Author: admin

ಬಂಟ್ವಾಳ: ಕೇಂದ್ರ ಸರಕಾರದ ನಿಕ್ಷಯ ಮಿತ್ರ ಯೋಜನೆಯಡಿ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಕ್ಷಯ ರೋಗಿಗಳಿಗೆ ಧವಸ ಧಾನ್ಯಗಳನ್ನೊಳಗೊಂಡ ಆಹಾರ ಸಾಮಾಗ್ರಿಗಳ ಕಿಟ್ ವಿತರಣಾ ಸಮಾರಂಭ ಶನಿವಾರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು. Advertisement Advertisement ಆಹಾರ ಕಿಟ್ ವಿತರಿಸಿದ ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಸಂಜಿತ್ ಎಸ್.ಶೆಟ್ಟಿ ಮಾತನಾಡಿ, ಸೇವಾ ಕಾರ್ಯಗಳಿಗೆ ಮನಸ್ಸು ಅತಿ ಮುಖ್ಯವಾಗಿದ್ದು, ಆಗ ನಾವು ನೀಡಿದ ಸೇವೆಯೂ ಸಾರ್ಥಕತೆಯನ್ನು ಪಡೆಯುತ್ತದೆ. ಸೇವಾ ಕಾರ್ಯಗಳಲ್ಲಿ ಸೇವಾಂಜಲಿಯ ಹೆಸರು ಮುಂಚೂಣಿಯಲ್ಲಿದ್ದು, ನಿಕ್ಷಯ ಮಿತ್ರ ಯೋಜನೆಯ ಆರಂಭದಿಂದಲೂ ಬೆಂಬಲವಾಗಿ ನಿಂತ ಸಂಸ್ಥೆಯು ಕ್ಷಯ ಮುಕ್ತ ಭಾರತ ಯೋಚನೆಗೆ ಬಲುದೊಡ್ಡ ಕೊಡುಗೆ ನೀಡಿದೆ. ಆರೋಗ್ಯ ಕ್ಷೇತ್ರದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ವಿಶೇಷವಾಗಿದ್ದು, ಅವರ ಕಾರ್ಯಕ್ಕೆ ನಾವು ಚಿರಋಣಿಗಳಾಗಿರಬೇಕು ಎಂದರು. advertisement Advertisement ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಚೇತನ್ ಮಾತನಾಡಿ, ಹಿಂದಿನ ವರ್ಷಗಳಲ್ಲಿ ಕ್ಷಯ ರೋಗದ ನಿಯಂತ್ರಣ ಪ್ರಮಾಣ ವಾರ್ಷಿಕ ೨ ಶೇ.ದಷ್ಟಿದ್ದು, ಅದನ್ನು ೯೦ ಶೇ. ಏರಿಸಬೇಕು ಎಂಬ…

Read More

ಬಂಟ್ವಾಳ: ಕುರಿಯಾಳ ಗ್ರಾಮದ ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರದಲ್ಲಿ ನವರಾತ್ರಿಯ ಮೊದಲ ದಿನವಾದ ಗುರುವಾರ ನೂತನ ಪಾಕಶಾಲ ಕಟ್ಟಡದ ಉದ್ಘಾಟನೆ ಹಾಗೂ ವಿಮಾ ಗ್ರಾಮ ಘೋಷಣೆ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಭಾರತೀಯ ಜೀವಾ ವಿಮಾ ನಿಗಮ ಬಂಟ್ಟಾಳ ಶಾಖೆಯ ಮುಖ್ಯ ಶಾಖಾಧಿಕಾರಿ ಕೆ.ಸತೀಶ್ ಕುಮಾರ್, ಸಹಾಯಕ ಶಾಖಾಧಿಕಾರಿ ಬಿ.ಎಚ್ ಕೃಪಾಲ್, ಅಭಿವೃದ್ಧಿ ಅಧಿಕಾರಿ ಮದ್ವರಾಜ್ ಕಲ್ಮಾಡಿ, ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ವಿ ಮಣಿಹಳ್ಳ, ಆಡಳಿತ ಸಮಿತಿ ಗೌರವಾಧ್ಯಕ್ಷ ಜಗದೀಶ್ ಭಂಡಾರಿ, ಅಧ್ಯಕ್ಷ ಶ್ರೀನಿಧಿ ವಿ ಬಂಗೇರ, ಅರ್ಚಕ ಹೊನ್ನಪ್ಪ ಪೂಜಾರಿ ಉಪಸ್ಥಿತರಿದ್ದರು. ಚೈತ್ರ ಶ್ರೀನಿಧಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. Advertisement Advertisement Advertisement Advertisement

