ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ
ಕೆಎಂಸಿ ಆಸ್ಪತ್ರೆ ಮಂಗಳೂರು ಹಾಗೂ
ರೋಟರಿ ಕ್ಲಬ್ ಫರಂಗಿಪೇಟೆ ಇದರ ಆಶ್ರಯದಲ್ಲಿ
129ನೇ ರಕ್ತದಾನ ಶಿಬಿರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಮಂಗಳೂರಿನ ಜೆಪ್ಪುವಿನ ಶ್ರೀ ಅಂಬಾಮಹೇಶ್ವರೀ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ಎ. ಶಿಬಿರ ಉದ್ಘಾಟಿಸಿ ಮಾತನಾಡಿ ಸೇವಾಂಜಲಿ ಪ್ರತಿಷ್ಠಾನದ ಕೃಷ್ಣಕುಮಾರ್ ಪೂಂಜ ಅವರ ಸೇವಾ ಕಾರ್ಯಗಳು ಎಲ್ಲರಿಗೂ ಪ್ರೇರಣೆಯಾಗಿದೆ. ಮಕ್ಕಳಿಗೆ ಸಂಗೀತ, ನೃತ್ಯ.ಭಜನೆಯಂತಹ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ಜನರ ಪ್ರಾಣ ಉಳಿಸುವಂತಹ ರಕ್ತದಾನ ಶಿಬಿರವನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ನಿರೀಕ್ಷಕ
ಶಿವಕುಮಾರ್ ಬಿ. ಮಾತನಾಡಿ ಕಳೆದ 45 ವರ್ಷಗಳಿಂದ ಕೃಷ್ಣಕುಮಾರ್ ಪೂಂಜ ಅವರು ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡು ಬರುತ್ತಿದ್ದಾರೆ. ಸಮಾಜದಲ್ಲಿ ಅನೇಕ ಮಂದಿ ಶ್ರೀಮಂತರು ಇದ್ದರೂ ಕೂಡ ಎಲ್ಲರಿಗೂ ಸೇವಾಗುಣ ಇರುವುದಿಲ್ಲ ಆದರೆ ಕೃಷ್ಣಕುಮಾರ್ ಪೂಂಜ ನಿರಂತರವಾಗಿ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ನಿವೃತ್ತ ಅಧಿಕಾರಿ ಎಂ.ಆರ್. ನಾಯರ್ ಶುಭ ಹಾರೈಸಿದರು. ಕೆಎಂಸಿ ಆಸ್ಪತ್ರೆಯ ವೈದ್ಯ ಸ್ಟೀಫನ್, ಶಿವರಾಜ್ ಸುಜೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರಾದ ಪ್ರವೀಣ್ ಕಬೇಲ, ಆರ್ ಎಸ್ ಜಯ ರಾಮಲ್ ಕಟ್ಟೆ, ಪ್ರಶಾಂತ್ ತುಂಬೆ, ಅರ್ಜುನ್ ಪೂಂಜ,
ದಿನೇಶ್ ತುಂಬೆ, ದಿನೇಶ್ ಶೆಟ್ಟಿ ಕೊಟ್ಟಿಂಜ, ಸುರೇಶ್ ರೈ ಪೆಲಪಾಡಿ, ನಾರಾಯಣ ಬಡ್ಡೂರು, ಪದ್ಮನಾಭ ಶೆಟ್ಟಿ ಪುಂಚಮೆ, ಹೂವಿನ ವ್ಯಾಪಾರಿ ಮಹಮ್ಮದ್ ಹನೀಫ್
ಜಯರಾಂ ತುಂಬೆ ಮೊದಲಾದವರು ಭಾಗವಹಿಸಿದ್ದರು.
ಶಿಬಿರದಲ್ಲಿ ಒಟ್ಟು 66 ಯುನಿಟಿ ರಕ್ತ ಸಂಗ್ರಹವಾಯಿತು.