ಬಂಟ್ವಾಳ: ಮಹರ್ಷಿ ಆನಂದ ಗುರೂಜಿ ಅವರ ಬೆಂಗಳೂರಿನ ಭೂವರಹ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳಲು 11 ಅಡಿ ಎತ್ತರದ ಶ್ರೀ ಭೂವರಹ ಸ್ವಾಮಿಯ ಬೃಹತ್ ಫೈಬರ್ ಕಲಾಕೃತಿ ಬಂಟ್ವಾಳ ತಾಲೂಕಿನ ಕಳ್ಳಿಗೆಯ ಕಲಾವಿದ ಮನೋಜ್ ಕನಪಾಡಿಯವರ ಕೈ ಚಳಕದಲ್ಲಿ ನಿರ್ಮಾಣಗೊಂಡಿದ್ದು ಕುಂಚದ ಅಂತಿಮ ಸ್ಪರ್ಶಕ್ಕೆ ಕಾಯುತ್ತಿದೆ.