Read More

ಬಂಟ್ವಾಳ: ಜೆಸಿಐ ಬಂಟ್ವಾಳದ ಆಶ್ರಯದಲ್ಲಿ ದಸರಾ ಹಬ್ಬದ ಪ್ರಯುಕ್ತ ದಾಂಡಿಯ ನೈಟ್ಸ್ ವಿಶೇಷ ಕಾರ್ಯಕ್ರಮ‌ ಅ.5ರಂದು ಶನಿವಾರ ಸಂಜೆ 6 ಗಂಟೆಗೆ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಜೆಸಿಐ ವಲಯ ನಾಯಕರು, ಗಣ್ಯರು ಭಾಗವಹಿಸಲಿದ್ದಾರೆ. ಯಕ್ಷಗಾನ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಬ್ಬರು ಸಾಧಕರನ್ನು ಸಭಾ ವೇದಿಕೆಯಲ್ಲಿ ಗೌರವಿಸಲಾಗುವುದು ಎಂದು ಜೆಸಿಐ ಬಂಟ್ವಾಳದ ಅಧ್ಯಕ್ಷೆ ರಶ್ಮಿ ಶೆಟ್ಟಿ ತಿಳಿಸಿದ್ದಾರೆ. Advertisement Advertisement Advertisement

Read More

ಬಂಟ್ವಾಳ: ಶಂಭೂರು ಮೂರ್ತೇದಾರರ ಸೇವಾ ಸಹಕಾರಿ ಸಂಘ ನಿ. ಇದರ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ಭಾನುವಾರ ಬಿರ್ವೆರ್ ಸೇವಾ ಟ್ರಸ್ಟ್ ನರಿಕೊಂಬು ಇದರ ಕಚೇರಿಯಲ್ಲಿ ನಡೆಯಿತು. Advertisement ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್, ಬಿರುವೆರ್ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸೀತಾರಾಮ ಪೂಜಾರಿ ನರಿಕೊಂಬು ಗ್ರಾ.ಪಂ. ಸದಸ್ಯರಾದ ರವಿ ಅಂಚನ್, ರಂಜಿತ್ ಕೆದ್ದೇಲ್ ಭಾಗವಹಿಸಿದ್ದರು. ಸಂಘದ ನಿರ್ದೆಶಕರಾದ ಮೋನಪ್ಪ ಪೂಜಾರಿ ಬೊಂಡಾಲ, ರಾಜೇಶ್ ಆರ್., ಅಶೋಕ್ ಆರ್., ಕೃಷ್ಣಪ್ಪ ಪೂಜಾರಿ, ಗಣೇಶ್ ಪೆಲತ್ತಿಮಾರ್, ಶ್ರೀಶ ಆರ್., ನಾರಾಯಣ ಪೂಜಾರಿ ಕೇದಿಗೆ, ವಿಜಯ ತುಕರಾಮ, ಜಯಂತಿ ಈಶ್ವರ ಪೂಜಾರಿ ಉಪಸ್ಥಿತರಿದ್ದರು. ಈ ಸಂದರ್ಭ ಸಂಘಕ್ಕೆ ಶೇಂದಿ ಹಾಕುತ್ತಿರುವ ಮೂರ್ತೆದಾರ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಉಪಾಧ್ಯಕ್ಷ ಮಾಧವ ಕೆ. ಸ್ವಾಗತಿಸಿ, ಕಾರ್ಯದರ್ಶಿ ಯೋಗೀಶ್ ಅಮೀನ್ ಕಾಐಕ್ರಮ ನಿರೂಪಿಸಿದರು. ಸಿಬ್ಬಂದಿ ಕೃತಿಕ್ಷಾ ವಂದಿಸಿದರು. ಸಂಘದ ಪಿಗ್ಮಿ ಸಂಗ್ರಹಕ…

