್ದರು.ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ಹಂಝ ಗುತ್ತು,ಗೌರವ ಸಲಹೆಗಾರ ಎಮ್.ಬಿ.ಅಶ್ರಫ್, ಮೌಲಾನ ಅಝಾದ್ ಮಾದರಿ ಶಾಲೆಯ ಪ್ರಭಾರ ಪ್ರಾಂಶುಪಾಲ ಭರತ್, ಅಬ್ದುಲ್ ಸಮದ್ ಅರಳ,ಎಮ್ ಪಿ ಅಬ್ದುಲ್ ಜಬ್ಬಾರ್ ಸಂಸ್ಥೆಯ ಸದಸ್ಯರಾದ ಶಾರೂಕ್ ಎಂ ಬಿ, ಅಬ್ದುಲ್ ರಶೀದ್ ಎಂ ಬಿ ಹಾಗೂ ವಿಧ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜ! ಅಬ್ದುಲ್ ಖಾದರ್ ನಾವೂರು ವಿಧ್ಯಾರ್ಥಿಗಳ ಹಾಗೂ ಪೋಷಕರ ಜೊತೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶಲೀಲ ವಿಟ್ಲ ಇವರು ವಿಧ್ಯಾರ್ಥಿಗಳ ಕಲಿಕೆಯ ಬೆಳವಣಿಗೆಯನ್ನು ಉತ್ತೇಜಿಸಲು ಪಠ್ಯವಾರು ವಿಷಯವನ್ನು ವಿಧ್ಯಾರ್ಥಿಗಳಿಗೆ ಹಾಗೂ ಪೋಷಕರರಿಗೆ ಮನದಟ್ಟು ಮಾಡಿಕೊಟ್ಟರು.ಇದರ ಜೊತೆಗೆ ವಿಧ್ಯಾರ್ಥಿಗಳಿಗೆ ಹಾಗೂ ಪೋಷಕರರಿಗೆ ಮಾದಕ ದ್ರವ್ಯ ಮುಕ್ತ ಸಮಾಜ ಮತ್ತು ಅಪರಾಧ ಮುಕ್ತ ಸಮಾಜ ನಿರ್ಮಾಣದ ಕುರಿತು ಮಾಹಿತಿಯನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ನೀಡಿದರು.
ವಿದ್ಯಾರ್ಥಿನಿ ಫಾತಿಮ ಮೆಹತಾಝ್ ಸ್ವಾಗತಿಸಿದರು.
ಆಯಿಷ ಅಷ್ಪಿಯಾ ವಂದಿಸಿದರು. ಶಾಲಾಭಿವೃಧ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಬ್ದುಲ್ ಸಮದ್ ಅರಳ ಇವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.