Read More

ಬಂಟ್ವಾಳ: ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಅಮ್ಟಾಡಿ ಬಂಟ್ವಾಳ ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ನೂತನ ನಿವೇಶನದಲ್ಲಿ ಸಂಘದ ಅಧ್ಯಕ್ಷೆ ಮಲ್ಲಿಕಾ ವಿ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಶನಿವಾರ ಜರಗಿತು. Advertisement ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್ ಕುಮಾರ್ ಅಜಿಲ ವರದಿ ಮಂಡಿಸಿ ಸಂಘವು ವರದಿ ಸಾಲಿನಲ್ಲಿ ರೂ 223.26 ಕೋಟಿ ವ್ಯವಹಾರ ನಡೆಸಿ ವರ್ಷಾಂತ್ಯಕ್ಕೆ ರೂ 1,02,30,807.89 ನಿವ್ವಳ ಲಾಭಗಳಿಸಿ ಶೇಕಡ 9 ಡಿವಿಡೆಂಟ್ ನೀಡಲಾಗುವುದು. ಸಂಘವು ವರದಿ ಸಾಲಿನಲ್ಲಿ ರೂ 40.30ಕೋಟಿ ಠೇವಣಿ ಹೊಂದಿದ್ದು ರೂ.36.65 ಕೋಟಿ ಸಾಲ ವಿತರಿಸಿದೆ. ಸಂಘದಲ್ಲಿ ರೂ. 1.65ಕೋಟಿ ಕ್ಷೇಮನಿಧಿ ಹಾಗೂ ಇತರ ನಿಧಿಗಳನ್ನು ಹೊಂದಿದೆ ಎಂದರು. Advertisement Advertisement ಸಂಘದ ಹಿರಿಯ ಸದಸ್ಯರಾದ ರಾಮಣ್ಣ ಪೂಜಾರಿ ಕಂಗಿತ್ಲು, ನವೀನ್‌ಚಂದ್ರ ಶೆಟ್ಟಿ ಮುಂಡಾಜೆ ಗುತ್ತು, ಅಲ್ಬಟ್ ಡಿಸೋಜ ಗುತ್ತಾರ್, ರಾಘವನ್ ನಾಯರ್ ರಾಮಲ್‌ಕಟ್ಟೆ , ಭಾರತಿ ಚೌಟ ಅಮ್ಟಾಡಿ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ…

Read More

Advertisement ಬಂಟ್ವಾಳ: ಈ ಬಾರಿ ಪ್ರಾಯೋಗಿಕವಾಗಿ ನಡೆಸಿದ ಶ್ರೀ ಕೃಷ್ಣ ವೇಷ ಸ್ಪರ್ಧೆ ಯಶಸ್ವಿಯಾಗಿ ನಡೆದಿದ್ದು ಮುಂದಿನ ವರ್ಷ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಬಂಟ್ವಾಳ ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್ ಹೇಳಿದರು.ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ. ಬಂಟ್ವಾಳ ವಿಶಂತಿ ಸಂಭ್ರಮದ ಪ್ತಯುಕ್ತ ಸಂಘದ ಆಶ್ರಯದಲ್ಲಿ ಹಾಗೂ ತುಳುಕೂಟ ಬಂಟ್ವಾಳ ಇದರ ಸಂಯೋಜನೆಯಲ್ಲಿ ನಡೆದ ಶ್ರೀ ಕೃಷ್ಣ ವೇಷ ಸ್ಪರ್ಧೆ 2024 ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. Advertisement Advertisement Advertisement ಕಾರ್ಯಕ್ರಮದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು ಅವರನ್ನು ಗೌರವಿಸಲಾಯಿತು. ಕೃಷ್ಣ ವೇಷ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ವೇದಿಕೆಯಲ್ಲಿ ತುಳುಕೂಟದ ಉಪಾಧ್ಯಕ್ಷ ಸೀತಾರಾಮ ಶೆಟ್ಟಿ ಸಜೀಪ, ಕಾರ್ಯಕ್ರಮ ಸಂಯೋಜಕ ದಿವಾಕರ ದಾಸ್, ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಜಿತ್ ಕುಮಾರ್ ಜೈನ್ ಉಪಸ್ಥಿತರಿದ್ದರು. ತೀರ್ಪುಗಾರರ ಪರವಾಗಿ ರವೀಂದ್ರ ಕುಕ್ಕಾಜೆ ಮಾತನಾಡಿದರು.ದ.ಕ. ವರ್ತಕರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸುಭಾಶ್ಚಂದ್ರ…

Read More

ಬಂಟ್ವಾಳ : ದಿನವಿಡಿ ಕರ್ತವ್ಯದ ಒತ್ತಡದಿಂದ ಬ್ಯುಸಿ ಆಗಿರುವ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭಾನುವಾರ ಯುವಕರೊಂದಿಗೆ ಕೆಸರು ಗದ್ದೆಯಲ್ಲಿ ಆಡಿ ಸಂಭ್ರಮಿದರು. ಅನಂತಾಡಿ ಗ್ರಾಮದ ನವ ಭಾರತ್ ಯುವಕ ಸಂಘ ಅನಂತಾಡಿ ವತಿಯಿಂದ ಪಡಿಪಿರೆ ಗದ್ದೆಯಲ್ಲಿ ಜರಗಿದ 6 ನೇ ವರ್ಷದ ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಧಿಕಾರದ ಹಮ್ಮು ಬಿಮ್ಮುಗಳನ್ನು ಬಿಟ್ಟು ಮಕ್ಕಳ ಜೊತೆ ಮಗುವಾಗಿ ಬೆರೆತು ಮಣ್ಣಿನ ಮಗನಾದರು. ಜಿಲ್ಲಾಧಿಕಾರಿ ಕೆಸರಿನಲ್ಲೂ ಮಕ್ಕಳ ಜೊತೆಗೂಡಿ ಸಂತಸಪಟ್ಟ ರೀತಿ ಕಂಡು ಊರೇ ಸಂಭ್ರಮಿಸಿತು. ಈ ಸಂದರ್ಭ ಮಾತನಾಡಿದ ಅವರು ದೇಶದ ಬೆನ್ನೆಲುಬಾಗಿರುವ ರೈತ ಸಂತೋಷವಾಗಿದ್ದರೆ ಇಡೀ ಜಗತ್ತೇ ಸಂತೋಷವಾಗಿರುತ್ತದೆ. ಪ್ರತಿಯೊಬ್ಬರ ಆಹಾರವನ್ನು ಪೂರೈಸಿ ಎಲ್ಲರ ಹಸಿವು ನೀಗಿಸುವ ರೈತ ಯಾವಾಗಲೂ ಸಂತೋಷವಾಗಿರಬೇಕು ಎಂದು ತಿಳಿಸಿದರು. ಜಿಲ್ಲೆಯ ಹವಾಮಾನದ ಎಡರು ತೊಡರುಗಳನ್ನು ದಾಟಿ ರೈತ ಬದುಕಬೇಕಾಗುತ್ತದೆ. ಈ ನೆಲದ ಸಂಸ್ಕೃತಿಯು ಬೆಳೆದು ಬಂದಿರುವುದು ಗದ್ದೆಗಳಿಂದ ಎಂದರು. Advertisement Advertisement Advertisement Advertisement ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ…

Read More

ಬಂಟ್ವಾಳ: 12 ವರ್ಷಗಳಿಂದ ಸ್ವಚ್ಚಗೊಳಿಸದೇ ಉಳಿದಿದ್ದ ನಾವೂರು ಗ್ರಾಮದ ಕುಡಿಯುವ ನೀರು ಪೂರೈಸುವ ಮೇಲ್‌ಸ್ಥರದ ಟ್ಯಾಂಕನ್ನು ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣ ಘಟಕದ ನಾವೂರು ಶೌರ್ಯ ತಂಡ ಶ್ರಮದಾನದ ಮೂಲಕ ಶುಚಿಗೊಳಿಸಿದೆ. Advertisement ನಾವೂರು ಶಾಲೆಯ ಬಳಿ ನೇತ್ರಾವತಿ ನದಿ ಸಮೀಪದ ಎತ್ತರ ಪ್ರದೇಶದಲ್ಲಿ ನಾವೂರು ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕ್ ಇದೆ. ಟ್ಯಾಂಕ್‌ನ ಸುತ್ತಮುತ್ತ ಕಳೆಗಿಡಗಳು, ಪೊದೆಗಳು ಬೆಳೆದು ಹತ್ತಿರಕ್ಕೆ ಹೋಗಲಾಗದ ಸ್ಥಿತಿ ನಿರ್ಮಾಣಗೊಂಡಿತ್ತು. ಈ ಟ್ಯಾಂಕನ್ನು ಸ್ವಚ್ಚಗೊಳಿಸದೇ 12 ವರ್ಷಗಳೇ ಕಳೆದಿವೆ ಎನ್ನುತ್ತಾರೆ ಸ್ಥಳೀಯರು. ಇದನ್ನರಿತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡ ಕಳೆಗಿಡಗಳನ್ನು ಯಂತ್ರದ ಮೂಲಕ ತುಂಡರಿಸಿ ಪರಿಸರವನ್ನು ಸ್ವಚ್ಚಗೊಳಿಸುವುದರ ಜೊತೆಗೆ ಟ್ಯಾಂಕನ್ನು ಸ್ವಚ್ಚಗೊಳಿಸಲಾಯಿತು. ಟ್ಯಾಂಕ್‌ನಲ್ಲಿ ಕೊಚ್ಚೆಯಂತೆ ತುಂಬಿಕೊಂಡಿದ್ದ ಕೆಸರು ಪೈಪ್ ಮೂಲಕ ಹೊರ ಚೆಲ್ಲಲ್ಪಟ್ಟಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯ ಯೋಜನಾಧಿಕಾರಿ ಬಾಲಕೃಷ್ಣ, ಮೇಲ್ವಿಚಾರಕಿ ರೂಪ ಜೆ. ಭೇಟಿ ನೀಡಿದರು. ಶೌರ್ಯ ತಂಡದ ಅಧ್ಯಕ್ಷ…

Read More

ಬಂಟ್ವಾಳ: ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023-24ನೇ ಸಾಲಿನಲ್ಲಿ 445.45 ಕೋಟಿ ವ್ಯವಹಾರ ನಡೆಸಿ 1.68 ಕೋಟಿ ಲಾಭಾಂಶ ಗಳಿಸಿದ್ದು ಸಂಘದ ಸದಸ್ಯರಿಗೆ ಶೇ.12 ರಷ್ಟು ಲಾಭಾಂಶ ನೀಡಲಾಗುವುದೆಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಹೇಳಿದರು. ಅವರು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೇಂದ್ರ ಕಛೇರಿಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ಜರಗಿದ 2023-24 ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ಸಂಘದಲ್ಲಿ ೫೨೪೦ ಎ ತರಗತಿ ಸದಸ್ಯರು , ೧೮೬೬ ಡಿ ತರಗತಿ ಸದಸ್ಯರು ಸೇರಿದಂತೆ ಒಟ್ಟು ೭೧೦೬ ಸದಸ್ಯರನ್ನು ಹೊಂದಿದೆ, ವರದಿ ವರ್ಷದಲ್ಲಿ ೧೫೪೭ ಮಂದಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ೩೪.೫೫ ಕೋಟಿ ಸಾಲವನ್ನು ಮಂಗಳಾ ಕಿಸಾನ್ ಕಾರ್ಡ್ ಮೂಲಕ ವಿತರಿಸಲಾಗಿದ್ದು, ಶೇ.3 ಬಡ್ಡಿದರದಲ್ಲಿ ಕೃಷಿ ಅಭಿವೃದ್ದಿಗಾಗಿ 243ಮಂದಿ ರೈತರಿಗೆ 7 ಕೋಟಿ ಸಾಲ ನೀಡಲಾಗಿದೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ…

Read More

ಬಂಟ್ವಾಳ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಬಲಾಡ್ಯವಾಗಿ ಬೆಳೆದಿದ್ದು, ಇಡೀ ದೇಶದಲ್ಲಿ ಶೇ.೧೦೦ ಸಾಲ ಮರುಪಾವತಿಯಾಗುವ ಜಿಲ್ಲೆಯಿದ್ದರೆ ಅದು ದ.ಕ. ಮಾತ್ರ ಎಂದು ಕರ್ನಾಟಕ ಸಹಕಾರ ಮಾರಾಟ ಮಹಾಮಂಡಲ ಬೆಂಗಳೂರು ಹಾಗೂ. ದ,ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಇದರ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. Advertisement ಬಿ.ಸಿ. ರೋಡಿನ ಸ್ಪರ್ಶಾಕಲಾಮಂದಿರದಲ್ಲಿ ಶನಿವಾರ ನಡೆದ ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ. ಬಂಟ್ವಾಳ ಇದರ ವಿಂಶತಿ ಸಂಭ್ರಮ – ಸದಸ್ಯರ ಸಮಾಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಹಕಾರ ಸಂಘವನ್ನು ಸ್ಥಾಪಿಸುವುದು ಸುಲಭ, ಆದರೆ ಮುನ್ನಡೆಸುವುದು ಕಷ್ಟ. ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ಆರಂಭಗೊಂಡು ಇದೀಗ ೨೦ ವರ್ಷದ ಸಂಭ್ರಮ ಆಚರಿಸುತ್ತಿರುವುದು ಎಲ್ಲರಿಗೂ ಖುಷಿ ಕೊಟ್ಟಿದೆ ಎಂದರು.ದ.ಕ. ಬ್ಯಾಂಕ್‌ಗಳ ತವರೂರು. ಅನೇಕ ವಾಣಿಜ್ಯ ಬ್ಯಾಂಕ್‌ಗಳು ಹಾಗೂ ಸಹಕಾರಿ ಸಂಘಗಳು ಇಲ್ಲಿ ಹುಟ್ಟಿಕೊಂಡಿವೆ. ವಾಣಿಜ್ಯ ಬ್ಯಾಂಕ್‌ಗಳು ಇತರ ಬ್ಯಾಂಕ್‌ಗಳೊಂದಿಗೆ ವಿಲೀನ ಗೊಂಡಿದೆ, ಗ್ರಾಹಕರಿಕೆ ನೀಡುವ ಸೇವೆಯಿಂದ…

Read More